Athiya Shetty Rahul Wedding : ಮದುವೆ ವೇಳೆ ಕರ್ನಾಟಕದ ಕರಾವಳಿಯ ಸಂಪ್ರದಾಯ ಪಾಲಿಸಿದ್ದ ಅಥಿಯಾ ಶೆಟ್ಟಿ, ರಾಹುಲ್​ - Vistara News

ಕ್ರಿಕೆಟ್

Athiya Shetty Rahul Wedding : ಮದುವೆ ವೇಳೆ ಕರ್ನಾಟಕದ ಕರಾವಳಿಯ ಸಂಪ್ರದಾಯ ಪಾಲಿಸಿದ್ದ ಅಥಿಯಾ ಶೆಟ್ಟಿ, ರಾಹುಲ್​

ಕೆ. ಎಲ್​ ರಾಹುಲ್​ ಮತ್ತು ಅಥಿಯಾ ಶೆಟ್ಟಿ ಮದುವೆ ವೇಳೆ (Athiya Shetty Rahul Wedding) ಕರಾವಳಿಯ ಬಂಟರ ಶಾಸ್ತ್ರಗಳನ್ನು ಅನುಸರಿಸಲಾಗಿತ್ತು ಎಂಬುದನ್ನು ಅಥಿಯಾ ಪೋಸ್ಟ್​ ಮಾಡಿರುವ ಚಿತ್ರಗಳೇ ಸಾಕ್ಷಿ.

VISTARANEWS.COM


on

athiya shetty
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಭಾರತ ತಂಡದ ಆರಂಭಿಕ ಬ್ಯಾಟರ್​ ಕೆ. ಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿಯ ಪುತ್ರಿ ಅಥಿಯಾ ಶೆಟ್ಟಿಯ ವಿವಾಹ ಸಮಾರಂಭ (Athiya Shetty Rahul Wedding) ಜನವರಿ 23ರಂದು ನಡೆದಿದೆ. ಮಹಾರಾಷ್ಟ್ರದ ಖಂಡಾಲದಲ್ಲಿರುವ ಸುನೀಲ್ ಶೆಟ್ಟಿಯ ಫಾರ್ಮ್​ ಹೌಸ್​ನಲ್ಲಿ ಮದುವೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಆಪ್ತರು ಹಾಗೂ ಆತ್ಮೀಯ ಬಂಧುಗಳ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆಗೇರಿದೆ. ಇದೀಗ ವಧು ಅಥಿಯಾ ಶೆಟ್ಟಿ ತಮ್ಮ ಮದುವೆಯ ಹಲವಾರು ಚಿತ್ರಗಳನ್ನು ಇನ್​ಸ್ಟಾಗ್ರಾಮ್​ ಮೂಲಕ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಜನವರಿ 27ರಂದು ಅರಶಿನ ಶಾಸ್ತ್ರದ ಚಿತ್ರಗಳನ್ನು ಪೋಸ್ಟ್​ ಮಾಡಿದ್ದ ಅಥಿಯಾ ಇದೀಗ ಮದುವೆಯ ಶಾಸ್ತ್ರದ ಚಿತ್ರಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಫೋಟೊಗಳೆಲ್ಲವೂ ಸ್ಟಾರ್​ ಜೋಡಿಯ ಮದುವೆ ಕರ್ನಾಟಕದ ಕರಾವಳಿಯ (Coastal culture) ಸಂಪ್ರದಾಯದಂತೆ ನಡೆದಿದೆ ಎಂಬುದನ್ನು ಹೇಳುತ್ತಿವೆ.

ಬಾಲಿವುಡ್​ ನಟ ಸುನೀಲ್​ ಶೆಟ್ಟಿ ದಕ್ಷಿಣ ಕನ್ನಡದವರು. ಅವರು ಬಂಟ ಸಮುದಾಯಕ್ಕೆ ಸೇರಿದವರು ಕೂಡ. ಹೀಗಾಗಿ ಮದುವೆ ಕಾರ್ಯಕ್ರಮವನ್ನು ತಮ್ಮ ಸಂಪ್ರದಾಯದಂತೆ ನಡೆಸಿಕೊಟ್ಟಿದ್ದಾರೆ. ಕೆ ಎಲ್​ ರಾಹುಲ್ ಪೋಷಕರು ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿದ್ದಾರೆ. ರಾಹುಲ್​ ಕೂಡ ಬಾಲ್ಯವನ್ನು ಅಲ್ಲೇ ಕಳೆದವರು. ಹೀಗಾಗಿ ಎರಡೂ ಕುಟುಂಬಕ್ಕೆ ಅಲ್ಲಿನ ಸಂಪ್ರದಾಯ ಹಾಗೂ ಸಂಸ್ಕೃತಿ ಬಗ್ಗೆ ಅರಿವು ಇದೆ. ಹೀಗಾಗಿ ತಮ್ಮ ನೆಚ್ಚಿನ ಹಾಗೂ ವಿಶೇಷ ಸಂಪ್ರದಾಯವನ್ನು ಮದುವೆ ವೇಳೆ ಅನುಸರಿಸಿದ್ದಾರೆ.

ಚಿತ್ರದಲ್ಲಿ ಅಥಿಯಾ ಶೆಟ್ಟಿಗೆ ತಾಯಿ ಆಶೀರ್ವಾದ ಮಾಡುತ್ತಿರುವುದು, ಎಲೆ ಅಡಿಕೆಯ ಗೌರವ, ಆರತಿ ಎತ್ತುವ ಪದ್ಧತಿ ಸೇರಿದಂತೆ ಹಲವು ಸಂಪ್ರದಾಯಗಳನ್ನು ಆಚರಿಸಲಾಗಿದೆ.

ನಿಮ್ಮ ಆಸರೆಯಲ್ಲಿ ನಾನು ಪ್ರೀತಿಸುವುದು ಹೇಗೆ ಎಂಬುದನ್ನು ಕಲಿತೆ. ಇಂದು ನಾನು ನನ್ನ ಅತ್ಯಂತ ಪ್ರೀತಿ ಪಾತ್ರರ ಜತೆ ಮದುವೆಯಾಗುತ್ತಿದ್ದೇನೆ ಹಾಗೂ ಇದು ನನಗೆ ಅತ್ಯಂತ ಖುಷಿಯ ವಿಚಾರ. ಖುಷಿ ಹಾಗೂ ಸಂತಸದಲ್ಲಿರುವ ನಾನು ನಿಮ್ಮೆಲ್ಲರ ಆಶೀರ್ವಾದ ಬೇಡುತ್ತಿದ್ದೇನೆ ಎಂದು ಅಥಿಯಾ ಶೆಟ್ಟಿ ಮದುವೆ ದಿನ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Rashid Khan: ರನ್​ ಓಡದ ಸಿಟ್ಟಿನಲ್ಲಿ ಸಹ ಆಟಗಾರನ್ನತ್ತ ಬ್ಯಾಟ್​ ಎಸೆದ ರಶೀದ್​ ಖಾನ್​; ವಿಡಿಯೊ ವೈರಲ್​

Rashid Khan: ಐತಿಹಾಸಿಕ ಗೆಲುವಿನೊಂದಿಗೆ ಸೆಮಿ ಫೈನಲ್​ ಪ್ರವೇಶಿಸಿರುವ ಅಫಘಾನಿಸ್ತಾನ ಜೂನ್​ 26ರಂದು ನಡೆಯುವ ಸೆಮಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿವೆ.

VISTARANEWS.COM


on

Rashid Khan
Koo

ಕಿಂಗ್‌ಸ್ಟೌನ್ (ಸೇಂಟ್ ವಿನ್ಸೆಂಟ್): ಬಾಂಗ್ಲಾದೇಶವನ್ನು(Afghanistan vs Bangladesh) ಮಣಿಸಿ ಮೊದಲ ಬಾರಿಗೆ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಸೆಮಿಫೈನಲ್​ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದ ಅಫಘಾನಿಸ್ತಾನ ತಂಡದ ಆಟಗಾರರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಆದರೆ, ಈ ಪಂದ್ಯದಲ್ಲಿ ಆಫ್ಘನ್​ ನಾಯಕ ರಶೀದ್​ ಖಾನ್(Rashid Khan)​ ಅವರು ತಾಳ್ಮೆ ಕಳೆದುಕೊಂಡು ಸಹ ಆಟಗಾರನತ್ತ ಬ್ಯಾಟ್​(Rashid Khan throws bat) ಎಸೆದ ವಿಡಿಯೊವೊಂದು ವೈರಲ್(viral video)​ ಆಗಿದೆ. ಈ ವಿಡಿಯೊವನ್ನು ಸ್ವತಃ ಐಸಿಸಿ ಕೂಡ ತನ್ನ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದೆ.

ಅಫಘಾನಿಸ್ತಾನದ ಬ್ಯಾಟಿಂಗ್​ ಇನಿಂಗ್ಸ್​ನ 19ನೇ ಓವರ್​ನಲ್ಲಿ ಈ ಘಟನೆ ನಡೆದಿದೆ. ಮೊದಲು ಬ್ಯಾಟಿಂಗ್​ ನಡೆಸಿದ ಅಫಘಾನಿಸ್ತಾನ ಪರ ಆರಂಭಿಕ ಆಟಗಾರ ರೆಹಮಾನುಲ್ಲಾ ಗುರ್ಬಾಜ್‌(43) ಬಳಿಕ ತಂಡಕ್ಕೆ ಆಸರೆಯಾದದ್ದು 7ನೇ ಕ್ರಮಾಂಕದಲ್ಲಿ ಆಡಲಿಳಿದ ರಶೀದ್ ಖಾನ್​ ಮಾತ್ರ. 10 ಎಸೆತಗಳಲ್ಲಿ ಮೂರು ಸಿಕ್ಸರ್​ ಬಾರಿಸಿ ಅಜೇಯ 19 ರನ್​ ಗಳಿಸಿದ ಪರಿಣಾಮ ತಂಡ 100ರ ಗಡಿ ದಾಟಿತು.

ಇದನ್ನೂ ಓದಿ AFG vs BAN: ‘ನಿಧಾನವಾಗಿ ಆಡಿ, ಮಳೆ ಬರುತ್ತೆ’; ಆಫ್ಘನ್​ ಆಟಗಾರರಿಗೆ ಸಲಹೆ ನೀಡಿದ ಕೋಚ್​; ವಿಡಿಯೊ ವೈರಲ್​

19ನೇ ಓವರ್​ನ ಮೂರನೇ ಎಸೆತದಲ್ಲಿ ರಶೀದ್​ ಅವರು ಹೆಲಿಕಾಪ್ಟರ್​ ಹೊಡೆತದ ಮೂಲಕ ಸಿಕ್ಸರ್​ ಬಾರಿಸಲು ಯತ್ನಿಸಿದರು.​ ಆದರೆ, ಈ ಹೊಡೆತ ಅಷ್ಟು ಪರಿಪೂರ್ಣವಾಗದ ಕಾರಣ ಚೆಂಡು ಮೈದಾನದ ಮಧ್ಯ ಭಾಗದಲ್ಲೇ ಬಿದ್ದಿತು. ಕ್ಯಾಚ್​ ಹಿಡಿಯಲು ಬಂದ ಮೊಹಮ್ಮದುಲ್ಲ ಅವರು ಫೀಲ್ಡಿಂಗ್​ ಮಿಸ್​ ಮಾಡಿದರು. ಈ ವೇಳೆ ರಶೀದ್​ 2 ರನ್​ ಓಡಲು ಯತ್ನಿಸಿ ಅರ್ಧ ಪಿಚ್​ ತನಕ ಬಂದರೂ ಕೂಡ ಮತ್ತೊಂದು ತುದಿಯಲ್ಲಿದ್ದ ಕರೀಂ ಜನ್ನತ್​ ರನ್​ ಓಡಲು ನಿರಾಕರಿಸಿದರು. ಚಿತ್ತ ನೆಚ್ಚತಿಗೇರಿದ ರಶೀದ್​ ತನ್ನ ಬ್ಯಾಟನ್​ ಎಸೆಯುವ ಮೂಲಕ ತಮ್ಮ ಕೋಪವನ್ನು ಹೊರಹಾಕಿದರು. ಜತೆಗೆ ಕೆಲ ಕೆಟ್ಟ ಪದಗಳಿಂದ ಜನ್ನತ್​ ಮೇಲೆ ರೇಗಾಡಿದರು. ಈ ವಿಡಿಯೊ ವೈರಲ್​ ಆಗಿದೆ.


ಬೌಲಿಂಗ್​ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ರಶೀದ್​ ಖಾನ್​ 4 ಓವರ್​ಗೆ 23 ರನ್​ ವೆಚ್ಚದಲ್ಲಿ 4 ವಿಕೆಟ್​ ಕಿತ್ತು ಮಿಂಚಿದರು. ಇವರಿಗೆ ಮಧ್ಯಮ ವೇಗಿ ನವೀನ್​ ಉಲ್​ ಹಕ್​ ಉತ್ತಮ ಸಾಥ್​ ನೀಡಿ 4 ವಿಕೆಟ್​ ಉರುಳಿಸಿದರು. ಜತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಐತಿಹಾಸಿಕ ಗೆಲುವಿನೊಂದಿಗೆ ಸೆಮಿ ಫೈನಲ್​ ಪ್ರವೇಶಿಸಿರುವ ಅಫಘಾನಿಸ್ತಾನ ಜೂನ್​ 26ರಂದು ನಡೆಯುವ ಸೆಮಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿವೆ.

ಹಲವು ಬಾರಿ ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಅಫಘಾನಿಸ್ತಾನ ರಹಮಾನುಲ್ಲಾ ಗುರ್ಬಾಜ್(43) ಅವರ ಏಕಾಂಗಿ ಬ್ಯಾಟಿಂಗ್​ ಹೋರಾಟದ ನೆರವಿನಿಂದ 5 ವಿಕೆಟ್​ಗೆ 115 ರನ್​ ಬಾರಿಸಿತು. ಬಾಂಗ್ಲಾ ಬ್ಯಾಟಿಂಗ್​ ಸರದಿಯ ವೇಳೆ ಹಲವು ಬಾರಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಅಂತಿಮವಾಗಿ ಒಂದು ಓವರ್​ ಕಡಿತಗೊಳಿಸಿ 19 ಓವರ್​ಗೆ 114 ರನ್​ ಗೆಲುವಿನ ಗುರಿ ನೀಡಲಾಯಿತು. ಈ ಮೊತ್ತವನ್ನು ಬಾಂಗ್ಲಾ ಒಂದು ಹಂತದವರೆಗೆ ಯಶಸ್ವಿಯಾಗಿ ಬೆನ್ನಟ್ಟಿಕೊಂಡು ಬಂದರೂ ಕೂಡ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 17.5 ಓವರ್​ನಲ್ಲಿ 105 ರನ್​ಗೆ ಸರ್ವಪತನ ಕಂಡಿತು.

Continue Reading

ಕ್ರೀಡೆ

AFG vs BAN: ‘ನಿಧಾನವಾಗಿ ಆಡಿ, ಮಳೆ ಬರುತ್ತೆ’; ಆಫ್ಘನ್​ ಆಟಗಾರರಿಗೆ ಸಲಹೆ ನೀಡಿದ ಕೋಚ್​; ವಿಡಿಯೊ ವೈರಲ್​

AFG vs BAN:ಡಕ್​ವರ್ತ್​ ಲೂಯಿಸ್​ ನಿಯದ ಪ್ರಕಾರ ಅಫಘಾನಿಸ್ತಾನ ತಂಡ ಮುಂದೆ ಇದ್ದ ವೇಳೆ ಜೋರಾಗಿ ಗಾಳಿ ಬೀಸಿ ಮಳೆ ಬರುವ ಲಕ್ಷಣ ಕಂಡುಬಂತು. ಈ ವೇಳೆ ಡಗೌಟ್​ನಲ್ಲಿದ್ದ ಕೋಚ್​ ಜೊನಾಥನ್​ ಟ್ರಾಟ್ ಅವರು ನಿಧಾನವಾಗಿ ಆಡಿ… ಕೊಂಚ ಸಮಯ ವ್ಯರ್ಥ ಮಾಡುವಂತೆ ಸೂಚನೆ ನೀಡಿದ ವಿಡಿಯೊ ಇದೀಗ ವೈರಲ್​ ಆಗಿದೆ

VISTARANEWS.COM


on

AFG vs BAN
Koo

ಕಿಂಗ್‌ಸ್ಟೌನ್ (ಸೇಂಟ್ ವಿನ್ಸೆಂಟ್): ಮಂಗಳವಾರ ನಡೆದ ಮಳೆ ಪೀಡಿತ ಬಾಂಗ್ಲಾದೇಶ(AFG vs BAN) ವಿರುದ್ಧದ ಸೂಪರ್​-8 ಪಂದ್ಯದಲ್ಲಿ ಡಕ್​ವರ್ತ್​ ಯೂಯಿಸ್​ ನಿಯಮದನ್ವಯ ಅಫಘಾನಿಸ್ತಾನ 8 ರನ್​ಗಳ ರೋಚಕ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್​ ಪ್ರವೇಶಿಸಿತು. ಈ ಪಂದ್ಯದಲ್ಲಿ ಆಘ್ಫನ್​ ತಂಡದ ಕೋಚ್​ ಜೊನಾಥನ್​ ಟ್ರಾಟ್(Jonathan Trott) ಅವರು ಆಟಗಾರರಿಗೆ ನೀಡಿದ ಸಲಹೆಯೊಂದರ ವಿಡಿಯೊ ವೈರಲ್​ ಆಗಿದೆ.

ಹಲವು ಬಾರಿ ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಅಫಘಾನಿಸ್ತಾನ ರಹಮಾನುಲ್ಲಾ ಗುರ್ಬಾಜ್(43) ಅವರ ಏಕಾಂಗಿ ಬ್ಯಾಟಿಂಗ್​ ಹೋರಾಟದ ನೆರವಿನಿಂದ 5 ವಿಕೆಟ್​ಗೆ 115 ರನ್​ ಬಾರಿಸಿತು. ಬಾಂಗ್ಲಾ ಬ್ಯಾಟಿಂಗ್​ ಸರದಿಯ ವೇಳೆ ಹಲವು ಬಾರಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಅಂತಿಮವಾಗಿ ಒಂದು ಓವರ್​ ಕಡಿತಗೊಳಿಸಿ 19 ಓವರ್​ಗೆ 114 ರನ್​ ಗೆಲುವಿನ ಗುರಿ ನೀಡಲಾಯಿತು. ಆದರೆ ಮಳೆಯ ಕಣ್ಣಾಮುಚ್ಚಾಲೆ ಆಟ ಮಾತ್ರ ಆಗಾಗ ಕಂಡು ಬರುತ್ತಿತ್ತು.

ಡಕ್​ವರ್ತ್​ ಲೂಯಿಸ್​ ನಿಯದ ಪ್ರಕಾರ ಅಫಘಾನಿಸ್ತಾನ ತಂಡ ಮುಂದೆ ಇದ್ದ ವೇಳೆ ಜೋರಾಗಿ ಗಾಳಿ ಬೀಸಿ ಮಳೆ ಬರುವ ಲಕ್ಷಣ ಕಂಡುಬಂತು. ಈ ವೇಳೆ ಡಗೌಟ್​ನಲ್ಲಿದ್ದ ಕೋಚ್​ ಜೊನಾಥನ್​ ಟ್ರಾಟ್ ಅವರು ನಿಧಾನವಾಗಿ ಆಡಿ… ಕೊಂಚ ಸಮಯ ವ್ಯರ್ಥ ಮಾಡುವಂತೆ ಸೂಚನೆ ನೀಡಿದರು. ಕೋಚ್​ ಸಲಹೆಯಂತೆ ಸ್ಲಿಪ್​ನಲ್ಲಿ ನಿಂತಿದ್ದ ಗುಲ್ಬದಿನ್ ನೈಬ್ ಅವರು ಏಕಾಏಕಿ ಕಾಲು ನೋವಿನಂತೆ ಕುಸಿದು ಬಿದ್ದರು. ಬಳಿಕ ಫಿಸಿಯೊ ಬಂದು ಅವರನ್ನು ತಪಾಸಣೆ ನಡೆಸಿದ್ದಾರೆ. ಈ ವಿಡಿಯೊ ಇದೀಗ ವೈರಲ್​ ಆಗಿದೆ. ನೆಟ್ಟಿಗರು ಈ ದೃಶ್ಯ ಕಂಡು ಗುಲ್ಬದಿನ್​ಗೆ ಆಸ್ಕರ್ ಪ್ರಶಸ್ತಿ ನೀಡಬೇಕು ಎಂದು ಕಮೆಂಟ್​ ಮಾಡಿದ್ದಾರೆ. ಸಣ್ಣ ಮೊತ್ತವನ್ನು ಬಾಂಗ್ಲಾ ಒಂದು ಹಂತದವರೆಗೆ ಯಶಸ್ವಿಯಾಗಿ ಬೆನ್ನಟ್ಟಿಕೊಂಡು ಬಂದರೂ ಕೂಡ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 17.5 ಓವರ್​ನಲ್ಲಿ 105 ರನ್​ಗೆ ಸರ್ವಪತನ ಕಂಡಿತು.

ಇದನ್ನೂ ಓದಿ AFG vs BAN: ರೋಚಕ ಗೆಲುವು ಸಾಧಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟ ಆಫ್ಘನ್​; ಟೂರ್ನಿಯಿಂದ ಹೊರಬಿದ್ದ ಆಸೀಸ್​

ಚೇಸಿಂಗ್​ ವೇಳೆ ಬಾಂಗ್ಲಾದೇಶ ಕೂಡ ಆಫ್ಘನ್​ ತಂಡದಂತೆ ನಾಟಕೀಯ ಕುಸಿತ ಕಂಡಿತು. ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಕೂಡ ತಂಡದ ಗೆಲುವಿಗಾಗಿ ಟೊಂಕ ಕಟ್ಟಿ ನಿಂತ ಆರಂಭಕಾರ ಲಿಟ್ಟನ್​ ದಾಸ್​ ಅಜೇಯ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಲು ಶಕ್ತಿ ಮೀರಿ ಪ್ರಯತ್ನಿಸಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್​ ಸಾಥ್​ ಸಿಗದ ಕಾರಣ ಪಂದ್ಯ ಸೋಲು ಕಂಡಿತು. ಆರಂಭಿಕನಾಗಿ ಕಣಕ್ಕಿಳಿದ ದಾಸ್​ ಕೊನೆಯ ತನಕ ಬ್ಯಾಟಿಂಗ್​ ನಡೆಸಿ ಅಜೇಯ 54 ರನ್​ ಬಾರಿಸಿದರು. ಪಂದ್ಯ ಸೋತ ಕಾರಣ ಇವರ ಈ ಬ್ಯಾಟಿಂಗ್​ ಹೋರಾಟ ವ್ಯರ್ಥಗೊಂಡಿತು. ಸಣ್ಣ ಮೊತ್ತ ಬಾರಿಸಿದರೂ ಕೂಡ ಆಫ್ಘನ್​ ಬೌಲರ್​ಗಳು ಶಕ್ತಿ ಮೀರಿ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ನಾಯಕ ರಶೀದ್​ ಖಾನ್​ ಮತ್ತು ನವೀನ್​ ಉಲ್​ ಹಕ್​ ತಲಾ 4 ವಿಕೆಟ್​ ಬೇಟೆಯಾಡಿ ಬಾಂಗ್ಲಾ ಬ್ಯಾಟರ್​ಗಳ ಸೊಕ್ಕಡಗಿಸಿದರು.

Continue Reading

ಕ್ರೀಡೆ

AFG vs BAN: ರೋಚಕ ಗೆಲುವು ಸಾಧಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟ ಆಫ್ಘನ್​; ಟೂರ್ನಿಯಿಂದ ಹೊರಬಿದ್ದ ಆಸೀಸ್​

AFG vs BAN: ಆರಂಭಕಾರ ಲಿಟ್ಟನ್​ ದಾಸ್​ ಅಜೇಯ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಲು ಶಕ್ತಿ ಮೀರಿ ಪ್ರಯತ್ನಿಸಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್​ ಸಾಥ್​ ಸಿಗದ ಕಾರಣ ಪಂದ್ಯ ಸೋಲು ಕಂಡಿತು.

VISTARANEWS.COM


on

AFG vs BAN
Koo

ಕಿಂಗ್‌ಸ್ಟೌನ್ (ಸೇಂಟ್ ವಿನ್ಸೆಂಟ್): ಅತ್ಯಂತ ರೋಚಕವಾಗಿ ಸಾಗಿದ, ಪ್ರೇಕ್ಷಕರನ್ನು ಉಸಿರು ಬಿಗಿ ಹಿಡಿದು, ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಸಣ್ಣ ಮೊತ್ತದ ಮೇಲಾಟದಲ್ಲಿ ಕೊನೆಗೂ ಬಾಂಗ್ಲಾದೇಶ ವಿರುದ್ಧ ಅಫಘಾನಿಸ್ತಾನ 8 ರನ್​ ಅಂತರ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್​ ಪ್ರೇವೇಶಿಸಿದೆ. ಆಫ್ಘಾನ್ ಗೆಲುವಿನಿಂದ ಆಸ್ಟ್ರೇಲಿಯಾ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಒಂದೊಮ್ಮೆ ಬಾಂಗ್ಲಾ ಗೆಲ್ಲುತ್ತಿದ್ದರೆ ರನ್​ರೇಟ್​ ಆಧಾರದಲ್ಲಿ ಮುಂದಿದ್ದ ಆಸೀಸ್​ಗೆ ಸೆಮಿ ಟಿಕೆಟ್​ ಲಭಿಸುತ್ತಿತ್ತು.

ಹಲವು ಬಾರಿ ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಅಫಘಾನಿಸ್ತಾನ ರಹಮಾನುಲ್ಲಾ ಗುರ್ಬಾಜ್(43) ಅವರ ಏಕಾಂಗಿ ಬ್ಯಾಟಿಂಗ್​ ಹೋರಾಟದ ನೆರವಿನಿಂದ 5 ವಿಕೆಟ್​ಗೆ 115 ರನ್​ ಬಾರಿಸಿತು. ಬಾಂಗ್ಲಾ ಬ್ಯಾಟಿಂಗ್​ ಸರದಿಯ ವೇಳೆ ಹಲವು ಬಾರಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಅಂತಿಮವಾಗಿ ಒಂದು ಓವರ್​ ಕಡಿತಗೊಳಿಸಿ 19 ಓವರ್​ಗೆ 114 ರನ್​ ಗೆಲುವಿನ ಗುರಿ ನೀಡಲಾಯಿತು. ಈ ಮೊತ್ತವನ್ನು ಬಾಂಗ್ಲಾ ಒಂದು ಹಂತದವರೆಗೆ ಯಶಸ್ವಿಯಾಗಿ ಬೆನ್ನಟ್ಟಿಕೊಂಡು ಬಂದರೂ ಕೂಡ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 17.5 ಓವರ್​ನಲ್ಲಿ 105 ರನ್​ಗೆ ಸರ್ವಪತನ ಕಂಡಿತು.

ಕಳೆದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾಕ್ಕೆ ಸೋಲುಣಿಸುವ ಮೂಲಕ ಭಾರೀ ಸಂಚಲನ ಮೂಡಿಸಿದ್ದ ಅಫಫಾನಿಸ್ತಾದ ಇದೀಗ ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದೆ. ಸೋಮವಾರ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತ ವಿರುದ್ಧ ಸೋಲು ಕಂಡ ಪರಿಣಾಮ ಆಫ್ಘಾನ್​ಗೆ ಸೆಮಿಫೈನಲ್​ ಪ್ರವೇಶಿಸಲು ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸಾಕಿತ್ತು. ಅದರಂತೆ ಆಫ್ಘನ್​ ಈ ಪಂದ್ಯ ಗೆದ್ದು ಸೆಮಿಗೆ ಅರ್ಹತೆ ಪಡೆಯಿತು. ಜೂನ್​ 26ರಂದು ನಡೆಯುವ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಆಫ್ಘನ್​​ ತಂಡ ದಕ್ಷಿಣ ಆಫ್ರಿಕಾದ ಸವಾಲು ಎದುರಿಸಲಿದೆ.

ಇದನ್ನೂ ಓದಿ Rohit Sharma: ಬಾಬರ್​ ಅಜಂ ದಾಖಲೆ ಸರಿಗಟ್ಟಿದ ರೋಹಿತ್​ ಶರ್ಮ

ಲಿಟ್ಟನ್​ ದಾಸ್​ ಅರ್ಧಶತಕ

ಚೇಸಿಂಗ್​ ವೇಳೆ ಬಾಂಗ್ಲಾದೇಶ ಕೂಡ ಆಫ್ಘನ್​ ತಂಡದಂತೆ ನಾಟಕೀಯ ಕುಸಿತ ಕಂಡಿತು. ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಕೂಡ ತಂಡದ ಗೆಲುವಿಗಾಗಿ ಟೊಂಕ ಕಟ್ಟಿ ನಿಂತ ಆರಂಭಕಾರ ಲಿಟ್ಟನ್​ ದಾಸ್​ ಅಜೇಯ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಲು ಶಕ್ತಿ ಮೀರಿ ಪ್ರಯತ್ನಿಸಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್​ ಸಾಥ್​ ಸಿಗದ ಕಾರಣ ಪಂದ್ಯ ಸೋಲು ಕಂಡಿತು. ಆರಂಭಿಕನಾಗಿ ಕಣಕ್ಕಿಳಿದ ದಾಸ್​ ಕೊನೆಯ ತನಕ ಬ್ಯಾಟಿಂಗ್​ ನಡೆಸಿ ಅಜೇಯ 54 ರನ್​ ಬಾರಿಸಿದರು. ಪಂದ್ಯ ಸೋತ ಕಾರಣ ಇವರ ಈ ಬ್ಯಾಟಿಂಗ್​ ಹೋರಾಟ ವ್ಯರ್ಥಗೊಂಡಿತು. ಸಣ್ಣ ಮೊತ್ತ ಬಾರಿಸಿದರೂ ಕೂಡ ಆಫ್ಘನ್​ ಬೌಲರ್​ಗಳು ಶಕ್ತಿ ಮೀರಿ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ನಾಯಕ ರಶೀದ್​ ಖಾನ್​ ಮತ್ತು ನವೀನ್​ ಉಲ್​ ಹಕ್​ ತಲಾ 4 ವಿಕೆಟ್​ ಬೇಟೆಯಾಡಿ ಬಾಂಗ್ಲಾ ಬ್ಯಾಟರ್​ಗಳ ಸೊಕ್ಕಡಗಿಸಿದರು.

ಮೊದಲು ಬ್ಯಾಟಿಂಗ್​ ನಡೆಸಿದ ಅಫಘಾನಿಸ್ತಾನ ಪರ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಹೊರತುಪಡಿಸಿದ ಉಳಿದ ಯಾವ ಬ್ಯಾಟರ್​ಗಳು ಕೂಡ ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ಯಶಸ್ಸು ಕಾಣಲಿಲ್ಲ. ಇಬ್ರಾಹಿಂ ಜದ್ರಾನ್(18),ಅಜ್ಮತುಲ್ಲಾ(10), ನಬಿ(1) ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು. ರಹಮಾನುಲ್ಲಾ ಗುರ್ಬಾಜ್ 3 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 43 ರನ್​ ಬಾರಿಸಿದರು. ಇವರ ಈ ಬ್ಯಾಟಿಂಗ್​ ಹೋರಾಟದಿಂದ ತಂಡ 100ರ ಗಡಿ ದಾಟಿತು. ಬಾಂಗ್ಲಾ ಪರ ರಿಶಾದ್ ಹೊಸೈನ್ 26 ರನ್​ಗೆ 3 ವಿಕೆಟ್​ ಕಿತ್ತು ಮಿಂಚಿದರು.

Continue Reading

ಕ್ರೀಡೆ

Rohit Sharma: ಬಾಬರ್​ ಅಜಂ ದಾಖಲೆ ಸರಿಗಟ್ಟಿದ ರೋಹಿತ್​ ಶರ್ಮ

Rohit Sharma: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರೋಹಿತ್ 8 ಸಿಕ್ಸರ್​ಗಳನ್ನು ಬಾರಿಸುವ ಮೂಲಕ ಟಿ20 ಮಾದರಿಯ ಕ್ರಿಕೆಟ್​​ನಲ್ಲಿ 200 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದ ಮೊದಲ ಆಟಗಾರ ಎನಿಸಿಕೊಂಡರು. ಸದ್ಯ ರೋಹಿತ್​ 203* ಸಿಕ್ಸರ್​ಗಳನ್ನು ಬಾರಿಸಿದ್ದಾರೆ.

VISTARANEWS.COM


on

Rohit Sharma
Koo

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಸಿಯ): ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್‌ ಶರ್ಮ(Rohit Sharma) ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಸಾಹಸದ ನೆರವಿನಿಂದ ಆಸ್ಟ್ರೇಲಿಯಾ(Australia vs India) ವಿರುದ್ಧ ಸೋಮವಾರ ನಡೆದ ಟಿ20 ವಿಶ್ವಕಪ್(T20 World Cup 2024) ಸೂಪರ್‌-8 ರೋಚಕ ಪಂದ್ಯದಲ್ಲಿ ಭಾರತ ತಂಡ 24 ರನ್ ಗಳ ಅಮೋಘ ಜಯ ಸಾಧಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟಿತು. ಈ ಪಂದ್ಯವನ್ನು ಗೆಲ್ಲುವು ಮೂಲಕ ರೋಹಿತ್​ ಶರ್ಮ ಅವರು ಪಾಕ್​ ನಾಯಕ ಬಾಬರ್​ ಅಜಂ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಪಂದ್ಯ ಗೆದ್ದ ನಾಯಕ ಎಂಬ ಹಿರಿಮೆಗೆ ರೋಹಿತ್​ ಪಾತ್ರರಾಗಿದ್ದಾರೆ. ರೋಹಿತ್​ ನಾಯಕತ್ವದಲ್ಲಿ ಭಾರತ 60 ಪಂದ್ಯಗಳನ್ನು ಆಡಿ 48 ಪಂದ್ಯಗಳನ್ನು ಗೆದ್ದಿದೆ. ಬಾಬರ್​ ಅಜಂ ಕೂಡ ನಾಯಕನಾಗಿ 48 ಪಂದ್ಯಗಳನ್ನು ಗೆದ್ದಿದ್ದಾರೆ. ಆದರೆ, 85 ಪಂದ್ಯಗಳನ್ನು ಆಡಿದ್ದಾರೆ. ಹೀಗಾಗಿ ಈ ಪಟ್ಟಿಯಲ್ಲಿ ರೋಹಿತ್​ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ರೋಹಿತ್ 8 ಸಿಕ್ಸರ್​ಗಳನ್ನು ಬಾರಿಸುವ ಮೂಲಕ ಟಿ20 ಮಾದರಿಯ ಕ್ರಿಕೆಟ್​​ನಲ್ಲಿ 200 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದ ಮೊದಲ ಆಟಗಾರ ಎನಿಸಿಕೊಂಡರು. ಸದ್ಯ ರೋಹಿತ್​ 203* ಸಿಕ್ಸರ್​ಗಳನ್ನು ಬಾರಿಸಿದ್ದಾರೆ. ಇದು ಮಾತ್ರವದಲ್ಲದೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅತಿಹೆಚ್ಚು ರನ್​ ಗಳಿಸಿದ ಬ್ಯಾಟರ್ ಆಗಿಯೂ ರೋಹಿತ್ ಹೊರಹೊಮ್ಮಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 4165 ರನ್ ಗಳಿಸಿದ್ದಾರೆ. ಪಾಕಿಸ್ತಾನದ ಬಾಬರ್ ಅಜಂ 4145 ಹಾಗೂ ವಿರಾಟ್ ಕೊಹ್ಲಿ 4103 ರನ್​ಗಳೊಂದಿಗೆ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.

ಪಂದ್ಯ ಗೆದ್ದ ಭಾರತ


ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ 5 ವಿಕೆಟಿಗೆ 205 ರನ್‌ ಬಾರಿಸಿ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ಆಸೀಸ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿ ಸೋಲು ಕಂಡಿತು. ಕಳೆದ ವರ್ಷ ನೆಡೆದಿದ್ದ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಸೇಡನ್ನು ಭಾರತ ಇಲ್ಲಿ ತೀರಿಸಿಕೊಂಡಿತು.

ರೋಹಿತ್‌ 41 ಎಸೆತಗಳಲ್ಲಿ 92 ರನ್‌ ಬಾರಿಸಿ ಟಿ20 ವಿಶ್ವಕಪ್‌ನಲ್ಲಿ ಜೀವನಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಅದರಲ್ಲೂ ಸ್ಟಾರ್ಕ್‌ ಅವರ 3ನೇ ಓವರ್‌ನಲ್ಲಿ ಬರೋಬ್ಬರಿ 29 ರನ್‌ ಚಚ್ಚಿದರು. ರೋಹಿತ್‌ ತಮ್ಮ 92 ರನ್ನುಗಳ ಸೊಗಸಾದ ಬ್ಯಾಟಿಂಗ್‌ ವೇಳೆ 8 ಸಿಕ್ಸರ್‌ ಮತ್ತು 7 ಬೌಂಡರಿ ಹೊಡೆದರು.

Continue Reading
Advertisement
prajwal revanna case preetham gowda
ಪ್ರಮುಖ ಸುದ್ದಿ7 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಮೇಲೆ ಮತ್ತೊಂದು ಎಫ್‌ಐಆರ್‌; ಪ್ರೀತಂ ಗೌಡ ಮೇಲೂ ದೂರು

Lok Sabha Speaker Election
ದೇಶ12 mins ago

Lok Sabha Speaker Election: ಲೋಕಸಭೆ ಇತಿಹಾಸದಲ್ಲೇ ಮೊದಲ ಬಾರಿ ಸ್ಪೀಕರ್‌ ಹುದ್ದೆಗೆ ನಡೆಯಲಿದೆ ಚುನಾವಣೆ

The Present kannada film muhurtha at Kanteerava Studio
ಸಿನಿಮಾ17 mins ago

Kannada New Movie: ಅದ್ಧೂರಿಯಾಗಿ ನಡೆದ ’ದ ಪ್ರಸೆಂಟ್’ ಚಿತ್ರದ ಮುಹೂರ್ತ

Milk Price
ಕರ್ನಾಟಕ19 mins ago

Milk Price: ಜನರ ಬದುಕಿನೊಂದಿಗೆ ಕಾಂಗ್ರೆಸ್‌ ಸರ್ಕಾರ ಚೆಲ್ಲಾಟ; ಹಾಲಿನ ದರ ಏರಿಕೆಗೆ ವಿಜಯೇಂದ್ರ ಆಕ್ರೋಶ

Nita Ambani
Latest21 mins ago

Nita Ambani: ಕಾಶಿಯಲ್ಲಿ ಮದುವೆ ಆಮಂತ್ರಣ ಪೂಜೆ; ಚಾಟ್‌ ಅಂಗಡಿಗೂ ಭೇಟಿ ನೀಡಿದ ನೀತಾ ಅಂಬಾನಿ

Viral Video
Latest24 mins ago

Viral Video: ಕ್ಯಾಸಿನೋದಲ್ಲಿ 33 ಕೋಟಿ ರೂ. ಜಾಕ್‌ಪಾಟ್‌; ಖುಷಿ ಹೆಚ್ಚಾಗಿ ಹಾರ್ಟ್‌ ಅಟ್ಯಾಕ್‌!

Rashid Khan
ಕ್ರಿಕೆಟ್42 mins ago

Rashid Khan: ರನ್​ ಓಡದ ಸಿಟ್ಟಿನಲ್ಲಿ ಸಹ ಆಟಗಾರನ್ನತ್ತ ಬ್ಯಾಟ್​ ಎಸೆದ ರಶೀದ್​ ಖಾನ್​; ವಿಡಿಯೊ ವೈರಲ್​

Amarnath Yatra
ದೇಶ44 mins ago

Amarnath Yatra: ಆಗಸ್ಟ್‌ನಲ್ಲಿ ಪಾಕ್‌ ನಡೆಸುತ್ತಾ ಡೆಡ್ಲಿ ಅಟ್ಯಾಕ್‌? ಎರಡೆರಡು ಉಗ್ರ ಸಂಘಟನೆಗಳಿಂದ ದೊಡ್ಡ ಪ್ಲ್ಯಾನ್‌!

Gold Rate Today
ಚಿನ್ನದ ದರ58 mins ago

Gold Rate Today: ಏರಿಕೆಯೂ ಇಲ್ಲ ಇಳಿಕೆಯೂ ಇಲ್ಲ; ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

milk price hike
ಪ್ರಮುಖ ಸುದ್ದಿ1 hour ago

Milk Price: ನಂದಿನಿ ಹಾಲು ದರ ಏರಿಕೆ ಶಾಕ್‌; ಅರ್ಧ ಲೀಟರ್‌ಗೂ ₹2, ಒಂದು ಲೀಟರ್‌ಗೂ ₹2 ಬೆಲೆ ಏರಿಕೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ19 hours ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ4 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ5 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌