ಕೊಲೊಂಬೊ: ಶ್ರೀಲಂಕಾ ವಿರುದ್ಧ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡ 8ನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿಯನ್ನು (Asia Cup 2023) ತನ್ನದಾಗಿಸಿಕೊಂಡಿದೆ. ಟಾಸ್ ಗೆದ್ದ ಶ್ರೀಲಂಕಾ ನಾಯಕ ದಸುನ್ ಶನಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದಾಗ್ಯೂ, ಮೊಹಮ್ಮದ್ ಸಿರಾಜ್ ಅವರ ರೋಚಕ ಸ್ಪೆಲ್ ನಿಂದಾಗಿ ಅವರು ಕೇವಲ 50 ರನ್ ಗಳಿಗೆ ಆಲೌಟ್ ಆದರು. ಇದು ಭಾರತದ ಜಯವನ್ನು ಸುಲಭವಾಗಿಸಿತು.
ಬಲಗೈ ವೇಗಿ ಸಿರಾಜ್ ಏಳು ಓವರ್ಗಳಲ್ಲಿ 21 ರನ್ಗಳಿಗೆ 6 ವಿಕೆಟ್ ಪಡೆಯುವ ಮೂಲಕ ಏಕದಿನ ಪಂದ್ಯಗಳಲ್ಲಿ ತಮ್ಮ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸಿದರು. ಇವರಲ್ಲದೆ, ಜಸ್ಪ್ರೀತ್ ಬುಮ್ರಾ (5 ಓವರ್ಗಳಲ್ಲಿ 23 ರನ್ ನೀಡಿ 1 ವಿಕೆಟ್) ಮತ್ತು ಹಾರ್ದಿಕ್ ಪಾಂಡ್ಯ (2.2 ಓವರ್ಗಳಲ್ಲಿ 3 ರನ್ಗೆ 3 ವಿಕೆಟ್) ಉತ್ತಮ ಪ್ರದರ್ಶನ ನೀಡಿದರು. ಲಂಕಾ ನೀಡಿದ 51 ರನ್ಗಳಿಗೆ ಪ್ರತಿಯಾಗಿ ಭಾರತವು ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ಅವರ ಉತ್ತಮ ಪ್ರದರ್ಶನದೊಂದಿಗೆ ಗೆಲುವು ಸಾಧಿಸಿತು.
ಆರಂಭಿಕ ಜೋಡಿ ಮೊದಲ ಓವರ್ ನಿಂದಲೇ ಬೌಂಡರಿಗಳನ್ನು ಬಾರಿಸಲು ಪ್ರಾರಂಭಿಸಿದರು. ಆಕ್ರಮಣಕಾರಿ ಆಟದ ನೆರವಿನಿಂದ ಭಾರತ 6.1 ಓವರ್ಗಳಲ್ಲಿ ಗುರಿ ತಲುಪಿ 263 ಎಸೆತಗಳು ಬಾಕಿ ಇರುವಾಗಲೇ ಜಯ ದಾಖಲಿಸಿತು. ಕಿಶನ್ ಅಜೇಯ 23* (18) ರನ್ ಗಳಿಸಿದರೆ, ಗಿಲ್ 19 ಎಸೆತಗಳಲ್ಲಿ 27* ರನ್ ಗಳಿಸಿದರು.
ಇದನ್ನೂ ಓದಿ : Rohit Sharma : ಧೋನಿ, ಅಜರುದ್ದೀನ್ ರೀತಿಯಲ್ಲೇ ಸಾಧನೆ ಮಾಡಿದ ರೋಹಿತ್ ಶರ್ಮಾ; ಏನಿದು ದಾಖಲೆ?
ಇದರ ಪರಿಣಾಮವಾಗಿ, ಭಾರತವು ತನ್ನ ಎಂಟನೇ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು ಕಾಂಟಿನೆಂಟಲ್ ಪಂದ್ಯಾವಳಿಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿತು. ಏಷ್ಯಾ ಕಪ್ನಲ್ಲಿ ಟೀಮ್ ಇಂಡಿಯಾ ಅತ್ಯಂತ ಯಶಸ್ವಿ ತಂಡವಾಗಿದೆ. ಶ್ರೀಲಂಕಾ (ಆರು ಪ್ರಶಸ್ತಿಗಳು) ಮತ್ತು ಪಾಕಿಸ್ತಾನ (2 ಪ್ರಶಸ್ತಿಗಳು) ನಂತರದ ಸ್ಥಾನಗಳಲ್ಲಿವೆ.
ಏಷ್ಯಾ ಕಪ್ 2023 ಬಹುಮಾನದ ಮೊತ್ತ
- ವಿಜೇತರು 1,24,63,552 ರೂಪಾಯಿ ($150000)
- ರನ್ನರ್ ಅಪ್ 61,68,674 ರೂಪಾಯಿ ($75000)
- ಸ್ಮಾರ್ಟ್ ಕ್ಯಾಚ್ ಆಫ್ ದಿ ಮ್ಯಾಚ್- 2,49,271 ರೂಪಾಯಿ ($ 3000)
- ಪಂದ್ಯಶ್ರೇಷ್ಠ: 4,15,451 ರೂಪಾಯಿ ( 5000 ಡಾಲರ್)
- ಸರಣಿ ಶ್ರೇಷ್ಠ ಪ್ರಶಸ್ತಿ: 12,46,355 ರೂಪಾಯಿ 15,000 ಡಾಲರ್
They can't p̶l̶a̶y̶ read him 😌#KuldeepYadav #INDvsPAK #AsiaCup2023 #TeamIndia pic.twitter.com/Ays9NEngnq
— KolkataKnightRiders (@KKRiders) September 11, 2023
ಯಾರಿಗೆಲ್ಲ ಸಿಕ್ಕಿತು ಪ್ರಶಸ್ತಿಗಳು?
ಚಾಂಪಿಯನ್: ಭಾರತ ತಂಡ
ರನ್ನರ್ ಅಪ್: ಶ್ರೀಲಂಕಾ ತಂಡ
ಸ್ಮಾರ್ಟ್ ಕ್ಯಾಚ್ ಆಫ್ ದಿ ಮ್ಯಾಚ್; ರವೀಂದ್ರ ಜಡೇಜಾ
ಮ್ಯಾನ್ ಆಫ್ ದಿ ಮ್ಯಾಚ್: ಮೊಹಮ್ಮದ್ ಸಿರಾಜ್ (21 ರನ್ಗಳಿಗೆ 6 ವಿಕೆಟ್)
ಮ್ಯಾನ್ ಆಫ್ ದಿ ಟೂರ್ನಿ: ಕುಲದೀಪ್ ಯಾದವ್ (9 ವಿಕೆಟ್, 4 ಇನ್ನಿಂಗ್ಸ್, ಸರಾಸರಿ – 11.44, ಎಕಾನಮಿ 3.6)