Site icon Vistara News

Asia Cup Hockey: ಜಪಾನ್ ವಿರುದ್ಧ ಗೆಲುವು: ಭಾರತಕ್ಕೆ ಕಂಚಿನ ಪದಕ

Asia Cup 2022 : ಏಷ್ಯಾ ಕಪ್ ಹಾಕಿ ಟೂರ್ನಮೆಂಟ್ ನಲ್ಲಿ ಭಾರತವು ಜಪಾನ್ ಅನ್ನು 1-0 ಅಂತರದಿಂದ ಸೋಲಿಸುವ ಮೂಲಕ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ನಡೆದ ಈ ಪಂದ್ಯದಲ್ಲಿ ಭಾರತ ಜಪಾನ್ ಗೆ ಸೋಲುಣಿಸಿದೆ. ಈ ಗೆಲುವಿನೊಂದಿಗೆ ಭಾರತ 3 ಮತ್ತು ಜಪಾನ್ 4ನೇ ಸ್ಥಾನದಲ್ಲಿ ಆಟ ಮುಗಿಸಿವೆ.

ಭಾರತದ ಪರ ರಾಜಕುಮಾರ್‌ ಪಾಲ್‌ ಆರಂಭದಲ್ಲೇ ಒಂದು ಗೋಲ್‌ ಹೊಡೆದರು. ಇಡೀ ಪಂದ್ಯದಲ್ಲಿ ಅದೊಂದೇ ಗೋಲ್‌ ಹೊಡೆದಿದ್ದು. ಈ ಮೂಲಕ ಭಾರತ 1-0 ಲೀಡ್‌ ಕಾಪಾಡಿಕೊಂಡು ಗೆಲುವು ಸಾಧಿಸಿದೆ. ಜಪಾನ್‌ ತಂಡಕ್ಕೆ ಈ ಪಂದ್ಯದಲ್ಲಿ ಒಟ್ಟು 7 ಪೆನಾಲ್ಟಿ ಕಾರ್ನರ್‌ ಅವಕಾಶ ದೊರಕಿತ್ತು. ಆದರೆ, ಭಾರತಕ್ಕೆ ಕೇವಲ ಎರಡು.

ಅಲ್ಲದೆ, ಅಂತಿಮ ಘಟ್ಟದಲ್ಲಿ ಭಾರತ ತಂಡದ ಆಟಗಾರರು ಕೇವಲ ಹತ್ತು ಜನರಿದ್ದರು. ಮನಜೀತ್‌ ಅವರಿಗೆ ಹಳದಿ ಕಾರ್ಡ್‌ ನೀಡಿದ್ದ ಕಾರಣದಿಂದ ಅವರು ಮೈದಾನದಿಂದ ಹೊರ ಉಳಿಯಬೇಕಾಯಿತು. ಈ ಎಲ್ಲ ಬಿಕ್ಕಟ್ಟಿನ ನಡುವೆಯೂ ಭಾರತ ಜಯ ಸಾಧಿಸಿದ್ದು ಶ್ಲಾಘನೀಯ. ಗೆಲುವಿನ ಹೋರಾಟದಲ್ಲಿ ಜಪಾನ್‌ ಪೂರ್ಣಪರಿಶ್ರಮ ತೋರುತ್ತಿದ್ದರೂ ಭಾರತದ ಯುವ ತಂಡ ಅವರನ್ನು ಗೋಲ್‌ ಮಾಡಲು ಅವಕಾಶ ನೀಡಲಿಲಲ್ಲ.

ಇಂದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ಬಿರೇಂದ್ರ ಲಕ್ರ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: Asia Cup 2022 | ಭಾರತದಿಂದ ಕೊನೇಕ್ಷಣದವರೆಗೆ ಹೋರಾಟ; ಕೈತಪ್ಪಿದ ಏಷಿಯಾ ಕಪ್

Exit mobile version