ಲಖನೌ: ಲಕ್ನೊ ಸೂಪರ್ ಜಯಂಟ್ಸ್ ತಂಡದ ವೇಗದ ಬೌಲರ್ ಮಾಯಾಂಕ್ ಯಾದವ್ ಗಾಯಗೊಂಡಿದ್ದಾರೆ. ಅವರು ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಆಡುವುದಿಲ್ಲ ಎಂಬುದಾಗಿ ತಂಡದ ಮೂಲಗಳು ತಿಳಿಸಿವೆ. ಹೀಗಾಗಿ ಹಿಮಾಚಲ ಪ್ರದೇಶದ ಮಾಯಾಂಕ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ ಲಕ್ನೊ ಫ್ರಾಂಚೈಸಿ. ಇದರೊಂದಿಗೆ ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಗಾಯಾಗಳುಗಳ ಸಂಖ್ಯೆ ಇನ್ನಷ್ಟು ಏರಿಕೆಯಾಗಿದೆ. ಮಯಾಂಕ್ ಯಾದವ್ಗೆ ಆಗಿರುವ ಗಾಯದ ಪ್ರಮಾಣದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ತಂಡವನ್ನು ತೊರೆದು ಪುನಶ್ಚೇತನಕ್ಕೆ ಹೋಗಲಿದ್ದಾರೆ ಎಂಬುದಾಗಿ ಮಾಹಿತಿ ಬಂದಿದೆ.
ಅರ್ಪಿತ್ ಗುಲೇರಿಯಾ ಅವರನ್ನು 20 ಲಕ್ಷ ರೂಪಾಯಿ ಮೂಲಬೆಲೆಗೆ ಲಕ್ನೊ ತಂಡ ತನ್ನದಾಗಿಸಿಕೊಂಡಿದೆ. ಈ ಬೌಲರ್ ಕಿರು ಅವಧಿಯ ದೇಶಿಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 15 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 44 ವಿಕೆಟ್ಗಳನ್ನು ತಮ್ಮದಾಗಿಸಿಕೊಂಡಿದ್ದು, 13 ಲಿಸ್ಟ್ ಎ ಪಂದ್ಯಗಳಲ್ಲಿ 11 ವಿಕೆಟ್ ಕಬಳಿಸಿದ್ದಾರೆ.
ಟಿ20 ಪಂದ್ಯವನ್ನೇ ಆಡದ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡ ಕೆಕೆಆರ್
ಕೋಲ್ಕೊತಾ: ಸುಯಾಶ್ ಶರ್ಮಾ ಯುವ ಲೆಗ್ ಸ್ಪಿನ್ನರ್ ಅನ್ನು ಐಪಿಎಲ್ಗೆ ಪರಿಚಯಿಸಿದ್ದ ಕೋಲ್ಕೊತಾ ನೈಟ್ ರೈಡರ್ಸ್ ತಂಡದ ಇದೀಗ ಒಂದೇ ಒಂದು ಟಿ20 ಪಂದ್ಯವನ್ನು ಆಡದ ಬ್ಯಾಟರ್ ಒಬ್ಬರನ್ನು ತಂಡಕ್ಕೆ ಸೇರಿಸಿಕೊಂಡಿದೆ. 20 ವರ್ಷದ ಆರ್ಯ ದೇಸಾಯಿ ಕೆಕೆಆರ್ ಬಳಗ ಸೇರಿಕೊಂಡ ಆಟಗಾರ. 20 ಲಕ್ಷ ರೂಪಾಯಿ ನೀಡಿ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಫ್ರಾಂಚೈಸಿ. ದೇಸಾಯಿ ಟಾಟಾ ಐಪಿಎಲ್ನ ಇನ್ನುಳಿದ ಪಂದ್ಯಗಳಲ್ಲಿ ಕೆಕೆಆರ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಗುಜರಾತ್ ಮೂಲಕ ಆರ್ಯ ದೇಸಾಯಿ ಮೂರು ಪ್ರಥಮದರ್ಜೆ ಪಂದ್ಯಗಳನ್ನು ಗುಜರಾತ್ ತಂಡದ ಪರವಾಗಿ ಆಡಿದ್ದಾನೆ. ಒಟ್ಟು 151 ರನ್ಗಳನ್ನು ಅವರು ಬಾರಿಸಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ : IPL 2023 : ಚಿನ್ನದ ಹುಡುಗ ನೀರಜ್ ಚೋಪ್ರಾ ಅವರಂತೆಯೇ ಕಾಣುವ ಕೆಕೆಆರ್ನ ಈ ಸ್ಪಿನ್ನರ್ ಯಾರು?
ದೇಸಾಯಿ 2022-23ರಲ್ಲಿ ಮೂರು ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡಿದ್ದಾನೆ. ವಿದರ್ಭ ತಂಡದ ವಿರುದ್ಧ ಅವರು ಅರ್ಧ ಶತಕ ಕೂಡ ಬಾರಿಸಿದ್ದರು. ಆದರೆ, ಸೀಮಿತ ಓವರ್ಗಳ ಮಾದರಿಯಲ್ಲಿ ಒಂದೇ ಒಂದು ಪಂದ್ಯವನ್ನು ಅವರು ಆಡಿರಲಿಲ್ಲ.
ಕೆಕೆಆರ್ ತಂಡ ಯುವ ಆಟಗಾರರಿಗೆ ಪ್ರೋತ್ಸಾಹ ಕೊಡುವುದು ಇದೇ ಮೊದಲಲ್ಲ. ಕಳೆದ ವಾರ ಸ್ಪಿನ್ ಬೌಲರ್ ಸುಯಾಶ್ ಶರ್ಮಾಗೆ ಅವಕಾಶ ನೀಡುವ ಮೂಲಕ ಮೆಚ್ಚುಗೆ ಗಳಿಸಿತ್ತು. ಸುಯಾಶ್ ದೇಶಿಯ ಕ್ರಿಕೆಟ್ನಲ್ಲಿ ಆಡದೇ ಇರುವ ಹೊರತಾಗಿಯೂ ಆರ್ಸಿಬಿ ವಿರುದ್ಧದ ಹಣಾಹಣಿಯಲ್ಲಿ ಅವಕಾಶ ನೀಡಲಾಗಿತ್ತು. ಆ ಪಂದ್ಯದಲ್ಲಿ ಅವರು ಮೂರು ವಿಕೆಟ್ ಕಿತ್ತು ತಂಡದ 81 ರನ್ಗಳ ಅಂತರದ ವಿಜಯದಲ್ಲಿ ಪಾಲು ಪಡೆದುಕೊಂಡಿದ್ದರು.