Site icon Vistara News

Arshad-Neeraj: ಚಿನ್ನ, ಬೆಳ್ಳಿ ಸಾಧನೆಗಿಂತ ಮಿಗಿಲಾಗಿ ಹೃದಯ ಗೆದ್ದ ನೀರಜ್​-ಅರ್ಷದ್​ ತಾಯಂದಿರು

Arshad-Neeraj

Arshad-Neeraj: Arshad Nadeem: Arshad, Neeraj 'like our sons': Moms celebrate India-Pak winners

ಕರಾಚಿ/ಹರಿಯಾಣ: ಪ್ಯಾರಿಸ್​ ಒಲಿಂಪಿಕ್ಸ್(paris olympics)ನಲ್ಲಿ​ ಚಿನ್ನದ ಪದಕ ಗೆದ್ದ ಪಾಕ್​ನ ಅರ್ಷದ್ ನದೀಮ್(Arshad Nadeem) ಮತ್ತು ಬೆಳ್ಳಿ ಗೆದ್ದ ಭಾರತದ ನೀರಜ್​ ಚೋಪ್ರಾ(Neeraj Chopra) ಅವರ ಸಾಧನೆಗಿಂತ ಮಿಗಿಲಾಗಿ ಎಲ್ಲರ ಹೃದಯ ಗೆದ್ದಿರುವುದು ಉಭಯ(Arshad-Neeraj) ಆಟಗಾರರ ತಾಯಂದಿರು. ಇಬ್ಬರ ತಾಯಂದಿರೂ ಕೂಡ ಸಾಧನೆ ಮಾಡಿದ್ದು ನಮ್ಮ ಮಕ್ಕಳೇ ಎಂದು ಹರ್ಷ ವ್ಯಕ್ತಪಡಿಸುವ ಮೂಲಕ ತಾಯಿ ಮಮತೆ ತೋರಿದ್ದಾರೆ. ಇವರ ಈ ಮಮತೆಯ ಮುಂದೆ ಉಭಯ ದೇಶಗಳ ದ್ವೇಷ ಕೂಡ ಒಂದು ಕ್ಷಣ ಮರೆಯುಂತೆ ಮಾಡಿದೆ.

ನೀರಜ್​ ಚೋಪ್ರಾ ತಾಯಿ ಹೇಳಿದ್ದೇನು?

ನೀರಜ್​ ಬೆಳ್ಳಿ ಪದಕ ಗೆದ್ದ ಸಂತಸದಲ್ಲಿ ಎಎನ್‌ಐ ಜತೆ ಮಾತನಾಡಿದ ನೀರಜ್​ ಅವರ ತಾಯಿ ಸರೋಜ್ ದೇವಿ, “ಮಗನ ಸಾಧನೆ ಬಗ್ಗೆ ಅತೀವ ಸಂತಸವಿದೆ. ಆತ ಮನೆಗೆ ಮರಳಿದ ತಕ್ಷಣ ಪ್ರಿಯವಾದ ಅಡುಗೆ ಮಾಡಿ ಬಡಿಸಲು ಕಾಯುತ್ತಿದ್ದೇನೆ” ಎಂದು ಪ್ರತಿಕ್ರಿಯಿಸಿದರು. ಇದೇ ವೇಳೆ ಅರ್ಷದ್ ನದೀಮ್ ಸಾಧನೆಯನ್ನು ಕೂಡಾ ಮುಕ್ತಕಂಠದಿಂದ ಹೊಗಳಿದ್ದಾರೆ. ನದೀಮ್ ಚಿನ್ನ ಗೆದದ್ದು ಕೂಡ ನನಗೆ ಅಪಾರ ಸಂತಸವಿದೆ. ಆತ ಕೂಡಾ ನಮ್ಮ ಮಗ ಇದ್ದಂತೆ ಎಂದು ಹೇಳುವ ಮೂಲಕ ತಾಯಿ ಪ್ರೀತಿ ತೋರಿದ್ದರು.

ಅರ್ಷದ್​ ತಾಯಿ ಹೇಳಿದ್ದೇನು?


ಚಿನ್ನ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ ಅವರ ತಾಯಿ ಕೂಡ ತಮ್ಮ ಮಗನ ಸಾಧನೆ ಜತೆ ನೀರಜ್​ ಸಾಧನೆಯನ್ನು ಕೊಂಡಾಡಿದ್ದಾರೆ. ನೀರಜ್​ ಮತ್ತು ಅರ್ಷದ್​ ಉತ್ತಮ ಸ್ನೇಹಿತರು. ಆದರೆ, ನನಗೆ ಇಬ್ಬೂ ಕೂಡ ಮಕ್ಕಳಿದಂತೆ. ಯಾರೇ ಸಾಧನೆ ಮಾಡಿದರೂ ಕೂಡ ನನಗೆ ಸಂತಸವಾಗುತ್ತದೆ. ನೀರಜ್​ ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದಾನೆ. ನೀರಜ್​ ಇನ್ನೂ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವ ಆಶೀರ್ವಾದ ದೇವರು ಅವರಿಗೆ ಕರಿಣಿಸಲಿ. ಎಂದು ಹೇಳುವ ಮೂಲಕ ಭಾರತೀಯರ ಹೃದಯ ಗೆದ್ದಿದ್ದಾರೆ. 5 ತಿಂಗಳ ಹಿಂದೆ ಜಾವೆಲಿನ್​ ಖರೀದಿಸಲು ಹೆಣಗಾಡುತ್ತಿದ್ದ ವೇಳೆ ನೀರಜ್​ ಅವರು ಅರ್ಷದ್​ಗೆ ಬೆಂಬಲ ಸೂಚಿಸಿದ್ದರು. ಚಿನ್ನ ಗೆದ್ದಾಗಲೂ ಕೂಡ ಈ ಸಾಧನೆಗೆ ನನ್ನ ಗೆಳೆಯ ನೀರಜ್​ ಅವರೇ ಸ್ಫೂರ್ತಿ ಎಂದು ಹೇಳುವ ಮೂಲಕ ನೀರಜ್​ ಸಹಾಯವನ್ನು ಅರ್ಷದ್​ ನೆನೆಸಿಕೊಂಡರು.

ಇದನ್ನೂ ಓದಿ Paris Olympics: ಚೊಚ್ಚಲ ಪ್ರಯತ್ನದಲ್ಲೇ ಒಲಿಂಪಿಕ್ಸ್​ ಪದಕ ಗೆಲ್ಲಲು ಸಜ್ಜಾದ ಅಮನ್‌ ಸೆಹ್ರಾವತ್‌

ಟೋಕಿಯೊನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಮೇಲೆ ಈ ಬಾರಿಯೂ ಚಿನ್ನದ ಪದಕ ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಬೆಳ್ಳಿಗೆ ತೃಪ್ತಿಪಟ್ಟರು. ಮಂಗಳವಾರ ನಡೆದಿದ್ದ ಅರ್ಹತಾ ಸುತ್ತಿನ ‘ಬಿ’ ಗುಂಪಿನಲ್ಲಿ 89.34 ಮೀಟರ್‌ಗಳ ಬೃಹತ್ ಎಸೆತವನ್ನು ದಾಖಲಿಸಿ ಫೈನಲ್‌ಗೆ ಪ್ರವೇಶಿಸಿದ್ದರು. 2022 ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 90 ಮೀ ಮಾರ್ಕ್ ದಾಟಿದ್ದ ಅರ್ಷದ್ ನದೀಮ್ ಅತ್ಯುತ್ತಮ ಥ್ರೋ 86.59 ಮೀ ನೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಆದರೆ ಫೈನಲ್​ನಲ್ಲಿ ಮೊದಲ ಎಸೆತದ ವೇಳೆ ಫೌಲ್ ಆಗಿದ್ದ ನದೀಮ್ ಎರಡನೇ ಎಸೆತದಲ್ಲಿ 92.97 ಮೀಟರ್‌ಗಳ ದೂರಕ್ಕೆ ಭರ್ಜಿ ಎಸೆದು ಹೊಸ ದಾಖಲೆ ಬರೆದರು.

Exit mobile version