ಸಿಡ್ನಿ: ಅಕ್ಟೋಬರ್ 5ರಿಂದ(icc world cup 2023 schedule) ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್ಗೆ(ICC World Cup) ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಎರಡು ಬಾರಿಯ ವಿಶ್ವಕಪ್ ವಿಜೇತರಾಗಿರುವ ಮ್ಯಾಥ್ಯೂ ಹೇಡನ್(Matthew Hayden) 15 ಮಂದಿ ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ಅವರ ತಂಡದಲ್ಲಿ ಅಚ್ಚರಿಯ ಆಯ್ಕೆ ಎಂದರೆ ಸಂಜು ಸ್ಯಾಮ್ಸ್ಗೆ ಅವಕಾಶ ನೀಡಿದ್ದು.
ಕೆಲ ದಿನಗಳ ಹಿಂದಷ್ಟೇ ಸೌರವ್ ಗಂಗೂಲಿ ಕೂಡ ವಿಶ್ವಕಪ್ಗೆ ಭಾರತ ತಂಡವನ್ನು ಆಯ್ಕೆ ಮಾಡಿದ್ದರು. ಇದೀಗ ಆಸೀಸ್ನ ಮ್ಯಾಥ್ಯೂ ಹೇಡನ್ ಸರದಿಯಾಗಿದೆ. ವಿಶ್ವಕಪ್ ವಿಚಾರದಲ್ಲಿ ಸ್ಟಾರ್ ಸ್ಪೋರ್ಟ್ಸ್ ದಿನಕ್ಕೊಂದು ಕ್ರಿಕೆಟ್ ದಿಗ್ಗಜರ ಸಂದರ್ಶನವನ್ನು ಮಾಡಿತ್ತಿದೆ. ಈ ಸಂದರ್ಶನದಲ್ಲಿ ಹೇಡನ್ ವಿಶ್ವಕಪ್ಗೆ ಭಾರತ ತಂಡವನ್ನು ಪ್ರಕಟಿಸಿದರು.
ತಂಡದ ಆಯ್ಕೆ ಬಲು ಕಷ್ಟ
ಯಾವುದೇ ಟೂರ್ನಿಗೂ ಆಟಗಾರರನ್ನು ಆಯ್ಕೆ ಮಾಡುವ ಕೆಲಸ ಬಲು ಕಷ್ಟ. ಕ್ರಿಕೆಟ್ ಆಡುವುದು, ಕಾಮೆಂಟ್ರಿ ಮಾಡುವ ಕೆಲಸವಿದ್ದರೆ ನಾನು ಸದಾ ಮುಂದಿರುತ್ತೇನೆ. ಆದರೆ ತಂಡದ ಆಯ್ಕೆ ವಿಚಾರದಲ್ಲಿ ನಾನು ಕೊಂಚ ಅಂತರ ಕಾಯ್ದುಕೊಳ್ಳುತ್ತೇನೆ. ಆದರೂ ನಿಮ್ಮ ಕೋರಿಕೆಯಂತೆ 15 ಆಟಗಾರರ ಭಾರತ ತಂಡವನ್ನು ಪ್ರಕಟಿಸುತ್ತೇನೆ ಎಂದು ಹೇಳಿ ತಂಡ ಪ್ರಕಟಿಸಿದ್ದಾರೆ.
ಸಂಜುಗೆ ಅವಕಾಶ
ಏಷ್ಯಾಕಪ್ಗೆ ಮೀಸಲು ಆಟಗಾರನಾಗಿ ಅವಕಾಶ ಪಡೆದ ಸಂಜು ಸ್ಯಾಮ್ಸನ್ ಅವರನ್ನು ಹೆಡನ್ ವಿಶ್ವಕಪ್ಗೆ ಆಯ್ಕೆ ಮಾಡಿದ್ದಾರೆ. ಆದರೆ ಯಜುವೇಂದ್ರ ಚಹಲ್ ಅವರನ್ನು ಕೈಬಿಟ್ಟಿದ್ದಾರೆ. ಗಂಗೂಲಿ ಕೂಡ ಚಹಲ್ಗೆ ಸ್ಥಾನ ನೀಡಿರಲಿಲ್ಲ. ಆರಂಭಿಕ ಸ್ಥಾನಕ್ಕೆ ರೋಹಿತ್ ಮತ್ತು ಗಿಲ್ ಸೂಕ್ತ ಎಂದಿದ್ದಾರೆ. ಮೂರನೇ ಕ್ರಮಾಂಕದ ಆಟಗಾರನಾಗಿ ಕೊಹ್ಲಿ, ಬಳಿಕ ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಕೆ.ಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ. ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿ ಏಷ್ಯಾಕಪ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ತಿಲಕ್ ವರ್ಮಾ ಅವರನ್ನು ಕೈಬಿಟ್ಟಿದ್ದಾರೆ.
ಕುಲ್ದೀಪ್ಗೂ ಅವಕಾಶವಿಲ್ಲ
ಸ್ಪಿನ್ನರ್ ವಿಭಾಗದಲ್ಲಿ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ ಅನುಭವಿ ಕುಲ್ದೀಪ್ ಅವರನ್ನು ಕೈಬಿಟ್ಟಿರುವುದು ಅಚ್ಚರಿ ತಂದಿದೆ. ಅಕ್ಷರ್ ಪಟೇಲ್ ಹೇಳಿಕೊಳ್ಳುವಂತಹ ಪ್ರದರ್ಶನ ಇದುವರೆಗೂ ಭಾರತ ತಂಡದ ಪರ ನೀಡಿಲ್ಲ. ಹೀಗಿದ್ದರೂ ಅವರಿಗೆ ಅವಕಾಶ ನೀಡಿರುವುದು ಆಶ್ಚರ್ಯಕರ.
ಇದನ್ನೂ ಓದಿ ICC World Cup: ಗಂಗೂಲಿ ವಿಶ್ವಕಪ್ ತಂಡದಲ್ಲಿ ಏಕೈಕ ಕನ್ನಡಿಗನಿಗೆ ಅವಕಾಶ
ವಿಶ್ವ ಕಪ್ ಟೂರ್ನಿ ಅಕ್ಟೋಬರ್ 5 ರಿಂದ ಆರಂಭವಾಗಿ ನವೆಂಬರ್ 19ರ ತನಕ ನಡೆಯಲಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುವ ಈ ಕೂಟದಲ್ಲಿ ಎಲ್ಲ ತಂಡಗಳು ಮುಖಾಮುಖಿಯಾಗಲಿವೆ. ಒಟ್ಟು 48 ಪಂದ್ಯಗಳು ನಡೆಯಲಿವೆ(icc world cup 2023 total matches) ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 3ರವರೆಗೆ 10 ಅಭ್ಯಾಸ ಪಂದ್ಯಗಳು(icc world cup 2023 practice match) ನಡೆಯಲಿದೆ.
ಹೆಡನ್ ಆಯ್ಕೆಯ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಕೆ.ಎಲ್ ರಾಹುಲ್ (ವಿಕೆಟ್‌ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ಅಕ್ಷರ್ ಪಟೇಲ್.