ICC World Cup: ವಿಶ್ವಕಪ್​ಗೆ ಭಾರತ ತಂಡ ಪ್ರಕಟಿಸಿದ ಹೇಡನ್​; ಒಂದು ಅಚ್ಚರಿಯ ಆಯ್ಕೆ - Vistara News

ಕ್ರಿಕೆಟ್

ICC World Cup: ವಿಶ್ವಕಪ್​ಗೆ ಭಾರತ ತಂಡ ಪ್ರಕಟಿಸಿದ ಹೇಡನ್​; ಒಂದು ಅಚ್ಚರಿಯ ಆಯ್ಕೆ

ಹೇಡನ್ ಅವರ ವಿಶ್ವಕಪ್​(ICC World Cup) ತಂಡದಲ್ಲಿ ಕೇರಳದ ಸ್ಟಂಪರ್​ ಸಂಜು ಸ್ಯಾಮನ್ಸ್​ ಸ್ಥಾನ ಪಡೆದಿದ್ದಾರೆ.

VISTARANEWS.COM


on

Australian cricketer Matthew Hayden
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಿಡ್ನಿ: ಅಕ್ಟೋಬರ್​ 5ರಿಂದ(icc world cup 2023 schedule) ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್​ಗೆ(ICC World Cup) ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಎರಡು ಬಾರಿಯ ವಿಶ್ವಕಪ್​ ವಿಜೇತರಾಗಿರುವ ಮ್ಯಾಥ್ಯೂ ಹೇಡನ್(Matthew Hayden)​ 15 ಮಂದಿ ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ಅವರ ತಂಡದಲ್ಲಿ ಅಚ್ಚರಿಯ ಆಯ್ಕೆ ಎಂದರೆ ಸಂಜು ಸ್ಯಾಮ್ಸ್​ಗೆ ಅವಕಾಶ ನೀಡಿದ್ದು.

ಕೆಲ ದಿನಗಳ ಹಿಂದಷ್ಟೇ ಸೌರವ್​ ಗಂಗೂಲಿ ಕೂಡ ವಿಶ್ವಕಪ್​ಗೆ ಭಾರತ ತಂಡವನ್ನು ಆಯ್ಕೆ ಮಾಡಿದ್ದರು. ಇದೀಗ ಆಸೀಸ್​ನ ಮ್ಯಾಥ್ಯೂ ಹೇಡನ್ ಸರದಿಯಾಗಿದೆ. ವಿಶ್ವಕಪ್​ ವಿಚಾರದಲ್ಲಿ ಸ್ಟಾರ್​ ಸ್ಪೋರ್ಟ್ಸ್​ ದಿನಕ್ಕೊಂದು ಕ್ರಿಕೆಟ್​ ದಿಗ್ಗಜರ ಸಂದರ್ಶನವನ್ನು ಮಾಡಿತ್ತಿದೆ. ಈ ಸಂದರ್ಶನದಲ್ಲಿ ಹೇಡನ್​ ವಿಶ್ವಕಪ್​ಗೆ ಭಾರತ ತಂಡವನ್ನು ಪ್ರಕಟಿಸಿದರು.

ತಂಡದ ಆಯ್ಕೆ ಬಲು ಕಷ್ಟ

ಯಾವುದೇ ಟೂರ್ನಿಗೂ ಆಟಗಾರರನ್ನು ಆಯ್ಕೆ ಮಾಡುವ ಕೆಲಸ ಬಲು ಕಷ್ಟ. ಕ್ರಿಕೆಟ್​ ಆಡುವುದು, ಕಾಮೆಂಟ್ರಿ ಮಾಡುವ ಕೆಲಸವಿದ್ದರೆ ನಾನು ಸದಾ ಮುಂದಿರುತ್ತೇನೆ. ಆದರೆ ತಂಡದ ಆಯ್ಕೆ ವಿಚಾರದಲ್ಲಿ ನಾನು ಕೊಂಚ ಅಂತರ ಕಾಯ್ದುಕೊಳ್ಳುತ್ತೇನೆ. ಆದರೂ ನಿಮ್ಮ ಕೋರಿಕೆಯಂತೆ 15 ಆಟಗಾರರ ಭಾರತ ತಂಡವನ್ನು ಪ್ರಕಟಿಸುತ್ತೇನೆ ಎಂದು ಹೇಳಿ ತಂಡ ಪ್ರಕಟಿಸಿದ್ದಾರೆ.

ಸಂಜುಗೆ ಅವಕಾಶ

ಏಷ್ಯಾಕಪ್​ಗೆ ಮೀಸಲು ಆಟಗಾರನಾಗಿ ಅವಕಾಶ ಪಡೆದ ಸಂಜು ಸ್ಯಾಮ್ಸನ್​ ಅವರನ್ನು ಹೆಡನ್​ ವಿಶ್ವಕಪ್​ಗೆ ಆಯ್ಕೆ ಮಾಡಿದ್ದಾರೆ. ಆದರೆ ಯಜುವೇಂದ್ರ ಚಹಲ್​ ಅವರನ್ನು ಕೈಬಿಟ್ಟಿದ್ದಾರೆ. ಗಂಗೂಲಿ ಕೂಡ ಚಹಲ್​ಗೆ ಸ್ಥಾನ ನೀಡಿರಲಿಲ್ಲ. ಆರಂಭಿಕ ಸ್ಥಾನಕ್ಕೆ ರೋಹಿತ್​ ಮತ್ತು ಗಿಲ್​ ಸೂಕ್ತ ಎಂದಿದ್ದಾರೆ. ಮೂರನೇ ಕ್ರಮಾಂಕದ ಆಟಗಾರನಾಗಿ ಕೊಹ್ಲಿ, ಬಳಿಕ ಶ್ರೇಯಸ್​ ಅಯ್ಯರ್​, ಹಾರ್ದಿಕ್​ ಪಾಂಡ್ಯ, ಕೆ.ಎಲ್​ ರಾಹುಲ್​ ಸ್ಥಾನ ಪಡೆದಿದ್ದಾರೆ. ವಿಂಡೀಸ್​ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿ ಏಷ್ಯಾಕಪ್​ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ತಿಲಕ್​ ವರ್ಮಾ ಅವರನ್ನು ಕೈಬಿಟ್ಟಿದ್ದಾರೆ.

ಕುಲ್​ದೀಪ್​ಗೂ ಅವಕಾಶವಿಲ್ಲ

ಸ್ಪಿನ್ನರ್​ ವಿಭಾಗದಲ್ಲಿ ರವೀಂದ್ರ ಜಡೇಜಾ ಮತ್ತು ಅಕ್ಷರ್​ ಪಟೇಲ್​ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ ಅನುಭವಿ ಕುಲ್​ದೀಪ್​ ಅವರನ್ನು ಕೈಬಿಟ್ಟಿರುವುದು ಅಚ್ಚರಿ ತಂದಿದೆ. ಅಕ್ಷರ್​ ಪಟೇಲ್​ ಹೇಳಿಕೊಳ್ಳುವಂತಹ ಪ್ರದರ್ಶನ ಇದುವರೆಗೂ ಭಾರತ ತಂಡದ ಪರ ನೀಡಿಲ್ಲ. ಹೀಗಿದ್ದರೂ ಅವರಿಗೆ ಅವಕಾಶ ನೀಡಿರುವುದು ಆಶ್ಚರ್ಯಕರ.

ಇದನ್ನೂ ಓದಿ ICC World Cup: ಗಂಗೂಲಿ ವಿಶ್ವಕಪ್​ ತಂಡದಲ್ಲಿ ಏಕೈಕ ಕನ್ನಡಿಗನಿಗೆ ಅವಕಾಶ

ವಿಶ್ವ ಕಪ್​ ಟೂರ್ನಿ ಅಕ್ಟೋಬರ್​ 5 ರಿಂದ ಆರಂಭವಾಗಿ ನವೆಂಬರ್​ 19ರ ತನಕ ನಡೆಯಲಿದೆ. ರೌಂಡ್​ ರಾಬಿನ್​ ಮಾದರಿಯಲ್ಲಿ ನಡೆಯುವ ಈ ಕೂಟದಲ್ಲಿ ಎಲ್ಲ ತಂಡಗಳು ಮುಖಾಮುಖಿಯಾಗಲಿವೆ. ಒಟ್ಟು 48 ಪಂದ್ಯಗಳು ನಡೆಯಲಿವೆ(icc world cup 2023 total matches) ಸೆಪ್ಟೆಂಬರ್​ 29 ರಿಂದ ಅಕ್ಟೋಬರ್​ 3ರವರೆಗೆ 10 ಅಭ್ಯಾಸ ಪಂದ್ಯಗಳು(icc world cup 2023 practice match) ನಡೆಯಲಿದೆ.

ಹೆಡನ್​ ಆಯ್ಕೆಯ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್​ ಕೊಹ್ಲಿ, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್‌), ಕೆ.ಎಲ್ ರಾಹುಲ್ (ವಿಕೆಟ್‌ಕೀಪರ್‌), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್​ ಠಾಕೂರ್, ಇಶಾನ್ ಕಿಶನ್, ಅಕ್ಷರ್ ಪಟೇಲ್.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದ ಕುಲ್​ದೀಪ್, ನರೈನ್

IPL 2024: ಚೈನಾಮನ್​ ಖ್ಯಾತಿಯ ಸ್ಪಿನ್ನರ್​ ಕುಲ್​ದೀಪ್​ ಯಾದವ್(35*)​ ಅವರು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿ ಅತ್ಯಧಿಕ ರನ್​ ಗಳಿಸಿದ 2ನೇ ಬ್ಯಾಟರ್​ ಎಂಬ ಕೀರ್ತಿಗೆ ಪಾತ್ರರಾದರು. ಮಾಜಿ ಆಟಗಾರ ಹರ್ಭಜನ್​ ಸಿಂಗ್(49*)​ ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

VISTARANEWS.COM


on

IPL 2024
Koo

ಕೋಲ್ಕತ್ತಾ: ಕೋಲ್ಕತ್ತಾ ನೈಟ್​ ರೇಡರ್ಸ್(Kolkata Knight Riders)​ ಮತ್ತು ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ನಡುವೆ ನಿನ್ನೆ(ಸೋಮವಾರ) ನಡೆದ ಐಪಿಎಲ್​ನ(IPL 2024) 37ನೇ ಲೀಗ್​ ಪಂದ್ಯದಲ್ಲಿ ಸುನೀಲ್​ ನರೈನ್​​(Sunil Narine) ಮತ್ತು ಕುಲ್​ದೀಪ್​ ಯಾದವ್(Kuldeep Yadav) ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಉಭಯ ಆಟಗಾರರ ದಾಖಲೆಯ ವಿವರ ಇಂತಿದೆ.

ಸುನೀಲ್​ ನಾರಾಯಣ್​ ಐಪಿಎಲ್​ನಲ್ಲಿ ಒಂದೇ ಕ್ರೀಡಾಂಗಣದಲ್ಲಿ ಗರಿಷ್ಠ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡರು. ಈ ಮೂಲಕ ಲಸಿತ್ ಮಾಲಿಂಗ ಅವರ ದಾಖಲೆ ಮುರಿದರು. ಮಾಲಿಂಗ ಮುಂಬಯಿಯ ವಾಂಖೆಡೆ ಸ್ಟೇಡಿಯಂನಲ್ಲಿ 68 ವಿಕೆಟ್​ ಕಿತ್ತಿದ್ದಾರೆ. ನಾರಾಯಣ್​ ಕೋಲ್ಕತ್ತಾದ ಈಡನ್​ ಗಾರ್ಡನ್ಸ್​ನಲ್ಲಿ 69 ವಿಕೆಟ್​ ಕಿತ್ತು ಐಪಿಎಲ್​ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಒಂದೇ ಸ್ಟೇಡಿಯಂನಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್


ಸುನೀಲ್​ ನರೈನ್​-69 ವಿಕೆಟ್​ (ಈಡನ್​ ಗಾರ್ಡನ್ಸ್​
)

ಲಸಿತ್​ ಮಾಲಿಂಗ್​-68 ವಿಕೆಟ್​(ವಾಂಖೆಡೆ)

ಅಮಿತ್​ ಮಿಶ್ರಾ-58 ವಿಕೆಟ್​(ಫಿರೋಜ್ ಶಾ ಕೋಟ್ಲಾ)

ಯಜುವೇಂದ್ರ ಚಹಲ್​-52 ವಿಕೆಟ್​(ಬೆಂಗಳೂರು)

ಹರ್ಭಜನ್​ ಸಿಂಗ್​-49 ವಿಕೆಟ್​(ವಾಂಖೆಡೆ)

9ನೇ ಕ್ರಮಾಂಕದಲ್ಲಿ ಕುಲ್​ದೀಪ್ ದಾಖಲೆ​


ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಚೈನಾಮನ್​ ಖ್ಯಾತಿಯ ಸ್ಪಿನ್ನರ್​ ಕುಲ್​ದೀಪ್​ ಯಾದವ್(35*)​ ಅವರು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿ ಅತ್ಯಧಿಕ ರನ್​ ಗಳಿಸಿದ 2ನೇ ಬ್ಯಾಟರ್​ ಎಂಬ ಕೀರ್ತಿಗೆ ಪಾತ್ರರಾದರು. ಮಾಜಿ ಆಟಗಾರ ಹರ್ಭಜನ್​ ಸಿಂಗ್(49*)​ ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ LSG vs MI: ಫಿಟ್​ ಆದ ಶರವೇಗದ ಎಸೆತಗಾರ ಮಾಯಾಂಕ್‌ ಯಾದವ್‌; ಮುಂಬೈ ವಿರುದ್ಧ ಕಣಕ್ಕೆ

ಗಂಗೂಲಿಯ ಐಪಿಎಲ್​ ದಾಖಲೆ ಮುರಿದ ಫಿಲ್​ ಸಾಲ್ಟ್

ಡೆಲ್ಲಿ ಕ್ಯಾಟಪಿಲ್ಸ್​ ವಿರುದ್ಧ ಪ್ರಚಂಡ ಬ್ಯಾಟಿಂಗ್​ ನಡೆಸಿ ಗಮನಸೆಳೆದ ಕೆಕೆಆರ್(​KKR vs DC) ತಂಡದ ಆರಂಭಿಕ ಆಟಗಾರ ಫಿಲ್​ ಸಾಲ್ಟ್(Phil Salt)​ ಅವರು ಮಾಜಿ ಆಟಗಾರ ದಾದಾ ಖ್ಯಾತಿಯ ಸೌರವ್ ಗಂಗೂಲಿಯ(Sourav Ganguly) ಐಪಿಎಲ್​(IPL 2024) ದಾಖಲೆಯೊಂದನ್ನು ಮುರಿದರು.

ಫಿಲ್ ಸಾಲ್ಟ್​ ಅವರು ಅರ್ಧಶತಕ ಬಾರಿಸುವ ಮೂಲಕ ಐಪಿಎಲ್​ ಆವೃತ್ತಿಯೊಂದರಲ್ಲಿ ಕೆಕೆಆರ್​ ಪರ ಈಡನ್ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಎಂಬ ದಾಖಲೆ ಬರೆದರು. ಈ ಮೂಲಕ ಸೌರವ್​ ಗಂಗೂಲಿಯ ದಾಖಲೆಯನ್ನು ಮುರಿದರು. ಗಂಗೂಲಿ 2010ರ ಆವೃತ್ತಿಯಲ್ಲಿ 7 ಇನಿಂಗ್ಸ್​ ಆಡಿ 331 ರನ್​ ಬಾರಿಸಿದ್ದರು. ಆದರೆ ಫಿಲ್​ ಸಾಲ್ಟ್​ ಕೇವಲ 6 ಇನಿಂಗ್ಸ್​ಗಳಿಂದ 344* ರನ್​ ಕಲೆಹಾಕುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಆ್ಯಂಡ್ರೆ ರಸೆಲ್​ ಮೂರನೇ ಸ್ಥಾನದಲ್ಲಿದ್ದಾರೆ. ರಸೆಲ್​ 2019ರಲ್ಲಿ 7 ಇನಿಂಗ್ಸ್​ ನಿಂದ 311 ರನ್​ ಬಾರಿಸಿದ್ದೆರು.

ಫಿಲ್​ ಸಾಲ್ಟ್​-344* ರನ್​, 6* ಇನಿಂಗ್ಸ್​

ಸೌರವ್​ ಗಂಗೂಲಿ-331 ರನ್​, 7 ಇನಿಂಗ್ಸ್​

ಆ್ಯಂಡ್ರೆ ರಸೆಲ್​- 311 ರನ್​, 7 ಇನಿಂಗ್ಸ್​

ಕ್ರಿಸ್​ ಲೀನ್​-303 ರನ್​, 9 ಇನಿಂಗ್ಸ್​

ಕೆಕೆಆರ್​ಗೆ 7 ವಿಕೆಟ್​ ಜಯ

ಈಡನ್​ ಗಾರ್ಡನ್ಸ್​ನಲ್ಲಿ ಸೋಮವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಡೆಲ್ಲಿ​ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 153 ರನ್​ ಬಾರಿಸಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders) 16.3​ ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 157 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಇದು ಕೆಕೆಆರ್​ಗೆ 9ನೇ ಪಂದ್ಯದಲ್ಲಿ ಒಲಿದ 6ನೇ ಗೆಲುವಾಗಿದೆ. ಸದ್ಯ 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ.

Continue Reading

ಕ್ರೀಡೆ

LSG vs MI: ಫಿಟ್​ ಆದ ಶರವೇಗದ ಎಸೆತಗಾರ ಮಾಯಾಂಕ್‌ ಯಾದವ್‌; ಮುಂಬೈ ವಿರುದ್ಧ ಕಣಕ್ಕೆ

LSG vs MI: ಮಯಾಂಕ್​ ಯಾದವ್ ಏಪ್ರಿಲ್​ 7ರಂದು ನಡೆದಿದ್ದ ಗುಜರಾತ್​ ಟೈಟಾನ್ಸ್​ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ಆ ಬಳಿಕದ ಪಂದ್ಯಗಳಿಂದ ಹೊರಗುಳಿದಿದ್ದರು. ಆಡಿದ 3 ಪಂದ್ಯಗಳಿಂದ 6 ವಿಕೆಟ್​ ಕಿತ್ತಿದ್ದಾರೆ. 2 ಬಾರಿ 150ಕ್ಕಿಂತ ಅಧಿಕ ವೇಗದಲ್ಲಿ ಬೌಲಿಂಗ್​ ನಡೆಸಿ ಗಮನಸೆಳೆದಿದ್ದರು.

VISTARANEWS.COM


on

LSG vs MI
Koo

ಲಕ್ನೋ: ಐಪಿಎಲ್​ನಲ್ಲಿ(IPL 2024) ಗಂಟೆಗೆ 150ಕ್ಕಿಂತ ಅಧಿಕ ವೇಗದಲ್ಲಿ ಬೌಲಿಂಗ್​ ನಡೆಸಿ ಭಾರೀ ಸಂಚಲನ ಮೂಡಿಸಿದ ಲಕ್ನೋ ಸೂಪರ್​ ಜೈಂಟ್ಸ್(LSG vs MI)​ ತಂಡದ ಯುವ ವೇಗಿ ಮಯಾಂಕ್​ ಯಾದವ್(Mayank Yadav)​ ಗಾಯದ ಸಮಸ್ಯೆಯಿಂದ ಕೆಲವು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಅವರು ಫಿಟ್​ ಆಗಿದ್ದು ಇಂದು (ಮಂಗಳವಾರ) ನಡೆಯುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಈ ವಿಚಾರವನ್ನು ತಂಡದ ಬೌಲಿಂಗ್​ ಕೋಚ್​ ಮಾರ್ನೆ ಮಾರ್ಕೆಲ್‌(Morne Morkel)​ ಖಚಿತಪಡಿಸಿದ್ದಾರೆ. ಮಯಾಂಕ್​ ಯಾದವ್ ಕಮ್​ಬ್ಯಾಕ್​ನಿಂದ ಲಕ್ನೋ(Lucknow Super Giants) ತಂಡದ ಬೌಲಿಂಗ್​ ವಿಭಾಗ ಮತ್ತಷ್ಟು ಬಲಿಷ್ಠಗೊಂಡಿದೆ.

“ಮಯಾಂಕ್ ಫಿಟ್ ಆಗಿದ್ದಾರೆ. ಅವರು ತಮ್ಮ ಎಲ್ಲಾ ಫಿಟ್ನೆಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ನಾವು ಅವರನ್ನು ತಂಡಕ್ಕೆ ಮರಳಿ ಪಡೆಯಲು ಉತ್ಸುಕರಾಗಿದ್ದೇವೆ. ಮುಂಬೈ ವಿರುದ್ಧ ಆಡುವುದು ಖಚಿತ” ಎಂದು ಮಾರ್ಕೆಲ್‌ ಹೇಳಿದ್ದಾರೆ. ಮಯಾಂಕ್​ ಯಾದವ್ ಏಪ್ರಿಲ್​ 7ರಂದು ನಡೆದಿದ್ದ ಗುಜರಾತ್​ ಟೈಟಾನ್ಸ್​ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ಆ ಬಳಿಕದ ಪಂದ್ಯಗಳಿಂದ ಹೊರಗುಳಿದಿದ್ದರು. ಆಡಿದ 3 ಪಂದ್ಯಗಳಿಂದ 6 ವಿಕೆಟ್​ ಕಿತ್ತಿದ್ದಾರೆ. 2 ಬಾರಿ 150ಕ್ಕಿಂತ ಅಧಿಕ ವೇಗದಲ್ಲಿ ಬೌಲಿಂಗ್​ ನಡೆಸಿ ಗಮನಸೆಳೆದಿದ್ದರು.

ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್(LSG vs MI)​ ಮತ್ತು ಸತತವಾಗಿ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್​ ಸೆಣಸಾಟ ನಡೆಸಲಿದೆ. ಸದ್ಯ ಮುಂಬೈ ಅಂಕಪಟ್ಟಿಯಲ್ಲಿ 9ನೇ ಸ್ಥಾನಿಯಾಗಿರುವ ಮುಂಬೈಗೆ ಪ್ಲೇ ಆಫ್​ ಆಸೆ ಜೀವಂತವಿರಿಸಬೇಕಿದ್ದರೆ ಇದು ಮಸ್ಟ್​ ವಿನ್​ ಗೇಮ್​ ಆಗಿದೆ. ಲಕ್ನೋಗೂ ಕೂಡ ಮಹತ್ವದ ಪಂದ್ಯವಾಗಿದೆ.

ಇದನ್ನೂ ಓದಿ IPL 2024: ಸೌರವ್ ಗಂಗೂಲಿಯ ಐಪಿಎಲ್​ ದಾಖಲೆ ಮುರಿದ ಫಿಲ್​ ಸಾಲ್ಟ್​

ಲಕ್ನೋ ಬ್ಯಾಟಿಂಗ್‌ ಅಗ್ರ ಕ್ರಮಾಂಕವನ್ನು ಹೆಚ್ಚು ಅವಲಂಬಿಸಿದೆ. ರಾಹುಲ್‌- ಡಿ ಕಾಕ್‌ ಕ್ರೀಸ್‌ ಆಕ್ರಮಿಸಿಕೊಂಡರೆ ಮಾತ್ರ ತಂಡಕ್ಕೆ ಗೆಲುವು ಖಚಿತ ಎನ್ನಬಹುದು. ಪವರ್​ ಪ್ಲೇ ತನಕ ಉಭಯ ಆಟಗಾರರು ನಿಲ್ಲದೆ ಹೋದರೆ ತಂಡದ ಬೃಹತ್​ ಮೊತ್ತಕ್ಕೆ ದೊಡ್ಡ ಹೊಡೆತ ಬೀಳಲಿದೆ. ಮಾರ್ಕಸ್​ ಸ್ಟೋಯಿನಿಸ್​ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ತಂಡವನ್ನು ಗೆಲ್ಲಿಸಿದ್ದರೂ ಕೂಡ ಇವರ ಬ್ಯಾಟಿಂಗ್​ ಮೇಲೆ ಹೆಚ್ಚು ನಂಬಿಕೆ ಇಡುವಂತಿಲ್ಲ. ನಿಂತು ಆಡುವ ಕಲೆ ಇವರಿಗೆ ಅಷ್ಟಾಗಿ ತಿಳಿದಿಲ್ಲ. ತಾವೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್​ ಬಾರಿಸುವ ಯೋಚನೆಯಲ್ಲಿರುತ್ತಾರೆ.

ನಿಕೋಲಸ್​ ಪೂರನ್​ ಆರಂಭಿಕ ಕೆಲ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್​ ನಡೆಸಿ ತಂಡಕ್ಕೆ ಆಸರೆಯಾಗುತ್ತಿದ್ದರು. ಆದರೆ, ಈಗ ಅವರ ಬ್ಯಾಟಿಂಗ್​ ಆರ್ಭಟ ಕೊಂಚ ಕಡಿಮೆಯಾದಂತೆ ತೋರುತ್ತಿದೆ. ದೀಪಕ್​ ಹೂಡಾ ಮತ್ತೆ ಬ್ಯಾಟಿಂಗ್​ ಫಾರ್ಮ್​ಗೆ ಮರಳಿರುವುದು ತಂಡಕ್ಕೆ ಬಲ ನೀಡಿದೆ. 

ಪಿಚ್​ ರಿಪೋರ್ಟ್


ಲಕ್ನೋದ ಏಕಾನ ಸ್ಟೇಡಿಯಂನ ಪಿಚ್​ ಇದುವರೆಗೆ ನಿಧಾನಗತಿಯಿಂದ ಕೂಡಿತ್ತು. ಬೌಲರ್‌ಗಳು ಪರಿಣಾಮಕಾರಿಯಾಗಿ ದಾಳಿ ನಡೆಸುವ ಪಿಚ್​ ಇದಾಗಿತ್ತು. ಆದರೆ ಈಗ ಈ ಪಿಚ್​ ಈ ಹಿಂದಿನಂತೆ ವರ್ತಿಸುತ್ತಿಲ್ಲ. ಇಲ್ಲಿ ದೊಡ್ಡ ಮೊತ್ತವನ್ನು ಪೇರಿಸಿದರೂ ಕೂಡ ಚೇಸಿಂಗ್​ ನಡೆಸಬಹುದು. ಇದಕ್ಕೆ ಕಳೆದ 2 ಪಂದ್ಯಗಳ ಫಲಿತಾಂಶವೇ ಉತ್ತಮ ನಿದರ್ಶನ. ಈ ಮೊದಲು ಇಲ್ಲಿ ಟಾಸ್​ ಗೆದ್ದ ತಂಡ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಳ್ಳುತ್ತಿತ್ತು. ಈಗ ಇಲ್ಲಿ ಮಂಚಿನ ಕಾಟ ಶುರುವಾಗಿದ್ದು ಚೇಸಿಂಗ್​ ನಡೆಸಿದ ತಂಡಗಳೇ ಗೆಲ್ಲುತ್ತಿವೆ. ಹೀಗಾಗಿ ಟಾಸ್‌ ಗೆದ್ದವರು ಮೊದಲು ಬ್ಯಾಟಿಂಗ್‌ ಬೌಲಿಂಗ್​ ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆಯಿದೆ.

Continue Reading

ಕ್ರೀಡೆ

IPL 2024: ಸೌರವ್ ಗಂಗೂಲಿಯ ಐಪಿಎಲ್​ ದಾಖಲೆ ಮುರಿದ ಫಿಲ್​ ಸಾಲ್ಟ್​

IPL 2024: ಫಿಲ್ ಸಾಲ್ಟ್​ ಅವರು ಅರ್ಧಶತಕ ಬಾರಿಸುವ ಮೂಲಕ ಐಪಿಎಲ್​ ಆವೃತ್ತಿಯೊಂದರಲ್ಲಿ ಕೆಕೆಆರ್​ ಪರ ಈಡನ್ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಎಂಬ ದಾಖಲೆ ಬರೆದರು. ಈ ಮೂಲಕ ಸೌರವ್​ ಗಂಗೂಲಿಯ ದಾಖಲೆಯನ್ನು ಮುರಿದರು

VISTARANEWS.COM


on

IPL 2024
Koo

ಕೋಲತ್ತಾ: ಡೆಲ್ಲಿ ಕ್ಯಾಟಪಿಲ್ಸ್​ ವಿರುದ್ಧ ಪ್ರಚಂಡ ಬ್ಯಾಟಿಂಗ್​ ನಡೆಸಿ ಗಮನಸೆಳೆದ ಕೆಕೆಆರ್(​KKR vs DC) ತಂಡದ ಆರಂಭಿಕ ಆಟಗಾರ ಫಿಲ್​ ಸಾಲ್ಟ್(Phil Salt)​ ಅವರು ಮಾಜಿ ಆಟಗಾರ ದಾದಾ ಖ್ಯಾತಿಯ ಸೌರವ್ ಗಂಗೂಲಿಯ(Sourav Ganguly) ಐಪಿಎಲ್​(IPL 2024) ದಾಖಲೆಯೊಂದನ್ನು ಮುರಿದಿದ್ದಾರೆ.

ಫಿಲ್ ಸಾಲ್ಟ್​ ಅವರು ಅರ್ಧಶತಕ ಬಾರಿಸುವ ಮೂಲಕ ಐಪಿಎಲ್​ ಆವೃತ್ತಿಯೊಂದರಲ್ಲಿ ಕೆಕೆಆರ್​ ಪರ ಈಡನ್ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಎಂಬ ದಾಖಲೆ ಬರೆದರು. ಈ ಮೂಲಕ ಸೌರವ್​ ಗಂಗೂಲಿಯ ದಾಖಲೆಯನ್ನು ಮುರಿದರು. ಗಂಗೂಲಿ 2010ರ ಆವೃತ್ತಿಯಲ್ಲಿ 7 ಇನಿಂಗ್ಸ್​ ಆಡಿ 331 ರನ್​ ಬಾರಿಸಿದ್ದರು. ಆದರೆ ಫಿಲ್​ ಸಾಲ್ಟ್​ ಕೇವಲ 6 ಇನಿಂಗ್ಸ್​ಗಳಿಂದ 344* ರನ್​ ಕಲೆಹಾಕುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಆ್ಯಂಡ್ರೆ ರಸೆಲ್​ ಮೂರನೇ ಸ್ಥಾನದಲ್ಲಿದ್ದಾರೆ. ರಸೆಲ್​ 2019ರಲ್ಲಿ 7 ಇನಿಂಗ್ಸ್​ ನಿಂದ 311 ರನ್​ ಬಾರಿಸಿದ್ದೆರು.

ಈಡನ್​ ಗಾರ್ಡನ್ಸ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಕೆಕೆಆರ್ ಆಟಗಾರರು


ಫಿಲ್​ ಸಾಲ್ಟ್​-344* ರನ್​, 6* ಇನಿಂಗ್ಸ್​

ಸೌರವ್​ ಗಂಗೂಲಿ-331 ರನ್​, 7 ಇನಿಂಗ್ಸ್​

ಆ್ಯಂಡ್ರೆ ರಸೆಲ್​- 311 ರನ್​, 7 ಇನಿಂಗ್ಸ್​

ಕ್ರಿಸ್​ ಲೀನ್​-303 ರನ್​, 9 ಇನಿಂಗ್ಸ್​

ಚೇಸಿಂಗ್​ ವೇಳೆ ಫಿಲ್​ ಸಾಲ್ಟ್​ 17 ರನ್​ ಗಳಿಸಿದ್ದ ವೇಳೆ ಖಲೀಲ್​ ಅಹ್ಮದ್​ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲಿ ಲಿಜಾಡ್ ವಿಲಿಯಮ್ಸ್ ಅವರಿಂದ ಕ್ಯಾಚ್​ ಕೈಚೆಲ್ಲಿ ಜೀವದಾನ ಪಡೆದರು. ಇದರ ಸಂಪೂರ್ಣ ಲಾಭವೆತ್ತಿದ ಸಾಲ್ಟ್​ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ವಿಲಿಯಮ್ಸ್ ಕಳಪೆ ಫೀಲ್ಡಿಂಗ್​ ಜತೆಗೆ ಬೌಲಿಂಗ್​ನಲ್ಲಿಯೂ ಸರಿಯಾಗಿ ದಂಡಿಸಿಕೊಂಡರು. ಮೂರು ಓವರ್​ಗೆ 38 ರನ್​ ಹೊಡೆಸಿಕೊಂಡರು. ಸಾಲ್ಟ್​ 33 ಎಸೆತಗಳಿಂದ 68 ರನ್​ ಚಚ್ಚಿದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 5 ಸೊಗಸಾದ ಸಿಕ್ಸರ್​ ಮತ್ತು 7 ಬೌಂಡರಿ ಸಿಡಿಯಿತು.

 ಈಡನ್​ ಗಾರ್ಡನ್ಸ್​ನಲ್ಲಿ ಸೋಮವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಡೆಲ್ಲಿ​ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 153 ರನ್​ ಬಾರಿಸಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders) 16.3​ ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 157 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಇದು ಕೆಕೆಆರ್​ಗೆ 9ನೇ ಪಂದ್ಯದಲ್ಲಿ ಒಲಿದ 6ನೇ ಗೆಲುವಾಗಿದೆ. ಸದ್ಯ 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ.

Continue Reading

ಕ್ರೀಡೆ

T20 World Cup 2024: ಇಂದು ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಸಂಭಾವ್ಯ ತಂಡ ಹೀಗಿದೆ

T20 World Cup 2024: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್(Ajit Agarkar)​ ಕಳೆದ 2 ದಿನಗಳ ಹಿಂದೆಯೇ ದೆಹಲಿಯಲ್ಲಿ ಸಭೆ ನಡೆಸಿ ತಂಡವನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ತಂಡ ಪ್ರಕಟಿಸುವ ಸುದ್ದಿಗೋಷ್ಠಿಯಲ್ಲಿ ಅಜಿತ್‌ ಅಗರ್ಕರ್‌ ಮತ್ತು ಕೋಚ್‌ ರಾಹುಲ್‌ ದ್ರಾವಿಡ್‌(Rahul Dravid) ಭಾಗವಹಿಸಲಿದ್ದಾರೆ ಎನ್ನಲಾಗಿದೆ.

VISTARANEWS.COM


on

T20 World Cup 2024
Koo

ಮುಂಬಯಿ: ಟಿ20 ವಿಶ್ವಕಪ್‌ಗೆ(T20 World Cup 2024) ಮಂಗಳವಾರ ಭಾರತೀಯ ತಂಡ(Team India) ಪ್ರಕಟಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ನ್ಯೂಜಿಲ್ಯಾಂಡ್ ತಂಡ ಪ್ರಟಕಗೊಂಡಿದೆ. ಟಿ20 ವಿಶ್ವಕಪ್‌ಗಾಗಿ ತಂಡ ಪ್ರಕಟಿಸಲು ಮೇ 1 (ಬುಧವಾರ) ಕೊನೆಯ ದಿನವಾಗಿರುವುದರಿಂದ ಭಾರತ ಸೇರಿ ಇನ್ನುಳಿದ ದೇಶಗಳು ಕೂಡ ಇಂದೇ ತಮ್ಮ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್(Ajit Agarkar)​ ಕಳೆದ 2 ದಿನಗಳ ಹಿಂದೆಯೇ ದೆಹಲಿಯಲ್ಲಿ ಸಭೆ ನಡೆಸಿ ತಂಡವನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ತಂಡ ಪ್ರಕಟಿಸುವ ಸುದ್ದಿಗೋಷ್ಠಿಯಲ್ಲಿ ಅಜಿತ್‌ ಅಗರ್ಕರ್‌ ಮತ್ತು ಕೋಚ್‌ ರಾಹುಲ್‌ ದ್ರಾವಿಡ್‌(Rahul Dravid) ಭಾಗವಹಿಸಲಿದ್ದಾರೆ ಎನ್ನಲಾಗಿದೆ. ರೋಹಿತ್​ ಅವರು ಇಂದು ಲಕ್ನೋ ವಿರುದ್ಧ ಪಂದ್ಯವನ್ನಾಡುವ ಹಿನ್ನಡೆಯಲ್ಲಿ ಈ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿದುಬಂದಿದೆ.

ತಂಡ ಪ್ರಕಟಗೊಳ್ಳುವ ಮುನ್ನವೇ ಕ್ರಿಕ್​ಬಜ್​ ಸೇರಿ ಕೆಲ ಆಂಗ್ಲ ಮಾಧ್ಯಗಳು ಕೆಲ ಆಟಗಾರರಿಗೆ ಅವಕಾಶ ಸಿಗುವುದು ಅನುಮಾನ ಎನ್ನುವ ಸುದ್ದಿಯನ್ನು ಪ್ರಕಟಿಸಿದೆ. ಕೆಲ ವರದಿಗಳ ಪ್ರಕಾರ ಹಾರ್ದಿಕ್​ ಪಾಂಡ್ಯ ಬದಲು ರಿಷಭ್​ ಪಂತ್ ಅವರನ್ನು ತಂಡದ ಉಪನಾಯಕನನ್ನಾಗಿ ಮಾಡಲಿದ್ದಾರೆ ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಪಂತ್​ ಮೊದಲ ಆಯ್ಕೆಯ ಕೀಪರ್​ ಅಲ್ಲ ಸಂಜು ಸ್ಯಾಮ್ಸನ್​ ಮೊದಲ ಆಯ್ಕೆಯ ಕೀಪರ್​ ಎನ್ನಲಾಗಿದೆ.​

ಇದನ್ನೂ ಓದಿ T20 World Cup 2024: ಆಸ್ಟ್ರೇಲಿಯಾದಿಂದ ಹಡಗಿನಲ್ಲೇ 3 ಕ್ರಿಕೆಟ್ ಪಿಚ್ ತಂದ ಅಮೆರಿಕ

ಭಾರತದ ಸಂಭಾವ್ಯರ ಪಟ್ಟಿ

ರೋಹಿತ್‌ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌/ಕೆ.ಎಲ್​ ರಾಹುಲ್​, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌, ಶಿವಂ ದುಬೆ, ರಿಂಕು ಸಿಂಗ್‌, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಅರ್ಶ್‌ದೀಪ್‌ ಸಿಂಗ್‌, ಆವೇಶ್‌ ಖಾನ್‌/ಮೊಹಮದ್‌ ಸಿರಾಜ್‌.

ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿದೆ. ಆದರೆ, ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ.
ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

Continue Reading
Advertisement
Ballari City MLA Nara Bharat Reddy Election Campaign for Ballari Lok Sabha Constituency Congress Candidate E Tukaram
ಬಳ್ಳಾರಿ19 mins ago

Lok Sabha Election 2024: ಬಳ್ಳಾರಿಗೆ ಕೈಗಾರಿಕೆಗಳನ್ನು ತಂದ ಶ್ರೇಯಸ್ಸು ಕಾಂಗ್ರೆಸ್ ಪಕ್ಷದ್ದು: ನಾರಾ ಭರತ್ ರೆಡ್ಡಿ

maoists killed bastar
ಪ್ರಮುಖ ಸುದ್ದಿ29 mins ago

Maoists killed: ಭದ್ರತಾ ಪಡೆಗಳ ಜತೆ ಗುಂಡಿನ ಚಕಮಕಿ, ಏಳು ಮಾವೋವಾದಿಗಳು ಫಿನಿಶ್

Labour Day 2024
ಮನಿ ಗೈಡ್29 mins ago

Labour Day 2024: ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಉಪಯುಕ್ತ ಹಣಕಾಸು ಟಿಪ್ಸ್‌ ಇಲ್ಲಿದೆ

Hassan Pen Drive Case will tell Rakesh Siddaramaiah died history says HD Kumaraswamy
ಕ್ರೈಂ36 mins ago

Hassan Pen Drive Case: ರಾಕೇಶ್‌ ಸಿದ್ದರಾಮಯ್ಯ ಸಾವಿನ ವೇಳೆ ಏನಾಗಿತ್ತು ಎಂದೂ ಹೇಳುತ್ತೇನೆ: ಎಚ್‌.ಡಿ. ಕುಮಾರಸ್ವಾಮಿ

IPL 2024
ಕ್ರೀಡೆ47 mins ago

IPL 2024: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದ ಕುಲ್​ದೀಪ್, ನರೈನ್

ಸಿನಿಮಾ50 mins ago

Rakhi Sawant: ವೈಮನಸ್ಸು ಬಿಟ್ಟು ಮಾಜಿ ಪತಿ ಜೊತೆ ಒಂದಾದ್ರಾ ರಾಖಿ ಸಾವಂತ್‌?

Hassan Pen Drive Case Sexual assault case Prajwal Revanna suspended from JDS
ಕ್ರೈಂ52 mins ago

Hassan Pen Drive Case: ಲೈಂಗಿಕ ದೌರ್ಜನ್ಯ ಕೇಸ್;‌ ಪ್ರಜ್ವಲ್‌ ರೇವಣ್ಣ ಜೆಡಿಎಸ್‌ನಿಂದ ಅಮಾನತು

Khalistani Separatist Gurpatwant Singh Pannun
ಪ್ರಮುಖ ಸುದ್ದಿ1 hour ago

Gurpatwant Singh Pannun: ಪನ್ನುನ್‌ ಹತ್ಯೆ ಸಂಚಿನಲ್ಲಿ ʼರಾʼ ಕೈವಾಡ: ವಾಷಿಂಗ್ಟನ್‌ ವರದಿಗೆ ಭಾರತ ಕಟು ಟೀಕೆ

Ayushman Bharat Diwas 2024
ಆರೋಗ್ಯ1 hour ago

Ayushman Bharat Diwas 2024: 50 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿರುವ ಅಯುಷ್ಮಾನ್ ಭಾರತ್

Hassan Pen Drive Case Revanna and Siddaramaiah pact in Prajwal case Says Pralhad Joshi
ಕ್ರೈಂ2 hours ago

Hassan Pen Drive Case: ಪ್ರಜ್ವಲ್ ಪ್ರಕರಣದಲ್ಲಿ ರೇವಣ್ಣ-ಸಿದ್ದರಾಮಯ್ಯ ಒಪ್ಪಂದ; ಪ್ರಲ್ಹಾದ್ ಜೋಶಿ ಹೇಳಿದ್ದೇನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ8 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20241 day ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20241 day ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌