Site icon Vistara News

Asian Games: ಆರ್ಚರಿಯಲ್ಲಿ ಬೆಳ್ಳಿ ಗೆದ್ದ ಭಾರತ ಪುರುಷರ ತಂಡ

Asian Games 2023

ಹ್ಯಾಂಗ್ಝೌ: ಆರ್ಚರಿಯಲ್ಲಿ ಭಾರತದ ರಿಕರ್ವ್ ಪುರುಷರ ತಂಡ ಏಷ್ಯನ್​ ಗೇಮ್ಸ್​(Asian Games) ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದೆ. ಶುಕ್ರವಾರ ನಡೆದ ಫೈನಲ್​ನಲ್ಲಿ ಭಾರತೀಯ ತಂಡ ದಕ್ಷಿಣ ಕೊರಿಯಾ ವಿರುದ್ಧ 5-1 ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.

ಮೊದಲ ಸೆಟ್‌ನ ಅಂತ್ಯದಲ್ಲಿ ಸ್ಕೋರ್‌ಕಾರ್ಡ್ 60-55 ರೀಡಿಂಗ್‌ನೊಂದಿಗೆ ಕೊರಿಯಾ 2-0 ಮುನ್ನಡೆ ಸಾಧಿಸಿದ್ದರಿಂದ ಭಾರತ ಅದ್ಭುತ ಪ್ರದರ್ಶನ ನೀಡಲಿಲ್ಲ. ಆದರೆ, ಆ ಬಳಿಕ ಅತನು ದಾಸ್, ಧೀರಜ್ ಬೊಮ್ಮದೇವರ ಮತ್ತು ಪ್ರಭಾಕರ ತುಷಾರ್ ಶೆಲ್ಕೆ ದ್ವಿತೀಯ ಸೆಟ್​ನಲ್ಲಿ ಗ್ರೇಟ್​ ಕಮ್​ಬ್ಯಾಕ್​ ಮಾಡಿ 57-57 ಅಂದೊಂದಿಗೆ 3-1 ರಲ್ಲಿ ಮುಗಿಸಿದರು. ಆದಾಗ್ಯೂ, ಡಿಯೋಕ್ ಜೆ ಕಿಮ್, ಜಿನ್ಹೈಕ್ ಓಹ್ ಮತ್ತು ವೂಸೋಕ್ ಲೀ ಅವರನ್ನೊಳಗೊಂಡ ಕೊರಿಯಾ ಅಂತಿಮ ಸೆಟ್​ನಲ್ಲಿ 56-55 ರಿಂದ ಗೆದ್ದು 5-1 ರಿಂದ ಪಂದ್ಯವನ್ನು ಗೆದ್ದರು.

10 ಪದಕ ಗೆದ್ದರೆ ಶತಕ ಬಾರಿಸಲಿದೆ ಭಾರತ

ಸದ್ಯ ಭಾರತ 90 (21 ಚಿನ್ನ, 33 ಬೆಳ್ಳಿ ಮತ್ತು 36 ಕಂಚು) ಪದಕಗಳೊಂದಿಗೆ ಒಟ್ಟಾರೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನು 10 ಪದಕ ಗೆದ್ದರೆ ಭಾರತದ ಪದಕಗಳ ಸಂಖ್ಯೆ 100 ಆಗಲಿದೆ. 1951ರಿಂದ ಶುರುವಾದ ಏಷ್ಯಾಡ್‌ನಲ್ಲಿ ಭಾರತ ಆವೃತ್ತಿಯೊಂದರಲ್ಲಿ ಗೆದ್ದ ಶ್ರೇಷ್ಠ ಸಾಧನೆಯಾಗಿದೆ. 2018ರಲ್ಲಿ ಪಡೆದಿದ್ದ 70 ಪದಕಗಳ ದಾಖಲೆ ಈ ಬಾರಿ ಪತನಗೊಂಡಿದೆ. 100 ಪದಕ ಗೆದ್ದರೆ ಸರ್ವಕಾಲಿಕ ದಾಖಲೆ ಬರೆಯಲಿದೆ.

ಇದನ್ನೂ ಓದಿ Asian Games: ಫೈನಲ್​ ಪ್ರವೇಶಿಸಿದ ಮಹಿಳಾ ಕಬಡ್ಡಿ ತಂಡ; ಸೆಮಿಯಲ್ಲಿ ಸೋಲು ಕಂಡ ಬಜರಂಗ್ ಪೂನಿಯಾ

41 ವರ್ಷಗಳ ಬಳಿಕ ಭಾರತಕ್ಕೆ ಪದಕ ಗೆದ್ದ ಪ್ರಣಯ್​

ಶುಕ್ರವಾರ ನಡೆದ ಬ್ಯಾಡ್ಮಿಂಟನ್​ ಸೆಮಿಫೈನಲ್​​ನಲ್ಲಿ ಹಾಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಲಿ ಶಿ ಫೆಂಗ್ ವಿರುದ್ಧ ನೇರ ಗೇಮ್​ಗಳಿಂದ ಸೋತ ಎಚ್.ಎಸ್.ಪ್ರಣಯ್ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಅವರು 41 ವರ್ಷಗಳ ನಂತರ ಏಷ್ಯನ್ ಗೇಮ್ಸ್​ನ (Asian Games) ಪುರುಷರ ಸಿಂಗಲ್ಸ್​​ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಬೆನ್ನುನೋವಿನಿಂದ ಬಳಲುತ್ತಿರುವ ವಿಶ್ವದ 7ನೇ ಶ್ರೇಯಾಂಕಿತ ಆಟಗಾರ 51 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ತವರಿನ ಫೇವರಿಟ್ ಹಾಗೂ ವಿಶ್ವದ 8ನೇ ಶ್ರೇಯಾಂಕಿತ ಲಿ ವಿರುದ್ಧ 16-21, 9-21 ಅಂತರದ ಸೋಲನುಭವಿಸಿದರು. 1982ರಲ್ಲಿ ನವದೆಹಲಿಯಲ್ಲಿ ನಡೆದ ಕೂಟದಲ್ಲಿ ಸೈಯದ್ ಮೋದಿ ಅವರು ಕಂಚಿನ ಪದಕ ಗೆದ್ದ ಬಳಿಕ ಪುರುಷರ ಸಿಂಗಲ್ಸ್ ನಲ್ಲಿ ಭಾರತಕ್ಕೆ ಲಭಿಸಿದ ಎರಡನೇ ಪದಕ ಇದಾಗಿದೆ. ಪ್ರಣಯ್ ಕಳೆದ ವಾರ ಬೆಳ್ಳಿ ಪದಕ ಗೆದ್ದ ಭಾರತೀಯ ಪುರುಷರ ತಂಡದ ಭಾಗವಾಗಿದ್ದರು. 

ಕಬಡ್ಡಿಯಲ್ಲಿ ಫೈನಲ್​ ಪ್ರವೇಶಿಸಿದ ಭಾರತದ ಪುರುಷರ ಮತ್ತು ಮಹಿಳಾ ತಂಡ

ಭಾರತದ ಮಹಿಳಾ ಕಬಡ್ಡಿ ತಂಡ ನೇಪಾಳ ವಿರುದ್ಧ ಸೆಮಿಫೈನಲ್​ನಲ್ಲಿ 61-17 ಅಂತರದಿಂದ ಗೆದ್ದು ಫೈನಲ್​ ಪ್ರವೇಶ ಪಡೆದಿದೆ. ಅತ್ತ ಪುರುಷರ ಕಬಡ್ಡಿ ತಂಡ ಸೆಮಿಫೈನಲ್​ನಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ 60-13 ಅಂಕದಿಂದ ಗೆದ್ದು ಫೈನಲ್​ಗೆ ಲಗ್ಗೆಯಿಟ್ಟಿದೆ.

Exit mobile version