Site icon Vistara News

Asia Cup 2023: 15 ಆವೃತ್ತಿಯ ಏಷ್ಯಾಕಪ್​ನಲ್ಲಿ ಭಾರತ ತಂಡದ್ದೇ ಪಾರುಪತ್ಯ

First Asia Cup

ಬೆಂಗಳೂರು: ಪ್ರತಿಷ್ಠಿತ ಏಷ್ಯಾ ತಂಡಗಳ ವಿರುದ್ಧ ನಡೆಯುವ ಏಷ್ಯಾಕಪ್​ ಕ್ರಿಕೆಟ್​(Asia Cup 2023) ಟೂರ್ನಿ 15 ಆವೃತ್ತಿಗಳನ್ನು ಯಶಸ್ವಿಯಾಗಿ ಕಂಡಿದೆ. ಇದೀಗ 16ನೇ ಆವೃತ್ತಿ ಬುಧವಾರದಿಂದ ಆರಂಭಗೊಳ್ಳಲಿದೆ. ಕಳೆದ 15 ಆವೃತ್ತಿಯ ಇತಿಹಾಸದಲ್ಲಿ(Asia Cup history) ಭಾರತ ತಂಡವೇ ಪಾರುಪತ್ಯ ಸಾಧಿಸಿದೆ. ಒಟ್ಟು 7 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಶ್ರೀಲಂಕಾ 6 ಬಾರಿ, ಪಾಕಿಸ್ತಾನ 2 ಸಲ ಕಪ್​ ಗೆದ್ದಿದೆ.

6 ತಂಡಗಳ ಮಧ್ಯೆ ಸಮರ

ಈ ಬಾರಿ ಒಟ್ಟು 6 ತಂಡಗಳು ಸೆಣಸಲಿವೆ. ಇವನ್ನು ತಲಾ 3 ತಂಡಗಳ 2 ಗ್ರೂಪ್‌ಗಳನ್ನಾಗಿ ಮಾಡಲಾಗಿದೆ. ಇಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಮುಂದಿನ ಸೂಪರ್‌-4 ಸುತ್ತಿನಲ್ಲಿ ಆಡಲಿವೆ. ಸೆಪ್ಟೆಂಬರ್​ 17ರಂದು ಪ್ರಶಸ್ತಿ ಕಾದಾಟ ನಡೆಯಲಿದೆ.

ಚೊಚ್ಚಲ ಕಪ್​ ಎತ್ತಿದ ಹಿರಿಮೆ ಭಾರತದ್ದು

ಏಷ್ಯಾ ಕಪ್‌ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಯುಎಇಯಲ್ಲಿ ನಡೆದ 1984ರ ಚೊಚ್ಚಲ ಏಷ್ಯಾ ಕಪ್‌ ಗೆದ್ದ ಹಿರಿಮೆ ಭಾರತದದ್ದು. ಭಾರತಕ್ಕೆ ಮೊದಲ ಏಷ್ಯಾ ಕಪ್‌ ಗೆದ್ದು ಕೊಟ್ಟ ಖ್ಯಾತಿ ಸುನೀಲ್‌ ಗಾವಸ್ಕರ್‌ಗೆ ಸಲ್ಲುತ್ತದೆ. ಅವರ ನಾಯಕತ್ವದಿಂದ ಆರಂಭವಾದ ಪಯಣದಲ್ಲಿ ಭಾರತ ಇದುವರೆಗೆ 10 ಸಲ ಫೈನಲ್‌ಗೆ ಲಗ್ಗೆಯಿಟ್ಟು ಅತ್ಯಧಿಕ 7 ಸಲ ಪ್ರಶಸ್ತಿಯನ್ನೆತ್ತಿದೆ. ಈ ಬಾರಿಯೂ ಭಾರತ ಕಪ್​ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಭಾರತ ಹೊರತುಪಡಿಸಿದರೆ ಏಷ್ಯಾ ಕಪ್‌ ಇತಿಹಾಸದ ಮತ್ತೊಂದು ಯಶಸ್ವಿ ತಂಡವೆಂದರೆ ಶ್ರೀಲಂಕಾ. ಅದು ಅತ್ಯಧಿಕ 12 ಸಲ ಫೈನಲ್‌ಗೆ ಲಗ್ಗೆ ಇರಿಸಿ 6 ಸಲ ಪ್ರಶಸ್ತಿ ಎತ್ತಿದೆ. ಕಳೆದ ವರ್ಷ ಪಾಕಿಸ್ತಾನ ತಂಡವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿತ್ತು.

ಮೊದಲ ಬಾರಿ ಭಾರತ-ಪಾಕ್​ ಫೈನಲ್ ಸಾಧ್ಯವೇ?

ಸಾಂದ್ರದಾಯಿಕ ಬದ್ದ ಎದುರಾಳಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಈ ಟೂರ್ನಿಯ ಲೀಗ್​ ಪಂದ್ಯ ಮತ್ತು ಸೂಪರ್​-4 ಹಂತದ ಪಂದ್ಯದಲ್ಲಿ ಹಲವು ಬಾರಿ ಮುಖಾಮುಖಿಯಾಗಿವೆ. ಸ್ವಾರಸ್ಯವೆಂದರೆ ಏಷ್ಯಾ ಕಪ್‌ ಚರಿತ್ರೆಯಲ್ಲಿ ಇತ್ತಂಡಗಳು ಒಮ್ಮೆಯೂ ಫೈನಲ್‌ನಲ್ಲಿ ಮುಖಾಮುಖಿ ಆಗಿಲ್ಲ. ಈ ಬಾರಿಯಾದರೂ ಉಭಯ ತಂಡಗಳ ನಡುವೆ ಫೈನಲ್​ ಸಮರ ಏರ್ಪಡಲಿದೆಯಾ ಎಂದು ಕಾದು ನೋಡಬೇಕಿದೆ.

ಆತಿಥ್ಯದಲ್ಲಿ ಬಾಂಗ್ಲಾ ಮೇಲುಗೈ

ಭಾರತ ಏಷ್ಯಾಕಪ್​ನ ಅತ್ಯಂತ ಯಶಸ್ವಿ ತಂಡವಾದರೂ ಈ ಟೂರ್ನಿಯ ಆತಿಥ್ಯ ವಹಿಸಿದ್ದು ಕೇವಲ ಒಂದು ಬಾರಿ 1990-91 ಭಾರತ ಆತಿಥ್ಯವಹಿಸಿಕೊಂಡಿತ್ತು. ದಾಖಲೆ ಬಾಂಗ್ಲಾದೇಶದ ಹೆಸರಲ್ಲಿದೆ. ಅದು ಅತ್ಯಧಿಕ 5 ಸಲ ಕೂಟವನ್ನು ನಡೆಸಿದೆ. ಪಾಕಿಸ್ತಾನ ಈ ಬಾರಿ ಸೇರಿ 2 ಆತಿಥ್ಯ ವಹಿಸಿಕೊಂಡ ದಾಖಲೆ ಹೊಂದಿದೆ. ಬಾಂಗ್ಲಾದೇಶದ ಅತ್ಯಧಿಕ ಟೂರ್ನಿಯ ಆತಿಥ್ಯವಹಿಸಿಕೊಂಡರೂ ಒಂದು ಬಾರಿಯೂ ಕಪ್​ ಗೆಲ್ಲದಿರುವುದು ವಿಪರಾಸ್ಯವೇ ಸರಿ.

ಭಾರತದ ಹ್ಯಾಟ್ರಿಕ್​ ಸಾಧನೆ

ಭಾರತ ಏಷ್ಯಾ ಕಪ್‌ನಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಏಕೈಕ ತಂಡ. 1988, 1990-91 ಮತ್ತು 1995ರಲ್ಲಿ ಸತತ 3 ವರ್ಷ ಭಾರತ ಪ್ರಶಸ್ತಿಯನ್ನೆತ್ತಿತ್ತು. ಮೂರೂ ಫೈನಲ್‌ಗ‌ಳಲ್ಲಿ ಶ್ರೀಲಂಕಾವನ್ನೇ ಮಣಿಸಿದ್ದು ವಿಶೇಷ. 1995ರಲ್ಲಿ ಶಾರ್ಜಾದಲ್ಲಿ ನಡೆದ 5ನೇ ಆವೃತ್ತಿಯ ಏಷ್ಯಾ ಕಪ್‌ನಲ್ಲಿ ಭಾರತ, ಪಾಕಿಸ್ಥಾನ ಮತ್ತು ಶ್ರೀಲಂಕಾ ತಂಡಗಳು ರೌಂಡ್‌ ರಾಬಿನ್‌ ಲೀಗ್‌ನಲ್ಲಿ ಏಕರೀತಿಯ ಪ್ರದರ್ಶನ ನೀಡಿ ಸಮಾನ ಅಂಕ ಗಳಿಸಿದವು. ರನ್‌ರೇಟ್‌ನಲ್ಲಿ ಮುಂದಿದ್ದ ಭಾರತ-ಶ್ರೀಲಂಕಾ ಫೈನಲ್‌ ತಲುಪಿದವು. ಭಾರತ ಕಪ್‌ ಎತ್ತಿತು.

ಇದನ್ನೂ ಓದಿ Asia Cup 2023: ನಾಳೆಯಿಂದ ಏಷ್ಯಾಕಪ್​; 15 ದಿನಗಳ ಅಂತರದಲ್ಲಿ 3 ಬಾರಿ ಇಂಡೋ-ಪಾಕ್​ ಮುಖಾಮುಖಿ!

ಭಾರತದ ಸಾಧನೆ

1984 ಚಾಂಪಿಯನ್​
1988 ಚಾಂಪಿಯನ್
1991 ಚಾಂಪಿಯನ್
1995 ಚಾಂಪಿಯನ್
2010 ಚಾಂಪಿಯನ್
2016 ಚಾಂಪಿಯನ್
2018 ಚಾಂಪಿಯನ್
1986 ಪಾಲ್ಗೊಂಡಿಲ್ಲ
1997 ರನ್ನರ್ಸ್ ಅಪ್
2000 3ನೇ ಸ್ಥಾನ
2004 ರನ್ನರ್ಸ್ ಅಪ್
2008 ರನ್ನರ್ಸ್ ಅಪ್
2012 3ನೇ ಸ್ಥಾನ
2014 3ನೇ ಸ್ಥಾನ

Exit mobile version