Site icon Vistara News

Asia Cup 2023: ಭಾರತ-ಪಾಕ್​ ಏಷ್ಯಾಕಪ್ ಟೂರ್ನಿಯ​ ರೆಕಾರ್ಡ್​ ಹೀಗಿದೆ

india vs pakistan asia cup 2023

ಕ್ಯಾಂಡಿ: ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಏಷ್ಯಾ ಕಪ್‌ನ(Asia Cup 2023) ಭಾರತ ಮತ್ತು ಪಾಕಿಸ್ತಾನ(INDvs PAK) ನಡುವಣ ಹೈವೋಲ್ಟೆಜ್​ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತಂಡಗಳ ಕಾದಾಟ ಶನಿವಾರ ಲಂಕಾದ ಕ್ಯಾಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಏಷ್ಯಾಕಪ್​ ಮುಖಾಮುಖಿಯಲ್ಲಿ ಉಭಯ ತಂಡಗಳ ಮತ್ತು ಆಟಗಾರರ ದಾಖಲೆಯ ಮಾಹಿತಿ ಇಂತಿದೆ.​

13 ಬಾರಿ ಮುಖಾಮಖಿ

ಒಟ್ಟು 15 ಆವೃತ್ತಿಯ ಏಷ್ಯಾಕಪ್​ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು 13 ಬಾರಿ ಏಕದಿನ ಮಾದರಿಯ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಏಳು ಸಂದರ್ಭಗಳಲ್ಲಿ ಭಾರತ ಜಯಗಳಿಸಿದ್ದರೆ, ಪಾಕಿಸ್ತಾನ ಐದು ಗೆಲುವುಗಳನ್ನು ಮಾತ್ರ ಕಂಡಿದೆ. ಕಳೆದ ಐದು ಏಕದಿನ ಏಷ್ಯಾಕಪ್ ಪಂದ್ಯಗಳಲ್ಲಿ ಭಾರತ ನಾಲ್ಕು ಬಾರಿ ಗೆದ್ದು ಬೀಗಿದೆ. ಏಕದಿನ ಮಾದರಿಯಲ್ಲಿ ಭಾರತ ಒಟ್ಟು ಆರು ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಪಾಕಿಸ್ತಾನ ಎರಡು ಬಾರಿ ಕಪ್​ ಗೆದ್ದಿದೆ. ಒಟ್ಟಾರೆ ಏಷ್ಯಾಕಪ್​ನಲ್ಲಿ ಭಾರತ 7 ಕಪ್ ಗೆದ್ದಿದೆ. ಇದರಲ್ಲಿ ಒಂದು ಟಿ20 ಮಾದರಿಯಾಗಿದೆ.

ಲಂಕಾ ಮೇಲುಗೈ

ಶ್ರೀಲಂಕಾ ಇದುವರೆಗೆ ಆಡಿದ ಏಷ್ಯಾಕಪ್​ನಲ್ಲಿ 34 ಗೆಲುವುಗಳೊಂದಿಗೆ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪೈಕಿ ಅಗ್ರಸ್ಥಾನದಲ್ಲಿದೆ. ಭಾರತ ಮತ್ತು ಪಾಕಿಸ್ತಾನ ಕ್ರಮವಾಗಿ 31 ಮತ್ತು 26 ಗೆಲುವಿನೊಂದಿಗೆ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಅತಿ ಹೆಚ್ಚು ರನ್​ ದಾಖಲೆ ಪಾಕ್​ ಹೆಸರಿನಲ್ಲಿದೆ

ಏಷ್ಯಾಕಪ್​ನ ಪಂದ್ಯವೊಂದರಲ್ಲಿ ಅತ್ಯಧಿಕ ಮೊತ್ತ ಪೇರಿಸಿದ ದಾಖಲೆ ಪಾಕಿಸ್ತಾನ ತಂಡದ ಹೆಸರಿನಲ್ಲಿ. 2010ರಲ್ಲಿ ಪಾಕ್​ ತಂಡ ಬಾಂಗ್ಲಾದೇಶದ ವಿರುದ್ಧ 385 ರನ್‌ಗಳನ್ನು ಬಾರಿಸಿತ್ತು. ಇದು ಈ ವರೆಗಿನ ದಾಖಲೆಯಾಗಿದೆ. ದ್ವಿತೀಯ ಸ್ಥಾನ ಭಾರತ ತಂಡದ್ದಾಗಿದೆ. 2008ರಲ್ಲಿ ಹಾಂಕಾಂಗ್ ವಿರುದ್ಧ ಭಾರತ 374 ರನ್‌ ಬಾರಿಸಿತ್ತು.

ಇದನ್ನೂ ಓದಿ Asia Cup 2023: ಪಾಕ್​ಗೆ ಭಾರಿ ಮುಖಭಂಗ; ಜೆರ್ಸಿಯಲ್ಲಿ ಪಾಕ್​ ಹೆಸರೇ ಮಾಯ!

ವಿಕೆಟ್​ ಗೆಲುವಿನಲ್ಲಿ ಭಾರತ ಮುಂದು

1984ರಲ್ಲಿ ಏಷ್ಯಾಕಪ್​ನಲ್ಲಿ ಭಾರತ ತಂಡ 21.4 ಓವರ್‌ಗಳಲ್ಲಿ ಶ್ರೀಲಂಕಾವನ್ನು ಮಣಿಸಿ 10 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. ಇದಾದ ಬಳಿಕ 2008ರಲ್ಲಿ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನದ 10 ವಿಕೆಟ್ ಗೆಲುವು ಸಾಧಿಸಿತ್ತು. ಆದರೆ ಭಾರತಕ್ಕಿಂತ ಅಧಿಕ ಓವರ್​ ಬಳಸಿದ್ದರಿಂದ ಈ ಸಾಧಕರ ಪಟ್ಟಿಯಲ್ಲಿ ಭಾರತ ಮುಂದಿದೆ.

ಭಾರತ ವಿರುದ್ಧ ಅತಿ ಹೆಚ್ಚು ರನ್​ ಗಳಿಸಿದ ದಾಖಲೆ ಶೋಯೆಬ್ ಮಲಿಕ್ ಹೆಸರಿನಲ್ಲಿದೆ. ಅವರು ಭಾರತ ವಿರುದ್ಧ 5 ಪಂದ್ಯಗಗಳನ್ನು ಆಡಿ 428 ರನ್ ಗಳಿಸಿದ್ದಾರೆ. ಇದರಲ್ಲಿ ಎಂದೆರಡು ಅರ್ಧಶತಕಕೂಡ ಒಳಗೊಂಡಿದೆ. ಪಾಕಿಸ್ತಾನ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಟೀಮ್​ ಇಂಡಿಯಾದ ಆಟಗಾರನೆಂದರೆ ರೋಹಿತ್​ ಶರ್ಮ, ಇದುವರೆಗೆ 7 ಪಂದ್ಯಗಳನ್ನು ಆಡಿ 367 ರನ್ ಗಳಿಸಿದ್ದಾರೆ.

ಭಾರತ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಸರ್‌ ಪಟೇಲ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಪ್ರಸಿದ್ಧ್‌ ಕೃಷ್ಣ, ಸಂಜು ಸ್ಯಾಮ್ಸನ್‌ (ಮೀಸಲು ಆಟಗಾರ).

ಪಾಕಿಸ್ತಾನ ತಂಡ

ಬಾಬರ್ ಅಜಂ (ನಾಯಕ), ಶಾದಾಬ್ ಖಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಸೌದ್ ಶಕೀಲ್ (ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಮಾತ್ರ) ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರಾವುಫ್​, ನಸೀಮ್ ಶಾ, ಶಾಹೀನ್ ಅಫ್ರಿದಿ, ತಯ್ಯಬ್ ತಾಹಿರ್, ಮೊಹಮ್ಮದ್ ಹ್ಯಾರಿಸ್, ಫಹೀಮ್ ಅಶ್ರಫ್, ಮೊಹಮ್ಮದ್ ವಾಸಿಮ್

Exit mobile version