Site icon Vistara News

Arshdeep Singh: 5 ವಿಕೆಟ್​ ಕಿತ್ತು ಭಾರತ ಪರ ನೂತನ ದಾಖಲೆ ಬರೆದ ಅರ್ಶ್​ದೀಪ್​ ಸಿಂಗ್

Arshdeep Singh

ಜೊಹಾನ್ಸ್​ಬರ್ಗ್​: ಮೊನಚಾದ ಬೌಲಿಂಗ್​ ದಾಳಿಯ ಮೂಲಕ ದಕ್ಷಿಣ ಆಫ್ರಿಕಾ(South Africa vs India, 1st ODI) ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದ ಟೀಮ್​ ಇಂಡಿಯಾದ ಯುವ ಎಡಗೈ ವೇಗಿ ಅರ್ಶ್​ದೀಪ್​ ಸಿಂಗ್(Arshdeep Singh)​ ದಾಖಲೆಯೊಂದನ್ನು ಬರೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್​ ಕಿತ್ತ ಮೊದಲ ಭಾರತೀಯ ವೇಗಿ​ ಎನಿಸಿಕೊಂಡಿದ್ದಾರೆ.

ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಅರ್ಶದೀಪ್​ ಸಿಂಗ್​ ಅವರು ಘಾತಕ ಬೌಲಿಂಗ್​ ದಾಳಿಯ ಮೂಲಕ ಆಘಾತವಿಕ್ಕಿದರು. ಅವರ ಬೌಲಿಂಗ್​ ದಾಳಿಗೆ ಹರಿಣ ಪಡೆಯ ಬ್ಯಾಟರ್​ಗಳು ತರಗೆಲೆಯಂತೆ ಉದುರಿ 27.3 ಓವರ್​ಗಳಲ್ಲಿ 116 ರನ್​ಗೆ ಸರ್ವಪತನ ಕಂಡಿತು.

ಭರ್ತಿ 10 ಓವರ್​ ಬೌಲಿಂಗ್​ ದಾಳಿ ನಡೆಸಿದ ಅರ್ಶ್​ದೀಪ್​ ಸಿಂಗ್​ ಕೇವಲ 37 ರನ್​ ಬಿಟ್ಟುಕೊಟ್ಟು ಪ್ರಮುಖ 5 ವಿಕೆಟ್​ ಕಿತ್ತು. ‘ಸಿಂಗ್​ ಈಸ್​ ಕಿಂಗ್​’ ಎನಿಸಿಕೊಂಡರು. ಅರ್ಶ್​ದೀಪ್​ ಕಿತ್ತ ವಿಕೆಟ್​ಗಳು, ರೀಜಾ ಹೆಂಡ್ರಿಕ್ಸ್(0), ಟೋನಿ ಡಿ ಜೋರ್ಜಿ(28), ರಸ್ಸಿ ವಾನ್‌ ಡರ್‌ ಡುಸೆನ್‌(0), ಹೆನ್ರಿಚ್‌ ಕ್ಲಾಸೆನ್‌(6), ಆಂಡಿಲ್ ಫೆಹ್ಲುಕ್ವಾಯೊ(33).

ಸುನೀಲ್​ ಜೋಶಿಗೆ ಅಗ್ರಸ್ಥಾನ

ಟೀಮ್​ ಇಂಡಿಯಾದ ಮಾಜಿ ಆಟಗಾರ ಸುನೀಲ್​ ಜೋಶಿ ಅವರು ದಕ್ಷಿಣ ಆಫ್ರಿಕಾ ಪರ ಕಡಿಮೆ ರನ್​ ನೀಡಿ 5 ವಿಕೆಟ್​ ಕಿತ್ತ ದಾಖಲೆ ಹೊಂದಿದ್ದಾರೆ. ಜತೆಗೆ ಭಾರತ ಪರ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್​ ಕಿತ್ತ ಮೊದಲ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. ಜೋಶಿ 1999ರಲ್ಲಿ ನಡೆದಿದ್ದ ಪಂದ್ಯದಲ್ಲಿ ಕೇವಲ 6 ರನ್​ಗೆ 5 ವಿಕೆಟ್​ ಕಿತ್ತು ಮಿಂಚಿದ್ದರು. ಅರ್ಶ್​ದೀಪ್​ ಸಿಂಗ್​ ಅವರು ದಕ್ಷಿಣ ಆಫ್ರಿಕಾ ಪರ 5 ವಿಕೆಟ್​ ಕಿತ್ತ 4ನೇ ಬೌಲರ್​ ಎನಿಸಿಕೊಂಡರು.

ಇದನ್ನೂ ಓದಿ IND vs SA: ಅರ್ಶ್​ದೀಪ್ ‘ಆವೇಶ’ ಬೌಲಿಂಗ್ ದಾಳಿಗೆ ನಲುಗಿದ ​ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್​ ಕಿತ್ತ ಭಾರತೀಯ ಬೌಲರ್​ಗಳ ಪಟ್ಟಿ

ಸುನೀಲ್​ ಜೋಶಿ-6 ರನ್​ಗೆ 5 ವಿಕೆಟ್​(1999)

ಯಜುವೇಂದ್ರ ಚಹಲ್​-22 ರನ್​ಗೆ 5 ವಿಕೆಟ್​(2018)

ರವೀಂದ್ರ ಜಡೇಜಾ- 33 ರನ್​ಗೆ 5 ವಿಕೆಟ್​(2023)

ಅರ್ಶ್​ದೀಪ್​ ಸಿಂಗ್​-37 ರನ್​ಗೆ 5 ವಿಕೆಟ್​(2023)

ಪಂದ್ಯ ಆರಂಭಗೊಂಡು ಮೂರು ರನ್​ ಆಗುವಷ್ಟರಲ್ಲಿ ಎಡಗೈ ವೇಗಿ ಅರ್ಶ್​ದೀಪ್​ ಸಿಂಗ್​ ಅವರು ದಕ್ಷಿಣ ಆಫ್ರಿಕಾಗೆ ಅವಳಿ ಆಘಾತ ನೀಡಿದರು. ಡೇಂಜರಸ್​ ಬ್ಯಾಟರ್​ಗಳಾದ​ ರೀಝಾ ಹೆಂಡ್ರಿಕ್ಸ್​ ಮತ್ತು ರಸ್ಸಿ ವಾನ್​ಡರ್​ ಡುಸ್ಸೆನ್​ ಅವರನ್ನು ಶೂನ್ಯಕ್ಕೆ ಔಟ್​ ಮಾಡಿ ಪೆವಿಲಿಯನ್​ಗೆ ಅಟ್ಟಿದರು. ಇದು ಬ್ಯಾಕ್​ಟು ಬ್ಯಾಕ್​ ವಿಕೆಟ್​ ಆಗಿತ್ತು. ಇಬ್ಬರದ್ದು ಶೂನ್ಯ ಗಳಿಕೆ. ಹೆಂಡ್ರಿಕ್ಸ್ ಕ್ಲೀನ್​ ಬೌಲ್ಡ್​ ಆದರೆ, ಡುಸ್ಸೆನ್ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು.

Exit mobile version