Site icon Vistara News

David Warner | ನಾನು ಕ್ರಿಮಿನಲ್‌ ಅಲ್ಲ, ನನ್ನ ಮೇಲಿನ ನಿಷೇಧ ಹಿಂದಕ್ಕೆ ಪಡೆಯಿರಿ ಎಂದ ಆಸೀಸ್‌ ಬ್ಯಾಟರ್‌

Big Bash League

ಕ್ಯಾನ್‌ಬೆರಾ : ಸ್ಯಾಂಡ್‌ ಪೇಪರ್‌ ಹಗರಣದಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ ನಾಯಕತ್ವ ನಿಷೇಧಕ್ಕೆ ಒಳಗಾಗಿರುವ ಆಸ್ಟ್ರೇಲಿಯಾ ತಂಡದ ಸ್ಟಾರ್‌ ಬ್ಯಾಟರ್‌ ಡೇವಿಡ್‌ ವಾರ್ನರ್‌ ಅವರು, ತಮಗೆ ನೀಡಿರುವ ಶಿಕ್ಷೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೀರ್ಘ ಕಾಲ ನಿಷೇಧ ಹೇರಲು ನಾನು ಅಪರಾಧಿ ಅಲ್ಲ ಎಂಬುದಾಗಿಯೂ ಬೇಸರದ ನುಡಿಯನ್ನು ವ್ಯಕ್ತಪಡಿಸಿದ್ದಾರೆ.

ಬಾಲ್‌ ವಿರೂಪ ಪ್ರಕರಣದಲ್ಲಿ ಸ್ಟೀವ್‌ ಸ್ಮಿತ್ ಹಾಗೂ ಡೇವಿಡ್‌ ವಾರ್ನರ್‌ಗೆ ತಲಾ ಒಂದು ವರ್ಷ ನಿಷೇಧ ಶಿಕ್ಷೆಯನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ಪ್ರಕಟಿಸಿತ್ತು. ಅಲ್ಲದೆ, ಕ್ಯಾಮೆರೂನ್‌ ಬ್ಯಾಂಕ್ರಾಫ್ಟ್‌ಗೆ ೯ ತಿಂಗಳು ನಿಷೇಧ ಹೇರಲಾಗಿತ್ತು. ಆ ಅವಧಿ ಮುಗಿದು ವಾರ್ನರ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದಾರೆ. ಆದರೆ ಅವರಿಗೆ ಹೇರಲಾಗಿದ್ದ ನಾಯಕತ್ವ ನಿಷೇಧ ಶಿಕ್ಷೆಯನ್ನು ವಾಪಸ್‌ ಪಡೆದಿಲ್ಲ. ಅದಕ್ಕಾಗಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವಾರ್ನರ್ ಅವರ ಮೇಲಿನ ನಾಯಕತ್ವ ನಿಷೇಧವನ್ನು ವಾಪಸ್‌ ಪಡೆಯಬೇಕೆಂದು ಆಸ್ಟ್ರೇಲಿಯಾದ ಕ್ರಿಕೆಟ್‌ ಆಟಗಾರರ ಒಕ್ಕೂಟದ ಕ್ರಿಕೆಟ್‌ ಅಸ್ಟ್ರೇಲಿಯಾ ಪ್ರಸಕ್ತ ವರ್ಷಾರಂಭದಲ್ಲಿ ಮನವಿ ಮಾಡಿತ್ತು. ಅದಕ್ಕಿನ್ನೂ ಸಮ್ಮತಿ ಸಿಕ್ಕಿಲ್ಲ ಹಾಗೂ ನಿಷೇಧ ವಾಪಸ್‌ ಮಾಡುವ ನಿಟ್ಟಿನಲ್ಲಿ ನಿಯಮಗಳ ಬದಲಾವಣೆ ಅಗತ್ಯ ಎಂಬುದಾಗಿ ಅಭಿಪ್ರಾಯಪಟ್ಟಿದೆ.

ಇದರಿಂದ ಬೇಸರಗೊಂಡಿರುವ ವಾರ್ನರ್‌ ಅವರು ಕ್ರಿಕೆಟ್‌ ಆಸ್ಟ್ರೇಲಿಯಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ಮೇಲೆ ನಿಷೇಧ ಹೇರುವ ನಿರ್ಧಾರವನ್ನು ೨೦೧೮ರಲ್ಲಿ ಕೇವಲ ನಾಲ್ಕು ದಿನಗಳಲ್ಲಿ ತೆಗೆದುಕೊಳ್ಳಲಾಗಿದೆ. ಆದರೀಗ ನಿಷೇಧ ವಾಪಸ್‌ ಪಡೆಯಲು ೯ ತಿಂಗಳಾದರೂ ಸಾಧ್ಯವಾಗಿಲ್ಲ. ಅಷ್ಟೊಂದು ದೊಡ್ಡ ಮಟ್ಟಿಗೆ ಕ್ರಮ ಕೈಗೊಳ್ಳಲು ನಾನೇನು ಕ್ರಿಮಿನಲ್‌ ಅಲ್ಲ ಎಂದಿದ್ದಾರೆ.

ಇದನ್ನೂ ಓದಿ | Big Bash League | ಮಗಳು ಆಟ ನೋಡಬೇಕೆಂತೆ, ಅದಕ್ಕೆ ಇಲ್ಲೇ ಆಡುವೆ ಎಂದ ಡೇವಿಡ್‌ ವಾರ್ನರ್‌

Exit mobile version