Site icon Vistara News

Asian Games 2023: ಶೂಟಿಂಗ್​ನಲ್ಲಿ ಮತ್ತೊಂದು ಪದಕ; ಕಂಚಿಗೆ ಗುರಿಯಿಟ್ಟ ಕಿನಾನ್ ಚೆನೈ

Asian Games 2023

ಹ್ಯಾಂಗ್‌ಝೌ: ಭಾನುವಾರ ಏಷ್ಯಾಡ್​ನಲ್ಲಿ(Asian Games 2023) ಭಾರತ ಶೂಟರ್​ಗಳು ಮೂರು ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಬೆಳಗ್ಗೆ ನಡೆದ ಟ್ರ್ಯಾಪ್‌ ವಿಭಾಗದಲ್ಲಿ ಪುರುಷರ ತಂಡ ಚಿನ್ನ ಮತ್ತು ಮಹಿಳೆಯರ ತಂಡ ಬೆಳ್ಳಿ ಪದಕ ಗೆದ್ದ ಬಳಿಕ ಮಧ್ಯಾಹ್ನ ನಡೆದ ಪುರುಷರ ಸಿಂಗಲ್ಸ್​ ಟ್ರ್ಯಾಪ್‌ ಸ್ಪರ್ಧೆಯಲ್ಲಿ ಕಿನಾನ್ ಚೆನೈ ಕಂಚಿನ ಪದಕ ಗೆದ್ದರು.

ಫೈನಲ್​ನಲ್ಲಿ ಕಿನಾನ್ ಚೆನೈ 40 ರಲ್ಲಿ 32 ಅಂಕ ಗಳಿಸಿ ಮೂರನೇ ಸ್ಥಾನ ಪಡೆದು ಕಂಚಿಗೆ ತೃಪ್ತಿಪಟ್ಟರು. 50 ಶೂಟ್​ ಟ್ರ್ಯಾಪ್‌ ವಿಭಾಗದಲ್ಲಿ ಚಿನ್ನ ಗೆದ್ದ ತಂಡದಲ್ಲಿಯೂ ಕಿನಾನ್ ಚೆನೈ ಆಡಿದ್ದರು. ಈ ಪದಕದೊಂದಿಗೆ ಭಾರತ ಶೂಟಿಂಗ್​ ಒಂದೇ ವಿಭಾಗದಲ್ಲಿ ಒಟ್ಟು 22 ಪದಕ ಗೆದ್ದ ಸಾಧನೆ ಮಾಡಿದೆ. ಇದಕ್ಕೂ ಮುನ್ನ ನಡೆದ ಭಾರತದ ಪುರುಷರ ತಂಡ 50 ಶೂಟ್​ ಟ್ರ್ಯಾಪ್‌ ವಿಭಾಗದಲ್ಲಿ 361 ಪಡೆದು ಚಿನ್ನದ ಪದಕ್ಕೆ ಗುರು ಇರಿಸಿತು. ಈ ತಂಡದಲ್ಲಿ ಪೃಥ್ವಿರಾಜ್ ತೊಂಡೈಮಾನ್, ಜೋರವರ್ ಸಿಂಗ್ ಸಂಧು, ಕಿನಾನ್ ಚೆನೈ ಇದ್ದರು. ಮಹಿಳಾ ವಿಭಾಗದಲ್ಲಿ 337 ಅಂಕ ಪಡೆದ ರಾಜೇಶ್ವರಿ ಕುಮಾರಿ, ಮನೀಶಾ ಕೀರ್ ಮತ್ತು ಪ್ರೀತಿ ರಾಜಕ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಗಾಲ್ಫ್ ನಲ್ಲಿ ಭಾರತಕ್ಕೆ ಐತಿಹಾಸಿಕ ಪದಕ

ಗಾಲ್ಫ್ ನಲ್ಲಿ ಭಾರತ ಇದೇ ಮೊದಲ ಬಾರಿಗೆ ಪದಕ ಗೆದ್ದು ಸದ್ದು ಮಾಡಿದೆ. 25 ವರ್ಷದ ಕರ್ನಾಟಕದ ಕುವರಿ ಅದಿತಿ ಅಶೋಕ್(Aditi Ashok) ಮೊದಲ ಬಾರಿಗೆ ಏಷ್ಯನ್​ ಗೇಮ್ಸ್​ನಲ್ಲಿ (Asian Games 2023) ಗಾಲ್ಫ್ ಕೋರ್ಟ್​ನಲ್ಲಿ ಭಾರತಕ್ಕೆ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ Asian Games 2023: ಟ್ರ್ಯಾಪ್‌  ಶೂಟಿಂಗ್​ನಲ್ಲಿ ಚಿನ್ನ,ಬೆಳ್ಳಿ ಗೆದ್ದ ಭಾರತ

10000 ಮೀಟರ್ ಓಟದಲ್ಲಿ ಬೆಳ್ಳಿ, ಕಂಚು ಸಾಧನೆ

ಶನಿವಾರ ಭಾರತ ಅಥ್ಲೆಟಿಕ್ಸ್‌ನಲ್ಲಿ 2 ಪದಕಗಳನ್ನು ಗೆದ್ದುಕೊಂಡಿದೆ. ಪುರುಷರ 10000 ಮೀ. ಓಟದ ಸ್ಪರ್ಧೆಯಲ್ಲಿ ಕಾರ್ತಿಕ್(28 ನಿಮಿಷ 15.38 ಸೆಕೆಂಡ್‌) ಬೆಳ್ಳಿ ಗೆದ್ದರೇ, ಗುಲ್ವೀರ್ ಸಿಂಗ್ 28 ನಿಮಿಷ 17.21 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಕಂಚು ಗೆದ್ದರು. ಪುರುಷರ 400 ಮೀ. ಓಟದಲ್ಲಿ ಮುಹಮ್ಮದ್ ಅಜ್ಮಲ್ 45.97 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 5ನೇ ಸ್ಥಾನ ಪಡೆದರು.

ದಶಕದ ಬಳಿಕ ಸ್ಕ್ವಾಶ್‌ನಲ್ಲಿ ಚಿನ್ನ ಗೆದ್ದ ಭಾರತ

ಶನಿವಾರ ಭಾರತ ಪುರುಷರ ಸ್ಕ್ವ್ಯಾಶ್ ತಂಡ ಚಿನ್ನದ ಪದಕ ಗೆಲ್ಲುವ ಮೂಲಕ ದಶಕದ ಬಳಿಕ ಚಿನ್ನದ ಪದಕ ಗೆದ್ದ ಸಾಧನೆ ಮಾಡಿತ್ತು. ರೋಚಕ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 2-1 ಅಂತರದಲ್ಲಿ ಗೆದ್ದು ಚಿನ್ನಕ್ಕೆ ಕೊರಳೊಡ್ಡಿತ್ತು. ಮೊದಲ ಪಂದ್ಯದಲ್ಲಿ ಮಹೇಶ್ ಮಂಗಾಂವ್ಕರ್ ಸೋಲು ಕಂಡರೂ ಆ ಬಳಿಕದ ಭಾರತ ಪುಟಿದೆದ್ದು ಪಂದ್ಯದಲ್ಲಿ ಮೇಲುಗೈ ಸಾಧಿಸಿತು. ಭಾರತದ ಪುರುಷರ ತಂಡ 2014ರ ಏಷ್ಯಾಡ್‌ನಲ್ಲಿ ಕೊನೆ ಬಾರಿ ಚಿನ್ನದ ಪದಕ ಗೆದ್ದಿತ್ತು.

Exit mobile version