Ashes 2023 : ಆಸ್ಟ್ರೇಲಿಯಾ ತಂಡದ ವಿರುದ್ಧ ಸಿಟ್ಟಿಗೆದ್ದು ಶತಕ ಬಾರಿಸಿದ ಇಂಗ್ಲೆಂಡ್​ ನಾಯಕ ಬೆನ್​ಸ್ಟೋಕ್ಸ್​! - Vistara News

ಕ್ರಿಕೆಟ್

Ashes 2023 : ಆಸ್ಟ್ರೇಲಿಯಾ ತಂಡದ ವಿರುದ್ಧ ಸಿಟ್ಟಿಗೆದ್ದು ಶತಕ ಬಾರಿಸಿದ ಇಂಗ್ಲೆಂಡ್​ ನಾಯಕ ಬೆನ್​ಸ್ಟೋಕ್ಸ್​!

ಆ್ಯಶಸರ್ ಸರಣಿಯ (Ashes 2023) ಎರಡನೇ ಪಂದ್ಯದಲ್ಲಿ ಜಾನಿ ಬೇರ್​ಸ್ಟೋವ್ ಅವರ ವಿವಾದಾತ್ಮಕ ರನ್​ಔಟ್​ ಬಳಿಕ ಕೋಪಗೊಂಡ ಬೆನ್​ಸ್ಟೋಕ್ಸ್​ ಆಸ್ಟ್ರೇಲಿಯಾ ಬೌಲರ್​ಗಳನ್ನು ದಂಡಿಸಿದರು. ಆದರೂ 155 ರನ್​ಗಳಿಗೆ ಔಟಾದರು.

VISTARANEWS.COM


on

Ben Storkes
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್​: ಆ್ಯಶಸ್​ ಸರಣಿಯ (Ashes 2023) ಎರಡನೇ ಪಂದ್ಯದ ನಾಲ್ಕನೇ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅದ್ಭುತ ಶತಕ ಬಾರಿಸಿದ್ದಾರೆ. ಅಮೋಘ 155 ರನ್ ಬಾರಿಸಿದ ಅವರು 2019ರಲ್ಲಿ ಹೆಡಿಂಗ್ಲೆಯಲ್ಲಿ ತಾವಾಡಿದ ಇನಿಂಗ್ಸ್ ಅನ್ನು ನೆನಪಿಸಿದರು. ಆ ಪಂದ್ಯದಲ್ಲಿ ಅವರು ಏಕಾಂಗಿ ಹೋರಾಟ ನಡೆಸಿ ವಿರೋಚಿತ ವಿಜಯ ತಂದುಕೊಟ್ಟಿದ್ದರು. ಆದರೆ ಹಾಲಿ ಪಂದ್ಯದಲ್ಲಿ ಅವರು 155 ರನ್​ಗಳಿಗೆ ಔಟಾದರು. ಹೀಗಾಗಿ ತಂಡ ಸೋಲಿನ ದವಡೆಗೆ ಸಿಲುಕಿತು. ಸ್ಟೋಕ್ಸ್ ನಿಧಾನಗತಿಯಲ್ಲಿ ಆಟ ಪ್ರಾರಂಭಿಸಿದರೂ, ಜಾನಿ ಬೇರ್​ಸ್ಟೋವ್​ ಅವರ ವಿವಾದಾತ್ಮಕ ರನ್ಔಟ್​ ಬಳಿಕ ಸಿಟ್ಟಿಗೆದ್ದು ಬೌಂಡರಿ, ಸಿಕ್ಸರ್​ಗಳ ಮೂಲಕ ರನ್ ಪೇರಿಸಿದರು.

ಸ್ಟೋಕ್ಸ್ ಇನಿಂಗ್ಸ್​ನ 56 ನೇ ಓವರ್​ನಲ್ಲಿ ಕ್ಯಾಮರೂನ್ ಗ್ರೀನ್ ಅವರ ಬೌಲಿಂಗ್​​ಗೆ ಸತತ ಮೂರು ಸಿಕ್ಸರ್​ಗಳನ್ನು ಬಾರಿಸುವ ಮೂಲಕ ಮೂರಂಕಿ ಮೊತ್ತ ದಾಟಿದರು. ಭೋಜನ ವಿರಾಮಕ್ಕೆ ಮೊದಲು ಅವರು ಶತಕ ಬಾರಿಸಿ ಸಂಭ್ರಮಿಸಿದರು.

ಕೊನೇ ದಿನದಾಟದ ಅರಂಭಕ್ಕೆ ಇಂಗ್ಲೆಂಡ್ ನಾಯಕ ನಿಧಾನಗತಿಯಲ್ಲಿ ಬ್ಯಾಟ್ ಮಾಡಿದರು. ತಂಡವನ್ನು ರಕ್ಷಿಸುವ ಉದ್ದೇಶ ಅವರಿಗೆ ಇತ್ತು. ಅದರೆ, ಮತ್ತೊಂದು ಬದಿಯಲ್ಲಿ ವಿಕೆಟ್​ ಉರುಳಲು ಆರಂಭಿಸಿದ ತಕ್ಷಣ ಫೋರ್​,ನಸಿಕ್ಸರ್ ಗಳ ಸುರಿಮಳೆ ಸುರಿಸಿದರು. ಅಂತಿಮವಾಗಿ 73ನೇ ಓವರ್​​ನಲ್ಲಿ ಜೋಶ್ ಹೇಜಲ್​ವುಡ್​ ಅವರ ಎಸೆತಕ್ಕ 155 ರನ್ ಸಿಡಿಸಿ ಔಟಾದರು. ಗಮನಾರ್ಹ ಸಾಧನೆಯ ಹೊರತಾಗಿಯೂ ಅವರಿಗೆ ಸಂಭ್ರಮಪಡಲು ಅವಕಾಶ ಸಿಗಲಿಲ್ಲ. ಅವರು ಔಟಾಗುವ ವೇಳೆಗೆ ತಂಡದ ಗುರಿ ದೂರವಿದ್ದ ಕಾರಣ ನಿರಾಸೆಯಿಂದ ಪೆವಲಿಯನ್ ಕಡೆಗೆ ಹೊರಟರು.

ಇದನ್ನೂ ಓದಿ : Ashes 2023 : ಐಪಿಎಲ್​ನಲ್ಲಿ ಫೇಲ್​, ಆ್ಯಶಸ್​​ನಲ್ಲೂ ವಿಚಿತ್ರ ರೀತಿಯಲ್ಲಿ ಔಟ್​; ಇಂಗ್ಲೆಂಡ್​ ಬ್ಯಾಟರ್​ನ ಬ್ಯಾಡ್​ಲಕ್​!

ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಪಂದ್ಯದ ಅಂತಿಮ ದಿನ ಇಂಗ್ಲೆಂಡ್ ಗೆಲುವಿಗೆ 257 ರನ್​ಗಳ ಅವಶ್ಯಕತೆಯಿತ್ತು. ಸ್ಟೋಕ್ಸ್​ ಮತ್ತು ಬೆನ್ ಡಕೆಟ್ ಅದ್ಭುತ ಜೊತೆಯಾಟದ ಕಾರಣ ಆತಿಥೇಯರಿಗೆ ಗೆಲುವಿನ ವಿಶ್ವಾಸ ಮೂಡಿತ್ತು. ಆದರೆ, ಜೋಶ್ ಹೇಜಲ್​ವುಡ್​, ಬೆನ್ ಡಕೆಟ್ ಅವರನ್ನು 83 ರನ್​ಗಳಿಗೆ ಔಟ್​ ಮಾಡಿದರು. ಇದರೊಂದಿಗೆ ಅವರ ಜತೆಯಾಟ ಮುರಿಯಿತು. ಬಳಿಕ ಸತತವಾಗಿ ಇಂಗ್ಲೆಂಡ್ ತಂಡ ವಿಕೆಟ್​ ಕಳೆದುಕೊಂಡಿತು. ಹೀಗಾಗಿ ಸೋಲಿನ ಸುಳಿಗೆ ಸಿಲುಕಿತು.

ವಿವಾದಾತ್ಮಕ ಔಟ್​

ವಿವಾದಾತ್ಮಕ ಔಟ್ ಮೂಲಕ ಜಾನಿ ಬೇರ್​ಸ್ಟೋವ್​ ಪೆವಿಲಿಯನ್​ಗೆ ತೆರಳುತ್ತಿದ್ದಂತೆ ಇಂಗ್ಲೆಂಡ್ ಆಟಗಾರರು ಹಾಗೂ ಪ್ರೇಕ್ಷಕರು ಕುದಿಯಲು ಆರಂಭಿಸಿದರು. ವಿಕೆಟ್​ ಕೀಪರ್​ ಅಲೆಕ್ಸ್ ಕ್ಯೇರಿ ಕುತಂತ್ರದಿಂದ ಔಟ್ ಮಾಡಿದ್ದಾರೆ ಎಂಬುದು ಅವರ ಆರೋಪ. ಗ್ರೀನ್ ಎಸೆದ ಚೆಂಡು ವಿಕೆಟ್​ ಕೀಪರ್ ಅಲೆಕ್ಸ್​ ಕೈ ಸೇರಿದ ಬಳಿಕ ಬೇರ್​ಸ್ಟೋವ್ ನಾನ್​ಸ್ಟ್ರೈಕ್ ಎಂಡ್​ ಕಡೆಗೆ ಹೊರಟಿದ್ದರು. ಈ ವೇಳೆ ಕ್ಯೇರಿ ವಿಕೆಟ್​ಗೆ ಚೆಂಡು ಎಸೆದು ಅಪೀಲ್ ಮಾಡಿದ್ದರು. ಮೂರನೇ ಅಂಪೈರ್ ಅದನ್ನು ಪುರಸ್ಕರಿಸಿದ್ದರು.

ಇದರಿಂದ ಸಿಟ್ಟಿಗೆದ್ದ ಸ್ಟೋಕ್ಸ್​, ಕ್ಯಾಮರೂನ್ ಗ್ರೀನ್ ಅವರನ್ನು ಗುರಿಯಾಗಿಸಲು ಪ್ರಾರಂಭಿಸಿದರು. ಅವರ ಓವರ್​ಗೆ ಮೂರು ಬೌಂಡರಿಗಳನ್ನು ಹೊಡೆದರು. ಅವರ ಮುಂದಿನ ಓವರ್​ನಲ್ಲಿ ಬೌಂಡರಿ ಮತ್ತು ಸತತ ಮೂರು ಸಿಕ್ಸರ್ ಗಳನ್ನು ಬಾರಿಸಿದರು. ಅಲ್ಲದೇ ಒಂದೇ ಓವರ್​ನಲ್ಲಿ 24 ರನ್ ಗಳಿಸಿದರು. ಇದು ಟೆಸ್ಟ್ ಕ್ರಿಕೆಟ್​ನ ಓವರ್​ ಒಂದರಲ್ಲಿ ಇಂಗ್ಲೆಂಡ್ ಬ್ಯಾಟರ್​ ಒಬ್ಬರು ಬಾರಿಸಿ ಜಂಟಿ ಎರಡನೇ ಅತಿ ಹೆಚ್ಚು ರನ್​ಗಳ ದಾಖಲೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2025 Mega Auction: ಕೇವಲ ಇಷ್ಟು ಆಟಗಾರರ ರಿಟೇನ್​ಗೆ ಮಾತ್ರ ಅವಕಾಶ!

IPL 2025 Mega Auction: ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸೇರಿ ಹಲವು ಅನುಭವಿ ಆಟಗಾರರಿಂದ ಇಂಪ್ಯಾಕ್ಟ್​ ನಿಯಮದ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಬಿಸಿಸಿಐ ಕೂಡ ಮುಂದಿನ ಬಾರಿ ಈ ನಿಯಮದ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿತ್ತು. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಇಂಪ್ಯಾಕ್ಟ್​ ನಿಯಮ ಕೈ ಬಿಟ್ಟರೂ ಅಚ್ಚರಿಯಿಲ್ಲ

VISTARANEWS.COM


on

IPL 2025 Mega Auction
Koo

ನವದೆಹಲಿ: ಮುಂದಿನ ವರ್ಷ ನಡೆಯುವ 18ನೇ ಆವೃತ್ತಿಯ ಐಪಿಎಲ್​ ಟೂರ್ನಿಗೆ(IPL 2025 Mega Auction) ಇದೇ ವರ್ಷಾಂತ್ಯದಲ್ಲಿ ಆಟಗಾರರ ಮಿನಿ ಹರಾಜು ನಡೆಯಲಿದೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಎಲ್ಲ 10 ತಂಡಗಳಿಗೆ ಗರಿಷ್ಠ 3 ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ಕಲ್ಪಿಸಲಿದೆ ಎಂದು ವರದಿಯಾಗಿದೆ. ಜತೆಗೆ ಹರಾಜಿನಲ್ಲಿ ಒಂದು ರೈಟ್​ ಟು ಮ್ಯಾಚ್​ (ಆರ್​ಟಿಎಂ) ಕಾರ್ಡ್​ ಬಳಸಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.

ಈ ಆವೃತ್ತಿಯ ಐಪಿಎಲ್(IPL)​ ಟೂರ್ನಿ ನಡೆಯುತ್ತಿದ್ದ ವೇಳೆ ಐಪಿಎಲ್​ ಮುಖ್ಯಸ್ಥ ಅರುಣ್​ ಧುಮಾಲ್​ 3 ರಿಂದ 4 ಆಟಗಾರರನ್ನು ಮಾತ್ರ ರಿಟೇನ್​ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದರು. ಆದರೆ ಕೆಲ ಫ್ರಾಂಚೈಸಿಗಳು 6-8 ಆಟಗಾರರನ್ನೂ ರಿಟೇನ್​ ಮಾಡಿಕೊಳ್ಳಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿತ್ತು. ಇನ್ನು ಕೆಲ ಫ್ರಾಂಚೈಸಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಹೆಚ್ಚಿನ ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದರೆ ಇದು ನಿರುಪಯುಕ್ತ ಎನಿಸಲಿದೆ ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದರು. ಸದ್ಯ ಮಾಹಿತಿ ಪ್ರಕಾರ ಬಿಸಿಸಿಐ ಗರಿಷ್ಠ 3 ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಮತ್ತು ಒಂದು ರೈಟ್​ ಟು ಮ್ಯಾಚ್​ (ಆರ್​ಟಿಎಂ) ಕಾರ್ಡ್​ ಬಳಸುವ ಅವಕಾಶ ಮಾತ್ರ ನೀಡಲಿದೆ ಎನ್ನಲಾಗಿದೆ.

ಇದನ್ನೂ ಓದಿ T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

ಏನಿದು ಆರ್​ಟಿಎಂ ಕಾರ್ಡ್​?


ಆರ್​ಟಿಎಂ ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದನ್ನು ಆರ್​ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್​ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್​ಟಿಎಂ ಬಳಸಲು ಅವಕಾಶ ನೀಡಿದರೆ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಧಿಕಾರಿಗಳ ಅಭಿಪ್ರಾಯ. ಐಪಿಎಲ್​ನಲ್ಲಿ ಇದುವರೆಗೆ ವಿರಾಟ್​ ಕೊಹ್ಲಿ (ಆರ್​ಸಿಬಿ), ಜಸ್​ಪ್ರೀತ್​ ಬುಮ್ರಾ(ಮುಂಬೈ) ಮಾತ್ರ ಒಂದೇ ತಂಡದ ಪರ ಆಡಿದ್ದಾರೆ. ಉಳಿದ ಆಟಗಾರರು ಬೇರೆ ಬೇರೆ ಫ್ರಾಂಚೈಸಿ ಪರ ಕನಿಷ್ಠ ಒಂದೆರಡು ವರ್ಷಗಳ ಕಾಲ ಆಡಿದ್ದಾರೆ.

ಇಂಪ್ಯಾಕ್ಟ್​ ನಿಯಮ ಕೈಬಿಡುವ ಸಾಧ್ಯತೆ!


ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸೇರಿ ಹಲವು ಅನುಭವಿ ಆಟಗಾರರಿಂದ ಇಂಪ್ಯಾಕ್ಟ್​ ನಿಯಮದ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಬಿಸಿಸಿಐ ಕೂಡ ಮುಂದಿನ ಬಾರಿ ಈ ನಿಯಮದ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿತ್ತು. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಇಂಪ್ಯಾಕ್ಟ್​ ನಿಯಮ ಕೈ ಬಿಟ್ಟರೂ ಅಚ್ಚರಿಯಿಲ್ಲ. ಧೋನಿ ಅವರು ಇಂಪ್ಯಾಕ್ಟ್​ ನಿಯಮ ಇಲ್ಲವಾದರೆ ಮುಂದಿನ ಆವೃತ್ತಿ ಆಡುವುದು ಅನುಮಾನ ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ಹೇಳಿದ್ದರು. ಒಂದೊಮ್ಮೆ ಈ ನಿಯಮ ಕೈಬಿಟ್ಟರೆ ಆಗ ಧೋನಿ ಆಡುತ್ತಾರಾ ಎನ್ನುವ ಪ್ರಶ್ನೆಯೊಂದು ಮೂಡುವುದು ಸಹಜ.

Continue Reading

ಪ್ರಮುಖ ಸುದ್ದಿ

Rohit Sharma : ಹಿರಿಯರಿರುವ ತಂಡಕ್ಕಿಂತ ಕಿರಿಯರ ತಂಡವೇ ಬೆಸ್ಟ್​ ಎಂದ ರೋಹಿತ್ ಶರ್ಮಾ; ಯಾಕೆ ಗೊತ್ತಾ?

Rohit Sharma :ಒಲಿ ಪೋಪ್ ಅವರನ್ನು ಔಟ್​ ಮಾಡುವಾಗ ಅವರ ಚಲನೆಯನ್ನು ಮೊದಲು ಗಮನಿಸಿದ್ದು ಯಾರು ಎಂಬ ಪ್ರಶ್ನೆ ಎದ್ದಿತ್ತು. ಪೋಪ್ ಅವರನ್ನು ಔಟ್ ಮಾಡುವ ಮೊದಲು ವಿಕೆಟ್​ ಹಿಂದಿನಿಂದ ಬಂದ ಧ್ವನಿ ಜುರೆಲ್ ಅವರದ್ದು ಎಂದು ಹೇಳಲಾಗಿತ್ತು. ಆದರೆ, ಸರ್ಫರಾಜ್ ಇದಕ್ಕೆ ವ್ಯತಿರಿಕ್ತವಾಗಿ, ಲೆಗ್ ಸ್ಲಿಪ್​ನಲ್ಲಿ ನಿಂತಿದ್ದ ನಾನೇ ಎಚ್ಚರಿಸಿದ್ದೆ ಎಂದು ಹೇಳಿದ್ದರು.

VISTARANEWS.COM


on

Rohit Sharma
Koo

ಬೆಂಗಳೂರು: ಮೂರು ತಿಂಗಳ ಹಿಂದೆ ನಡೆದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 4-1 ಮುನ್ನಡೆ ಸಾಧಿಸಿತ್ತು. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಮೊಹಮ್ಮದ್ ಶಮಿ ಅವರಂತಹ ಹಿರಿಯ ಆಟಗಾರರು ವಿವಿಧ ಕಾರಣಗಳಿಂದಾಗಿ ಅಲಭ್ಯರಾಗಿದ್ದರಿಂದ ಸರಣಿಯಲ್ಲಿ ಸಾಕಷ್ಟು ಯುವ ಆಟಗಾರರು ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಸರಣಿಯ ಸಮಯದಲ್ಲಿ ವಿಕೆಟ್ ಕೀಪಿಂಗ್ ಕರ್ತವ್ಯಗಳಿಗಾಗಿ ಧ್ರುವ್ ಜುರೆಲ್ ಅವರನ್ನು ಕ್ರಮವಾಗಿ ಮೂರು, ನಾಲ್ಕನೇ ಮತ್ತು ಐದನೇ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಆದರೆ, ರೋಹಿತ್ ಶರ್ಮಾ (Rohit Sharma) ನೇತೃತ್ವದ ಬಳಗ ಸರಣಿಯನ್ನು ಸುಲಭವಾಗಿ ವಶಕ್ಕೆ ತೆಗೆದುಕೊಂಡಿತ್ತು.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಅವರ ನಡುವೆ ನಡೆದ ಸ್ಟಂಪಿಂಗ್​ ವಿಚಾರದ ನಡುವಿನ ಚರ್ಚೆ ವ್ಯಾಪಕ ಗಮನ ಸೆಳೆದಿತ್ತು. ಕುಲ್ದೀಪ್ ಯಾದವ್ ಬೌಲಿಂಗ್​ನಲ್ಲಿ ಒಲಿ ಪೋಪ್ ಅವರನ್ನು ಔಟ್​ ಮಾಡುವಾಗ ಅವರ ಚಲನೆಯನ್ನು ಮೊದಲು ಗಮನಿಸಿದ್ದು ಯಾರು ಎಂಬ ಪ್ರಶ್ನೆ ಎದ್ದಿತ್ತು. ಪೋಪ್ ಅವರನ್ನು ಔಟ್ ಮಾಡುವ ಮೊದಲು ವಿಕೆಟ್​ ಹಿಂದಿನಿಂದ ಬಂದ ಧ್ವನಿ ಜುರೆಲ್ ಅವರದ್ದು ಎಂದು ಹೇಳಲಾಗಿತ್ತು. ಆದರೆ, ಸರ್ಫರಾಜ್ ಇದಕ್ಕೆ ವ್ಯತಿರಿಕ್ತವಾಗಿ, ಲೆಗ್ ಸ್ಲಿಪ್​ನಲ್ಲಿ ನಿಂತಿದ್ದ ನಾನೇ ಎಚ್ಚರಿಸಿದ್ದೆ ಎಂದು ಹೇಳಿದ್ದರು.

ಈ ಎಲ್ಲಾ ಗದ್ದಲಗಳ ನಡುವೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ವಿಕೆಟ್ ಪಡೆದ ಆಟಗಾರ ಯಾರು ಬಹಿರಂಗಪಡಿಸಿದ್ದಾರೆ. ಚೆಂಡನ್ನು ಎಸೆಯುವ ಮೊಲದೇ ಔಟ್ ಆಗಿದ್ದನ್ನು ನಿರೀಕ್ಷಿಸಿದ್ದಕ್ಕಾಗಿ ಅವರು ಸರ್ಫರಾಜ್ ಅವರನ್ನು ಶ್ಲಾಘಿಸಿದ್ದರು. ಹೀಗಾಗಿ ವಿಕೆಟ್ ಕೀಪರ್ ಜುರೆಲ್ ಅವರನ್ನು ರೆಡಿಯಾಗಿ ಇರುವಂಥೆ ಎಚ್ಚರಿಸಿದರು. ಈ ಎಲ್ಲ ಸಂದರ್ಭಗಳನ್ನು ಉಲ್ಲೇಖಿಸಿದ ರೋಹಿತ್ ಶರ್ಮಾ. ಭಾರತೀಯ ತಂಡದ ಯುವ ಬ್ಯಾಚ್​ನೊಂದಿಗೆ ಆಡುವುದನ್ನು ಇಷ್ಟಪಡುತ್ತೇನೆ ಎಂದು ಅವರು ಹೇಳಿದ್ದರು. ವಿಶೇಷವೆಂದರೆ ಆ ರೆಡ್-ಬಾಲ್ ಸರಣಿಯಲ್ಲಿ ಆಶ್ಚರ್ಯಕರ ಸಂಖ್ಯೆಯ ಐದು ಆಟಗಾರರು ಭಾರತಕ್ಕಾಗಿ ಪಾದಾರ್ಪಣೆ ಮಾಡಿದ್ದರು.

ಇದನ್ನೂ ಓದಿ: Cristiano Ronaldo: ಕಿಂಗ್ಸ್ ಕಪ್ ಫೈನಲ್​ನಲ್ಲಿ ಸೋಲು; ಬಿಕ್ಕಿ ಬಿಕ್ಕಿ ಅತ್ತ ಕ್ರಿಸ್ಟಿಯಾನೊ ರೊನಾಲ್ಡೊ

ಅಂದಹಾಗೆ, ಆ ಸ್ಟಂಪಿಂಗ್ ಅದ್ಭುತವಾಗಿತ್ತು. ಅದನ್ನು ನಿರೀಕ್ಷಿಸಿದವರ ಸರ್ಫರಾಜ್ ಖಾನ್. ನಾನು ಅವನನ್ನು ಸ್ವಲ್ಪ ಮುಂದೆ ನಿಲ್ಲಿಸಿದ್ದೆ, ಸರ್ಫರಾಜ್​ ಆಗ ಹೇಳಿದ್ದರು ‘ಈಗ, ಅವರು ಕ್ರೀಸ್ ನಿಂದ ಹೊರಹೋಗುತ್ತಾರೆ. ಸ್ಟಂಪಿಂಗ್ ಗೆ ಸಿದ್ಧರಾಗಿರಿ ಎಂದು ಹೇಳಿದ್ದರು. ಈ ರೀತಿಯ ಎಲ್ಲ ಭಾವನೆಗಳೊಂದಿಗೆ ಹುಡುಗರೊಂದಿಗೆ ಆಡುವುದನ್ನು ನಾನು ಸಂಪೂರ್ಣವಾಗಿ ಆನಂದಿಸಿದೆ. ಭವಿಷ್ಯದಲ್ಲಿ ನಾವು ಖುಷಿಯಿಂದ ಆಡುತ್ತೇವೆ ಎಂದು ಆಶಿಸುತ್ತೇವೆ, “ಎಂದು ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಹೇಳಿದ್ದಾರೆ.

ಐಪಿಎಲ್​ನಲ್ಲಿ ಒಂದಾದ ರೋಹಿತ್ ಶರ್ಮಾ

ಐಪಿಎಲ್​​ನ 17 ನೇ ಋತುವಿಗೆ ಮುಂಚಿತವಾಗಿ ಭಾರತದ ನಾಯಕ ಮುಂಬೈ ಇಂಡಿಯನ್ಸ್ (ಎಂಐ) ಗಾಗಿ ತಮ್ಮ ಕರ್ತವ್ಯಗಳನ್ನು ವಹಿಸಿಕೊಂಡಿದ್ದಾರೆ. ಆದರೆ ನಾಯಕನಾಗಿ ಅಲ್ಲ. ಅವರ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಯಶಸ್ವಿ ಫ್ರಾಂಚೈಸಿಯ ನಾಯಕರನ್ನಾಗಿ ನೇಮಿಸಲಾಯಿತು. ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್ (ಜಿಟಿ) ಮುಂಬೈ ಇಂಡಿಯನ್ಸ್ 15 ಕೋಟಿ ರೂ.ಗೆ ಖರೀದಿಸಿದ ನಂತರ ಈ ಬದಲಾವಣೆ ಮಾಡಲಾಗಿದೆ. ಭಾರತೀಯ ಆಲ್ರೌಂಡರ್ ಗುಜರಾತ್ ತಂಡಕ್ಕೆ 2022 ರಲ್ಲಿ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. 2023 ರಲ್ಲಿ ಫೈನಲ್ ತಲುಪುವಲ್ಲಿ ಯಶಸ್ವಿಯಾದರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ವಿರುದ್ಧ ಸೋತಿದ್ದರು.

ಆದಾಗ್ಯೂ, ರೋಹಿತ್ ಶರ್ಮಾ ಮುಂಬೈ ತಂಡವನ್ನು ಐದು ಚಾಂಪಿಯನ್ಶಿಪ್ ಪ್ರಶಸ್ತಿಗಳಿಗೆ ಮುನ್ನಡೆಸಿದ ಅಪೇಕ್ಷಣೀಯ ದಾಖಲೆಯನ್ನು ಹೊಂದಿದ್ದಾರೆ, ನಾಯಕನಾಗಿ ಅಷ್ಟೇ ಸಂಖ್ಯೆಯ ಪ್ರಶಸ್ತಿಗಳನ್ನು ಹೊಂದಿರುವ ಎಂಎಸ್ ಧೋನಿ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ನಂತರ, ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಜೂನ್ನಿಂದ ಪ್ರಾರಂಭವಾಗಲಿರುವ ಮುಂಬರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಏಸ್ ಬ್ಯಾಟ್ಸ್ಮನ್ ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ.

Continue Reading

ಕ್ರೀಡೆ

Gautam Gambhir: ಗೌತಮ್​ ಗಂಭೀರ್​ ಭಾರತದ ಮುಂದಿನ ಕೋಚ್​; ಅಧಿಕೃತ ಘೋಷಣೆಯೊಂದೇ ಬಾಕಿ

Gautam Gambhir: ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ(Sourav Ganguly) ಕೂಡ ಗೌತಮ್​ ಗಂಭೀರ್​ ಟೀಮ್​ ಇಂಡಿಯಾದ ಕೋಚ್​ ಆದರೆ ಉತ್ತಮ ಎಂದಿದ್ದಾರೆ. ‘ಗಂಭೀರ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೆ, ನನ್ನ ಬೆಂಬಲವಿದೆ. ಅವರು ಈ ಹುದ್ದಗೆ ಸೂಕ್ತ ಅಭ್ಯರ್ಥಿ’ ಎಂದು ಹೇಳುವ ಮೂಲಕ ಗಂಭೀರ್​ ಪರ ಬ್ಯಾಟ್​ ಬೀಸಿದ್ದಾರೆ.

VISTARANEWS.COM


on

Gautam Gambhir
Koo

ಮುಂಬಯಿ: ಟೀಮ್ ಇಂಡಿಯಾದ(Team India) ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautam Gambhir) ಭಾರತ ತಂಡದ ಕೋಚ್(team india coach) ಆಗಲಿದ್ದಾರೆ ಎಂದು ವರದಿಯಾಗಿದೆ. ಟಿ20 ವಿಶ್ವಕಪ್ ಮುಕ್ತಾಯದೊಂದಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿ ಮುಗಿಯಲಿದ್ದು, ಇದಾದ ಬಳಿಕ ಗಂಭೀರ್ ಅಧಿಕಾರ ಸ್ವೀಕರಿಸುವುದು ಖಚಿತ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಕಳೆದ ತಿಂಗಳು ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ವೇಳೆಯೇ ಗಂಭೀರ್​ ಕೋಚ್​ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದಾದ ಬಳಿಕ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಕೆಕೆಆರ್​ ಚಾಂಪಿಯನ್​ ಪಟ್ಟ ಕೂಡ ಅಲಂಕರಿಸಿತು. ಇದಾದ ಬಳಿಕವಂತೂ ಕೋಚ್​ ಆಗುವ ಮಾತಿಗೆ ಇನ್ನಷ್ಟು ಪುಷ್ಟಿಸಿಕ್ಕಿತು. ಅಲ್ಲದೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಕೂಡ ಗಂಭೀರ್ ಜತೆ ಬಹಳ ಆತ್ಮೀಯವಾಗಿ ಮಾತುಕತೆ ನಡೆಸಿದ್ದರು. ಇದೀಗ ಇಂಡಿಯಾ ಟುಡೆ ಗಂಭೀರ್​ ಕೋಚ್​ ಆಗುವು ನಿಶ್ಚಿತ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಗಂಭೀರ್​ ಐಪಿಎಲ್​ನಲ್ಲಿ ಮೂರು ಸೀಸನ್​ಗಳಲ್ಲಿ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಇದನ್ನೂ ಓದಿ Gautam Gambhir : ಗೌತಮ್ ಗಂಭೀರ್ ಭಾರತ ತಂಡದ ಮುಂದಿನ ಕೋಚ್​; ಐಪಿಎಲ್​ ಫ್ರಾಂಚೈಸಿ ಮಾಲೀಕರಿಂದ ಬಹಿರಂಗ?

ಗಂಭೀರ್​ ಅವರು ಈ ಬಾರಿಯ ಐಪಿಎಲ್​ ಆರಂಭಕ್ಕೂ ಮುನ್ನವೇ, ತಮ್ಮ ತಂಡದ ನಾಯಕ ಮೇ 26ರಂದು ನಡೆಯುವ ಫೈನಲ್​ ಪಂದ್ಯವ ವೇಳೆ ಟಾಸ್​ಗೆ ಸಿದ್ಧರಾಗಿರಬೇಕು ಎಂದು ಹೇಳಿದ್ದರು. ಅದರಂತೆ ಕೆಕೆಆರ್​ ಫೈನಲ್​ ಪ್ರವೇಶಿಸಿ ಕಪ್​ ಕೂಡ ಗೆದ್ದಿತು. ಗಂಭೀರ್​ ತಂಡವನ್ನು ಸಿದ್ಧಪಡಿಸಿದ ರೀತಿ ಮತ್ತು ಕಪ್​ ಗೆಲ್ಲಲೇ ಬೇಕೆಂದು ಪಣ ತೊಟ್ಟಿದೆಲ್ಲ ಫಲ ನೀಡಿತು. ಅವರ ಈ ಸಾಧನೆ ಮತ್ತು ಹಠವನ್ನು ಸೂಕ್ಷವಾಗಿ ಗಮನಿಸಿದ ಬಿಸಿಸಿಐ ಭಾರತ ತಂಡ ಕೋಚ್​ ಹುದ್ದೆ ನೀಡುವ ಯೋಜನೆಯಲ್ಲಿದೆ. ಇನ್ನೊಂದು ಮೂಲಗಳ ಪ್ರಕಾರ ಗಂಭೀರ್​ ಕೋಚ್​ ಆಗುವ ದೃಷ್ಟಿಯಿಂದಲೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎನ್ನಲಾಗಿದೆ.

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಗಂಗೂಲಿ ಕೂಡ ಸಾಥ್​


ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ(Sourav Ganguly) ಕೂಡ ಗೌತಮ್​ ಗಂಭೀರ್​ ಟೀಮ್​ ಇಂಡಿಯಾದ ಕೋಚ್​ ಆದರೆ ಉತ್ತಮ ಎಂದಿದ್ದಾರೆ. ‘ಗಂಭೀರ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೆ, ನನ್ನ ಬೆಂಬಲವಿದೆ. ಅವರು ಈ ಹುದ್ದಗೆ ಸೂಕ್ತ ಅಭ್ಯರ್ಥಿ’ ಎಂದು ಹೇಳುವ ಮೂಲಕ ಗಂಭೀರ್​ ಪರ ಬ್ಯಾಟ್​ ಬೀಸಿದ್ದಾರೆ.

Continue Reading

ಕ್ರಿಕೆಟ್

Team India: ವೆಸ್ಟ್​ ಇಂಡೀಸ್​ ಮೈದಾನ ಭಾರತದ ಪಾಲಿಗೆ ಅನ್ ಲಕ್ಕಿ; ಹಿಂದಿನ 2 ವಿಶ್ವಕಪ್ ಟೂರ್ನಿಯ​ ಹಿನ್ನೋಟ ಇಲ್ಲಿದೆ

Team India: ವೆಸ್ಟ್​ ಇಂಡೀಸ್​ನಲ್ಲಿ ನಡೆದ ಇದುವರೆಗಿನ ಐಸಿಸಿ ಟೂರ್ನಿಯಲ್ಲಿ ಭಾರತಕ್ಕೆ ನಿರಾಸೆ ಎದುರಾಗಿದ್ದೆ ಹೆಚ್ಚು. 2007 ಏಕದಿನ ವಿಶ್ವಕಪ್​, 2010 ಟಿ20 ವಿಶ್ವಕಪ್​ನಲ್ಲಿ ಭಾರತ ಅತ್ಯಂತ ಹೀನಾಯವಾಗಿ ಸೋಲು ಕಂಡ ಅವಮಾನಕ್ಕೆ ಸಿಲುಕಿತ್ತು

VISTARANEWS.COM


on

T20 World Cup 2024
Koo

ಬೆಂಗಳೂರು: ಭಾರತ ತಂಡ(Team India) ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಲೀಗ್​ ಪಂದ್ಯವನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ನಾಕೌಟ್​ ಹಂತಕ್ಕೇರಿದರೆ ವೆಸ್ಟ್​ ಇಂಡೀಸ್​ನಲ್ಲಿ(team india in west indies) ಪಂದ್ಯವನ್ನಾಡಬೇಕಿದೆ. ಇದು ಭಾರತಕ್ಕೆ ಚಿಂತೆ ಪಡುವಂತೆ ಮಾಡಿದೆ.

ಹೌದು, ವೆಸ್ಟ್​ ಇಂಡೀಸ್​ನಲ್ಲಿ ನಡೆದ ಇದುವರೆಗಿನ ಐಸಿಸಿ ಟೂರ್ನಿಯಲ್ಲಿ ಭಾರತಕ್ಕೆ ನಿರಾಸೆ ಎದುರಾಗಿದ್ದೆ ಹೆಚ್ಚು. 2007 ಏಕದಿನ ವಿಶ್ವಕಪ್​, 2010 ಟಿ20 ವಿಶ್ವಕಪ್​ನಲ್ಲಿ ಭಾರತ ಅತ್ಯಂತ ಹೀನಾಯವಾಗಿ ಸೋಲು ಕಂಡ ಅವಮಾನಕ್ಕೆ ಸಿಲುಕಿತ್ತು. 2007ರಲ್ಲಿ ದ್ರಾವಿಡ್​ ಸಾರಥ್ಯದಲ್ಲಿ ಕಣಕ್ಕಿಳಿದಿದ್ದ ಭಾರತ ತಂಡ ಬಾಂಗ್ಲಾದೇಶ ವಿರುದ್ಧವೂ ಸೋಲು ಕಂಡು ಗುಂಪು ಹಂತದಿಂದಲೇ ಹೊರಬಿದ್ದಿತ್ತು. 2010ರ ಟಿ20 ವಿಶ್ವಕಪ್​ನಲ್ಲಿಯೂ ಧೋನಿ ಸಾರಥ್ಯದ ಟೀಮ್​ ಇಂಡಿಯಾ ಗುಂಪು ಹಂತದಿಂದಲೇ ನಿರ್ಗಮನ ಕಂಡಿತ್ತು. ಹೀಗಾಗಿ ಕೆರಿಬಿಯನ್​ ದ್ವೀಪ ಭಾರತದ ಪಾಲಿಗೆ ಅದೃಷ್ಟವಲ್ಲ ಎನ್ನಲಡ್ಡಿಯಿಲ್ಲ.

2007ರ ಟಿ20 ವಿಶ್ವ ಕಪ್ (T20 World Cup 2024)​ ಉದ್ಘಾಟನಾ ಆವೃತ್ತಿಯಲ್ಲೇ ಚಾಂಪಿಯನ್​ ಆಗಿ ಭಾರತ ಹೊರಹೊಮ್ಮಿತು. ಇದರ ಬಳಿಕ ಭಾರತ ಮತ್ತೆ ಟಿ20 ಚಾಂಪಿಯನ್​ ಆಗಲೇ ಇಲ್ಲ. ಇದೀಗ 17 ವರ್ಷಗಳ ಬಳಿಕ ಮತ್ತೆ ಚಾಂಪಿಯನ್​ ಆಗುವ ಇರಾದೆಯೊಂದಿಗೆ ಟೀಮ್ ಇಂಡಿಯಾ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ ಆದರೆ, ತಂಡಕ್ಕೆ ಹಲವು ಸವಾಲು ಕೂಡ ಇದೆ.

ಈ ಕೂಟದಲ್ಲಿ ಭಾರತ ನೀಡುವ ಪ್ರದರ್ಶನದ ಮೇಲೆ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ ಟಿ20 ಭವಿಷ್ಯ ಅಡಗಿದೆ. ಈ ಕೂಟ ಮುಗಿದ ಮೇಲೆ ಯಾರ್ಯಾರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ಪ್ರಶ್ನೆಗಳೂ ಇವೆ. ಹೀಗಾಗಿ ರೋಹಿತ್​ ಮತ್ತು ಕೊಹ್ಲಿ ಪಾಲಿಗೆ ಇದೊಂದು ಮಹತ್ವದ ಕೂಟ ಎನ್ನಲಡ್ಡಿಯಿಲ್ಲ.

ಇದನ್ನೂ ಓದಿ IND vs PAK T20 World Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ ಗೆಲುವು ಖಚಿತ ಎಂದ ಪಾಕ್​ ಆಟಗಾರ

ನಂ.1 ಆದರೂ ಎಚ್ಚರ ಅಗತ್ಯ


ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಭಾರತ ತಂಡ ಬಲಿಷ್ಠ ಎನ್ನಬಹುದು. ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ, ರಿಷಭ್​ ಪಂತ್​, ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ತಂಡದ ಪ್ರಮುಖ ಆಟಗಾರರು. ಆದರೆ, ಭಾರತ ಪೂರ್ಣ ಎಚ್ಚರವಾಗಿಯೇ ಪ್ರತೀ ಪಂದ್ಯದಲ್ಲಿ ಕಣಕ್ಕಿಳಿಯಬೇಕು. ಎದುರಾಳಿಯನ್ನು ಒಮ್ಮೆಯೂ ಕಡೆಗಣಿಸುವುದು ಸಾಧ್ಯವೇ ಇಲ್ಲ. ಯಾರು ಯಾರನ್ನು ಕೆಡವಿ ಬೀಳಿಸುತ್ತಾರೆ ಎಂಬುದು ಟಿ20 ಮಾದರಿಯಲ್ಲಿ ಅಂದಾಜಿಸುವುದಕ್ಕೆ ಕಷ್ಟ ಸಾಧ್ಯ. ಇದಕ್ಕೆ ಉತ್ತಮ ನಿದರ್ಶನವೆಂದರೆ ಅಭ್ಯಾಸ ಪಂದ್ಯದಲ್ಲಿ ಅನುಭವಿ ಬಾಂಗ್ಲಾದೇಶಕ್ಕೆ ಕ್ರಿಕೆಟ್​ ಶಿಶು ಅಮೆರಿಕ ಸೋಲುಣಿಸಿದ್ದು. ಆದ್ದರಿಂದ ಭಾರತ ಎಚ್ಚರ ತಪ್ಪಬಾರದು. ಕೆಲವೇ ಓವರ್‌ಗಳಲ್ಲಿ ಪಂದ್ಯದ ಚಿತ್ರಣವೇ ಬದಲಾಗುವುದು ಟಿ20 ಪಂದ್ಯಗಳ ಶಕ್ತಿ.

ಟಿ20 ವಿಶ್ವ ಕಪ್​ನಲ್ಲಿ ಭಾರತ ಸಾಧನೆ

2007ಚಾಂಪಿಯನ್​
20092ನೇ ಸುತ್ತು
20102ನೇ ಸುತ್ತು
20122ನೇ ಸುತ್ತು
2014ರನ್ನರ್​ ಅಪ್​
2016ಸೆಮಿಫೈನಲ್​
20212ನೇ ಸುತ್ತು
2022ಸೆಮಿಫೈನಲ್​
Continue Reading
Advertisement
100 kg of banned plastic seized by municipal council in Shira
ಕರ್ನಾಟಕ22 seconds ago

Shira News: ಶಿರಾದಲ್ಲಿ ನಗರಸಭೆಯಿಂದ ಗೋದಾಮಿನ ಮೇಲೆ ದಾಳಿ; 100 ಕೆಜಿ ನಿಷೇಧಿತ ಪ್ಲಾಸ್ಟಿಕ್‌ ವಶ

Selco India SELCO Suryamitra Annual Award to Richard Hansen of America
ಕರ್ನಾಟಕ2 mins ago

Selco India: ಸೌರವಿದ್ಯುತ್ ಪ್ರವರ್ತಕ ರಿಚರ್ಡ್ ಹ್ಯಾನ್ಸೆನ್‌ಗೆ ಸೆಲ್ಕೋ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿ ಪ್ರದಾನ

union Minister Pralhad Joshi latest statement about Valmiki Corporation scam
ಕರ್ನಾಟಕ3 mins ago

Pralhad Joshi: ವಾಲ್ಮೀಕಿ ನಿಗಮದ ಹಗರಣ; ಸಚಿವ ನಾಗೇಂದ್ರರನ್ನು ಬಂಧಿಸಿ, ಸಿಬಿಐ ತನಿಖೆಗೆ ಪ್ರಲ್ಹಾದ್‌ ಜೋಶಿ ಆಗ್ರಹ

Exit Poll 2024
Lok Sabha Election 202417 mins ago

Exit Poll 2024: ಮೋದಿ ಹ್ಯಾಟ್ರಿಕ್‌ ಖಚಿತ, ಇಂಡಿಯಾ ಒಕ್ಕೂಟಕ್ಕೆ ಸೋಲು ನಿಶ್ಚಿತ; ಇಲ್ಲಿದೆ ಎಕ್ಸಿಟ್‌ ಪೋಲ್‌ ವರದಿ

Exit Poll 2024
ದೇಶ46 mins ago

Exit Poll 2024 Live: ಮೋದಿನಾ? ರಾಹುಲ್‌ ಗಾಂಧಿನಾ? ಮತಗಟ್ಟೆ ಸಮೀಕ್ಷೆಯ ಲೈವ್‌ ಇಲ್ಲಿ ವೀಕ್ಷಿಸಿ

Rahul Gandhi
ಕರ್ನಾಟಕ56 mins ago

Rahul Gandhi: ರಾಹುಲ್ ಗಾಂಧಿಗೆ ರಿಲೀಫ್; ಜೂನ್‌ 7ಕ್ಕೆ ವಿಚಾರಣೆಗೆ ಹಾಜರಾಗಲು ಕೋರ್ಟ್‌ ಸೂಚನೆ

Karnataka Weather Forecast
ಮಳೆ1 hour ago

Karnataka Weather : ಭಾರಿ ಮಳೆಗೆ ಕೆರೆಯಂತಾದ ರಸ್ತೆಗಳು; ಮುಳುಗಡೆಯಾದ ವಾಹನಗಳು

Star Saree Fashion
ಫ್ಯಾಷನ್1 hour ago

Star Saree Fashion: ಡಿಸೈನರ್‌ ಸೀರೆಯಲ್ಲಿ ನಟಿ ತಾನ್ಯಾ ಹೋಪ್‌ರಂತೆ ಕಾಣಲು ಈ 5 ಸಿಂಪಲ್‌ ರೂಲ್ಸ್ ಫಾಲೋ ಮಾಡಿ!

Arvind Kejriwal
ಪ್ರಮುಖ ಸುದ್ದಿ1 hour ago

Arvind Kejriwal : ಅರವಿಂದ್​ ಕೇಜ್ರಿವಾಲ್​ ಮತ್ತೆ ಜೈಲಿಗೆ ಹೋಗುವುದು ಫಿಕ್ಸ್​

World Milk Day
ಆರೋಗ್ಯ2 hours ago

World Milk Day: ಹಾಲಿಗೊಂದು ದಿನವೇ ಬೇಕೆಂದಿಲ್ಲ, ವರ್ಷವಿಡೀ ಆಚರಿಸಬಹುದು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Liquor ban
ಬೆಂಗಳೂರು2 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 weeks ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

ಟ್ರೆಂಡಿಂಗ್‌