Site icon Vistara News

​Asian Games 2023: ಸೈಲಿಂಗ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ; ಕಂಚಿಗೆ ತೃಪ್ತಿಪಟ್ಟ ಇಬಾದ್​ ಅಲಿ

Eabad Ali in action.

ಹ್ಯಾಂಗ್‌ಝೂ: ಇಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಏಷ್ಯನ್​ ಗೇಮ್ಸ್​ನಲ್ಲಿ​(Asian Games 2023) ಭಾರತ ಸೈಲಿಂಗ್​ ಸ್ಪರ್ಧೆಯಲ್ಲಿ ಮತ್ತೊಂದು ಪದಕ ತನ್ನದಾಗಿಸಿಕೊಂಡಿದೆ. ಪುರುಷರ ವಿಂಡ್‌ಸರ್ಫರ್ ಆರ್‌ಎಸ್: ಎಕ್ಸ್ ಈವೆಂಟ್‌ನಲ್ಲಿ ಇಬಾದ್​ ಅಲಿ(Eabad Ali) ಕಂಚಿನ ಪದಕ ಜಯಿಸಿದ್ದಾರೆ. ಇದಕ್ಕೂ ಮುನ್ನ ನಡೆದ ಮಹಿಳೆಯರ ಸಿಂಗ್ಸಲ್ಸ್​ ವಿಭಾಗದ ಸೈಲಿಂಗ್(ದೋಣಿ ಸ್ಪರ್ಧೆ) ಸ್ಪರ್ಧೆಯ ILCA4 ರೇಸ್ 11ನಲ್ಲಿ ನೇಹಾ ಠಾಕೂರ್(Neha Thakur) ಬೆಳ್ಳಿ ಪದಕ ಜಯಿಸಿದ್ದರು. ಒಟ್ಟಾರೆ ಮಂಗಳವಾರ ಭಾರತ ಎರಡು ಪದಕ ಜಯಿಸಿದಂತಾಗಿದೆ. ಸದ್ಯ ಭಾರತ 13 ಪದಕ ಗೆದ್ದಿದೆ.

ಮಂಗಳವಾರ ನಡೆದ ಫೈನಲ್​ ಸುತ್ತಿನ ವಿಂಡ್‌ಸರ್ಫರ್ ಆರ್‌ಎಸ್: ಎಕ್ಸ್ ಈವೆಂಟ್‌ನಲ್ಲಿ ಇಬಾದ್​ ಅಲಿ 52 ಅಂಕದೊಂದಿಗೆ ಕಂಚಿನ ಪದಕ್ಕೆ ಕೊರಳೊಡ್ಡಿದರು. ಇದಕ್ಕೂ ಮುನ್ನ ಸೈಲಿಂಗ್​ ವಿಭಾಗದಲ್ಲಿ ಬಾಲಕಿಯರ ಡಿಂಗಿ ಐಎಲ್ ಸಿಎ4 ಸ್ಪರ್ಧೆಯಲ್ಲಿ ನೇಹಾ ಠಾಕೂರ್ 11 ರೇಸ್​ಗಳಲ್ಲಿ ಒಟ್ಟು 27 ಅಂಕಗಳಿಸಿ ಬೆಳ್ಳಿ ಗೆದ್ದು ಈ ಸ್ಪರ್ಧೆಯಲ್ಲಿ ಭಾರತಕ್ಕೆ ಐತಿಹಾಸಿಕ ಪದಕದ ಖಾತೆ ತೆರೆದಿದ್ದರು. ಥಾಯ್ಲೆಂಡ್‌ನ ನೊಪಸೋರ್ನ್ ಖುನ್ಬೂಂಜಾನ್ 16 ಅಂಕಗಳೊಂದಿಗೆ ಚಿನ್ನ ಪದಕ, ಸಿಂಗಾಪುರದ ಕೀರಾ ಮೇರಿ ಕಾರ್ಲೈಲ್ 28 ಅಂಕಗಳೊಂದಿಗೆ ಕಂಚಿನ ಪದಕ್ಕೆಎ ತೃಪ್ತಿಪಟ್ಟಿದ್ದರು.

ಸ್ಕ್ವಾಷ್‌ನಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿದ ಭಾರತ

ಪಾಕಿಸ್ತಾನ ವಿರುದ್ಧ ನಡೆದ ಸ್ಕ್ವಾಷ್‌ ಪಂದ್ಯದಲ್ಲಿ ಭಾರತ ತಂಡ ಗೆದ್ದು ಶುಭಾರಂಭ ಕಂಡಿದೆ. ಜೋಶ್ನಾ ಚಿನ್ನಪ್ಪ(joshna chinappa) ತಂಡ 3-0 ಅಂತರದಿಂದ ಪಾಕ್​ ತಂಡವನ್ನು ಸದೆಬಡಿಯುವಲ್ಲಿ ಯಶಸ್ವಿಯಾಯಿತು.

ಹಾಕಿಯಲ್ಲಿ ಭರ್ಜರಿ ಗೆಲುವು

ಪುರುಷರ ಹಾಕಿ ತಂಡ ಭರ್ಜರಿ ಗೆಲುವು ಸಾಧಿಸಿದೆ. ಸಿಂಗಪುರ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ 16-1 ಗೋಲುಗಳ ಅಂತರದ ಅಧಿಕಾರಯುತ ಗೆಲುವು ಸಾಧಿಸಿದೆ. ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಮಂದೀಪ್ ಸಿಂಗ್ ಅವರ ಹ್ಯಾಟ್ರಿಕ್ ಗೋಲು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಇದು ಭಾರತಕ್ಕೆ ಒಲಿದ ಸತತ ಎರಡನೇ ಗೆಲುವಾಗಿದೆ. ಭಾರತ ಮುಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಪಾನ್ ಸವಾಲು ಎದುರಿಸಲಿದೆ. ಈ ಪಂದ್ಯ ಗುರುವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ ಉಜ್ಬೇಕಿಸ್ತಾನ ವಿರುದ್ಧ 16-0 ಅಂತರದ ಜಯ ಸಾಧಿಸಿತ್ತು.

ಭಾರತ ಪರ ಹರ್ಮನ್‌ಪ್ರೀತ್ (24, 39, 40, 42ನೇ ನಿಮಿಷ) ಮತ್ತು ಮಂದೀಪ್ (12, 30, 51ನೇ ನಿಮಿಷ), ಅಭಿಷೇಕ್ (51, 52ನೇ ನಿಮಿಷ), ವರುಣ್ ಕುಮಾರ್ (55, 55ನೇ ನಿಮಿಷ), ಲಲಿತ್ ಕುಮಾರ್ ಉಪಾಧ್ಯಾಯ (16ನೇ ನಿಮಿಷ), ಗುರ್ಜಂತ್ ಸಿಂಗ್ (22ನೇ ನಿಮಿಷ), ವಿವೇಕ್ ಸಾಗರ್ ಪ್ರಸಾದ್(23ನೇ ನಿಮಿಷ), ಮನ್ ಪ್ರೀತ್ ಸಿಂಗ್ (37ನೇ ನಿಮಿಷ), ಶಂಶೇರ್ ಸಿಂಗ್ (38ನೇ ನಿಮಿಷ) ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು.

ಭವಾನಿಗೆ ಸೋಲು

ಪದಕ ಬರವಸೆಯ ಆಟಗಾರ್ತಿಯಾಗಿದ್ದ ಭಾರತದ ಫೆನ್ಸರ್ ಭವಾನಿ ದೇವಿ(C. A. Bhavani Devi) ಅವರು 8ನೇ ಸುತ್ತಿನಲ್ಲಿ ಸೋಲು ಕಂಡು ಪದಕ ರೇಸ್‌ನಿಂದ ಹೊರಬಿದ್ದಿದ್ದಾರೆ. ಗುಂಪು ಹಂತದಲ್ಲಿ ಅಜೇಯ ದಾಖಲೆ ಮುಂದುವರಿಸಿ ನಾಕೌಟ್ ಹಂತಕ್ಕೆ ಅಗ್ರ ಶ್ರೇಯಾಂಕಿತೆಯಾಗಿ ಕಾಲಿಟ್ಟಿದ್ದ ಅವರು 8ನೇ ಸುತ್ತಿನಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಸೋಲು ಕಂಡರು.

Exit mobile version