Site icon Vistara News

AUS vs NZ: ಶತಕ ಬಾರಿಸಿ ವಿಶ್ವಕಪ್​ನಲ್ಲಿ ಸಚಿನ್​ ದಾಖಲೆ ಸರಿಗಟ್ಟಿದ ರಚಿನ್ ರವೀಂದ್ರ

Rachin Ravindra joined Sachin Tendulkar in the list of batters scoring two tons in ODI World Cups before turning 25 years old

ಧರ್ಮಶಾಲಾ: ಆಸ್ಟ್ರೇಲಿಯಾ(AUS vs NZ) ವಿರುದ್ಧ ಇಲ್ಲಿ ನಡೆದ ವಿಶ್ವಕಪ್​ನ 27ನೇ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಮರೆದಾಡಿದ ಕರ್ನಾಕಟ ಮೂಲದ ರಚಿನ್​ ರವೀಂದ್ರ(Rachin Ravindra) ಅವರು ಕ್ರಿಕೆಟ್ ದಿಗ್ಗಜ ಸಚಿನ್​ ತೆಂಡೂಲ್ಕರ್(Sachin Tendulkar)​ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ಆಸ್ಟ್ರೇಲಿಯಾ ನೀಡಿದ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಕಿವೀಸ್​ಗೆ ಆಸರೆಯಾದದ್ದು ಕರ್ನಾಟಕ ಮೂಲದ ರಚಿನ್‌ ರವೀಂದ್ರ. ಆಸೀಸ್​ ಬೌಲರ್​ಗಳನ್ನು ಸದೆಬಡಿದ ಅವರು ಪಂದ್ಯದ ಕೊನೆಯ ಹಂತದವರೆಗೂ ಹೋರಾಡಿ ಉತ್ತಮ ಇನಿಂಗ್ಸ್​ ಕಟ್ಟಿದರು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಅವರು ಧರ್ಮಶಾಲಾ ಸ್ಟೇಡಿಯಂನ ಮೂಲೆ ಮೂಲೆಗೂ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ನೆರದ ಪ್ರೇಕ್ಷಕರಿಗೆ ಭರಪೂರ ರಂಜನೆ ನೀಡಿದರು. ಒಟ್ಟು 9 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ ಶತಕ ಬಾರಿಸಿ ಸಂಭ್ರಮಿಸಿದರು. ಇದು ವಿಶ್ವಕಪ್​ನಲ್ಲಿ ರಚಿನ್​ ಅವರ ದ್ವಿತೀಯ ಶತಕವಾಗಿದೆ.

ಎರಡನೇ ಆಟಗಾರ

ರಚಿನ್ ಶತಕ ಬಾರಿಸುವ ಮೂಲಕ ಟೀಮ್​ ಇಂಡಿಯಾದ ಮಾಜಿ ಆಟಗಾರ ಸಚಿನ್​ ತೆಂಡೂಲ್ಕರ್​ ಅವರ ವಿಶ್ವಕಪ್​ನ ದಾಖಲೆಯೊಂದನ್ನು ಸರಿಗಟ್ಟಿದರು. ಅತಿ ಕಿರಿಯ ವಯಸ್ಸಿನಲ್ಲಿ 2 ಶತಕ ಬಾರಿಸಿದ ದ್ವಿತೀಯ ಆಟಗಾರ ಎನಿಸಿಕೊಂಡರು. ಸಚಿನ್​ ಅವರು 1996 ವಿಶ್ವಕಪ್​ ಟೂರ್ನಿಯಲ್ಲಿ ಈ ದಾಖಲೆ ಮಾಡಿದ್ದರು. ಉಭಯ ಆಟಗಾರರು ಈ ದಾಖಲೆಯನ್ನು 23 ವರ್ಷದಲ್ಲಿ ಮಾಡಿದ್ದಾರೆ.

ಇದನ್ನೂ ಓದಿ AUS vs NZ: ಒಂದು ಪಂದ್ಯ, ಹಲವು ದಾಖಲೆ

ಈ ಪಂದ್ಯದಲ್ಲಿ ಡ್ಯಾರಿಯಲ್​ ಮಿಚೆಲ್​ ಜತೆ ಮೂರನೇ ವಿಕೆಟ್​ಗೆ 96 ರನ್​ಗಳ ಜತೆಯಾಟ ನಡೆಸಿದ ಅವರು, 40 ಓವರ್​ ತನಕ ಬ್ಯಾಟಿಂಗ್​ ನಡೆಸಿ 116 ರನ್​ ಗಳಿಸಿದರು. ಇವರು ಕ್ರೀಸ್​ನಲ್ಲಿರುವ ತನಕ ಕಿವೀಸ್​ನ ಗೆಲುವು ಕೂಡ ಖಚಿತ ಎನ್ನುವಂತಿತ್ತು. ಆದರೆ ಇವರ ವಿಕೆಟ್​ ಬಿದ್ದೊಡನೆ ಬಳಿಕ ಬಂದ ನೀಶಮ್​ ಅವರನ್ನು ಹೊರತುಪಡಿಸಿ ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಾರದ ಕಾರಣ ಕೇವಲ 5 ರನ್​ ಅಂತರದಲ್ಲಿ ಸೋಲು ಕಂಡಿತು. 

ಇದನ್ನೂ ಓದಿ IND vs ENG: 20 ವರ್ಷಗಳ ಬಳಿಕ ಗೆಲುವು ಕಂಡೀತೇ ಭಾರತ; ಗೆದ್ದರೆ ಅಧಿಕೃತ ಸೆಮಿ ಪ್ರವೇಶ

ಯಾರು ಈ ರಚಿನ್ ರವೀಂದ್ರ?

ರಚಿನ್ ರವೀಂದ್ರ 1999 ರಲ್ಲಿ ವೆಲ್ಲಿಂಗ್ಟನ್​ ಭಾರತೀಯ ಮೂಲದ ಪೋಷಕರಿಗೆ ಜನಿಸಿದರು. ಬೆಂಗಳೂರಿನವರಾದ ರಚಿನ್ ಅವರ ತಂದೆ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿ. ಇಬ್ಬರು ಕ್ರಿಕೆಟ್ ದಂತಕಥೆಗಳ ಬಗ್ಗೆ ಅವರ ಪ್ರೀತಿ ಎಷ್ಟು ಆಳವಾಗಿತ್ತು ಎಂದರೆ, ಅವರು ಇಬ್ಬರೂ ಆಟಗಾರರ ಹೆಸರಿನ ಅಕ್ಷರಗಳನ್ನು ಸಂಯೋಜಿಸುವ ಮೂಲಕ ತಮ್ಮ ಮಗನಿಗೆ ಹೆಸರಿಟ್ಟಿದ್ದಾರೆ. ರಾಹುಲ್ ಅವರಿಂದ “ರಾ” ಮತ್ತು ಸಚಿನ್ ಅವರಿಂದ “ಚಿನ್​ ” ತೆಗೆದುಕೊಂಡು ಎರಡನ್ನೂ ಸಂಯೋಜಿಸಿ “ರಚಿನ್” ಎಂಬ ಹೆಸರನ್ನು ಪುತ್ರನಿಗೆ ಇಟ್ಟಿದ್ದಾರೆ. ಆತನಿಗೆ ತರಬೇತಿ ಕೊಡಿಸಿ ಕ್ರಿಕೆಟಿಗನನ್ನಾಗಿ ಮಾಡಿದ್ದಾರೆ. ಇದೀಗ ಆತ ಸಚಿನ್​ ಅವರ ದಾಖಲೆಯನ್ನೇ ಸರಿಗಟ್ಟಿದ್ದಾನೆ.

ಬಾರ್​ನಲ್ಲಿ ಕುಳಿತು ಫೈನಲ್​ ವೀಕ್ಷಣೆ

ರಚಿನ್ ಅವರು 2019 ವಿಶ್ವಕಪ್​ ಫೈನಲ್​ ಪಂದ್ಯವನ್ನು ಅಭಿಮಾನಿಯಾಗಿ ಬೆಂಗಳೂರಿನ ಬಾರೊಂದರಲ್ಲಿ ಕುಳಿತು ವೀಕ್ಷಿಸಿದ್ದರಂತೆ, ಈ ವಿಚಾರವನ್ನು ಅವರೇ ಈ ಬಾರಿಯ ವಿಶ್ವಕಪ್​ ಟೂರ್ನಿಯ ವೇಳೆ ತಿಳಿಸಿದ್ದರು. ಇಂಗ್ಲೆಂಡ್ ವಿರುದ್ಧ ನ್ಯೂಜಿಲ್ಯಾಂಡ್​ ಸೋತಾಗ ತುಂಬಾ ಬೇಸರಗೊಂಡಿದ್ದೆ ಎಂದಿದ್ದರು.

Exit mobile version