Site icon Vistara News

Asia Cup 2022 | ಜಪಾನ್‌ ವಿರುದ್ಧ ಭಾರತ ಹಾಕಿ ತಂಡಕ್ಕೆ ಸೋಲು

Asia Cup 2022

Asia Cup 2022: ಮಂಗಳವಾರ ನಡೆದ ಏಷಿಯಾ ಕಪ್‌ ಸರಣಿಯ ಜಪಾನ್‌ ಹಾಗೂ ಭಾರತ ನಡುವಿನ ಹಾಕಿ ಪಂದ್ಯದಲ್ಲಿ ಜಪಾನ್‌ ಗೆಲುವು ಸಾಧಿಸಿದೆ. ಭಾರತದ ಹೊಸ ತಂಡ ಜಪಾನ್‌ ವಿರುದ್ಧ 5-2 ಅಂತರದ ಭಾರಿ ಸೋಲು ಕಂಡು, ಸರಣಿಯಲ್ಲಿ ಮುಂದುವರಿಯುವ ಸಾಧ್ಯತೆ ಕ್ಷೀಣವಾಗಿದೆ.

ಈ ಹಿಂದೆ ಪಾಕಿಸ್ತಾನದ ವಿರುದ್ಧದ ಪಂದ್ಯ ಡ್ರಾ ಆಗಿತ್ತು. ಈ ಪಂದ್ಯವನ್ನು ಭಾರತ ಸೋತಿರುವ ಕಾರಣ ಭಾರತ ಮುಂದಿನ ಹಂತಕ್ಕೆ ಅವಕಾಶ ಕಡಿಮೆ ಆಗಿದೆ. ಮೇ 26ರಂದು ತನ್ನ ಕೊನೆಯ ಪಂದ್ಯವನ್ನು ಇಂಡಿನೇಷಿಯಾ ವಿರುದ್ಧ ಭಾರತ ಆಡಲಿದೆ. ಈ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದರೂ ನಾಕ್ಔಟ್‌ ಹಂತಕ್ಕೆ ಕ್ವಾಲಿಫೈ ಆಗುವುದು ಸುಲಭವಿಲ್ಲ.

ಭಾರತದ ಈ ಬಾರಿಯ ಹಾಕಿ ತಂಡದಲ್ಲಿ ಹೊಸ ಆಟಗಾರರ ಸಂಖ್ಯೆ ಹೆಚ್ಚಿದೆ. ಅನುಭವಿ ಆಟಗಾರರ ಕೊರತೆ ಈ ಪಂದ್ಯದಲ್ಲಿ ಎದ್ದು ಕಾಣುತ್ತಿತ್ತು. ಸರ್ದಾರ್‌ ಸಿಂಗ್‌ ಅವರ ತರಬೇತಿಯಲ್ಲಿ ಆಡುತ್ತಿರುವ ಟೀಮ್ ಇಂಡಿಯಾದ ಆಟಗಾರರು ಈ ಪಂದ್ಯ ಗೆಲ್ಲುವಲ್ಲಿ ಎಡವಿದ್ದಾರೆ.

ಈ ಪಂದ್ಯದಲ್ಲಿ ಜಪಾನ್‌ ಪರವಾಗಿ ಕೆನ್‌ ನಾಗಯೋಶಿ, ಕೊಸೆ ಕವಾಬೆ, ರ‍್ಯೊಮಿ ಊಕಾ ಹಾಗೂ ಕೊಜಿ ಯಾಮ್‌ ಗೋಲ್‌ ಹೊಡೆದು ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ಭಾರತದ ಪರ ಪವನ್‌ ರಾಜ್‌ಭರ್‌ ಹಾಗೂ ಉತ್ತಮ್‌ ಸಿಂಗ್‌ ತಲಾ ಒಂದು ಗೋಲ್‌ ಹೊಡೆದಿದ್ದಾರೆ.

ಇದನ್ನೂ ಓದಿ: French Open 2022 | ನಡಾಲ್‌ಗೆ ಐತಿಹಾಸಿಕ 106ನೇ ಗೆಲುವು, ಟಾಪ್‌ ಆಟಗಾರರು ಔಟ್‌

Exit mobile version