Site icon Vistara News

Asia Cup 2023: ಭಾರತ-ಪಾಕ್​ ಹೈವೋಲ್ಟೇಜ್ ಪಂದ್ಯ ನಡೆಯುವುದೇ ಅನುಮಾನ!

Rohit Sharma And Babar Azam Ahead Of Asia Cup Match

India vs Pakistan Asia Cup Cricket Match Live Updates In Kannada

ಬೆಂಗಳೂರು: ಏಷ್ಯಾಕಪ್​ನ(Asia Cup 2023) ಭಾರತ ಹಾಗೂ ಪಾಕಿಸ್ತಾನ(ind vs pak) ನಡುವೆ ಸೆಪ್ಟೆಂಬರ್​ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯುವ ಪಂದ್ಯಕ್ಕೆ ಭಾರತ ಹಾಗೂ ಪಾಕಿಸ್ತಾನ ಮಾತ್ರವಲ್ಲ, ಜಗತ್ತೇ ಕಾಯುತ್ತಿದೆ. ಆದರೆ ಈ ಪಂದ್ಯ ನಡೆಯುವುದು 99 ಪ್ರತಿಶತ ಅನುಮಾನ ಎಂದು ತಿಳಿದುಬಂದಿದೆ. ಈ ದಿನ ಕ್ಯಾಂಡಿಯಲ್ಲಿ(kyandi weather) ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಗುಡುಗು ಸಹಿತ ಭಾರಿ ಮಳೆ

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕ್​ ಪಂದ್ಯವನ್ನು ಕಣ್ತುಂಬಿಕೊಳ್ಳಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ಹಮಾಮಾನ ಇಲಾಖೆ ನಿರಾಸೆಯ ಸುದ್ದಿಯೊಂದನ್ನು ನೀಡಿದೆ. ಈ ಪಂದ್ಯ ನಡೆಯುವ ದಿನ ಕ್ಯಾಂಡಿಯಲ್ಲಿ ಶೇ. 90ರಷ್ಟು ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ತಿಳಿಸಿದೆ. ಹಗಲಿನಲ್ಲೇ ಇಲ್ಲಿ ಮಳೆ ಆರಂಭವಾಗಿ ರಾತ್ರಿಯಲ್ಲಿ ಗುಡುಗು ಸಹಿತ ಜೋರು ಮಳೆ ಆಗಲಿದ್ದು ಪಂದ್ಯ ನಡೆಯುವುದು ಅನುಮಾನ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಒಂದೊಮ್ಮೆ ಈ ಪಂದ್ಯ ಮಳೆಗೆ ರದ್ದಾದರೆ ಅಭಿಮಾನಿಗಳು ಬೇಸರಗೊಳ್ಳುವುದು ಖಂಡಿತ.

ಇದನ್ನೂ ಓದಿ Asia Cup 2023: ಪಂದ್ಯ ಆರಂಭಕ್ಕೆ ಒಂದು ದಿನ ಇರುವಾಗ ಬಾಂಗ್ಲಾ ತಂಡಕ್ಕೆ ಆಘಾತ; ಸ್ಟಾರ್​ ಆಟಗಾರ ಟೂರ್ನಿಯಿಂದ ಔಟ್​

ಕ್ಯಾಂಡಿಯ ಹವಾಮಾನ ವರದಿ

ಅಪಾಯಕಾರಿ ಪಾಕ್​

ಕಳೆದ ವಾರವಷ್ಟೇ ಅಫಘಾನಿಸ್ತಾನವನ್ನು ಲಂಕಾದಲ್ಲೇ ಕ್ಲೀನ್‌ಸ್ವೀಪ್‌ ಮಾಡಿ ನಂ.1 ಸ್ಥಾನ ಅಲಂಕರಿಸಿರುವ ಪಾಕಿಸ್ತಾನ ಈ ಕೂಟದ ಅತ್ಯಂತ ಅಪಾಯಕಾರಿ ತಂಡ. ಬಾಬರ್‌ ಅಜಂ ಪಡೆ ಎಲ್ಲ ವಿಭಾಗಗಳಲ್ಲೂ ಬಲಿಷ್ಠ ಆಟಗಾರರನ್ನು ನೆಚ್ಚಿಕೊಂಡಿದೆ. ಅದಲ್ಲದೆ ಭಾರತ ವಿರುದ್ಧ 2021ರ ವಿಶ್ವಕಪ್​ ಟೂರ್ನಿಯಲ್ಲಿ ಗೆದ್ದ ಬಳಿಕ ಒತ್ತಡವನ್ನು ನಿಭಾಯಿಸುವ ಕಲೆ ಪಾಕ್​ ಕಲಿತುಕೊಂಡಿದೆ. ಹೀಗಾಗಿ ಪಾಕ್​ ಸವಾಲು ಅಷ್ಟು ಲಘುವಾಗಿ ತೆಗೆದುಕೊಳ್ಳಬಾರದು.

ಭಾರತ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಸರ್‌ ಪಟೇಲ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಪ್ರಸಿದ್ಧ್‌ ಕೃಷ್ಣ, ಸಂಜು ಸ್ಯಾಮ್ಸನ್‌ (ಮೀಸಲು ಆಟಗಾರ).

ಪಾಕಿಸ್ತಾನ ತಂಡ

ಬಾಬರ್ ಅಜಂ (ನಾಯಕ), ಶಾದಾಬ್ ಖಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಸೌದ್ ಶಕೀಲ್ (ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಮಾತ್ರ) ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರಾವುಫ್​, ನಸೀಮ್ ಶಾ, ಶಾಹೀನ್ ಅಫ್ರಿದಿ, ತಯ್ಯಬ್ ತಾಹಿರ್, ಮೊಹಮ್ಮದ್ ಹ್ಯಾರಿಸ್, ಫಹೀಮ್ ಅಶ್ರಫ್, ಮೊಹಮ್ಮದ್ ವಾಸಿಮ್.

Exit mobile version