ಕೋಲ್ಕೊತಾ: ಮೊದಲ ಫೈನಲ್ ಇರಾದೆಯೊಂದಿಗೆ ಇಂದು ನಡೆಯುವ ವಿಶ್ವಕಪ್(ICC Cricket World Cup 2023) ಸೆಮಿಫೈನಲ್(South Africa vs Australia, 2nd Semi-Final ) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(AUS vs SA) ತಂಡ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯ ಕೋಲ್ಕೊತಾದ ಐತಿಹಾಸಿಕ ಕ್ರಿಕೆಟ್ ಸ್ಟೇಡಿಯಂ ಈಡನ್ ಗಾರ್ಡನ್ಸ್ನಲ್ಲಿ(Eden Gardens, Kolkata) ನಡೆಯಲಿದೆ.
ಹವಾಮಾನ ವರದಿ
ಕೋಲ್ಕೋತಾದಲ್ಲಿ ಗುರುವಾರ ರಾತ್ರಿಯ ವೇಳೆ ಶೇ 21ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಪಂದ್ಯಕ್ಕೆ ಮಳೆಯ ಭೀತಿ ಇದ್ದೇ ಇದೆ. ಒಂದೊಮ್ಮೆ ಮಳೆ ಬಾರದಿದ್ದರೂ ಇಲ್ಲಿ ಮಂಜಿನ ಕಾಟ ತಪ್ಪಿದ್ದಲ್ಲ. ಮಳೆ ಬಂದರೂ ಚಿಂತಿಸುವ ಅಗತ್ಯವಿಲ್ಲ ಕಾರಣ ಸೆಮಿ ಪಂದ್ಯಕ್ಕೆ ಮೀಸಲು ದಿನ ಇದೆ.
ದಕ್ಷಿಣ ಆಫ್ರಿಕಾ ತಂಡ ಪ್ರತಿ ವಿಶ್ವಕಪ್ ಟೂರ್ನಿಯಲ್ಲೂ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಸೆಮಿಫೈನಲ್ ಪ್ರವೇಶ ಪಡೆಯುತ್ತದೆ. ಆದರೆ ಸೆಮಿ ಪಂದ್ಯದಲ್ಲಿ ಮಾತ್ರ ಅದೃಷ್ಟವೋ ಅಲ್ಲ ಶಾಪವೋ ಗೊತ್ತಿಲ್ಲ ಎಲ್ಲ ವಿಶ್ವ ದರ್ಜೆಯ ಆಟಗಾರು ಘೋರ ವೈಫಲ್ ಕಾಣುತ್ತಾರೆ. ಯಾರೋಬ್ಬರು ಕೂಡ ತಮ್ಮ ಆಟವನ್ನು ಪ್ರದರ್ಶಿಸಲಾಗದ ಸಂಕಟಕ್ಕೆ ಸಿಲುಕುತ್ತಾರೆ. ಹೀಗಾಗಿ ತಂಡದ ಮೇಲೆ ಹೆಚ್ಚಿನ ನಂಬಿಕೆ ಇಡುವಂತಿಲ್ಲ.
ಗೆದ್ದರೆ ಭಾರತ ಜತೆ ಫೈನಲ್
ಇತ್ತಂಡಗಳ ಈ ಪಂದ್ಯದಲ್ಲಿ ಯಾರೇ ಗೆದ್ದರೂ ಫೈನಲ್ನಲ್ಲಿ ಭಾರತ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಈ ತಂಡ ಯಾವುದು ಎನ್ನುವುದು ಅಭಿಮಾನಿಗಳ ಕೂತುಹಲ. ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.
ವಿಶ್ವಕಪ್ ಮುಖಾಮುಖಿ
ಇತ್ತಂಡಗಳು ವಿಶ್ವಕಪ್ನಲ್ಲಿ ಒಟ್ಟು 6 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಆಸ್ಟ್ರೇಲಿಯಾ ಮೂರು ಪಂದ್ಯಗಳನ್ನು ಗೆದ್ದರೆ, ದಕ್ಷಿಣ ಆಫ್ರಿಕಾ 2 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಟೈಗೊಂಡಿದೆ. ಇತ್ತಂಡಗಳು ಮೊದಲ ಬಾರಿಗೆ ವಿಶ್ವಕಪ್ನಲ್ಲಿ ಮುಖಾಮುಖಿಯಾದದ್ದು 1992ರ ವಿಶ್ವಕಪ್ನಲ್ಲಿ. ಈ ಪಂದ್ಯವನ್ನು ದಕ್ಷಿಣ ಆಫ್ರಿಕಾ 9 ವಿಕೆಟ್ಗಳಿಂದ ಗೆದ್ದು ಬೀಗಿತ್ತು. ಇದಾದ ಬಳಿಕ ದಕ್ಷಿಣ ಆಫ್ರಿಕಾಗೆ ಗೆಲುವು ಒಲಿದದ್ದು 2019ರಲ್ಲಿ. ಲಂಡನ್ನಲ್ಲಿ ನಡೆದ ಪಂದ್ಯದಲ್ಲಿ ಡು ಪ್ಲಿಸ್ ನಾಯಕತ್ವದಲ್ಲಿ 10 ರನ್ಗಳ ಗೆಲುವು ಸಾಧಿಸಿತ್ತು.
ಇದನ್ನೂ ಓದಿ IND vs NZ : ಟೀಮ್ ಇಂಡಿಯಾ ಸಾಧನೆಗೆ ಮೋದಿ ಏನಂದ್ರು? ರಾಹುಲ್ ಟ್ವೀಟ್ನಲ್ಲಿ ಏನಿದೆ?
ಪಿಚ್ ರಿಪೋರ್ಟ್
ಈಡನ್ ಗಾರ್ಡನ್ಸ್‌ನ(Eden Gardens) ಪಿಚ್ ಸೀಮರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಇಲ್ಲಿ ಚೇಸಿಂಗ್ ನಡೆಸುವ ತಂಡಕ್ಕೆ ಹೆಚ್ಚಿನ ಅವಕಾಶ ಏಕೆಂದರೆ ರಾತ್ರಿಯ ವೇಳೆ ಇಲ್ಲಿ ಇಬ್ಬನಿ ಸಮಸ್ಯೆ ಕಾಡಲಿದೆ. ಇದು ಬೌಲರ್ಗಳಿಗೆ ಕಷ್ಟಕರವಾಗಲಿದೆ. ಕೈಯಲ್ಲಿ ಸರಿಯಾಗಿ ಚೆಂಡು ನಿಲ್ಲದೆ ನಿರ್ದಿಷ್ಟ ಗುರಿಗೆ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರೆ ಉತ್ತಮ.
ಸಂಭಾವ್ಯ ತಂಡ
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಸ್ಸಿ ವಾನ್ ಡರ್ ಡುಸೆನ್, ಐಡೆನ್ ಮಾರ್ಕ್ರಮ್, ಟೆಂಬ ಬವುಮಾ, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಲುಂಗಿ ಎನ್ಗಿಡಿ, ಜೆರಾಲ್ಡ್ ಕೋಟ್ಜಿ.
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್, ಜೋಶ್ ಇಂಗ್ಲಿಸ್, ಕ್ಯಾಮರೂನ್ ಗ್ರೀನ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ, ಜೋಶ್ ಹ್ಯಾಜಲ್‌ವುಡ್.