Site icon Vistara News

Asian Games 2023: ಗಾಲ್ಫ್‌ನಲ್ಲಿ ಐತಿಹಾಸಿಕ ಪದಕ ಗೆದ್ದ ಕರುನಾಡ ಕುವರಿ ಅದಿತಿ ಅಶೋಕ್‌

Aditi Ashok

ಹ್ಯಾಂಗ್‌ಝೌ: ಶ್ರೀಮಂತರ ಕ್ರೀಡೆ ಎಂದೇ ಹೆಸರಾದ ಗಾಲ್ಫ್ ನಲ್ಲಿ ಭಾರತ ಇದೇ ಮೊದಲ ಬಾರಿಗೆ ಪದಕ ಗೆದ್ದು ಸದ್ದು ಮಾಡಿದೆ. 25 ವರ್ಷದ ಕರ್ನಾಟಕದ ಕುವರಿ ಅದಿತಿ ಅಶೋಕ್(Aditi Ashok) ಮೊದಲ ಬಾರಿಗೆ ಏಷ್ಯನ್​ ಗೇಮ್ಸ್​ನಲ್ಲಿ (Asian Games 2023) ಗಾಲ್ಫ್ ಕೋರ್ಟ್​ನಲ್ಲಿ ಭಾರತಕ್ಕೆ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಮೂರನೇ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದ ಅದಿತಿ ಅಶೋಕ್‌ ಇಂದು ನಡೆದ ಅಂತಿಮ ಸುತ್ತಿನಲ್ಲಿ 267 ಅಂಕ ಪಡೆದು ಬೆಳ್ಳಿ ಪದಕ ಜಯಿಸಿದರು. ಇದು ಗಾಲ್ಫ್ ನಲ್ಲಿ ಭಾರತದಕ್ಕೆ ಒಲಿದ ಮೊದಲ ಪದಕವಾಗಿದೆ. 2 ಅಂಕದ ಹಿನ್ನಡೆಯಿಂದ ಚಿನ್ನದ ಪದಕ ಕೈತಪ್ಪಿತು. ಥಾಯ್ಲೆಂಡ್​ನ ಅರ್ಪಿಚಯಾ ಯುಬೊಲ್​ಗೆ ಚಿನ್ನ ಒಲಿಯಿತು.

ಶನಿವಾರ ನಡೆದ ಮೂರನೇ ಸುತ್ತಿನ ಸ್ಪರ್ಧೆಯಲ್ಲಿ ಅದಿತಿ ಕೇವಲ 61 ಅವಕಾಶಗಳನ್ನು (11 ಅಂಡರ್‌) ತೆಗೆದುಕೊಂಡರು. ಮೂರು ಸುತ್ತುಗಳ ಬಳಿಕ 194 ಸ್ಕೋರ್‌ (22 ಅಂಡರ್‌) ಹೊಂದಿದ್ದರು. ಅರ್ಪಿಚಯಾ ಯುಬೊಲ್ (201) ಮತ್ತು ಚೀನಾದ ಲಿನ್ ಕ್ಸಿಯು (202) ಅವರು ಬಳಿಕದ ಸ್ಥಾನದಲ್ಲಿದ್ದರು.

ಇದನ್ನೂ ಓದಿ Asian Games 2023: ಮಿಕ್ಸೆಡ್‌ ಡಬಲ್ಸ್​ನಲ್ಲಿ ಚಿನ್ನ ಗೆದ್ದ ಬೋಪಣ್ಣ-ರುತುಜಾ ಜೋಡಿ

ಪಾಕ್​ ಮಣಿಸಿ ಚಿನ್ನ ಗೆದ್ದ ಸ್ಕ್ವಾಷ್ ತಂಡ

ಪುರುಷರ ಸ್ಕ್ವಾಷ್ ನಲ್ಲಿ ಭಾರತದ ಕ್ರೀಡಾಪಟುಗಳು ಬಂಗಾರದ ಪದಕ ಗೆದ್ಧ ಸಾಧನೆ ಮಾಡಿದ್ದಾರೆ. ಐದು ಸೆಟ್ ಗಳ ಥ್ರಿಲ್ಲರ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿತು. ಮೂರು ಬೆಸ್ಟ್ ಆಫ್ ಥ್ರೀ ಫೈನಲ್ ಸ್ಪರ್ಧೆಯಲ್ಲಿ ಭಾರತ 2-1 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ಚಿನ್ನವನ್ನು ತನ್ನದಾಗಿಸಿಕೊಂಡಿತು.

ಗಾಯಗೊಂಡ ಮೀರಾಬಾಯಿ

ಒಲಿಂಪಿಕ್​ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಅವರ ಏಷ್ಯನ್​ ಗೇಮ್ಸ್​ ಅಭಿಯಾನ ದುರಂತದಲ್ಲಿ ಕೊನೆಗೊಂಡಿದೆ. ಶನಿವಾರ ನಡೆದ 49 ಕೆಜಿ ವಿಭಾಗದ ವೇಟ್‌ಲೀಪ್ಟಿಂಗ್‌ ಸ್ಪರ್ಧೆಯ ವೇಳೆ ಜಾರಿಬಿದ್ದ ಅವರು ಕಂಚಿನ ಪದಕದಿಂದ ವಂಚಿತರಾದರು. ಸ್ನ್ಯಾಚ್‌ನಲ್ಲಿ ವಿಫಲವಾದ ಅವರು ಕ್ಲೀನ್‌ ಆ್ಯಂಡ್​ ಜರ್ಕ್‌ನಲ್ಲಿ ಈ ವೈಫ‌ಲ್ಯ ವನ್ನು ಹೊಡೆದೋಡಿಸುವ ಯೋಜನೆಯಲ್ಲಿದ್ದರು. ಹೀಗಾಗಿ 117 ಕೆಜಿ ಗುರಿ ಇವರ ಮುಂದಿತ್ತು. ಇಲ್ಲಿ ಕೊನೆಯ ಪ್ರಯತ್ನ ಮಾಡುವಾಗ ಜಾರಿ ಬಿದ್ದು ಗಾಯಗೊಂಡರು. ಕೊನೆಗೆ ಅವರು ಕೋಚಿಂಗ್‌ ಸಿಬಂದಿ ನೆರವಿನಿಂದ ತೆರಳಿದರು.

Exit mobile version