Site icon Vistara News

28 ವರ್ಷದ ಪತ್ನಿ ಜತೆಗೆ honeymoon ಹೊರಟ 66ರ ಅರುಣ್‌ ಲಾಲ್‌

honeymoon

ಕೋಲ್ಕೊತಾ: ಟೀಮ್‌ ಇಂಡಿಯಾದ ಮಾಜಿ ಆಟಗಾರ ಹಾಗೂ ಬೆಂಗಾಲ್‌ ತಂಡದ ಮಾಜಿ ಕೋಚ್‌ ಅರುಣ್‌ ಲಾಲ್ ಹನಿಮೂನ್‌ಗೆ ತೆರಳಲು ಕೋಚಿಂಗ್‌ ಹುದ್ದೆ ತೊರೆದೆ ಎಂದು ಹೇಳಿದ್ದಾರೆ.

೬೬ ವರ್ಷದ ಅರುಣ್‌ ಲಾಲ್‌ ಕಳೆದ ಕೆಲವು ತಿಂಗಳ ಹಿಂದೆ ೨೮ ವರ್ಷದ ಬುಲ್‌ಬುಲ್‌ ಸಾಹ ಎಂಬುವರನ್ನು ವಿವಾಹವಾಗಿದ್ದರು. ಅನಾರೋಗ್ಯಕ್ಕೆ ಒಳಗಾಗಿರುವ ತಮ್ಮ ಮೊದಲ ಪತ್ನಿ ರೀನಾ ಅವರ ಒಪ್ಪಿಗೆಯೊಂದಿಗೆ ಅರುಣ್‌ ಲಾಲ್‌ ತಮಗಿಂತ ೩೮ ವರ್ಷ ಕಿರಿಯ ವಯಸ್ಸಿನ ಯುವತಿಯನ್ನು ವಿವಾಹವಾಗಿದ್ದರು. ಆ ಬಳಿಕವೂ ಅವರು ಬೆಂಗಾಲ್‌ ತಂಡದ ಕೋಚಿಂಗ್‌ ವೃತ್ತಿ ಮುಂದುವರಿಸಿದ್ದರು. ಇದೀಗ ಅವರು ಹುದ್ದೆಯನ್ನು ತೊರೆದು ವಿಶ್ರಾಂತಿ ಬಯಸಿದ್ದಾರೆ.

ಹನಿಮೂನ್‌ ಪ್ಲಾನ್‌

ಕೋಚ್‌ ಹುದ್ದೆಯನ್ನು ತೊರೆದಿರುವ ಬಗ್ಗೆ ಇತ್ತೀಚೆಗೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಅವರು “ಬುಲ್‌ಬುಲ್‌ ಸಾಹಗೆ ಸಮಯ ಮೀಸಲಿಡುವ ಉದ್ದೇಶದಿಂದ ಕೋಚ್‌ ವೃತ್ತಿ ತೊರೆದಿದ್ದೇನೆ,ʼʼ ಎಂದು ಹೇಳಿದ್ದಾರೆ.

ಡಾರ್ಜಿಲಿಂಗ್‌ ಹಾಗೂ ಕಲಿಮ್‌ಪಾಂಗ್‌ಗೆ ಹೋಗುವುದು ಅರಣ್‌ ಲಾಲ್‌ ಅವರ ಉದ್ದೇಶವಾಗಿದೆ. “ನಾನು ಡಾರ್ಜಿಲಿಂಗ್‌ ಹಾಗೂ ಕಲೀಮ್‌ಪುರಕ್ಕೆ ಪತ್ನಿಯ ಜತೆ ಹೋಗುವ ಉದ್ದೇಶ ಹೊಂದಿದ್ದೇನೆ. ಅಂತೆಯೇ ಟರ್ಕಿಗೂ ಹನಿಮೂನ್‌ಗೆ ಹೋಗುವೆ. ನನ್ನ ಪತ್ನಿ ಟೀಚರ್‌ ವೃತ್ತಿ ಮಾಡುತ್ತಿದ್ದು, ಅವರ ಶಾಲೆಗೆ ರಜೆ ಸಿಕ್ಕ ಸಂದರ್ಭದಲ್ಲಿ ಪ್ರವಾಸ ಕೈಗೊಳ್ಳುವ ಉದ್ದೇಶ ಹೊಂದಿದ್ದೇನೆ,ʼʼ ಎಂದು ಹೇಳಿದರು.

ಇದನ್ನೂ ಓದಿ: Ranji Trophy 2022 | ಐದು ದಶಕಗಳ ನಂತರ ರಣಜಿ ಟ್ರೋಫಿ ಗೆದ್ದ ಮಧ್ಯಪ್ರದೇಶ

Exit mobile version