ಕೊಲೊಂಬೊ: ಏಷ್ಯಾಕಪ್ 2023ರ ಸೂಪರ್ 4 ಸುತ್ತಿ ನ 6ನೇ ಪಂದ್ಯದಲ್ಲಿ ಭಾರತ ತಂಡ ಈಗಾಗಲೇ ಟೂರ್ನಿಯಿಂದ ನಿರ್ಗಮಿಸಿರುವ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಸೆಪ್ಟೆಂಬರ್ 15ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಆಡಿರುವ ಎರಡು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿರುವ ಟೀಮ್ ಇಂಡಿಯಾ ಈಗಾಗಲೇ ಮೆಗಾ ಫೈನಲ್ಗೆ ಅರ್ಹತೆ ಪಡೆದಿದ್ದರೆ, ಬಾಂಗ್ಲಾ ಟೈಗರ್ಸ್ ಎರಡು ಪಂದ್ಯಗಳನ್ನು ಸೋತು ಟೂರ್ನಿಯಿಂದ ಹೊರಬಿದ್ದಿದೆ.
ಕಳೆದ ಮುಖಾಮುಖಿಯಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಸುಲಭ ಜಯ ಸಾಧಿಸಿತ್ತು. ಯುವ ಆಲ್ರೌಂಡರ್ ದುನಿತ್ ವೆಲ್ಲಾಲಗೆ ಅವರು ಅಮೋಘ ಆಟದ ಹೊರತಾಗಿಯೂ ಭಾರತ ಪಾರಮ್ಯ ಮೆರೆಯಿತು. ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಮತ್ತು ಅವರ ಪಡೆ ಕೇವಲ 213 ರನ್ಗಳಿಗೆ ಆಲ್ಔಟ್ ಆಯಿತು.
ದುನಿತ್ ತಮ್ಮ 10 ಓವರ್ಗಳಲ್ಲಿ 40 ರನ್ ನೀಡಿ 5 ವಿಕೆಟ್ ಪಡೆದರು. ಇದರಲ್ಲಿ ಒಂದು ಮೇಡನ್ ಕೂಡ ಸೇರಿತ್ತು. ಅರೆಕಾಲಿಕ ಬೌಲರ್ ಚರಿತ್ ಅಸಲಂಕಾ ಕೂಡ ನಾಲ್ಕು ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು, ಭಾರತವು ತನ್ನ ಏಕದಿನ ಇತಿಹಾಸದಲ್ಲಿ ಮೊದಲ ಬಾರಿಗೆ ಎಲ್ಲಾ ಹತ್ತು ವಿಕೆಟ್ಗಳನ್ನು ಸ್ಪಿನ್ ಬೌಲರ್ಗಳಿಗೆ ನೀಡಿತು. ನಂತರ ವೆಲ್ಲಾಲಗೆ 46 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿದರು. ಉಳಿದ ಬ್ಯಾಟರ್ಗಲು ಅವರಿಗೆ ಬೆಂಬಲ ನೀಡಲಿಲ್ಲ. ಹೀಗಾಗಿ ಭಾರತಕ್ಕೆ ಜಯ ಸಿಕ್ಕಿತು.
ಇದನ್ನೂ ಓದಿ: Asia Cup 2023 : ಬಾಂಗ್ಲಾ ವಿರುದ್ಧದ ಸೂಪರ್ 4 ಪಂದ್ಯದಿಂದ ಭಾರತ ತಂಡಕ್ಕೆ ಆಗುವ ಲಾಭವೇನು?
ಬಾಂಗ್ಲಾ ವಿರುದ್ಧದ ಪಂದ್ಯದಲ್ಲೂ ಭಾರತ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಕೆಲವು ಬೆಂಚ್ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಬಾಂಗ್ಲಾದೇಶವು ಅಭಿಯಾನವನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸಲು ಸಮಾಧಾನಕರ ಗೆಲುವು ಸಾಧಿಸುವ ಭರವಸೆಯಲ್ಲಿದೆ.
ಈ ಪಂದ್ಯದಲ್ಲಿ ಸೃಷ್ಟಿಯಾಗಬಹುದಾದ ಕೆಲವೊಂದು ಸಾಧನೆಗಳನ್ನು ಮಾಡಲು ಅವಕಾಶವಿದೆ
ಭಾರತ ಮತ್ತು ಬಾಂಗ್ಲಾದೇಶ ಏಕದಿನ ಪಂದ್ಯಗಳಲ್ಲಿ 39 ಬಾರಿ ಮುಖಾಮುಖಿಯಾಗಿದ್ದು, ಭಾರತ 31 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಬಾಂಗ್ಲಾ ಏಳು ಬಾರಿ ಗೆದ್ದಿದ್ದರೆ ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.
3- ಏಕದಿನ ಕ್ರಿಕೆಟ್ನಲ್ಲಿ 50 ಸಿಕ್ಸರ್ಗಳನ್ನು ಪೂರೈಸಲು ಬಾಂಗ್ಲಾಧ ಶಕೀಬ್ ಅಲ್ ಹಸನ್ (47) ಅವರಿಗೆ ಮೂರು ಸಿಕ್ಸರ್ಗಳ ಅಗತ್ಯವಿದೆ.
10- ಬಾಂಗ್ಲಾ ಬೌಲರ್ ಮೆಹಿದಿ ಹಸನ್ ಮಿರಾಜ್ (90) ಏಕದಿನ ಪಂದ್ಯಗಳಲ್ಲಿ 100 ಬೌಂಡರಿಗಳನ್ನು ತಲುಪಲು ಹತ್ತು ಬೌಂಡರಿಗಳ ಅಗತ್ಯವಿದೆ.
1- ರವೀಂದ್ರ ಜಡೇಜಾ ಅವರಿಗೆ (199) 50 ಓವರ್ಗಳಲ್ಲಿ ಕ್ರಿಕೆಟ್ನಲ್ಲಿ 200 ವಿಕಟ್ಗಳ ಮೈಲುಗಲ್ಲು ಪೂರೈಸಲು ಕೇವಲ ಒಂದು ವಿಕೆಟ್ ಬೇಕಾಗಿದೆ.
3- ಮೊಹಮ್ಮದ್ ಸಿರಾಜ್ ಗೆ (47) ಏಕದಿನ ಕ್ರಿಕೆಟ್ನಲ್ಲಿ 50 ವಿಕೆಟ್ ಪಡೆಯಲು 3 ವಿಕೆಟ್ಗಳ ಅಗತ್ಯವಿದೆ.
2- ಮುಸ್ತಾಫಿಜುರ್ ರೆಹಮಾನ್ (148) ಏಕದಿನ ಮಾದರಿಯಲ್ಲಿ 150 ವಿಕೆಟ್ಗಳನ್ನು ದಾಖಲಿಸಲು ಎರಡು ವಿಕೆಟ್ಗಲು ಬೇಕಾಗಿದೆ.
5- ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 550 ಸಿಕ್ಸರ್ಗಳನ್ನು ಪೂರೈಸಲು ರೋಹಿತ್ ಶರ್ಮಾ (545) ಅವರಿಗೆ ಐದು ಸಿಕ್ಸರ್ಗಳ ಅಗತ್ಯವಿದೆ.
1- ರೋಹಿತ್ ಶರ್ಮಾ (199) ಅವರಿಗೆ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ 200 ಕ್ಯಾಚ್ಗಳ ದಾಖಲೆ ಮಾಡಲು ಒಂದು ಕ್ಯಾಚ್ ಬೇಕಾಗಿದೆ.
2- ಕೆಎಲ್ ರಾಹುಲ್ (48) ಏಕದಿನ ಕ್ರಿಕೆಟ್ನಲ್ಲಿ 50 ಸಿಕ್ಸರ್ಗಳನ್ನು ಗಳಿಸಲು ಎರಡು ಸಿಕ್ಸರ್ಗಳ ಅಗತ್ಯವಿದೆ.
3- ಅಕ್ಷರ್ ಪಟೇಲ್ (147) ಅವರಿಗೆ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ 150 ವಿಕೆಟ್ಗಳನ್ನು ಪಡೆಯಲು ಮೂರು ವಿಕೆಟ್ಗಳ ಅಗತ್ಯವಿದೆ.