ಮುಂಬೈ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಏಪ್ರಿಲ್ 1 ರಂದು ನಡೆಯಲಿರುವ ಐಪಿಎಲ್ 2024 ರ 14ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿವೆ. ಎರಡು ದೊಡ್ಡ ತಂಡಗಳ ನಡುವಿನ ಈ ಹೈ ಪ್ರೊಫೈಲ್ ಪಂದ್ಯದಲ್ಲಿ ಆರ್ಆರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) 200+ ಐಪಿಎಲ್ ಪಂದ್ಯಗಳನ್ನು ಆಡಿದ ಎಲೈಟ್ ಆಟಗಾರರ ಗುಂಪಿಗೆ ಸೇರಿಕೊಂಡಿದ್ದಾರೆ.
MAXIMUMS 🆚 spin and pace 💥
— Fourth Umpire (@UmpireFourth) March 28, 2024
Counter-attacking in style, the R Ashwin way 🔥🔥#IPL2024 #TATAIPL2024 #DCvRR #RRvDC #RRvsDC #DCvsRR #SanjuSamson pic.twitter.com/Xia6DtZaaa
ಅನುಭವಿ ಸ್ಪಿನ್ನರ್ ಅಶ್ವಿನ್ ಸೋಮವಾರ ರಾಜಸ್ಥಾನ್ ರಾಯಲ್ಸ್ ಪರ ಆಡಿ ಐಪಿಎಲ್ನಲ್ಲಿ ಮಹತ್ವದ ಮೈಲಿಗಲ್ಲನ್ನು ತಲುಪಿದ್ದಾರೆ. ಈ ಋತುವಿನಲ್ಲಿ ಈಗಾಗಲೇ ರಾಯಲ್ಸ್ ಪರ ಎರಡೂ ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಅಶ್ವಿನ್, ಮುಂಬೈ ಇಂಡಿಯನ್ಸ್ ವಿರುದ್ಧ ಆಯ್ಕೆಯಾಗಿದ್ದಾರೆ. ವೃತ್ತಿಜೀವನದಲ್ಲಿ 200 ಐಪಿಎಲ್ ಪಂದ್ಯಗಳನ್ನು ಆಡಿದ 10 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2009ರಲ್ಲಿ ಸಿಎಸ್ಕೆ ಪರ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ 37ರ ಹರೆಯದ ಅಶ್ವಿನ್ , ಲೀಗ್ನಲ್ಲಿ ಒಟ್ಟು 199 ಪಂದ್ಯಗಳಿಂದ 743 ರನ್ ಹಾಗೂ 172 ವಿಕೆಟ್ಗಳನ್ನು ಪಡೆದಿದ್ದಾರೆ.
ಐದನೇ ಸಾಧಕ ಬೌಲರ್
ರವಿಚಂದ್ರನ್ ಅಶ್ವಿನ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ದೀರ್ಘ ಮತ್ತು ಸಾಧನೆಯ ಇತಿಹಾಸವನ್ನು ಹೊಂದಿದ್ದಾರೆ. ಅವರು ಪ್ರಸ್ತುತ ವಿಕೆಟ್ ಪಡೆದ ಸಾರ್ವಕಾಲಿಕ ಐದನೇ ಸ್ಥಾನದಲ್ಲಿದ್ದಾರೆ. 2022ರ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ಗೆ ಸೇರುವ ಮೊದಲು, ಅಶ್ವಿನ್ ಚೆನ್ನೈ ಸೂಪರ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್ಜೈಂಟ್ಸ್, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. 2010 ಮತ್ತು 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಎರಡು ಬಾರಿ ಐಪಿಎಲ್ ಚಾಂಪಿಯನ್ ಶಿಪ್ ಗೆದ್ದಿದ್ದರು. ಇದಲ್ಲದೆ, ಅವರು 2018 ಮತ್ತು 2019 ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಸೇವೆ ಸಲ್ಲಿಸಿದರು.
ಇದನ್ನೂ ಓದಿ: Jos Butler : ಐಪಿಎಲ್ ನಡುವೆಯೇ ಹೆಸರು ಬದಲಾಯಿಸಿಕೊಂಡ ಜೋಸ್ ಬಟ್ಲರ್
ಆರ್ಆರ್ ಪರ 32 ಐಪಿಎಲ್ ಪಂದ್ಯಗಳನ್ನಾಡಿರುವ ಅಶ್ವಿನ್ 27 ವಿಕೆಟ್ ಹಾಗೂ 287 ರನ್ ಗಳಿಸಿದ್ದಾರೆ. ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ತಂಡದ ಕೊನೆಯ ಪಂದ್ಯದಲ್ಲಿ, ಅವರನ್ನು 5 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದದರು. ಅವರು 19 ಎಸೆತಗಳಲ್ಲಿ 29 ರನ್ ಸಿಡಿಸಿ ಔಟಾದರು.
ಎಲೈಟ್ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?
ಐಪಿಎಲ್ ಇತಿಹಾಸದಲ್ಲಿ ಇದುವರೆಗೆ 253 ಪಂದ್ಯಗಳನ್ನು ಆಡಿರುವ ಎಂಎಸ್ ಧೋನಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ತಲಾ 245 ಪಂದ್ಯಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 240 ಐಪಿಎಲ್ ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ (229), ಶಿಖರ್ ಧವನ್ (220), ಸುರೇಶ್ ರೈನಾ (205), ರಾಬಿನ್ ಉತ್ತಪ್ಪ (205) ಮತ್ತು ಅಂಬಟಿ ರಾಯುಡು (204) ಕೂಡ ಐಪಿಎಲ್ನಲ್ಲಿ 200 ಪಂದ್ಯಗಳ ಗಡಿ ದಾಟಿದ್ದಾರೆ.