Site icon Vistara News

Asian Games 2023: ಡೇಂಜರಸ್‌ ನೇಪಾಳದ ಸವಾಲು ಗೆದ್ದೀತೇ ಭಾರತದ ಯುವ ಪಡೆ?

India vs Nepal, Quarter Final 1

ಹ್ಯಾಂಗ್‌ಝೌ: ಏಷ್ಯನ್​ ಗೇಮ್ಸ್​ನಲ್ಲಿ(Asian Games 2023) ಮಂಗೋಲಿಯಾ ವಿರುದ್ಧದ ಪಂದ್ಯದಲ್ಲಿ ಹಲವು ವಿಶ್ವ ದಾಖಲೆ ಬರೆದ ಡೇಂಜರಸ್ ನೇಪಾಳ ವಿರುದ್ಧ ಭಾರತ ಮೊದಲ ಕ್ವಾರ್ಟರ್​ ಫೈನಲ್​ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಮಂಗಳವಾರ ಇತ್ತಂಡಗಳ ನಡುವಣ ಮುಖಾಮುಖಿ ನಡೆಯಲಿದೆ.

ನೇಪಾಳಕ್ಕೆ ಬ್ಯಾಟಿಂಗ್ ಬಲ​

ಈಗ ತಾನೆ ಕ್ರಿಕೆಟ್​ ಅಂಗಳಕ್ಕೆ ಕಾಲಿಟ್ಟಿರುವ ಕ್ರಿಕೆಟ್​ ಶಿಸು ನೇಪಾಳ ತಂಡದ ಆಟಗಾರ ಪ್ರದರ್ಶನವನ್ನು ನೋಡುವಾಗ ಅನುಭವಿಗಳು ಕೂಡ ಇವರ ಮುಂದೆ ತಲೆಬಾಗುವಂತಿದೆ. ಇದಕ್ಕೆ ಕಳೆದ ಮಂಗೋಲಿಯಾ ವಿರುದ್ಧದ ಪಂದ್ಯವೇ ಉತ್ತಮ ನಿದರ್ಶನ. ಈ ಪಂದ್ಯದಲ್ಲಿ 19 ವರ್ಷದ ಎಡಗೈ ಬ್ಯಾಟರ್​ ಕುಶಾಲ್ ಮಲ್ಲ ಕೇವಲ 34 ಎಸೆತಗಳಲ್ಲಿ ಶತಕವನ್ನು ಸಿಡಿಸುವ ಮೂಲಕ ಡೇವಿಡ್‌ ಮಿಲ್ಲರ್‌,‌ ರೋಹಿತ್‌ ಶರ್ಮಾ ಅವರ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದ್ದಿದ್ದರು. ದೀಪೇಂದ್ರ ಸಿಂಗ್ ಐರೆ ವಿಸ್ಫೋಟ ಬ್ಯಾಟಿಂಗ್​ ನಡೆಸಿ ಕೇವಲ 9 ಎಸೆತಗಳಲ್ಲಿ ಅರ್ಧ ಶತಕವನ್ನು ಸಿಡಿಸಿ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದರು. ಅವರ ಈ ಆಕ್ರಮಣ ಆಟದ ವೇಳೆ 2007 ಟಿ20 ವಿಶ್ವಕಪ್​ನಲ್ಲಿ ಯುವರಾಜ್​ ಸಿಂಗ್​(12 ಎಸೆತಗಳಲ್ಲಿ ಅರ್ಧ ಶತಕ) ನಿರ್ಮಿಸಿದ್ದ ದಾಖಲೆಯೊಂದು ಪತನಗೊಂಡಿತ್ತು. ಭಾರತ ವಿರುದ್ಧದ ಪಂದ್ಯದಲ್ಲಿಯೂ ಉಭಯ ಆಟಗಾರರ ಮೇಲೆ ತಂಡ ಹೆಚ್ಚಿನ ನಿರೀಕ್ಚೆ ಇರಿಸಿದೆ.

ಇದನ್ನೂ ಓದಿ Asian Games 2023: ಟಿಟಿಯಲ್ಲಿ ಕಂಚು ಗೆದ್ದ ಐಹಿಕಾ-ಸುತೀರ್ಥ ಜೋಡಿ

ಭಾರತ ಸಮರ್ಥ ತಂಡ

ಐಪಿಎಲ್​ನಲ್ಲಿ ಹೊಡಿ ಬಡಿ ಆಟದ ಮೂಲಕ ಗಮನಸೆಳೆದ ಆಟಗಾರರೇ ಭಾತರ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ವಿಂಡೀಸ್​ ವಿರುದ್ಧದ ಟೆಸ್ಟ್​ ಮತ್ತು ಟಿ20 ಕ್ರಿಕೆಟ್​ ಸರಣಿಯಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ಯಶಸ್ವಿ ಜೈಸ್ವಾಲ್, ಐಪಿಎಲ್​ನ ಸಿಕ್ಸರ್​ ಕಿಂಗ್​ ರಿಂಕು ಸಿಂಗ್​, ತಿಲಕ್​ ವರ್ಮ, ಗೂಗ್ಲಿ ಸ್ಟಾರ್​ ರವಿ ಬಿಷ್ಣೋಯ್, ಯಾರ್ಕರ್​ ಸ್ಟಾರ್ ಅರ್ಷದೀಪ್ ಸಿಂಗ್​ ತಂಡದಲ್ಲಿರುವ ಪ್ರಮುಖ ಆಟಗಾರರು. ಇವರನ್ನೊಳಗೊಂಡ ತಂಡವನ್ನು ನೋಡುವಾಗ ಭಾರತವೇ ಪೇವರಿಟ್​​ ಎನ್ನಲಡ್ಡಿಯಿಲ್ಲ. ಆದರೆ ಪ್ರತಿ ಹೆಜ್ಜೆಯಲ್ಲಿ ಎಚ್ಚರ ಅಗತ್ಯ.

ಮಹಿಳೆಯರ ಸಾಧನೆಯೇ ಸ್ಫೂರ್ತಿಯಾಗಲಿ

ಭಾರತ ಪರುಷರ ತಂಡ ಇದುವರೆಗೆ ಏಷ್ಯನ್​ ಗೇಮ್ಸ್​ನಲ್ಲಿ ಕ್ರಿಕೆಟ್​ ಆಡಿಲ್ಲ. ಮಹಿಳಾ ತಂಡವೂ ಆಡಿರಲಿಲ್ಲ. ಆದರೆ ಮಹಿಳಾ ತಂಡ ಚೊಚ್ಚಲ ಪ್ರಯತ್ನದಲ್ಲೇ ಗೆದ್ದು ಐತಿಹಾಸಿಕ ಚಿನ್ನದ ಪದಕ ಗೆದ್ದ ಸಾಧನೆ ಮಾಡಿತ್ತು. ಇದನ್ನೇ ಸ್ಫೂರ್ತಿಯಾಗಿರಿಸಿ ಪರುಷರ ತಂಡವೂ ಕಣಕ್ಕಿಳಿಯಬೇಕಿದೆ.

ಸಂಭಾವ್ಯ ತಂಡ

ಭಾರತ: ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿ.ಕೀ), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಶ್​ದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ದುಬೆ.

ನೇಪಾಳ: ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್​ ಕೀಪರ್​), ರೋಹಿತ್ ಪೌಡೆಲ್ (ನಾಯಕ), ಭೀಮ್ ಶರ್ಕಿ, ಸೋಂಪಾಲ್ ಕಮಿ, ಗುಲ್ಸನ್ ಝಾ, ದೀಪೇಂದ್ರ ಸಿಂಗ್ ಐರಿ, ಕುಶಾಲ್ ಮಲ್ಲಾ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಲಲಿತ್ ರಾಜಬನ್ಶಿ.ಲ.

Exit mobile version