ನವದೆಹಲಿ: ಭಾರತದ ಸ್ಟಾರ್ ಶಟ್ಲರ್ ಹಾಗೂ ಪುರುಷರ ಡಬಲ್ಸ್ ಆಟಗಾರ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮಂಗಳವಾರ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅವರು ಇತ್ತೀಚೆಗೆ ಮುಕ್ತಾಯಗೊಂಡ ಇಂಡೋನೇಷ್ಯಾ ಓಪನ್ ಸೂಪರ್ ಟೂರ್ನಿಯ ಪಂದ್ಯವೊಂದರಲ್ಲಿ 565 ಕಿ.ಮೀ ವೇಗದಲ್ಲಿ ಸ್ಮ್ಯಾಶ್ ಬಾರಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಟೂರ್ನಿಯ ಟ್ರೋಫಿಯನ್ನು ತಮ್ಮ ಜೊತೆಗಾರ ಚಿರಾಗ್ ಶೆಟ್ಟಿ ಅವರೊಂದಿಗೆ ಗೆದ್ದಿದ್ದರು ರಾಂಕಿ ರೆಡ್ಡಿ . ಇದರ ಜತೆಗೆ ಸಾತ್ವಿಕ್, 2013ರ ಮೇ ತಿಂಗಳಲ್ಲಿ ಮಲೇಷ್ಯಾದ ಟಾನ್ ಬೂನ್ ಹ್ಯೋಂಗ್ ಬಾರಿಸಿದ್ದ ಗಂಟೆಗೆ 493 ಕಿ.ಮೀ ವೇಗದ ಸ್ಮ್ಯಾಶ್ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ, ದಶಕದ ಬಳಿಕ ಹೊಸ ದಾಖಲೆಯನ್ನು ಬರೆದಿದ್ದಾರೆ ಭಾರತದ ಬ್ಯಾಡ್ಮಿಂಟನ್ ಪ್ರತಿಭೆ.
ಮಲೇಷ್ಯಾದ ಟಾನ್ ಪರ್ಲಿ ಗಂಟೆಗೆ 438 ಕಿ.ಮೀ ವೇಗದ ಸ್ಮ್ಯಾಶ್ ಬಾರಿಸಿ ಮಹಿಳಾ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಸಾತ್ವಿಕ್ ಸಾಯಿರಾಜ್ ಈಗ ವೇಗದ ಸ್ಮ್ಯಾಶ್ನಲ್ಲಿ ಅಗ್ರಗಣ್ಯ ಎನಿಸಿಕೊಂಡಿದ್ದಾರೆ. ಅಂದ ಹಾಗೆ ಸಾತ್ವಿಕ್ಸಾಯಿರಾಜ್ ಬಾರಿಸಿರುವ ಈ ಸ್ಮ್ಯಾಶ್ ಎಫ್1 ಕಾರಿನ ವೇಗಕ್ಕಿಂತಲೂ ಅಧಿಕವಾಗಿದೆ. ಎಫ್1 ಕಾರು ಗರಿಷ್ಠ 375 ಕಿಲೋ ಮೀಟರ್ ವೇಗದಲ್ಲಿ ಸಾಗುತ್ತದೆ. ಈ ಮೂಲಕ ರಾಂಕಿ ರೆಡ್ಡಿ ತಮ್ಮ ತೋಲ್ಬಲವನ್ನು ಪ್ರದರ್ಶಿಸಿದ್ದಾರೆ.
ಯೋನೆಕ್ಸ್ ಬ್ಯಾಡ್ಮಿಂಟನ್ ಅಥ್ಲೀಟ್ಗಳಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ (ಭಾರತ) ಮತ್ತು ಟಾನ್ ಪರ್ಲಿ (ಮಲೇಷ್ಯಾ) ಅತಿ ವೇಗದ ಪುರುಷ ಮತ್ತು ಮಹಿಳಾ ಬ್ಯಾಡ್ಮಿಂಟನ್ ಹಿಟ್ಟಗಳೆಂಭ ಹೊಸ ಗಿನ್ನಿಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ ಎಂದು ಘೋಷಿಸಲು ಯೋನೆಕ್ಸ್ ಹೆಮ್ಮೆಪಡುತ್ತದೆ ಎಂದು ಜಪಾನಿನ ಕ್ರೀಡಾ ಉಪಕರಣಗಳ ಉತ್ಪಾದನಾ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : Lakshya Sen: ಭಾರತದ ಲಕ್ಷ್ಯ ಸೇನ್, ಕೆನಡಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಚಾಂಪಿಯನ್
2013ರ ಮೇ ತಿಂಗಳಲ್ಲಿ ದಾಖಲಾಗಿರುವ ಗಿನ್ನಿಸ್ ವಿಶ್ವ ದಾಖಲೆಯ ದಾಖಲೆಯನ್ನು ರಾಂಕಿರೆಡ್ಡಿ ಮುರಿದಿದ್ದಾರೆ. ಈ ಮೂಲಕ ಅವರು ದಶಕಗಳ ಬಳಿಕ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಸಾತ್ವಿಕ್ ಸಾಯಿರಾಜ್ ಏಪ್ರಿಲ್ 14ರಂದು ಈ ಮಾರಕ ಸ್ಮ್ಯಾಶ್ ಬಾರಿಸಿದ್ದರು. ಆ ದಿನದ ವೇಗ ಮಾಪನ ಫಲಿತಾಂಶಗಳ ಆಧಾರದ ಮೇಲೆ ಗಿನ್ನೆಸ್ ವಿಶ್ವ ದಾಖಲೆಗಳ ತೀರ್ಪುಗಾರರು ದಾಖಲೆಯನ್ನು ಅಧಿಕೃತಗೊಳಿಸಿದ್ದಾರೆ.
ಎರಡನೇ ಸುತ್ತಿಎಗ ಸಾತ್ವಿಕ್ ಸಾಯಿರಾಜ್
ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಕೊರಿಯಾ ಓಪನ್ನಲ್ಲಿ ಸ್ಪರ್ಧಿಸುತ್ತಿದೆ. ಅವರು ಮೊದಲ ಸುತ್ತಿನಲ್ಲಿ ಥಾಯ್ಲೆಂಡ್ನ ಸುಪಾಕ್ ಜೊಮ್ಕೊ ಮತ್ತು ಕಿಟ್ಟಿನ್ಪೊಂಗ್ ಕೆಡ್ರೆನ್ ಅವರನ್ನು ಸೋಲಿಸುವ ಮೂಲಕ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಮೂರನೇ ಶ್ರೇಯಾಂಕ ಹೊಂದಿರುವ ಈ ಜೋಡಿ ಥಾಯ್ಲೆಂಡ್ನ ಆಟಗಾರರನ್ನು 21-16, 21-14ರಿಂದ ಸೋಲಿಸಿತು. ಸಾತ್ವಿಕ್ ಮತ್ತು ಚಿರಾಗ್ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರೆ ರ್ಯಾಕಿಂಗ್ನಲ್ಲಿ ವಿಶ್ವ 2 ನೇ ಸ್ಥಾನಕ್ಕೆ ಏರಲಿದ್ದಾರೆ.