Site icon Vistara News

Athiya Shetty Rahul Wedding : ಮದುವೆ ವೇಳೆ ಕರ್ನಾಟಕದ ಕರಾವಳಿಯ ಸಂಪ್ರದಾಯ ಪಾಲಿಸಿದ್ದ ಅಥಿಯಾ ಶೆಟ್ಟಿ, ರಾಹುಲ್​

athiya shetty

ಬೆಂಗಳೂರು : ಭಾರತ ತಂಡದ ಆರಂಭಿಕ ಬ್ಯಾಟರ್​ ಕೆ. ಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿಯ ಪುತ್ರಿ ಅಥಿಯಾ ಶೆಟ್ಟಿಯ ವಿವಾಹ ಸಮಾರಂಭ (Athiya Shetty Rahul Wedding) ಜನವರಿ 23ರಂದು ನಡೆದಿದೆ. ಮಹಾರಾಷ್ಟ್ರದ ಖಂಡಾಲದಲ್ಲಿರುವ ಸುನೀಲ್ ಶೆಟ್ಟಿಯ ಫಾರ್ಮ್​ ಹೌಸ್​ನಲ್ಲಿ ಮದುವೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಆಪ್ತರು ಹಾಗೂ ಆತ್ಮೀಯ ಬಂಧುಗಳ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆಗೇರಿದೆ. ಇದೀಗ ವಧು ಅಥಿಯಾ ಶೆಟ್ಟಿ ತಮ್ಮ ಮದುವೆಯ ಹಲವಾರು ಚಿತ್ರಗಳನ್ನು ಇನ್​ಸ್ಟಾಗ್ರಾಮ್​ ಮೂಲಕ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಜನವರಿ 27ರಂದು ಅರಶಿನ ಶಾಸ್ತ್ರದ ಚಿತ್ರಗಳನ್ನು ಪೋಸ್ಟ್​ ಮಾಡಿದ್ದ ಅಥಿಯಾ ಇದೀಗ ಮದುವೆಯ ಶಾಸ್ತ್ರದ ಚಿತ್ರಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಫೋಟೊಗಳೆಲ್ಲವೂ ಸ್ಟಾರ್​ ಜೋಡಿಯ ಮದುವೆ ಕರ್ನಾಟಕದ ಕರಾವಳಿಯ (Coastal culture) ಸಂಪ್ರದಾಯದಂತೆ ನಡೆದಿದೆ ಎಂಬುದನ್ನು ಹೇಳುತ್ತಿವೆ.

ಬಾಲಿವುಡ್​ ನಟ ಸುನೀಲ್​ ಶೆಟ್ಟಿ ದಕ್ಷಿಣ ಕನ್ನಡದವರು. ಅವರು ಬಂಟ ಸಮುದಾಯಕ್ಕೆ ಸೇರಿದವರು ಕೂಡ. ಹೀಗಾಗಿ ಮದುವೆ ಕಾರ್ಯಕ್ರಮವನ್ನು ತಮ್ಮ ಸಂಪ್ರದಾಯದಂತೆ ನಡೆಸಿಕೊಟ್ಟಿದ್ದಾರೆ. ಕೆ ಎಲ್​ ರಾಹುಲ್ ಪೋಷಕರು ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿದ್ದಾರೆ. ರಾಹುಲ್​ ಕೂಡ ಬಾಲ್ಯವನ್ನು ಅಲ್ಲೇ ಕಳೆದವರು. ಹೀಗಾಗಿ ಎರಡೂ ಕುಟುಂಬಕ್ಕೆ ಅಲ್ಲಿನ ಸಂಪ್ರದಾಯ ಹಾಗೂ ಸಂಸ್ಕೃತಿ ಬಗ್ಗೆ ಅರಿವು ಇದೆ. ಹೀಗಾಗಿ ತಮ್ಮ ನೆಚ್ಚಿನ ಹಾಗೂ ವಿಶೇಷ ಸಂಪ್ರದಾಯವನ್ನು ಮದುವೆ ವೇಳೆ ಅನುಸರಿಸಿದ್ದಾರೆ.

ಚಿತ್ರದಲ್ಲಿ ಅಥಿಯಾ ಶೆಟ್ಟಿಗೆ ತಾಯಿ ಆಶೀರ್ವಾದ ಮಾಡುತ್ತಿರುವುದು, ಎಲೆ ಅಡಿಕೆಯ ಗೌರವ, ಆರತಿ ಎತ್ತುವ ಪದ್ಧತಿ ಸೇರಿದಂತೆ ಹಲವು ಸಂಪ್ರದಾಯಗಳನ್ನು ಆಚರಿಸಲಾಗಿದೆ.

ನಿಮ್ಮ ಆಸರೆಯಲ್ಲಿ ನಾನು ಪ್ರೀತಿಸುವುದು ಹೇಗೆ ಎಂಬುದನ್ನು ಕಲಿತೆ. ಇಂದು ನಾನು ನನ್ನ ಅತ್ಯಂತ ಪ್ರೀತಿ ಪಾತ್ರರ ಜತೆ ಮದುವೆಯಾಗುತ್ತಿದ್ದೇನೆ ಹಾಗೂ ಇದು ನನಗೆ ಅತ್ಯಂತ ಖುಷಿಯ ವಿಚಾರ. ಖುಷಿ ಹಾಗೂ ಸಂತಸದಲ್ಲಿರುವ ನಾನು ನಿಮ್ಮೆಲ್ಲರ ಆಶೀರ್ವಾದ ಬೇಡುತ್ತಿದ್ದೇನೆ ಎಂದು ಅಥಿಯಾ ಶೆಟ್ಟಿ ಮದುವೆ ದಿನ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದರು.

Exit mobile version