Site icon Vistara News

Asian Games 2023: ಏಷ್ಯನ್​ ಗೇಮ್ಸ್​ನಲ್ಲಿ ದಾಖಲೆಯ ಪದಕ ಗೆದ್ದ ಭಾರತ; ಆರ್ಚರಿಯಲ್ಲಿ ಚಿನ್ನ

Asian Games 2023

ಹ್ಯಾಂಗ್ಝೌ: ಏಷ್ಯನ್​ ಗೇಮ್ಸ್​ನ 11ನೇ ದಿನ ಭಾರತ ಚಿನ್ನ ಮತ್ತು ಕಂಚಿನ ಪದಕ ಗೆಲ್ಲುವ ಮೂಲಕ ಪದಕದ ಖಾತೆ ತೆರೆದಿದೆ. ಮಿಕ್ಸೆಡ್ ಕಾಂಪೌಂಡ್ ಆರ್ಚರಿಯಲ್ಲಿ​ ಓಜಾಸ್ ಮತ್ತು ಜ್ಯೋತಿ ವೆನ್ನಮ್ ಚಿನ್ನಕ್ಕೆ ಗುರಿ ಇರಿಸಿದರೆ, ರಾಮ್ ಬಾಬು ಮತ್ತು ಮಂಜು ರಾಣಿ 35ಕೀ.ಮೀ ಓಟದ ನಡಿಗೆ(ರೇಸ್​ ವಾಕ್​) ಮಿಶ್ರ ತಂಡದಲ್ಲಿ ಕಂಚು ಗೆದ್ದರು. ಈ ಮೂಲಕ ಭಾರತದ ಪದಕಗಳ ಸಂಖ್ಯೆ 71ಕ್ಕೇರಿದೆ. ಇದು ಏಷ್ಯಾಡ್​ನಲ್ಲಿ ಭಾರತ ಗೆದ್ದ ದಾಖಲೆಯ ಪದಕವಾಗಿದೆ.

ಆರ್ಚರಿ ರೋಚಕ ಫೈನಲ್​ ಪಂದ್ಯದಲ್ಲಿ ಓಜಾಸ್ ಮತ್ತು ಜ್ಯೋತಿ ವೆನ್ನಮ್ ಜೋಡಿ ಕೇವಲ ಒಂದು ಅಂಕದ ಮುನ್ನಡೆಯಿಂದ ಚಿನ್ನ ತಮ್ಮದಾಗಿಸಿಕೊಂಡರು. ಹಾಲಿ ಚಾಂಪಿಯನ್​ ದಕ್ಷಿಣ ಕೊರಿಯಾವನ್ನು 159-158 ಅಂಕಗಳಿಂದ ಸೋಲಿಸಿದ ಭಾರತ ಐತಿಹಾಸಿಕ ಚಿನ್ನ ಗೆದ್ದಿತು.

ಬುಧವಾರ ಬೆಳಗ್ಗೆ ನಡೆದ ಈ ಸ್ಫರ್ದೆಯಲ್ಲಿ ಭಾರತೀಯ ತಂಡ 5:51:14 ಸೆಂಕೆಡ್​ನಲ್ಲಿ ಗುರು ತಲುಪಿ ಮೂರನೇ ಸ್ಥಾನ ಪಡೆದ ಕಂಚಿಗೆ ತೃಪ್ತಿಪಟ್ಟಿತ್ತು. ಇಂದು ನಡೆಯುವ ಜಾವೆಲಿನ್​ ಎಸೆತದಲ್ಲಿ ನೀರಜ್​ ಚೋಪ್ರಾ ಮಹಿಳಾ ಬಾಕ್ಸಿಂಗ್​ ಫೈನಲ್ಸ್​ನಲ್ಲಿ ಲವ್ಲಿನಾ ಬೋರ್ಗಹೈನ್‌(Lovlina Borgohain) ಕಣಕ್ಕಿಳಿಯಲಿದ್ದಾರೆ. ಇವರ ಮೇಲೆ ಚಿನ್ನದ ನಿರೀಕ್ಷೆ ಇರಿಸಲಾಗಿದೆ. ಆರ್ಚರಿಯಲ್ಲಿ ಕೆಲ ಸ್ಪರ್ಧಿಗಳು ಫೈನಲ್​ ತಲುಪಿದ್ದು ಪದಕ ಖಾತ್ರಿ ಪಡಿಸಿದ್ದಾರೆ.

ದಾಖಲೆ ಬರೆದ ಭಾರತ

ಭಾರತದ ಪದಕ ಗಳಿಕೆ 71ಕ್ಕೇರುವ ಮೂಲಕ ದಾಖಲೆಯೊಂದನ್ನು ಬರೆದಿದೆ. ಭಾರತ 2010ರಲ್ಲಿ 65 ಪದಕ 2018ರಲ್ಲಿ 70 ಪದಕ ಗೆದ್ದಿತ್ತು. ಈ ಬಾರಿ 71 ಪದಕ ಗೆಲ್ಲುವ ಮೂಲಕ ಹಳೆಯ ದಾಖಲೆಯನ್ನು ಮುರಿದಿದೆ. ಸದ್ಯ 16 ಚಿನ್ನ, 26 ಬೆಳ್ಳಿ ಹಾಗೂ 29 ಕಂಚು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಮುಂದುವರಿದಿದೆ.

ಪದಕಗಳ ಭರವಸೆ

ಸ್ಕ್ವಾಷ್ ನಲ್ಲಿ ಸೌರವ್ ಘೋಷಾಲ್ (ಪುರುಷರ ಸಿಂಗಲ್ಸ್), ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ (ಮಿಶ್ರ ಡಬಲ್ಸ್), ಅಭಯ್ ಸಿಂಗ್ ಮತ್ತು ಅನಾಹತ್ ಸಿಂಗ್ (ಮಿಶ್ರ ಡಬಲ್ಸ್) ಭಾರತಕ್ಕೆ ಮೂರು ಪದಕಗಳು ಖಚಿತವಾಗಿದೆ. ಬಾಕ್ಸಿಂಗ್​ನಲ್ಲಿ ಒಲಿಂಪಿಕ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಮಹಿಳೆಯರ 75 ಕೆಜಿ ವಿಭಾಗದ ಫೈನಲ್​​ಗೆ ಪ್ರವೇಶಿಸುವ ಮೂಲಕ ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದರೆ, ಪ್ರೀತಿ ಮತ್ತು ನರೇಂದರ್ ಕಂಚಿನ ಪದಕದೊಂದಿಗೆ ನಿರ್ಗಮಿಸಿದರು. ಪುರುಷರ ಕಾಂಪೌಂಡ್ ವೈಯಕ್ತಿಕ ಸ್ಪರ್ಧೆಯಲ್ಲಿ ಓಜಾಸ್ ಪ್ರವೀಣ್ ಮತ್ತು ಅಭಿಷೇಕ್ ವರ್ಮಾ ಅಖಿಲ ಭಾರತ ಫೈನಲ್ ತಲುಪಿದ್ದಾರೆ. ಮಹಿಳೆಯರ ಕಾಂಪೌಂಡ್ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಜ್ಯೋತಿ ಸುರೇಖಾ ವೆನ್ನಮ್ ಫೈನಲ್ ತಲುಪಿದ್ದಾರೆ.

ಇದನ್ನೂ ಓದಿ Asian Games 2023: ಪುರುಷರ ಕ್ಯಾನೋ ತಂಡಕ್ಕೆ ಕಂಚಿನ ಪದಕ

ಮಂಗಳವಾರದ ಫಲಿತಾಂಶ

ಮಂಗಳವಾರ, ಅಥ್ಲೆಟಿಕ್ಸ್ ದಿನದ ದ್ವಿತೀಯಾರ್ಧದಲ್ಲಿ ಭಾರತ ಶ್ರೇಷ್ಠ ಪ್ರದರ್ಶನ ತೋರಿತು. ಬೆಳಗ್ಗೆ ಬಿಲ್ಲುಗಾರಿಕೆಯಲ್ಪಲಿ ಪದಕ ಬೇಟೆ ಆರಂಭಿಸಿದ ಭಾರತ ಆ ಬಳಿಕ ಅಥ್ಲೆಟಿಕ್ಸ್​ನಲ್ಲಿ ಪಾರುಲ್ ಚೌಧರಿ (ಚಿನ್ನ, ಮಹಿಳೆಯರ 5000 ಮೀಟರ್), ಅನು ರಾಣಿ (ಚಿನ್ನ, ಮಹಿಳಾ ಜಾವೆಲಿನ್ ಥ್ರೋ), ತೇಜಸ್ವಿನ್ ಶಂಕರ್ (ಬೆಳ್ಳಿ ಡೆಕಾಥ್ಲಾನ್), ಮೊಹಮ್ಮದ್ ಅಫ್ಸಲ್ (ಬೆಳ್ಳಿ, ಪುರುಷರ 800 ಮೀಟರ್), ಪ್ರವೀಣ್ ಚಿತ್ತರವೇಲ್ (ಕಂಚು, ಪುರುಷರ ಟ್ರಿಪಲ್ ಜಂಪ್), ವಿಥಿಯಾ ರಾಮರಾಜ್ (ಕಂಚು, ಮಹಿಳೆಯರ 400 ಮೀಟರ್ ಹರ್ಡಲ್ಸ್) ಪದಕ ಗೆದ್ದರು. ಪುರುಷರ ಕ್ಯಾನೋ ಡಬಲ್ 1000 ಮೀಟರ್ ಸ್ಪರ್ಧೆಯಲ್ಲಿ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಸಲಾಮ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಅಕ್ಟೋಬರ್ 2 ರಂದು ಭಾರತ 13 ಚಿನ್ನ, 24 ಬೆಳ್ಳಿ ಮತ್ತು 23 ಕಂಚು ಸೇರಿದಂತೆ 60 ಪದಕಗಳನ್ನು ಗೆದ್ದುಕೊಂಡಿತ್ತು.

Exit mobile version