ಬೆಂಗಳೂರು: ಐಪಿಎಲ್ 2023 ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ರಿಂಕು ಸಿಂಗ್ (Rinku Singh) ಅವರಿಗೆ ಐರ್ಲೆಂಡ್ ಟಿ20ಐ ಪ್ರವಾಸ ಮತ್ತು ಚೀನಾದ ಹ್ಯಾಂಗ್ಜೌನಲ್ಇಲ ಏಷ್ಯನ್ ಕ್ರೀಡಾಕೂಟಕ್ಕಾಗಿ ಭಾರತದ ತಂಡದಲ್ಲಿ ಸ್ಥಾನ ಪಡೆದುಕೊಂಡರು. ರಾಷ್ಟ್ರೀಯ ತಂಡದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯುವ ಆಟಗಾರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರೀಗ ಭಾರತ ತಂಡದ ಮಧ್ಯಮ ಕ್ರಮಾಂಕದ ಉತ್ತಮ ಆಟಗಾರ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ.
ರಿಂಕು ಪ್ರಸ್ತುತ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಟಿ 20ಐ ಸರಣಿಯಲ್ಲಿ ಆಡುತ್ತಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಅವರು 14 ಎಸೆತಗಳಲ್ಲಿ 22* ರನ್ ಗಳಿಸಿ ಭಾರತವನ್ನು ಗೆಲುವು ತಂದುಕೊಟ್ಟಿದ್ದರು. ಎರಡನೇ ಟಿ 20 ಐನಲ್ಲಿ, ಎಡಗೈ ಬ್ಯಾಟರ್ 9 ಎಸೆತಗಳಲ್ಲಿ 31* ರನ್ ಗಳಿಸಿದ್ದರು. ಆದರೆ ಮೂರನೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಅವರ ಫಿನಿಶಿಂಗ್ ಸಾಮರ್ಥ್ಯದಿಂದ ಪ್ರಭಾವಿತರಾದ ಕೆಲವು ಮಾಜಿ ಕ್ರಿಕೆಟಿಗರು ರಿಂಕು ಸಿಂಗ್ ಅವರಿಗೆ ವಿಶ್ವಾಸಾರ್ಹ ಫಿನಿಶರ್ ಎಂಬ ಟ್ಯಾಗ್ ನೀಡಿದ್ದಾರೆ. ಕೆಲವರು ಅವರನ್ನು ದಂತಕಥೆ ಎಂಎಸ್ ಧೋನಿಗೆ ಹೋಲಿಸುತ್ತಿದ್ದಾರೆ.
ಎಲ್ಲ ಕ್ರಮಾಂಕಕ್ಕೆ ಫಿಟ್
ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ರಿಂಕುಗೆ ‘ಫಿನಿಶರ್’ ಎಂಬ ಟ್ಯಾಗ್ ಕೊಡುವುದನ್ನನು ಒಪ್ಪುತ್ತಿಲ್ಲ. ರಿಂಕು ಅವರು ಎಲ್ಲ ಕ್ರಮಾಂಕದಲ್ಲಿ ಆಡಬಲ್ಲರು ಹಾಗೂ ಯಾವುದೇ ತಂಡದಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
“ರಿಂಕು ಈ ರೀತಿ ಪ್ರದರ್ಶನ ನೀಡುತ್ತಿರುವುದು ಇದೇ ಮೊದಲಲ್ಲ. ನಾವೆಲ್ಲರೂ ಅವರ ಪಾತ್ರ, ಅವರ ಶಕ್ತಿಯ ಬಗ್ಗೆ ಚರ್ಚಿಸುತ್ತಿದ್ದೇವೆ. ಅವರ ಬ್ಯಾಟಿಂಗ್ ಬಗ್ಗೆ ಮಾತ್ರವಲ್ಲ, ಅವರು ಮೈದಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುವದರ ಬಗ್ಗೆಯೂ ಮಾತನಾಡುತ್ತಿದ್ದೇವೆ. ಅವರು ಭಾರತೀಯ ಕ್ರಿಕೆಟ್ಗೆ ದೊಡ್ಡ ಆಸ್ತಿಯಾಗಲಿದ್ದಾರೆ. ಹೌದು, ನಾವು ಟಿ 20 ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ. ಆದರೆ ನಾಳೆ ಅವರು ಏಕದಿನ ಕ್ರಿಕೆಟ್ ಕೂಡ ಆಡಬಹುದು”ಎಂದು ನೆಹ್ರಾ ಜಿಯೋ ಸಿನೆಮಾ ಜತೆ ಮಾತನಾಡುತ್ತಾ ಹೇಳಿದ್ದಾರೆ.
ಫಿನಿಶರ್ ಪದದ ಅಭಿಮಾನಿ ಅಲ್ಲ
“ನಾನು ‘ಫಿನಿಶರ್’ ಪದದ ದೊಡ್ಡ ಅಭಿಮಾನಿಯಲ್ಲ. ಓಪನರ್ ಫಿನಿಶರ್ ಆಗಬಹುದು. ಅವರು ಶತಕ ಗಳಿಸಿದರೆ ಅವರು ಕೂಡ ಫಿನಿಶರ್ ಕೆಲವೊಮ್ಮೆ, ಇದು ಕಠಿಣವಾಗಬಹುದು. ಅದೇ ರಿಂಕು ಸಿಂಗ್ ಒಂದು ಅಥವಾ ಎರಡು ಬಾರಿ ಆಟವನ್ನು ಮುಗಿಸದಿದ್ದರೆ ಅವರನ್ನು ಫಿನಿಶರ್ ಎಂದು ಹೇಳುವುದು ಸಾಧ್ಯವೇ ರಿಂಕು ಸಿಂಗ್ ಬಗ್ಗೆ ಹೇಳುವುದಾದರೆ, ಅವರು ಯಾವುದೇ ಕ್ರಮಾಂಕದಲ್ಲಿ ಆಡಬಲ್ಲ ವ್ಯಕ್ತಿ. ಅವರು ಮುಂದೆ 50 ಓವರ್ಗಳ ಕ್ರಿಕೆಟ್ನಲ್ಲಿ ಆಡುವುದನ್ನು ನಾನು ನೋಡಬಹುದು. ಅವರು 4, 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲರು, “ಎಂದು ನೆಹ್ರಾ ಹೇಳಿದ್ದಾರೆ.
ಟಿ20ಐ ವೃತ್ತಿಜೀವನದಲ್ಲಿ, ರಿಂಕು ಸಿಂಗ್ ಎಂಟು ಪಂದ್ಯಗಳು ಮತ್ತು ನಾಲ್ಕು ಇನ್ನಿಂಗ್ಸ್ಗಳಲ್ಲಿ 128.00 ಸರಾಸರಿಯಲ್ಲಿ 128 ರನ್ ಗಳಿಸಿದ್ದಾರೆ. ಅವರ ರನ್ಗಳು 216.95 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ನಲ್ಲಿ ಬಂದಿವೆ. ಅವರು ಮೂರು ಸಂದರ್ಭಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ.
ಭಾರತ 5-6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 40 ರನ್ ಗಳಿಸಬಹುದು. ರಿಂಕು ಸಿಂಗ್ ಯಾವುದೇ ಪಾತ್ರವನ್ನು ನಿರ್ವಹಿಸಲು ಸಿದ್ಧರಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ತಮ್ಮನ್ನು ಫಿನಿಶರ್ ಎಂದು ಟ್ಯಾಗ್ ಮಾಡಲು ಬಯಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಎಲ್ಲಾ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಲು ನೋಡಬೇಕು, ಎಂದು ನೆಹ್ರಾ ಹೇಳಿದರು.