Site icon Vistara News

Asian Games 2023: ಸ್ಕ್ವ್ಯಾಶ್‌ನಲ್ಲಿ ಕಂಚು ಗೆದ್ದ 15 ವರ್ಷದ ಬಾಲಕಿ; ಬಾಕ್ಸಿಂಗ್‌ನಲ್ಲಿ ಪರ್ವೀನ್‌ಗೆ ಕಂಚು

Anahat Singh and Abhay Singh

ಏಷ್ಯನ್‌ ಗೇಮ್ಸ್‌ನಲ್ಲಿ(Asian Games 2023) ದಾಖಲೆಯ ಪದಕ ಗೆದ್ದಿರುವ ಭಾರತ ತನ್ನ ಪದಕದ ಬೇಟೆಯನ್ನು ಮುಂದುವರಿಸುತ್ತಲೇ ಇದೆ. ಗುರುವಾರ ಬೆಳಗ್ಗೆ ಚಿನ್ನ ಮತ್ತು ಕಂಚಿನ ಪದಕ ಒಲಿದ ಬಳಿಕ ಇದೀಗ ಮತ್ತೆ ಎರಡು ಪದಕ ಲಭಿಸಿದೆ. ಮಿಕ್ಸೆಡ್‌ ಸ್ಕ್ವ್ಯಾಶ್‌ನಲ್ಲಿ ಅನಾಹತ್ ಸಿಂಗ್(Anahat Singh) ಮತ್ತು ಅಭಯ್ ಸಿಂಗ್(Abhay Singh) ಮತ್ತು 57 ಕೆಜಿ ಮಹಿಳಾ ಸಿಂಗಲ್ಸ್‌ ಬಾಕ್ಸಿಂಗ್‌ನಲ್ಲಿ ಪರ್ವೀನ್‌ ಹೂಡಾ(parveen hooda) ಕಂಚು ಗೆದ್ದರು.

ಬುಧವಾರ ನಡೆದ ಸ್ಕ್ವ್ಯಾಶ್‌ನಲ್ಲಿ ಭಾರತದ ಅನಾಹತ್ ಸಿಂಗ್ ಮತ್ತು ಅಭಯ್ ಸಿಂಗ್ ಅವರು ಮಲೇಷ್ಯಾದ ಐಫಾ ಬಿಂಟಿ ಅಜ್ಮಾನ್ ಮತ್ತು ಮೊಹಮ್ಮದ್ ಸಯಾಫಿಕ್ ಕಮಾಲ್ ವಿರುದ್ಧ ಸೋತು ಕಂಚಿನ ಪದಕಕ್ಕೆ ತೃಪ್ತಿಪಟರು. ಈ ಪಂದ್ಯದಲ್ಲಿ ಭಾರತೀಯ ಜೋಡಿಯು ಕಠಿಣ ಸವಾಲು ಎದುರಿಸಿತು. ಅಂತಿಮವಾಗಿ 39 ನಿಮಿಷಗಳ ಸ್ಪರ್ಧೆಯಲ್ಲಿ 11-8, 2-11, 9-11 ರಲ್ಲಿ ಸೋಲು ಕಂಡರು. ಕಂಚಿನ ಪದಕ ಗೆದ್ದ ಅನಾಹತ್ ಸಿಂಗ್‌ಗೆ ಕೇವಲ 15 ವರ್ಷ.

57 ಕೆಜಿ ಮಹಿಳಾ ಸಿಂಗಲ್ಸ್‌ ಬಾಕ್ಸಿಂಗ್‌ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಪರ್ವೀನ್‌ ಹೂಡಾ ಚೈನೀಸ್ ತೈಪೆಯ ಲಿನ್ ಯು ಟಿಂಗ್ ಎದುರು ಸೋಲು ಕಂಚಿಗೆ ತೃಪ್ತಿಪಟ್ಟರು.

ಇದಕ್ಕೂ ಮುನ್ನ ಮಿಕ್ಸೆಡ್ ಕಾಂಪೌಂಡ್ ಆರ್ಚರಿಯಲ್ಲಿ​ ಓಜಾಸ್ ಮತ್ತು ಜ್ಯೋತಿ ವೆನ್ನಮ್ ಚಿನ್ನಕ್ಕೆ ಗುರಿ ಇರಿಸಿದರೆ, ರಾಮ್ ಬಾಬು ಮತ್ತು ಮಂಜು ರಾಣಿ 35ಕೀ.ಮೀ ಓಟದ ನಡಿಗೆ(ರೇಸ್​ ವಾಕ್​) ಮಿಶ್ರ ತಂಡದಲ್ಲಿ ಕಂಚು ಗೆದ್ದರು. ಈ ಮೂಲಕ ಭಾರತ ಏಷ್ಯಾಡ್​ನಲ್ಲಿ ದಾಖಲೆಯ ಪದಕ ಸಾಧನೆ ಮಾಡಿತು.

ದಾಖಲೆ ಬರೆದ ಭಾರತ

ಭಾರತದ ಪದಕ ಗಳಿಕೆ 71ಕ್ಕೇರುವ ಮೂಲಕ ದಾಖಲೆಯೊಂದನ್ನು ಬರೆಯಿತು. ಭಾರತ 2010ರಲ್ಲಿ 65 ಪದಕ 2018ರಲ್ಲಿ 70 ಪದಕ ಗೆದ್ದಿತ್ತು. ಈ ಬಾರಿ ಸದ್ಯ 73 ಪದಕ ಗೆದ್ದು ಹಳೆಯ ದಾಖಲೆಯನ್ನು ಮುರಿದಿದೆ. ಸದ್ಯ 16 ಚಿನ್ನ, 26 ಬೆಳ್ಳಿ ಹಾಗೂ 31 ಕಂಚು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಮುಂದುವರಿದಿದೆ.

ಇದನ್ನೂ ಓದಿ Asian Games 2023: ಏಷ್ಯನ್​ ಗೇಮ್ಸ್​ನಲ್ಲಿ ದಾಖಲೆಯ ಪದಕ ಗೆದ್ದ ಭಾರತ; ಆರ್ಚರಿಯಲ್ಲಿ ಚಿನ್ನ

ಆರ್ಚರಿಯಲ್ಲಿ ಚಿನ್ನ

ಆರ್ಚರಿ ರೋಚಕ ಫೈನಲ್​ ಪಂದ್ಯದಲ್ಲಿ ಓಜಾಸ್ ಮತ್ತು ಜ್ಯೋತಿ ವೆನ್ನಮ್ ಜೋಡಿ ಕೇವಲ ಒಂದು ಅಂಕದ ಮುನ್ನಡೆಯಿಂದ ಚಿನ್ನ ತಮ್ಮದಾಗಿಸಿಕೊಂಡರು. ಹಾಲಿ ಚಾಂಪಿಯನ್​ ದಕ್ಷಿಣ ಕೊರಿಯಾವನ್ನು 159-158 ಅಂಕಗಳಿಂದ ಸೋಲಿಸಿದ ಭಾರತ ಐತಿಹಾಸಿಕ ಚಿನ್ನ ಗೆದ್ದಿತು.

ಬುಧವಾರ ಬೆಳಗ್ಗೆ ನಡೆದ ಈ ಸ್ಫರ್ದೆಯಲ್ಲಿ ಭಾರತೀಯ ತಂಡ 5:51:14 ಸೆಂಕೆಡ್​ನಲ್ಲಿ ಗುರು ತಲುಪಿ ಮೂರನೇ ಸ್ಥಾನ ಪಡೆದ ಕಂಚಿಗೆ ತೃಪ್ತಿಪಟ್ಟಿತ್ತು. ಇಂದು ನಡೆಯುವ ಜಾವೆಲಿನ್​ ಎಸೆತದಲ್ಲಿ ನೀರಜ್​ ಚೋಪ್ರಾ ಮಹಿಳಾ ಬಾಕ್ಸಿಂಗ್​ ಫೈನಲ್ಸ್​ನಲ್ಲಿ ಲವ್ಲಿನಾ ಬೋರ್ಗಹೈನ್‌(Lovlina Borgohain) ಕಣಕ್ಕಿಳಿಯಲಿದ್ದಾರೆ. ಇವರ ಮೇಲೆ ಚಿನ್ನದ ನಿರೀಕ್ಷೆ ಇರಿಸಲಾಗಿದೆ. ಆರ್ಚರಿಯಲ್ಲಿ ಕೆಲ ಸ್ಪರ್ಧಿಗಳು ಫೈನಲ್​ ತಲುಪಿದ್ದು ಪದಕ ಖಾತ್ರಿ ಪಡಿಸಿದ್ದಾರೆ.

Exit mobile version