ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್ನ (Asian Games 2023) ಈಕ್ವೆಸ್ಟ್ರೀಯನ್(ಕುದುರೆ ಸವಾರಿ) ವೈಯಕ್ತಿಕ ಡ್ರೆಸ್ಸೇಜ್(Equestrian Dressage) ವಿಭಾಗದಲ್ಲಿ ಭಾರತದ ಅನುಷ್ ಅಗರ್ವಾಲಾ(Anush Agarwalla) ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇದು ಈ ಈವೆಂಟ್ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕವಾಗಿದೆ.
ಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ 71.706 ಅಂಕ ಪಡೆದು ನಾಲ್ಕನೇ ಸ್ಥಾನಿಯಾಗಿ 15 ಮಂದಿ ಸ್ಪರ್ಧಿಸುವ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಫೈನಲ್‌ನಲ್ಲಿ 73.030 ಅಂಕ ಪಡೆದ ಕಂಚಿಗೆ ತೃಪ್ತಿಪಟ್ಟರು.
ಇದೇ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಭಾರತದ ಮತೋರ್ವ ಕುದುರೆ ಸವಾರ ಹೃದಯ್ ವಿಪುಲ್ ಪದಕ ಗೆಲ್ಲುವಲ್ಲಿ ವಿಫಲರಾದರು. ಅರ್ಹತಾ ಸುತ್ತಿನಲ್ಲಿ ಅವರು 73.8873 ಅಂಕಗಳಿಸಿ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್‌ನಲ್ಲಿ ಇದೇ ಪ್ರದರ್ಶನ ತೋರುವಲ್ಲಿ ಎಡವಿದರು.
ಮಂಗಳವಾರ ನಡೆದಿದ್ದ ಈಕ್ವೆಸ್ಟ್ರಿಯನ್‌ನ ಡ್ರೆಸ್ಸೇಜ್ ತಂಡ ವಿಭಾಗದಲ್ಲಿ ಸ್ವರ್ಣ ಸಾಧನೆ ಮಾಡಿದ್ಧ ತಂಡದಲ್ಲಿಯೂ ಅನುಷ್ ಅಗರ್ವಾಲಾ ಸ್ಪರ್ಧಿಸಿದ್ದರು. 1982ರ ನವದೆಹಲಿಯ ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಬಾರಿ ಈಕ್ವೆಸ್ಟ್ರಿಯನ್(ಕುದುರೆ ಸವಾರಿ) ಸ್ಪರ್ಧೆಯನ್ನು ಪರಿಚಯಿಸಲಾಗಿತ್ತು. ಆ ಕ್ರೀಡಾಕೂಟದಲ್ಲಿ ಭಾರತ 3 ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು. 41 ವರ್ಷದ ಬಳಿಕ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಫೈನಲ್‌ನಲ್ಲಿ ಅನುಷ್ ಅಗರ್ವಾಲಾ (71.088 ಅಂಕ), ಹೃದಯ್ ವಿಪುಲ್ (69.941) ಹಾಗೂ ದಿವ್ಯಕೃತಿ ಸಿಂಗ್ (68.176) ಅವರನ್ನೊಳಗೊಂಡ ತಂಡ ಒಟ್ಟು 209.205 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಚಿನ್ನ ಸಂಪಾದಿಸಿತ್ತು.
Medal Alert🚨 in Equestrian🏇
— SAI Media (@Media_SAI) September 28, 2023
Bronze🥉 it is for Anush Agarwalla in Individual Final Event, marking 🇮🇳's 1⃣st ever individual🎖️in Dressage
Well done & many congratulations on your🥉#Cheer4India#HallaBol#JeetegaBharat#BharatAtAG22 pic.twitter.com/P4Cf9G9KZK
ಶೂಟಿಂಗ್ನಲ್ಲಿ ಚಿನ್ನ
ಗುರುವಾರ ಬೆಳಗ್ಗೆಯೇ ಭಾರತ ಚಿನ್ನ ಮತ್ತು ಬೆಳ್ಳಿ ಪದಕದ ಖಾತೆ ತೆರೆಯಿತು. ಮೊದಲು ನಡೆದ ಮಹಿಳೆಯರ 60 ಕೆಜಿ ವುಶು ಫೈನಲ್‌ನಲ್ಲಿ ಭಾರತದ ರೋಶಿಬಿನಾ ದೇವಿ ನವೋರೆಮ್ ಅವರು ಬೆಳ್ಳಿ ಪದಕವನ್ನು ಗೆದ್ದರೆ, ಆ ಬಳಿಕ ನಡೆದ ಪುರುಷರ 10 ಮೀ ಏರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಅರ್ಜುನ್ ಸಿಂಗ್ ಚೀಮಾ, ಸರಬ್‌ಜೋತ್ ಸಿಂಗ್, ಶಿವ ನರ್ವಾಲ್ ಚಿನ್ನ ಗೆದ್ದರು.
ರೋಶಿಬಿನಾ ದೇವಿ, 60 ಕೆಜಿ ವುಶು ಫೈನಲ್‌ನಲ್ಲಿ ಅವರು ಚೀನಾದ ಕ್ಸಿಯಾವೊವಿ ವಿರುದ್ಧ ಸೋತು ಬೆಳ್ಳಿ ಪದಕ ಗೆದ್ದರು. ಬುಧವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ರೋಶಿಬಿನಾ ದೇವಿ ವಿಯೆಟ್ನಾನ್ ಥಿ ತು ಎನ್‌ಗುಯೆನ್ ಅವರನ್ನು ಮಣಿಸಿ ಫೈನಲ್ ತಲುಪಿದ್ದರು. ಸಂಧ್ಯಾರಾಣಿ ದೇವಿ ಅವರ ಬಳಿಕ ವುಶು ಸ್ಪರ್ಧೆಯಲ್ಲಿ ಫೈನಲ್‌ಗೆ ತಲುಪಿದ ಭಾರತದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ರೋಶಿಬಿನಾ ಪಾತ್ರರಾಗಿದ್ದರು. 2018ರಲ್ಲಿ ನಡೆದ ಜಕಾರ್ತಾ ಏಷ್ಯನ್ ಕ್ರೀಡಾಕೂಟದ 60 ಕೆ.ಜಿ ವಿಭಾಗದಲ್ಲಿ ರೊಶಿಬಿನಾ ಕಂಚಿನ ಪದಕವನ್ನು ಗೆದ್ದಿದ್ದರು.
ಇದನ್ನೂ ಓದಿ Asian Games 2023: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮಹಿಳಾ ಬ್ಯಾಡ್ಮಿಂಟನ್ ತಂಡ ; ಸ್ಕ್ವಾಷ್ನಲ್ಲಿ ಪದಕ ಖಾತ್ರಿ
ಪುರುಷರ 10 ಮೀ ಏರ್ ಪಿಸ್ತೂಲ್ ತಂಡ ಒಟ್ಟು 1734 ಅಂಕಗಳಿಸಿ ಚಿನ್ನ ಗೆದ್ದಿತು. ಅರ್ಜುನ್ ಸಿಂಗ್ ಚೀಮಾ, ಸರಬ್‌ಜೋತ್ ಸಿಂಗ್, ಶಿವ ನರ್ವಾಲ್ ಚಿನ್ನ ಗೆದ್ದ ಶೂಟರ್ಗಳು. ಇದರಲ್ಲಿ ಸರಬ್‌ಜೋತ್ ಸಿಂಗ್ ವೈಯಕ್ತಿ ವಿಭಾಗದಲ್ಲಿ 580 ಅಂಕಗಳಿಸಿ ಮೊದಲ ಸ್ಥಾನಿಯಾದರು.
ಸ್ಕ್ವಾಷ್ನಲ್ಲಿ ಪದಕ ಖಾತ್ರಿ
ಭಾರತದ ಮಹಿಳಾ ಸ್ಕ್ವಾಷ್ ತಂಡ ಗುರುವಾರ ಮಲೇಷ್ಯಾ ವಿರುದ್ಧ ಸೋಲು ಕಂಡರೂ ಸೆಮಿಫೈನಲ್ ಪ್ರವೇಶಿಸಿ ಪದಕವೊಂದನ್ನು ಖಾತ್ರಿ ಪಡಿಸಿದೆ. ಎ ಗುಂಪಿನಲ್ಲಿ ಆಡಿದ ಭಾರತ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯ ಗೆದ್ದು ಸೆಮಿಫೈನಲ್ ಪ್ರವೇಶ ಪಡೆಯಿತು. ಶುಕ್ರವಾರ ನಡೆಯುವ ಸೆಮಿಫೈನಲ್ನಲ್ಲಿ ಅಜೇಯ ಹಾಂಗ್ಕಾಂಗ್ ತಂಡದ ಸವಾಲು ಎದುರಿಸಲಿದೆ.
ಬ್ಯಾಡ್ಮಿಂಟನ್ನಲ್ಲಿ ಫೈನಲ್‌ಗೆ
ಬ್ಯಾಡ್ಮಿಂಟನ್ನಲ್ಲಿ ಭಾರತ ಮಹಿಳಾ ತಂಡ(Indian women’s Badminton team) 3-0 ಅಂಕಗಳಿಂದ ಮಂಗೋಲಿಯಾವನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದೆ. ಭಾರತ ಪರ ಮೊದಲ ಪಂದ್ಯದಲ್ಲಿ ಅವಳಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧು ಆಡಿದರು. ಈ ಪಂದ್ಯವನ್ನು 21-3, 21-3 ನೇರ ಗೇಮ್ಗಳಿಂದ ಗೆದ್ದರು. 20 ನಿಮಿಷಗಳಲ್ಲಿ ಪಂದ್ಯ ಅಂತ್ಯ ಕಂಡಿತು. ಎರಡನೇ ಸಿಂಗಲ್ಸ್‌ನಲ್ಲಿ ಯುವ ಆಟಗಾರ್ತಿ ಅಶ್ಮಿತಾ ಚಲಿಹಾ ಖೆರ್ಲೆನ್ ದರ್ಖಾನ್‌ಬಾಟರ್ ವಿರುದ್ಧ 21-2, 21-3 ಅಂತರದಿಂದ ಗೆದ್ದರೆ, ಅನುಪಮಾ ಉಪಾಧ್ಯಾಯ ಮೂರನೇ ಸಿಂಗಲ್ನಲ್ಲಿ ಗೆದ್ದು ಬೀಗಿದರು. ಭಾರತ ನಾಕೌಟ್ ಸುತ್ತಿನಲ್ಲಿ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ.