ಹ್ಯಾಂಗ್‌ಝೌ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ(Asian Games 2023) ಗುರುವಾರ, ಭಾರತ ಮುಟ್ಟಿದೆಲ್ಲ ಚಿನ್ನ ಎಂಬಂತೆ ಮೂರು ಚಿನ್ನದ ಪದಕ ಗೆದ್ದುಕೊಂಡಿದೆ. ಇದರಲ್ಲಿ ಎರಡು ಚಿನ್ನ ಆರ್ಚರಿಯಲ್ಲಿ ದಾಖಲಾದರೆ, ಮತ್ತೊಂದು ಚಿನ್ನ ಸ್ಕ್ವಾಷ್‌ನಲ್ಲಿ ದೊರಕಿತು. ಮಧ್ಯಾಹ್ನ ನಡೆದ ಪುರಷರ ಆರ್ಚರಿ ತಂಡದ ಫೈನಲ್‌ನಲ್ಲಿ ಭಾರತದ ಓಜಸ್ ಡಿಯೋಟಾಲೆ, ಅಭಿಷೇಕ್ ವರ್ಮಾ ಮತ್ತು ಪ್ರಥಮೇಶ್ ಜಾವ್ಕರ್ ಅವರು ಕೊರಿಯಾವನ್ನು 230-235 ಅಂಕಗಳಿಂದ ಸೋಲಿಸಿ ಚಿನ್ನ ಗೆದ್ದರು. ಈ ಮೂಲಕ ಭಾರತದ ಚಿನ್ನದ ಪದಕ ಸಂಖ್ಯೆ 21ಕ್ಕೆ ಏರಿದೆ. ಮಹಿಳಾ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಚೀನಾ ವಿರುದ್ಧ 4-0 ಗೋಲ್ಗಳಿಂದ ಸೋತು ನಿರಾಸೆ ಮೂಡಿಸಿದರು.
ಇದಕ್ಕೂ ಮುನ್ನ ನಡೆದ ಮಹಿಳೆಯರ ಕಾಂಪೌಂಡ್ ಆರ್ಚರಿ ಫೈನಲ್‌ನಲ್ಲಿ ಭಾರತ ಚಿನ್ನದ ಪದಕ ಜಯಿಸಿತ್ತು. ಜ್ಯೋತಿ ವೆನ್ನಮ್, ಅದಿತಿ ಸ್ವಾಮಿ, ಪರ್ನೀತ್ ಕೌರ್ ಸೇರಿಕೊಂಡು 30 ಅಂಕ ಪಡೆದು ಎದುರಾಳಿ ಚೈನೀಸ್ ತೈಪೆಯನ್ನು ಹೊಡೆದುರುಳಿಸಿದರು. ಒಟ್ಟು 230 ಅಂಕ ಪಡೆದು ಚಿನ್ನದ ಪದಕ ತಮ್ಮದಾಗಿಸಿಕೊಂಡರು. 229 ಅಂಕ ಪಡೆದ ಚೈನೀಸ್ ತೈಪೆ ಬೆಳ್ಳಿಗೆ ತೃಪ್ತಿಪಟ್ಟಿತು. ಈ ಪಂದ್ಯ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿತು. ಅಂತಿಮ ಮೂರು ಹೊಡೆತದಲ್ಲಿ ಭಾರತೀಯ ಸ್ಪರ್ಧಿಗಳು ಪರಿಪೂರ್ಣ ಹೊಡೆತಗಳಿಂದ ಗೆದ್ದು ಬೀಗಿದರು.
The Joy of bringing home #Gold🥇🤩
— SAI Media (@Media_SAI) October 5, 2023
Their faces say it all!
Presenting @archer_abhishek & #KheloIndiaAthletes Ojas and Prathamesh!
Congratulations on the Gold boys💪🏻👏🏻👏🏻 pic.twitter.com/7mXE1GXb5e
ಸ್ಕ್ವಾಷ್‌ನಲ್ಲಿ ಚಿನ್ನ
ಸ್ಕ್ವಾಷ್ ಮಿಕ್ಸೆಡ್ ಡಬಲ್ಸ್ನಲ್ಲಿ ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಜೋಡಿ ಫೈನಲ್‌ನಲ್ಲಿ ಮಲೇಷ್ಯಾ ಜೋಡಿಯನ್ನು 2-0(11-10, 11-10) ಅಂತರದಿಂದ ಮಣಿಸಿ ಚಿನ್ನದ ಪದಕ್ಕೆ ಕೊರಳೊಡ್ಡಿದರು. ಭಾರತದ ಅನುಭವಿ ಜೋಡಿಯ ಮುಂದೆ ಮಲೇಷ್ಯಾದ ಐಫಾ ಬಿಂಟಿ ಅಜ್ಮಾನ್ ಮತ್ತು ಮೊಹಮ್ಮದ್ ಸಯಾಫಿಕ್ ಬಿನ್ ಮೊಹಮ್ಮದ್ ಜೋಡಿ ಸಂಪೂರ್ಣ ವಿಫಲಗೊಂಡಿತು. ಈ ಪಂದ್ಯ ಏಕಪಕ್ಷೀಯವಾಗಿ ಸಾಗಿತು. ಭಾರತ ಅಧಿಕಾರಯುತ ಗೆಲುವು ಸಾಧಿಸಿತು.
ಭಾರತ ಸದ್ಯ 21 ಚಿನ್ನ, 31 ಬೆಳ್ಳಿ, 32 ಕಂಚಿನ ಪದಕಗೊಂದಿಗೆ ಒಟ್ಟು 84 ಪದಕ ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಕೆಲ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳು ಫೈನಲ್ ತಲುಪಿದ್ದು ಶತಕದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. 1951ರಿಂದ ಶುರುವಾದ ಏಷ್ಯಾಡ್‌ನಲ್ಲಿ ಭಾರತದ ಆವೃತ್ತಿಯೊಂದರಲ್ಲಿ ಗೆದ್ದ ಶ್ರೇಷ್ಠ ಸಾಧನೆಯಾಗಿದೆ. 2018ರಲ್ಲಿ ಪಡೆದಿದ್ದ 70 ಪದಕಗಳ ದಾಖಲೆ ಈ ಬಾರಿ ಪತನಗೊಂಡಿದೆ.
ಇದನ್ನೂ ಓದಿ Asian Games 2023: ಚಿನ್ನಕ್ಕೆ ಗುರಿಯಿಟ್ಟ ಮಹಿಳಾ ಆರ್ಚರಿ ತಂಡ
ಪಿ.ವಿ.ಸಿಂಧುಗೆ ಸೋಲು
ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸುಂಧು ಅವರ ಕಳಪೆ ಪ್ರದರ್ಶನ ಏಷ್ಯನ್ ಗೇಮ್ಸ್‌ನಲ್ಲಿಯೂ ಮುಂದುವರಿದಿದೆ. ಮಹಿಳಾ ಸಿಂಗಲ್ಸ್ನ ಕ್ವಾಟರ್ಫೈನಲ್ನಲ್ಲಿ ಸೋಲು ಕಂಡು ನಿರಾಸೆ ಮೂಡಿಸಿದ್ದಾರೆ. ಪುರುಷರ ಕಬಡ್ಡಿ ತಂಡ ‘ಎ’ ಗುಂಪಿನ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ 50-27 ಅಂಕದಿಂದ ಗೆದ್ದು ಮುಂದಿನ ಹಂತಕ್ಕೇರಿದೆ.