Site icon Vistara News

Asian Games 2023: ಅಥ್ಲೀಟ್‌ಗಳನ್ನು ಅಭಿನಂದಿಸುವ ಭರದಲ್ಲಿ ಆಶಾ ಭೋಂಸ್ಲೆ,ಗಂಭೀರ್, ಲಕ್ಷ್ಮಣ್ ಭಾರಿ ಎಡವಟ್ಟು

Jyothi Yarraji

ಮುಂಬಯಿ: ಕೊರೊನಾ ಮಹಾ ಮಾರಿಯಿಂದಾಗಿ ಕಳೆದ ಬಾರಿ ರದ್ದುಗೊಂಡಿದ್ದ 19ನೇ ಏಷ್ಯನ್‌ ಗೇಮ್ಸ್‌(Asian Games 2023) ಕ್ರೀಡಾಕೂಟ ಸದ್ಯ ಚೀನಾದ ಹ್ಯಾಂಗ್‌ಝೂನಲ್ಲಿ ನಡೆಯುತ್ತಿದೆ. ಇಲ್ಲಿ ಭಾರತದ ಕ್ರೀಡಾಪಟುಗಳು ಪದಕ ಗೆಲ್ಲುತ್ತಾ ಅಮೋಘ ಸಾಧನೆಯನ್ನು ತೋರುತ್ತಿದ್ದಾರೆ. ಆದರೆ ಭಾರತೀಯ ಚಿತ್ರರಂಗದ ಜನಪ್ರಿಯ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ,(Asha Bhosle) ಮಾಜಿ ಕ್ರಿಕೆಟಿಗರಾದ ಗೌತಮ್​ ಗಂಭೀರ್(Gautam Gambhir)​ ಮತ್ತು ವಿವಿಎಸ್​ ಲಕ್ಷ್ಮಣ್(VVS Laxman) ಸಾಧನೆ ಮಾಡಿದ ಭಾರತದ ಅಥ್ಲೀಟ್‌ಗಳಿಗೆ ಅಭಿನಂದನೆ ಸಲ್ಲಿಸುವ ಭರದಲ್ಲಿ ಎಡವಟ್ಟೊಂದನ್ನು ಮಾಡಿದ್ದಾರೆ. ಇದು ಈಗ ಭಾರಿ ಟ್ರೋಲ್​ ಆಗಿದೆ.

100 ಮೀಟರ್ ಹರ್ಡಲರ್ ಜ್ಯೋತಿ ಯರ್ರಾಜಿ ಅವರು ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ ಎಂದು ಅವರ ಫೋಟೊವನ್ನು ಅವರ ಸಾಧನೆಯನ್ನು ಕೊಂಡಾಡುವ ಜತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಚ್ಚರಿ ಎಂದರೆ ಜ್ಯೋತಿ ಯರ್ರಾಜಿ(Jyothi Yarraji) ಅವರ ಸ್ಪರ್ಧೆ ಇರುವುದು ಸೆಪ್ಟೆಂಬರ್​ 30ರಂದು. ಇದಕ್ಕೂ ಮುನ್ನ ಅವರು ಹೇಗೆ ಪ್ರಶಸ್ತಿ ಗೆಲ್ಲಲು ಸಾಧ್ಯ ಎಂದು ನೆಟ್ಟಿಗರು ಆಶಾ ಭೋಂಸ್ಲೆ, ಗೌತಮ್​ ಗಂಭೀರ್​ ಮತ್ತು ವಿವಿಎಸ್​ ಲಕ್ಷ್ಮಣ್ ಅವರ ಟ್ವೀಟನ್ನು ಟ್ರೋಲ್​ ಮಾಡಿದ್ದಾರೆ.

22 ವರ್ಷದ ಆಂಧ್ರದ ಅಥ್ಲೀಟ್ ಜ್ಯೋತಿ ಯರ್ರಾಜಿ ಕಳೆದ ಜುಲೈನಲ್ಲಿ ಜ್ಯೋತಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ವಿಡಿಯೊ ಮತ್ತು ಫೋಟೊ ಇದಾದಗಿದೆ. ಇದನ್ನೇ ತಪ್ಪಾಗಿ ತಿಳಿದು ಈ ಬಾರಿ ಚಿನ್ನದ ಪದಕ ಗೆದ್ದರೆಂದರು ಅವಸರದಲ್ಲಿ ಟ್ವೀಟ್​ ಮಾಡಿ ಇದೀಗ ಮುಚುಗರಕ್ಕೆ ಒಳಗಾಗಿದ್ದಾರೆ.

2020ರಲ್ಲಿ, ಕರ್ನಾಟಕದ ಮೂಡುಬಿದಿರೆಯಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜ್ಯೋತಿ 13.03 ಸೆಕೆಂಡುಗಳಲ್ಲಿ ಬಿಸ್ವಾಲ್ ಅವರ ರಾಷ್ಟ್ರೀಯ ದಾಖಲೆಯ ಸಮಯವನ್ನು ಮೀರಿದ್ದರು. ಆದರೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿಯು ಆಕೆಯನ್ನು ಪರೀಕ್ಷಿಸದ ಕಾರಣ ಅದನ್ನು ರಾಷ್ಟ್ರೀಯ ದಾಖಲೆ ಎಂದು ಪರಿಗಣಿಸಿರಲಿಲ್ಲ. ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದಿಂದ ಯಾವುದೇ ತಾಂತ್ರಿಕ ಪ್ರತಿನಿಧಿ ಅಲ್ಲಿ ಇರದಿದ್ದುದು ಇದಕ್ಕೆ ಕಾರಣವಾಗಿತ್ತು.

ರಾಷ್ಟ್ರೀಯ ದಾಖಲೆಯನ್ನು ಪರಿಗಣಿಸಲಾಗದ ಒಂದು ತಿಂಗಳ ನಂತರ, 100 ಮೀಟರ್ ಹರ್ಡಲರ್ ಜ್ಯೋತಿ ಯರ್ರಾಜಿ ಸೈಪ್ರಸ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 13.23 ಸೆಕೆಂಡ್‌ಗಳಲ್ಲಿ ಜಯಗಳಿಸಿ ದಾಖಲೆ ಬರೆದಿದ್ದರು. ಲಿಮಾಸೋಲ್‌ನಲ್ಲಿ ನಡೆದ ಸೈಪ್ರಸ್ ಇಂಟರ್ನ್ಯಾಷನಲ್ ಮೀಟ್‌ನಲ್ಲಿ ಚಿನ್ನ ಗೆದ್ದು ರಾಷ್ಟ್ರೀಯ ದಾಖಲೆ ಬರೆದಿದ್ದರು.

Exit mobile version