ಲಾರ್ಡ್: ಬೆನ್ ಸ್ಟೋಕ್ಸ್ ಸಾಹಸದ ಹೊರತಾಗಿಯೂ ಆಸ್ಟ್ರೇಲಿಯಾ(England vs Australia) ಎದುರಿನ ದ್ವಿತೀಯ ಆ್ಯಷಸ್ ಟೆಸ್ಟ್ (Ashes 2023)ಪಂದ್ಯದಲ್ಲಿ ಇಂಗ್ಲೆಂಡ್ ಸೋಲು ಕಂಡಿದೆ. ಗೆಲುವು ದಾಖಲಿಸಿದ ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಆದರೆ ಅಂತಿಮ ದಿನದಾಟದಲ್ಲಿ ನಡೆದ ಒಂದು ಘಟನೆಯಿಂದ ಆಸ್ಟ್ರೇಲಿಯಾ ಆಟಗಾರರು ಕ್ರೀಡಾಸ್ಫೂರ್ತಿ ಮರೆತ್ತಿದ್ದಾರೆ ಎಂಬ ಕೂಗು ಕೇಳಿ ಬಂದಿದೆ.
ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಗೆಲುವಿಗೆ ಎರಡನೇ ಇನಿಂಗ್ಸ್ನಲ್ಲಿ 371 ರನ್ಗಳ ಅಗತ್ಯವಿತ್ತು. ಅಂತಿಮ ದಿನ ಬ್ಯಾಟಿಂಗ್ಗೆ ಇಳಿದ ಬೆನ್ ಸ್ಟೋಕ್ಸ್ ಮತ್ತು ಬೆನ್ ಡೆಕೆಟ್ ಉತ್ತಮ ಇನಿಂಗ್ಸ್ ಕಟ್ಟಿ ತಂಡದ ಗೆಲುವಿನ ವಿಶ್ವಾಸ ಮೂಡಿಸಿದರು. ಆದರೆ ಬೆನ್ ಡೆಕೆಟ್ (83) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಅನುಭವಿ ಜಾನಿ ಬೇರ್ಸ್ಟೋ(Jonny Bairstow) ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. 2 ಬೌಂಡರಿ ಬಾರಿಸಿ ಆಸೀಸ್ಗೆ ತಲೆನೋವು ತಂದರು. ಇದೇ ವೇಳೆ ಅವರು ಕ್ಯಾಮರೂನ್ ಗ್ರೀನ್ ಅವರ ಬೌನ್ಸರ್ ದಾಳಿಯಿಂದ ತಪ್ಪಿಸಿ ಕ್ರೀಸ್ ಬಿಟ್ಟು ಮುಂದೆ ಸಾಗಿದರು.
ಜಾನಿ ಬೇರ್ಸ್ಟೋ ಅವರು ಕ್ರೀಸ್ ಬಿಟ್ಟದನ್ನು ಕಂಡ ವಿಕೆಟ್ ಕೀಪರ್ ಅಲೆಕ್ಸ್ ಕೇರಿ ಅವರು ಕ್ಷಣ ಮಾತ್ರದಲ್ಲಿ ಚೆಂಡನ್ನು ವಿಕೆಟ್ಗೆ ಎಸೆದರು. ಆಸೀಸ್ ಆಟಗಾರರು ಔಟ್ ಎಂದು ಅಂಪೈರ್ ಬಳಿ ಬಲವಾದ ಮನವಿ ಮಾಡಿದರು. ಆದರೆ ಇಲ್ಲಿ ಏನಾಗುತ್ತಿದೆ?ಯಾಕಾಗಿ ಆಸೀಸ್ ಆಟಗಾರರು ಔಟ್ ಮನವಿ ಮಾಡುತ್ತಿದ್ದಾರೆ ಎಂದು ಎಂದು ಬೇರ್ಸ್ಟೋ ಮತ್ತು ಸ್ಟೋಕ್ಸ್ ಆಶ್ಚರ್ಯಚಕಿತರಾಗಿ ನಿಂತರು. ಆಸೀಸ್ ಮನವಿಯನ್ನು ಮೂರನೇ ಅಂಪೈರ್ ಪರಿಶೀಲಿಸಿ ಔಟ್ ಎಂದು ತೀರ್ಪು ಪ್ರಕಟಗೊಂಡಿತು.
🤐🤐🤐#EnglandCricket | #Ashes pic.twitter.com/dDGCnj4qNm
— England Cricket (@englandcricket) July 2, 2023
ಇದನ್ನೂ ಓದಿ Ashes 2023 : ಆಸ್ಟ್ರೇಲಿಯಾ ತಂಡದ ವಿರುದ್ಧ ಸಿಟ್ಟಿಗೆದ್ದು ಶತಕ ಬಾರಿಸಿದ ಇಂಗ್ಲೆಂಡ್ ನಾಯಕ ಬೆನ್ಸ್ಟೋಕ್ಸ್!
ವಾಸ್ತವಾಗಿ ಇದು ಐಸಿಸಿ ನಿಯಮದ ಪ್ರಕಾರ ಬೇರ್ಸ್ಟೋ ಔಟ್ ಆಗಿರುವುದರಲ್ಲಿ ಯಾವುದೇ ಲೋಪವಿಲ್ಲ ಅವರು ನಿಯಮದನ್ವಯ ಬಾಲ್ ಡೆಡ್ ಆಗುವ ಮುನ್ನವೇ ಕ್ರೀಸ್ ಬಿಟ್ಟು ಮುಂದೆ ಸಾಗಿದ್ದರು. ಆದರೆ ಇಲ್ಲಿ ಆಸೀಸ್ ಆಟಗಾರರು ಕ್ರೀಡಾಸ್ಫೂರ್ತಿ ಮರೆದಿಲ್ಲ ಎನ್ನುವುದೇ ಇಲ್ಲಿನ ತರ್ಕ. ಅಸಲಿಗೆ ಆಸೀಸ್ ಆಟಗಾರರು ಇದರಲ್ಲಿ ಕ್ರೀಡಾಸ್ಫೂರ್ತಿ ಮೆರೆಯುವ ಯಾವುದೇ ಅಗತ್ಯವಿಲ್ಲ. ಏಕೆಂದರೆ ಇದು ನಿಯಮಬಾಹಿರ ಔಟ್ ಪ್ರಕ್ರಿಯೆ ಆಗಿರಲಿಲ್ಲ. ಆದರೂ ಕೆಲ ಕ್ರಿಕೆಟ್ ನಿಯಮ ಗೊತ್ತಿರದ ನೆಟ್ಟಿಗರು ಇದನ್ನು ವಿವಾದಾತ್ಮಕ ತೀರ್ಪು, ಕ್ರೀಡಾಸ್ಫೂರ್ತಿಗೆ ವಿರುದ್ಧವಾದದ್ದು ಎಂದು ಹೇಳುತ್ತಿದ್ದಾರೆ.
ಪಂದ್ಯ ಗೆದ್ದ ಆಸೀಸ್
ಗೆಲುವಿಗೆ 371 ರನ್ಗಳ ಗುರಿ ಪಡೆದ ಇಂಗ್ಲೆಂಡ್ 81 ಓವರ್ಗಳನ್ನು ಎದುರಿಸಿ 327 ರನ್ಗೆ ಆಲ್ಔಟ್ ಆಯಿತು. ಬೆನ್ಸ್ಟೋಕ್ಸ್ ಹಾಗೂ ಬೆನ್ ಡೆಕೆಟ್ (83) ಉತ್ತಮ ಜತೆಯಾಟ ನೀಡುವ ಮೂಲಕ ಗೆಲುವಿನ ಅವಕಾಶ ಸೃಷ್ಟಿಸಿದ್ದರೂ ಉಳಿದ ಆಟಗಾರರಿಗೆ ಅಗತ್ಯ ನೆರವು ದೊರೆಯದ ಕಾರಣ ಅಂತಿಮವಾಗಿ 43 ರನ್ಗಳ ಸೋಲಿಗೆ ತುತ್ತಾಯಿತು.