Site icon Vistara News

AUS vs SA: ಆಸೀಸ್​-ದಕ್ಷಿಣ ಆಫ್ರಿಕಾ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಲಾಭ?

Ground staff bring the covers on

ಕೋಲ್ಕೊತಾ: ಪ್ರಸಕ್ತ ಸಾಗುತ್ತಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ(AUS vs SA) ನಡುವಣ ಸೆಮಿಫೈನಲ್​ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿ(aus vs sa rain delay) ಕೆಲ ಕಾಲ ಪಂದ್ಯ ಸ್ಥಗಿತಗೊಂಡಿತ್ತು. ಸದ್ಯ ಪಂದ್ಯ ಮತ್ತೆ ಆರಂಭಗೊಂಡಿದೆಯಾದರೂ ಮಳೆಯ ಭೀತಿ ಇದ್ದೇ ಇದೆ. ರಾತ್ರಿಯ ವೇಳೆ ಜೋರು ಮಳೆಯಾಗುವ ಸೂಚನೆ ಇದೆ. ಒಂದೊಮ್ಮೆ ಮಳೆ ಬಂದರೆ ಫಲಿತಾಂಶ ಹೇಗೆ ಯಾವ ತಂಡಕ್ಕೆ ಲಾಭ ಎಂದು ಮಾಹಿತಿ ಇಂತಿದೆ.

ಲೀಗ್ ಹಂತದ ಪಂದ್ಯಗಳಿಗೆ ಮೀಸಲು ದಿನ ಇರಲಿಲ್ಲ. ಆದರೆ ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಕ್ಕೆ ಮೀಸಲು ದಿನ ಇದೆ. ಹೀಗಾಗಿ ನಿಗದಿತ ದಿನದಂದು ಪಂದ್ಯ ನಡೆಯದಿದ್ದರೆ ಮೀಸಲು ದಿನವಾದ ಶುಕ್ರವಾರ ಈ ಪಂದ್ಯ ಮುಂದುವರಿಯಲಿದೆ. ಆದರೆ ಇಲ್ಲಿ ಅಭಿಮಾನಿಗಳಿಗೆ ಪಶ್ನೆ ಇರುವುದೇನೆಂದರೆ ಮೀಸಲು ದಿನವೂ ಮಳೆ ಬಂದರೆ ಯಾವ ತಂಡಕ್ಕೆ ಲಾಭ ಎನ್ನುಬುದು.


ಮೀಸಲು ದಿನವೂ ಮಳೆ ಬಂದರೆ

ಒಂದೊಮ್ಮೆ ಆಸ್ಟ್ರೇಲಿಯಾ ಮತ್ತು ದಕಷಿಣ ಆಫ್ರಿಕಾ ನಡುವಿನ ಪಂದ್ಯ ಗುರುವಾರ ಮಳೆಯಿಂದಾಗಿ ಮೀಸಲು ದಿನ ಶುಕ್ರವಾರಕ್ಕೆ ಮುಂದೂಡಿದರೆ, ಮೀಸಲು ದಿನವೂ ಈ ಪಂದ್ಯ ನಡೆಯದಿದ್ದಾಗ ಲೀಗ್​ ಹಂತದಲ್ಲಿ ಹೆಚ್ಚು ಅಂಕ ಮತ್ತು ರನ್​ ರೇಟ್ ಹೊಂದಿರುವ ತಂಡ ಫೈನಲ್​ ಪ್ರವೇಶಿಸಲಿದೆ. ಅಂಕಪಟ್ಟಿಯಲ್ಲಿ ಇತ್ತಂಡಗಳು ಸಮಾನ 14 ಅಂಕ ಹೊಂದಿದ. ಆದರೆ ರನ್​ ರೇಟ್​ನಲ್ಲಿ ದಕ್ಷಿಣ ಆಫ್ರಿಕಾ ಮುಂದಿದೆ. ಹೀಗಾಗಿ ಈ ಲಾಭ ದಕ್ಷಿಣ ಆಫ್ರಿಕಾ ತಂಡಕ್ಕೆ ಸಿಗಲಿದೆ.

ಇದನ್ನೂ ಓದಿ ICC World Cup Final: ಫೈನಲ್​ ಪಂದ್ಯ ವೀಕ್ಷಿಸಬೇಡಿ; ಅಮಿತಾಭ್​ಗೆ ನೆಟ್ಟಿಗರ ಆಗ್ರಹ

ಟೈಗೊಂಡರೆ?

ಕಳೆದ ಬಾರಿಯ ವಿಶ್ವಕಪ್​ ಫೈನಲ್​ನಲ್ಲಿ ಸೂಪರ್​ ಓವರ್​ ಟೈಗೊಂಡಾಗ ಫಲಿತಾಂಶಕ್ಕೆ ಬೌಂಡರಿ ಲೆಕ್ಕಾಚಾರವನ್ನು ಮಾಡಲಾಗಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಈ ಬಾರಿ ಬೌಂಡರಿ ನಿಯಮವನ್ನು ತೆಗೆದು ಹಾಕಲಾಗಿದೆ. ಈ ಬಾರಿ ಸೆಮಿ ಆಗಲಿ ಫೈನಲ್​ ಆಗಲಿ ಟೈ ಗೊಂಡರೆ ಫಲಿತಾಂಶ ಬರುವ ತನಕ ಸೂಪರ್​ ಓವರ್​ ಆಡಿಸಲಾಗುತ್ತದೆ. 1999ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಸೆಮಿಫೈನಲ್​ ಪಂದ್ಯ ಟೈ ಗೊಂಡಿತ್ತು. ಆದರೆ ರನ್ ರೇಟ್​ನಲ್ಲಿ ಮುಂದಿದ್ದ ಆಸ್ಟ್ರೇಲಿಯಾ ಫೈನಲ್​ ಪ್ರವೇಶ ಪಡೆದಿತ್ತು. ಆದರೆ ಇಲ್ಲಿ ಈ ಲಾಭ ಇತ್ತಂಡಗಳಿಗೂ ಸಿಗುವುದಿಲ್ಲ.

ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಅಂಪೈರ್​ಗಳು

ಫೀಲ್ಡ್​ ಅಂಪಾಯರ್: ರಿಚರ್ಡ್‌ ಕೆಟಲ್‌ಬರೋ, ನಿತಿನ್‌ ಮೆನನ್

‌ಥರ್ಡ್‌ ಅಂಪಾಯರ್‌ ;ಕ್ರಿಸ್‌ ಗಫಾನಿ

ಫೋರ್ತ್‌ ಅಂಪಾಯರ್‌: ಮೈಕಲ್‌ ಗಾಫ್

ಮ್ಯಾಚ್‌ ರೆಫ್ರಿ:ಜಾವಗಲ್‌ ಶ್ರೀನಾಥ್‌

Exit mobile version