ಹ್ಯಾಂಗ್‌ಝೌ: ಇಲ್ಲಿ ನಡೆಯುತ್ತಿರುವ 19ನೇ ಏಷ್ಯಾಡ್ನಲ್ಲಿ(Asian Games 2023) ಭಾರತ ಶೂಟರ್ಗಳು ತಮ್ಮ ಪದಕ ಭೇಟೆಯನ್ನು ಮುಂದುವರಿಸಿದ್ದಾರೆ. ಟ್ರ್ಯಾಪ್ ವಿಭಾಗದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಪುರುಷರ ಟ್ರ್ಯಾಪ್ ತಂಡ ಚಿನ್ನ ಗೆದ್ದರೆ, ಮಹಿಳಾ ತಂಡ ಬೆಳ್ಳಿಗೆ ತೃಪ್ತಿಪಟ್ಟಿತು.
ಪೃಥ್ವಿರಾಜ್ ತೊಂಡೈಮಾನ್, ಜೋರವರ್ ಸಿಂಗ್ ಸಂಧು, ಕಿನಾನ್ ಚೆನೈ ಅವರನ್ನೊಳಗೊಂಡ ಭಾರತದ ಪುರುಷರ ತಂಡ 50 ಶೂಟ್ ಟ್ರ್ಯಾಪ್ ವಿಭಾಗದಲ್ಲಿ 361 ಪಡೆದು ಚಿನ್ನದ ಪದಕ್ಕೆ ಗುರು ಇರಿಸಿತು. ಮಹಿಳಾ ವಿಭಾಗದಲ್ಲಿ 337 ಅಂಕ ಪಡೆದ ರಾಜೇಶ್ವರಿ ಕುಮಾರಿ, ಮನೀಶಾ ಕೀರ್ ಮತ್ತು ಪ್ರೀತಿ ರಾಜಕ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
🥈 Bang On Target! 🎯
— SAI Media (@Media_SAI) October 1, 2023
Our Women's Trap Shooting Team:
🌟 #KheloIndiaAthletes Manisha Keer and Preeti Rajak
🌟 @RiaKumari7
Aimed high and hit the mark, securing the SILVER🥈 medal for India! 🇮🇳
Let's cheer out loud for our sharpshooters for their incredible achievement! 🙌🥈… pic.twitter.com/Wvf1lV6vQp
ಗಾಲ್ಫ್ ನಲ್ಲಿ ಭಾರತಕ್ಕೆ ಐತಿಹಾಸಿಕ ಪದಕ
ಗಾಲ್ಫ್ ನಲ್ಲಿ ಭಾರತ ಇದೇ ಮೊದಲ ಬಾರಿಗೆ ಪದಕ ಗೆದ್ದು ಸದ್ದು ಮಾಡಿದೆ. 25 ವರ್ಷದ ಕರ್ನಾಟಕದ ಕುವರಿ ಅದಿತಿ ಅಶೋಕ್(Aditi Ashok) ಮೊದಲ ಬಾರಿಗೆ ಏಷ್ಯನ್ ಗೇಮ್ಸ್ನಲ್ಲಿ (Asian Games 2023) ಗಾಲ್ಫ್ ಕೋರ್ಟ್ನಲ್ಲಿ ಭಾರತಕ್ಕೆ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
🥈 Bang On Target! 🎯
— SAI Media (@Media_SAI) October 1, 2023
Our Women's Trap Shooting Team:
🌟 #KheloIndiaAthletes Manisha Keer and Preeti Rajak
🌟 @RiaKumari7
Aimed high and hit the mark, securing the SILVER🥈 medal for India! 🇮🇳
Let's cheer out loud for our sharpshooters for their incredible achievement! 🙌🥈… pic.twitter.com/Wvf1lV6vQp
ಮೂರನೇ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದ ಅದಿತಿ ಅಶೋಕ್ ಇಂದು ನಡೆದ ಅಂತಿಮ ಸುತ್ತಿನಲ್ಲಿ 267 ಅಂಕ ಪಡೆದು ಬೆಳ್ಳಿ ಪದಕ ಜಯಿಸಿದರು. ಇದು ಗಾಲ್ಫ್ ನಲ್ಲಿ ಭಾರತದಕ್ಕೆ ಒಲಿದ ಮೊದಲ ಪದಕವಾಗಿದೆ. 2 ಅಂಕದ ಹಿನ್ನಡೆಯಿಂದ ಚಿನ್ನದ ಪದಕ ಕೈತಪ್ಪಿತು. ಥಾಯ್ಲೆಂಡ್ನ ಅರ್ಪಿಚಯಾ ಯುಬೊಲ್ಗೆ ಚಿನ್ನ ಒಲಿಯಿತು.
ಪಾಕ್ ಮಣಿಸಿ ಚಿನ್ನ ಗೆದ್ದ ಸ್ಕ್ವಾಷ್ ತಂಡ
ಪುರುಷರ ಸ್ಕ್ವಾಷ್ ನಲ್ಲಿ ಭಾರತದ ಕ್ರೀಡಾಪಟುಗಳು ಬಂಗಾರದ ಪದಕ ಗೆದ್ಧ ಸಾಧನೆ ಮಾಡಿದ್ದಾರೆ. ಐದು ಸೆಟ್ ಗಳ ಥ್ರಿಲ್ಲರ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿತು. ಮೂರು ಬೆಸ್ಟ್ ಆಫ್ ಥ್ರೀ ಫೈನಲ್ ಸ್ಪರ್ಧೆಯಲ್ಲಿ ಭಾರತ 2-1 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ಚಿನ್ನವನ್ನು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ Asian Games 2023: ಗಾಲ್ಫ್‌ನಲ್ಲಿ ಐತಿಹಾಸಿಕ ಪದಕ ಗೆದ್ದ ಕರುನಾಡ ಕುವರಿ ಅದಿತಿ ಅಶೋಕ್
ಮೀರಾಬಾಯಿಗೆ 4ನೇ ಸ್ಥಾನ
ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಅವರ ಏಷ್ಯನ್ ಗೇಮ್ಸ್ ಅಭಿಯಾನ ದುರಂತದಲ್ಲಿ ಕೊನೆಗೊಂಡಿದೆ. ಶನಿವಾರ ನಡೆದ 49 ಕೆಜಿ ವಿಭಾಗದ ವೇಟ್‌ಲೀಪ್ಟಿಂಗ್ ಸ್ಪರ್ಧೆಯ ವೇಳೆ ಜಾರಿಬಿದ್ದ ಅವರು ಕಂಚಿನ ಪದಕದಿಂದ ವಂಚಿತರಾದರು. ಸ್ನ್ಯಾಚ್‌ನಲ್ಲಿ ವಿಫಲವಾದ ಅವರು ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ ಈ ವೈಫಲ್ಯ ವನ್ನು ಹೊಡೆದೋಡಿಸುವ ಯೋಜನೆಯಲ್ಲಿದ್ದರು. ಹೀಗಾಗಿ 117 ಕೆಜಿ ಗುರಿ ಇವರ ಮುಂದಿತ್ತು. ಇಲ್ಲಿ ಕೊನೆಯ ಪ್ರಯತ್ನ ಮಾಡುವಾಗ ಜಾರಿ ಬಿದ್ದು ಗಾಯಗೊಂಡರು. ಕೊನೆಗೆ ಅವರು ಕೋಚಿಂಗ್ ಸಿಬಂದಿ ನೆರವಿನಿಂದ ತೆರಳಿದರು.