Site icon Vistara News

Asia Cup 2023: ಇಂಡೋ-ಪಾಕ್ ದ್ವಿಪಕ್ಷೀಯ ಸರಣಿ​ಗಾಗಿ ಪ್ರಧಾನಿ ಮೋದಿಗೆ ವಿನಂತಿಸಿದ ಶಾಹಿದ್ ಅಫ್ರಿದಿ

Asia Cup 2023: Shahid Afridi requests PM Modi for Indo-Pak bilateral series

Asia Cup 2023: Shahid Afridi requests PM Modi for Indo-Pak bilateral series

ದುಬೈ: ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಏಷ್ಯಾ ಕಪ್‌(Asia Cup 2023) ಕ್ರಿಕೆಟ್‌ ಟೂರ್ನಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಬೇಕೆಂದು ಆಗ್ರಹಿಸಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ(prime minister Narendra Modi) ಅವರಿಗೆ ಶಾಹಿದ್‌ ಅಫ್ರಿದಿ(Shahid Afridi) ವಿನಂತಿ ಮಾಡಿದ್ದಾರೆ. ಜತೆಗೆ ಉಭಯ ತಂಡಗಳ ನಡುವಣ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಪಡಿಸಿಕೊಳ್ಳಬೇಕೆಂದು ಕೇಳಿಕೊಂಡಿದ್ದಾರೆ.

ಲೆಜೆಂಡ್ಸ್ ಕ್ರಿಕೆಟ್ ಲೀಗ್ ಟೂರ್ನಿಯ ವೇಳೆ ಮಾತನಾಡಿದ ಅಫ್ರಿದಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಸಾಕಷ್ಟು ಬಲಿಷ್ಠವಾಗಿದೆ. ಅವರರಿಗೆ ದೊಡ್ಡ ಜವಾಬ್ದಾರಿಯಿದೆ. ಹೀಗಿರುವಾಗ ಭಾರತ ಮತ್ತು ಪಾಕ್ ದೇಶಗಳ ನಡುವೆ ಕ್ರಿಕೆಟ್ ಆಯೋಜಿಸಿ ಉತ್ತಮ ಸಂಬಂಧ ಬೆಳೆಸಿಕೊಂಡರೆ ಉತ್ತಮವಾಗಿರುತ್ತದೆ ಎಂದು ಹೇಳಿದ್ದಾರೆ.

“ಯಾವುದೇ ಒಂದು ದೇಶ ಹೆಚ್ಚು ಶತ್ರುಗಳನ್ನು ಮಾಡಿಕೊಂಡರೆ ಅದರಿಂದ ಯಾವುದೇ ಉಪಯೋಗವಿಲ್ಲ. ಆದಷ್ಟು ಸ್ನೇಹಿತರನ್ನು ಸಂಪಾದಿಸಬೇಕು. ಸ್ನೇಹಿತರನ್ನಾಗಿ ಮಾಡಿಕೊಂಡರೆ ಬಿಸಿಸಿಐ ಇನ್ನಷ್ಟು ಬಲಶಾಲಿಯಾಗುತ್ತದೆ. ರಾಜತಾಂತ್ರಿಕವಾಗಿ ಹಲವು ಸಮಸ್ಯೆಗಳು ಇರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ ಆದರೆ ಕ್ರೀಡೆ ಯಾವುದೇ ದ್ವೇಷ ಮಾಡಿಲ್ಲ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಹಿಂದಿನಂತೆ ಮತ್ತೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡುವ ವಾತಾವರಣ ಸೃಷ್ಟಿಯಾಗಬೇಕು’ ಎಂದು ಶಾಹಿದ್‌ ಅಫ್ರಿದಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ Asia Cup 2023 : ಪಾಕ್​ ಪ್ರವಾಸವನ್ನು ಬಿಸಿಸಿಐ ನಿರ್ಧರಿಸುತ್ತದೆ ಎಂದ ಕ್ರೀಡಾ ಸಚಿವ ಅನುರಾಗ್ ಠಾಕೂರ್​

ಭಾರತೀಯ ಕ್ರಿಕೆಟ್​ ಆಟಗಾರರಾದ ವಿರಾಟ್​ ಕೊಹ್ಲಿ, ಸಚಿನ್​ ತೆಂಡೂಲ್ಕರ್​, ವೀರೇಂದ್ರ ಸೆಹವಾಗ್​, ಸುರೇಶ್​ ರೈನಾ ಸೇರಿ ಹಲವು ಕ್ರಿಕೆಟಿಗರು ನನ್ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಅಫ್ರಿದಿ ಹೇಳಿದರು.

2008ರ ಮುಂಬೈ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ​ ನಡುವೆ ದ್ವಿಪಕ್ಷೀಯ ಕ್ರಿಕೆಟ್​ ಪಂದ್ಯಾಟಗಳು ನಡೆದಿಲ್ಲ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಉಭಯ ತಂಡಗಳು ಮುಖಾಮುಖಿ ಆಗುತ್ತಿದೆ. ಭಾರತ ತಂಡ 2008ರಲ್ಲಿ ಕೊನೆಯ ಬಾರಿ ಏಷ್ಯಾ ಕಪ್‌ ಟೂರ್ನಿ ಆಡಲು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು ಹಾಗೂ 2006ರಲ್ಲಿ ಪಾಕಿಸ್ತಾನಲ್ಲಿ ಉಭಯ ತಂಡಗಳು ಕೊನೆಯ ದ್ವಿಪಕ್ಷೀಯ ಸರಣಿಯಲ್ಲಿ ಕಾದಾಟ ನಡೆಸಿದ್ದವು. 2016ರ ಟಿ20 ವಿಶ್ವ ಕಪ್‌ ಟೂರ್ನಿ ಆಡಲು ಪಾಕಿಸ್ತಾನ ಕೊನೆಯ ಬಾರಿ ಭಾರತಕ್ಕೆ ಆಗಮಿಸಿತ್ತು.

Exit mobile version