ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್ನಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಪದಕಗಳ ಶತವನ್ನು ಬಾರಿಸಿದೆ. ಈ ಮೂಲಕ ಭಾರತ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಅತ್ಯಧಿಕ ಪದಕ ಗೆದ್ದ ಚಾರಿತ್ರಿಕ ದಾಖಲೆಯೊಂದನ್ನು ನಿರ್ಮಿಸಿದೆ. 14ನೇ ದಿನವಾದ ಶನಿವಾರ ಭಾರತ ಒಂದು ಗಂಟೆಯ ಅಂತರದಲ್ಲಿ ಮೂರು ಚಿನ್ನದ ಪದಕ ಜಯಿಸಿದೆ. ಮಹಿಳಾ ಕಬಡ್ಡಿ ತಂಡ ಚಿನ್ನ ಗೆಲ್ಲುವ ಮೂಲಕ ಭಾರತ ನೂರನೇ ಪದಕವನ್ನು ಪೂರ್ತಿಗೊಳಿಸಿತು.
ಚಿನ್ನ ಗೆದ್ದ ಮಹಿಳಾ ಕಬಡ್ಡಿ ತಂಡ
ಅತ್ಯಂತ ರೋಚಕವಾಗಿ ನಡೆದ ಮಹಿಳಾ ಕಬಡ್ಡಿ ಫೈನಲ್ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿತು. ಕೊನೆಯ ಕ್ಷಣದ ವರೆಗೂ ಈ ಪಂದ್ಯ ರೋಚಕತೆ ಸೃಷ್ಟಿಸಿತು. ಆದರೆ ಅದೃಷ್ಟ ಭಾರತಕ್ಕೆ ಒಲಿಯಿತು. ಕೇವಲ ಒಂದು ಅಂಕದ ಅಂತರದಲ್ಲಿ ಭಾರತ ವನಿತೆಯರು ಗೆದ್ದು ಬೀಗಿದರು. ಗೆಲುವಿನ ಅಂತರ 26-25. ಈ ಪದಕ ಒಲಿದ ತಕ್ಷಣ ಭಾರತ ಪದಕದ ಶತಕವನ್ನು ಬಾರಿಸಿತು.
AND THAT IS MEDAL #100 FOR 🇮🇳!!!
— SAI Media (@Media_SAI) October 7, 2023
HISTORY IS MADE AS INDIA GETS ITS 100 MEDAL AT THE ASIAN GAMES 2022!
This is a testament to the power of dreams, dedication, and teamwork of our athletes involved in the achievement of #TEAMINDIA!
Let this achievement inspire generations to… pic.twitter.com/EuBQpvvVQ3
ಆರ್ಚರಿಯಲ್ಲಿ ಚಿನ್ನ
ಇದಕ್ಕೂ ಮುನ್ನ ನಡೆದ ಪುರುಷರ ಕಾಂಪೌಂಡ್ ಸ್ಪರ್ಧೆಯಲ್ಲಿ ಓಜಸ್ ಪ್ರವೀಣ್ ಅವರು ತಮ್ಮದೇ ದೇಶದ ಅಭಿಷೇಕ್ ವರ್ಮಾ ಅವರನ್ನು ಸೋಲಿಸಿ ಚಿನ್ನ ಗೆದ್ದರು. ಸೋಲು ಕಂಡ ಅಭಿಷೇಕ್ ಬೆಳ್ಳಿ ಗೆದ್ದರು. ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಸ್ಪರ್ಧೆಯಲ್ಲಿ ಜ್ಯೋತಿ ಸುರೇಖಾ ಚಿನ್ನ, ಅದಿತಿ ಸ್ವಾಮಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಭಾರತ ಪುರುಷರ ಕ್ರಿಕೆಟ್ ತಂಡ ಮತ್ತು ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಚಿನ್ನದ ಪದಕಕ್ಕಾಗಿ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ Asian Games Men’s T20: ಆಫ್ಘನ್ ಸೊಕ್ಕು ಮುರಿದು ಐತಿಹಾಸಿಕ ಚಿನ್ನ ಗೆಲ್ಲಲಿ ಗಾಯಕ್ವಾಡ್ ಪಡೆ
ಓಜಸ್ ಫೈನಲ್ ಪಂದ್ಯದಲ್ಲಿ 148-147 ಅಂಕಗಳ ಅಂತರದಿಂದ ಭಾರತದ ಸ್ಪರ್ಧಿ ಅಭಿಷೇಕ್ ವರ್ಮಾ ಅವರನ್ನು ಸೋಲಿಸಿ ಚಿನ್ನ ಗೆದ್ದರು. ಮಹಿಳಾ ವಿಭಾಗದಲ್ಲಿ ಭಾರತದ ಅದಿತಿ ಗೋಪಿಚಂದ್ ಸ್ವಾಮಿ ವೈಯಕ್ತಿಕ ಕಾಂಪೌಂಡ್ ಸ್ಪರ್ಧೆಯಲ್ಲಿ ಇಂಡೋನೇಷ್ಯಾದ ರೈತ್ ಫಡ್ಲಿ ಅವರನ್ನು 146-140 ಅಂಕಗಳಿಂದ ಮಣಿಸಿ ಕಂಚು ಗೆದ್ದರು.
ಈ ಹಿಂದೆ 2018ರಲ್ಲಿ ಭಾರತ 70 ಪದಕಗಳನ್ನು ಜಯಿಸಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಆದರೆ ಈ ಬಾರಿ 100 ಪದಕ ಗೆದ್ದು ಐತೊಹಾಸಿಕ ಸಾಧನೆ ಮಾಡಿದೆ. ಮುಂದಿನ ವರ್ಷ ಪ್ಯಾರಿಸ್ ಒಲಿಂಪಿಕ್ಸ್ಗೂ ಮುನ್ನ ಭಾರತೀಯರ ಈ ಸಾಧನೆ ಕ್ರೀಡಾ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮೂಡಿಸಿದೆ.