David Warner | ನಾನು ಕ್ರಿಮಿನಲ್‌ ಅಲ್ಲ, ನನ್ನ ಮೇಲಿನ ನಿಷೇಧ ಹಿಂದಕ್ಕೆ ಪಡೆಯಿರಿ ಎಂದ ಆಸೀಸ್‌ ಬ್ಯಾಟರ್‌ - Vistara News

ಕ್ರಿಕೆಟ್

David Warner | ನಾನು ಕ್ರಿಮಿನಲ್‌ ಅಲ್ಲ, ನನ್ನ ಮೇಲಿನ ನಿಷೇಧ ಹಿಂದಕ್ಕೆ ಪಡೆಯಿರಿ ಎಂದ ಆಸೀಸ್‌ ಬ್ಯಾಟರ್‌

ತಮ್ಮ ಮೇಲಿನ ನಾಯಕತ್ವ ಶಿಕ್ಷೆಯನ್ನು ತೆರವು ಮಾಡುವಂತೆ ಆಸ್ಟ್ರೇಲಿಯಾದ ಬ್ಯಾಟರ್‌ ಡೇವಿಡ್‌ ವಾರ್ನರ್‌ ಮನವಿ ಮಾಡಿದ್ದಾರೆ.

VISTARANEWS.COM


on

Big Bash League
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕ್ಯಾನ್‌ಬೆರಾ : ಸ್ಯಾಂಡ್‌ ಪೇಪರ್‌ ಹಗರಣದಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ ನಾಯಕತ್ವ ನಿಷೇಧಕ್ಕೆ ಒಳಗಾಗಿರುವ ಆಸ್ಟ್ರೇಲಿಯಾ ತಂಡದ ಸ್ಟಾರ್‌ ಬ್ಯಾಟರ್‌ ಡೇವಿಡ್‌ ವಾರ್ನರ್‌ ಅವರು, ತಮಗೆ ನೀಡಿರುವ ಶಿಕ್ಷೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೀರ್ಘ ಕಾಲ ನಿಷೇಧ ಹೇರಲು ನಾನು ಅಪರಾಧಿ ಅಲ್ಲ ಎಂಬುದಾಗಿಯೂ ಬೇಸರದ ನುಡಿಯನ್ನು ವ್ಯಕ್ತಪಡಿಸಿದ್ದಾರೆ.

ಬಾಲ್‌ ವಿರೂಪ ಪ್ರಕರಣದಲ್ಲಿ ಸ್ಟೀವ್‌ ಸ್ಮಿತ್ ಹಾಗೂ ಡೇವಿಡ್‌ ವಾರ್ನರ್‌ಗೆ ತಲಾ ಒಂದು ವರ್ಷ ನಿಷೇಧ ಶಿಕ್ಷೆಯನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ಪ್ರಕಟಿಸಿತ್ತು. ಅಲ್ಲದೆ, ಕ್ಯಾಮೆರೂನ್‌ ಬ್ಯಾಂಕ್ರಾಫ್ಟ್‌ಗೆ ೯ ತಿಂಗಳು ನಿಷೇಧ ಹೇರಲಾಗಿತ್ತು. ಆ ಅವಧಿ ಮುಗಿದು ವಾರ್ನರ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದಾರೆ. ಆದರೆ ಅವರಿಗೆ ಹೇರಲಾಗಿದ್ದ ನಾಯಕತ್ವ ನಿಷೇಧ ಶಿಕ್ಷೆಯನ್ನು ವಾಪಸ್‌ ಪಡೆದಿಲ್ಲ. ಅದಕ್ಕಾಗಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವಾರ್ನರ್ ಅವರ ಮೇಲಿನ ನಾಯಕತ್ವ ನಿಷೇಧವನ್ನು ವಾಪಸ್‌ ಪಡೆಯಬೇಕೆಂದು ಆಸ್ಟ್ರೇಲಿಯಾದ ಕ್ರಿಕೆಟ್‌ ಆಟಗಾರರ ಒಕ್ಕೂಟದ ಕ್ರಿಕೆಟ್‌ ಅಸ್ಟ್ರೇಲಿಯಾ ಪ್ರಸಕ್ತ ವರ್ಷಾರಂಭದಲ್ಲಿ ಮನವಿ ಮಾಡಿತ್ತು. ಅದಕ್ಕಿನ್ನೂ ಸಮ್ಮತಿ ಸಿಕ್ಕಿಲ್ಲ ಹಾಗೂ ನಿಷೇಧ ವಾಪಸ್‌ ಮಾಡುವ ನಿಟ್ಟಿನಲ್ಲಿ ನಿಯಮಗಳ ಬದಲಾವಣೆ ಅಗತ್ಯ ಎಂಬುದಾಗಿ ಅಭಿಪ್ರಾಯಪಟ್ಟಿದೆ.

ಇದರಿಂದ ಬೇಸರಗೊಂಡಿರುವ ವಾರ್ನರ್‌ ಅವರು ಕ್ರಿಕೆಟ್‌ ಆಸ್ಟ್ರೇಲಿಯಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ಮೇಲೆ ನಿಷೇಧ ಹೇರುವ ನಿರ್ಧಾರವನ್ನು ೨೦೧೮ರಲ್ಲಿ ಕೇವಲ ನಾಲ್ಕು ದಿನಗಳಲ್ಲಿ ತೆಗೆದುಕೊಳ್ಳಲಾಗಿದೆ. ಆದರೀಗ ನಿಷೇಧ ವಾಪಸ್‌ ಪಡೆಯಲು ೯ ತಿಂಗಳಾದರೂ ಸಾಧ್ಯವಾಗಿಲ್ಲ. ಅಷ್ಟೊಂದು ದೊಡ್ಡ ಮಟ್ಟಿಗೆ ಕ್ರಮ ಕೈಗೊಳ್ಳಲು ನಾನೇನು ಕ್ರಿಮಿನಲ್‌ ಅಲ್ಲ ಎಂದಿದ್ದಾರೆ.

ಇದನ್ನೂ ಓದಿ | Big Bash League | ಮಗಳು ಆಟ ನೋಡಬೇಕೆಂತೆ, ಅದಕ್ಕೆ ಇಲ್ಲೇ ಆಡುವೆ ಎಂದ ಡೇವಿಡ್‌ ವಾರ್ನರ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

David Johnson : ಬದುಕಿನ ಆಟ ಮುಗಿಸಿದ ‘ವೇಗ ದೂತ’

David Johnson : ಡೇವಿಡ್ ಜಾನ್ಸನ್ ಅಂದುಕೊಂಡಂತೆ ಅವರ ಕ್ರಿಕೆಟ್ ಜರ್ನಿ ಸಾಗಲಿಲ್ಲ. ಅದ್ಭುತ ಪ್ರತಿಭೆ ಇದ್ರೂ ಅವಕಾಶಗಳು ಒಲಿದು ಬರಲಿಲ್ಲ. ಸಿಕ್ಕ ಎರಡು ಅವಕಾಶಗಳಲ್ಲಿ ಮಿಂಚಿನ ವೇಗವಿದ್ರೂ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಆಗಲಿಲ್ಲ. ಆಪ್ತ ಗೆಳೆಯರಾದ ಜಾವಗಲ್ ಶ್ರೀನಾಥ್‌, ವೆಂಕಟೇಶ್ ಪ್ರಸಾದ್‌ ಸ್ಥಿರ ಪ್ರದರ್ಶನದ ಮುಂದೆ ಡೇವಿಡ್ ಜಾನ್ಸನ್‌ ವೇಗದ ಎಸೆತಗಳು ಲೆಕ್ಕಕ್ಕೆ ಬರಲಿಲ್ಲ.

VISTARANEWS.COM


on

David Johnson
Koo

ಸನತ್ ರೈ, ಬೆಂಗಳೂರು

ಯಾರೋ ಕರೆದಂತೆ ಭಾಸವಾಗುತ್ತಿದೆ.. ಬಾ, ಬಾ, ಬಾ, ಅಂತ ಕೂಗಿ ಕರೆಯುವ ಧ್ವನಿ ಕೇಳುತ್ತಿದೆ. ನನಗೆ ತುಂಬಾನೇ ಭಯವಾಗುತ್ತಿದೆ. ನಾನು ಜಾಸ್ತಿ ದಿನ ಬದುಕಲ್ಲ ಅಂತ ಅನ್ನಿಸುತ್ತಿದೆ… ಹೀಗೆ ತನ್ನ ಜೀವನದ ಕೊನೆಯ ದಿನಗಳಲ್ಲಿ ತನ್ನ ಪತ್ನಿ ಜೊತೆ ಹೇಳಿಕೊಂಡಿದ್ದವ, ಕೊನೆಗೂ ‘ಕಾಲ’ನ ಕರೆಗೆ ಓಗೊಟ್ಟು ಈ ಲೋಕದ ಯಾತ್ರೆ ಮುಗಿಸಿದ. ಹೌದು.. ಆತನ ಹೆಸರು ಡೇವಿಡ್ ಜಾನ್ಸನ್ (David Johnson). 90ರ ದಶಕದ ಭಾರತದ ಘಾತಕ ವೇಗಿ. ಯಾಕಂದ್ರೆ, ಅದು ಗಂಟೆಗೆ 157.8 ಕಿಲೋ ಮೀಟರ್ ವೇಗದಲ್ಲಿ ನುಗ್ಗಿ ಬರುತ್ತಿದ್ದಂತಹ ಬೆಂಕಿ ಎಸೆತಗಳು.

ಡೇವಿಡ್‌ ಅವರ ಡೆವಿಲ್ ಎಸೆತಗಳಲ್ಲಿ ಸ್ಥಿರತೆ ಇರಲಿಲ್ಲ. ಆದ್ರೂ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದವರು ನಮ್ಮ ಕರ್ನಾಟಕದ ವೇಗ ದೂತ. ಇನ್ನು ರಣಜಿ ಕ್ರಿಕೆಟ್‌ನಲ್ಲಂತೂ ಡೇವಿಡ್ ಜಾನ್ಸನ್ ಕರ್ನಾಟಕದ ಬ್ರಹ್ಮಾಸ್ತ್ರವಾಗಿದ್ದರು. ಸ್ಪೀಡ್ ಗನ್ ಎಂದೇ ಫೇಮಸ್ ಆಗಿದ್ದ ಡೇವಿಡ್‌ ಜಾನ್ಸನ್‌ ಅವರು ಸಚಿನ್ ತೆಂಡುಲ್ಕರ್ ಅವರನ್ನೇ ಕ್ಲೀನ್ ಬೌಲ್ಡ್ ಮಾಡಿದ್ದರು. ನೆಟ್ ಬೌಲರ್ ಆಗಿ ಸಚಿನ್‌ಗೆ ಬೌಲಿಂಗ್ ಮಾಡಿದ್ದ ಡೇವಿಡ್ ಜಾನ್ಸನ್‌, ಕ್ರಿಕೆಟ್ ಜೀನಿಯಸ್‌ನ ಮನ ಗೆದ್ದಿದ್ದರು.

ಆದ್ರೆ ಡೇವಿಡ್ ಜಾನ್ಸನ್ ಅಂದುಕೊಂಡಂತೆ ಅವರ ಕ್ರಿಕೆಟ್ ಜರ್ನಿ ಸಾಗಲಿಲ್ಲ. ಅದ್ಭುತ ಪ್ರತಿಭೆ ಇದ್ರೂ ಅವಕಾಶಗಳು ಒಲಿದು ಬರಲಿಲ್ಲ. ಸಿಕ್ಕ ಎರಡು ಅವಕಾಶಗಳಲ್ಲಿ ಮಿಂಚಿನ ವೇಗವಿದ್ರೂ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಆಗಲಿಲ್ಲ. ಆಪ್ತ ಗೆಳೆಯರಾದ ಜಾವಗಲ್ ಶ್ರೀನಾಥ್‌, ವೆಂಕಟೇಶ್ ಪ್ರಸಾದ್‌ ಸ್ಥಿರ ಪ್ರದರ್ಶನದ ಮುಂದೆ ಡೇವಿಡ್ ಜಾನ್ಸನ್‌ ವೇಗದ ಎಸೆತಗಳು ಲೆಕ್ಕಕ್ಕೆ ಬರಲಿಲ್ಲ.

ಹೀಗಾಗಿಯೇ ಡೇವಿಡ್ ಜಾನ್ಸನ್ ಕೇವಲ ಎರಡೇ ಎರಡು ಟೆಸ್ಟ್ ಪಂದ್ಯಗಳಿಗೆ ಸೀಮಿತವಾದರು. 1996 ಅಕ್ಟೋಬರ್ 10ರಂದು ಆಸೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದರೆ, 1996 ಡಿಸೆಂಬರ್ 26ರಂದು ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು. 2 ಪಂದ್ಯಗಳಲ್ಲಿ ಒಟ್ಟು ಮೂರು ವಿಕೆಟ್ ಪಡೆದಿದ್ದಾರೆ. ಅದರಲ್ಲೂ ಘಾತಕ ವೇಗಕ್ಕೆ ಆಸೀಸ್‌ನ ಮೈಕೆಲ್ ಸ್ಲೇಟರ್ ವಿಕೆಟ್ ಉರುಳಿಸಿದ್ದು ಇತಿಹಾಸದ ಪುಟದಲ್ಲಿ ಇಂದಿಗೂ ಉಳಿದಿದೆ.

ಸಿಗದ ಅದೃಷ್ಟ

ನಂತರ ಡೇವಿಡ್ ಜಾನ್ಸನ್‌‌ಗೆ ಭಾರತ ಕ್ರಿಕೆಟ್ ತಂಡದ ಅದೃಷ್ಟದ ಬಾಗಿಲು ತೆರೆಯಲೇ ಇಲ್ಲ. ಬಳಿಕ ಕೇವಲ ಕರ್ನಾಟಕ ರಣಜಿ ತಂಡಕ್ಕೆ ಸೀಮಿತವಾದ್ರು. 2001ರಲ್ಲಿ ತನ್ನ ಕ್ರಿಕೆಟ್ ಬದುಕಿಗೂ ವಿದಾಯ ಹೇಳಿದ್ದರು. 39 ರಣಜಿ ಪಂದ್ಯಗಳನ್ನು ಆಡಿರುವ ಡೇವಿಡ್ ಜಾನ್ಸನ್, 125 ವಿಕೆಟ್ ಕಬಳಿಸಿದ್ರು. ಕೇರಳ ವಿರುದ್ಧ 152ಕ್ಕೆ ಹತ್ತು ವಿಕೆಟ್ ಪಡೆದಿರುವುದು ಅವರ ಬೆಸ್ಟ್ ಬೌಲಿಂಗ್ ಫಿಗರ್‌. ಮತ್ತೊಂದೆಡೆ ಡೇವಿಡ್ ಜಾನ್ಸನ್ ಉತ್ತಮ ಬ್ಯಾಟರ್ ಕೂಡ ಆಗಿದ್ದರು. ಬೌಲಿಂಗ್‌ನಲ್ಲಿ ದೊಡ್ಡ ಗಣೇಶ್ ಜೊತೆ ಸೇರಿಕೊಂಡು ಎದುರಾಳಿ ತಂಡಕ್ಕೆ ಕಾಡುತ್ತಿದ್ದ ಈ ಜೋಡಿ ಬ್ಯಾಟಿಂಗ್‌ನಲ್ಲೂ ಎದುರಾಳಿ ಬೌಲರ್‌ಗಳನ್ನು ಪೀಡಿಸುತ್ತಿದ್ದರು.

ಡೇವಿಡ್ ಜಾನ್ಸನ್ ಕ್ರಿಕೆಟ್ ಬದುಕು ಅಂದುಕೊಂಡಂತೆ ಸಾಗಲಿಲ್ಲ. ಅವಕಾಶಗಳ ಕೊರತೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.vಖಿನ್ನತೆಗೆ ಒಳಗಾದ ಡೇವಿಡ್‌ ಜಾನ್ಸನ್ ಅವರು ತನ್ನ ಬದುಕಿನ ಬಂಡಿಯ ಕೀಲನ್ನು ಮುರಿದುಕೊಂಡರು. ತನ್ನ ವರ್ಣರಂಜಿತ ಕ್ರಿಕೆಟ್ ಬದುಕನ್ನು ಕೈಯ್ಯಾರೆ ಹಾಳು ಮಾಡಿಕೊಂಡರು. ಇನ್ನೊಂದೆಡೆ ಹೆಣ್ಣೂರಿನಲ್ಲಿ ಡೇವಿಡ್ ಜಾನ್ಸನ್ ಕ್ರಿಕೆಟ್ ಅಕಾಡೆಮಿ ಶುರು ಮಾಡಿದ್ರೂ ಅದು ಕೈ ಹಿಡಿಯಲಿಲ್ಲ. ಹಾಗೇ ಸರ್ಜಾಪುರದಲ್ಲಿ ಗೆಳೆಯನ ಅಕಾಡೆಮಿಯಲ್ಲಿ ಕೆಲವೊಂದು ಸಮಯ ವೇಗದ ಬೌಲಿಂಗ್ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದರು.

ಇದನ್ನೂ ಓದಿ: T20 World Cup 2024 : ಸೂಪರ್​ 8 ಹಂತದ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಭಾರತಕ್ಕೆ47 ರನ್ ಭರ್ಜರಿ ಜಯ

ಆದ್ರೆ ಎಷ್ಟೇ ಪ್ರಯತ್ನ ಪಟ್ರೂ ಡೇವಿಡ್ ಜಾನ್ಸನ್ ಆರ್ಥಿಕವಾಗಿ ಸಾಕಷ್ಟು ಹಿನ್ನಡೆ ಅನುಭವಿಸಿದ್ದರು. ಸಾಕಷ್ಟು ಬಾರಿ ಗೆಳೆಯರು ಸಹಕಾರ ನೀಡಿದ್ರು. ಆದ್ರೆ ಮತ್ತೆ ಸಹವಾಸ ದೋಷದಿಂದ ಮತ್ತೆ ಎಡವಿ ಬಿದ್ರು. ರಾಜಪಥದಲ್ಲಿ ಸಾಗುತ್ತಿದ್ದ ತನ್ನ ಬದುಕನ್ನು ಕವಲುದಾರಿಯಲ್ಲಿ ಸಾಗುವಂತೆ ಮಾಡಿಕೊಂಡರು. ದುಡಿಯಬೇಕು ಎಂದು ಮನಸ್ಸು ಹೇಳುತ್ತಿದ್ರೂ ದೇಹ ಸ್ಪಂದಿಸುತ್ತಿರಲಿಲ್ಲ. ಆದ್ರೂ ಡೇವಿಡ್ ಜಾನ್ಸನ್ ಉತ್ಸಾಹ ಕಳೆದುಕೊಂಡಿರಲಿಲ್ಲ. ಎಲ್ಲವೂ ಅಂದುಕೊಂಡಂತೆ ಆಗುತ್ತಿದ್ರೆ ಇದೀಗ ಡೇವಿಡ್ ಜಾನ್ಸನ್, ಕರ್ನಾಟಕ ಕ್ರಿಕೆಟ್ ಅಕಾಡೆಮಿಯ ವೇಗದ ಬೌಲಿಂಗ್ ಕೋಚ್‌ ಆಗಬೇಕಾಗಿತ್ತು. ಕೆಎಸ್‌ಸಿಎ ಕೂಡ ಡೇವಿಡ್‌ಗೆ ಆರ್ಥಿಕ ಸಹಾಯ ಮಾಡಲು ಮುಂದಾಗಿತ್ತು.

ಆದ್ರೆ ವಿಧಿಯಾಟ ಬೇರೆನೇ ಆಗಿತ್ತು. ಜೂನ್ 20, 2024ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬಾಲ್ಕನಿಯಲ್ಲಿ ವಾಕ್ ಮಾಡುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದು ಉಸಿರು ಚೆಲ್ಲಿದ್ರು. 53ನೇ ವಯಸ್ಸಿಗೆ ಪಯಣ ಮುಗಿಸಿದ ಡೇವಿಡ್ ಜಾನ್ಸನ್ ಸಾವಿನ ಹಿಂದೆ ಸಾಕಷ್ಟು ಅನುಮಾನಗಳು ಮೂಡಿವೆ. ಆದ್ರೆ ಡೇವಿಡ್ ಪತ್ನಿ ಅವ್ರಿಲ್ಲಾ ಸ್ಪಷ್ಟನೆ ನೀಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಡೇವಿಡ್ ಬಾಲ್ಕನಿಯಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಅದು ಏನೇ ಆಗಲಿ, ಡೇವಿಡ್ ಜಾನ್ಸನ್ ಎಂಬ ಘಾತಕ ವೇಗಿ ತನ್ನ ಬದುಕಿನ ಲೀಲೆ ಮುಗಿಸಿದ್ದಾರೆ. ಇನ್ನು ಏನಿದ್ರೂ ಅವರ ನೆನಪು ಮಾತ್ರ.

ಡೇವಿಡ್ ಜಾನ್ಸನ್ ಕ್ರಿಕೆಟ್ ಜರ್ನಿ

ಡೇವಿಡ್ ಜಾನ್ಸನ್ ಹುಟ್ಟಿದ್ದು ಅ.16,1971, ಹಾಸನದ ಅರಸೀಕೆರೆ
1992ರಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಡೇವಿಡ್ ಜಾನ್ಸನ್ ಎಂಟ್ರಿ
19996ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದ ಜಾನ್ಸನ್
ಚೊಚ್ಚಲ ಪಂದ್ಯದಲ್ಲೇ ಮೈಕೆಲ್ ಸ್ಲೇಟರ್ ವಿಕೆಟ್ ಪಡೆದಿದ್ದ ಡೇವಿಡ್ ಜಾನ್ಸನ್‌
ಟೀಮ್ ಇಂಡಿಯಾ ಪರ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದ ಜಾನ್ಸನ್
ಆಸೀಸ್ ವಿರುದ್ಧ 157.8 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದ್ದ ಜಾನ್ಸನ್
1996ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಗಿದ್ದ ಡೇವಿಡ್
ಕೇರಳ ವಿರುದ್ಧ 152ಕ್ಕೆ 10 ವಿಕೆಟ್ ಪಡೆದು ಭಾರತ ತಂಡದ ಕದ ತಟ್ಟಿದ ಡೇವಿಡ್
ರಾಜ್ಯದ ಪರ 39 ರಣಜಿ ಪಂದ್ಯಗಳಲ್ಲಿ 125 ವಿಕೆಟ್ ಪಡೆದಿರುವ ಡೇವಿಡ್ ಜಾನ್ಸನ್

Continue Reading

ಕ್ರೀಡೆ

T20 World Cup 2024 : ಸೂಪರ್​ 8 ಹಂತದ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಭಾರತಕ್ಕೆ47 ರನ್ ಭರ್ಜರಿ ಜಯ

T20 World Cup 2024 :ಇಲ್ಲಿನ ಕೆನ್ಸಿಂಗ್ಟನ್​ ಓವಲ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 181 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಅಫಘಾನಿಸ್ತಾನ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 134 ರನ್ ಬಾರಿಸಿ ಆಲ್​ಔಟ್​ ಆಗಿ 47 ರನ್​ಗಳ ಸೋಲಿಗೆ ಒಳಗಾಯಿತು.

VISTARANEWS.COM


on

T20 World Cup 2024
Koo

ಬ್ರಿಜ್​ಟೌನ್​ (ವೆಸ್ಟ್​ ಇಂಡೀಸ್​) : ಟಿ20 ವಿಶ್ವ ಕಪ್​ನ (T20 World Cup 2024) ಸೂಪರ್​ 8 ಹಂತದಲ್ಲಿ ಭಾರತ ತಂಡ ಅಫಘಾನಿಸ್ತಾನ ತಂಡದ ವಿರುದ್ಧ.. ರನ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ ಗುಂಪು 2ರಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ. ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ತಂಡ ಆಫಘಾನಿಸ್ತಾನ ತಂಡದ ವಿರುದ್ಧ ಸುಲಭ ವಿಜಯ ತನ್ನದಾಗಿಸಿಕೊಂಡಿತು. ಸೂರ್ಯಕುಮಾರ್ ಯಾದವ್​ (53 ರನ್​, 28 ಎಸೆತ, 5 ಫೊರ್, 3 ಸಿಕ್ಸರ್) ಹಾಗೂ ಜಸ್​ಪ್ರಿತ್ ಬುಮ್ರಾ (3 ವಿಕೆಟ್​, 4 ಓವರ್​, 7 ರನ್​) ಬಾರತ ತಂಡದ ಗೆಲುವಿನ ರೂವಾರಿಗಳೆನಿಸಿಕೊಂಡರು. ಭಾರತ ತಂಡ ಸೂಪರ್ 8 ಹಂತದ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಇಲ್ಲಿನ ಕೆನ್ಸಿಂಗ್ಟನ್​ ಓವಲ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 181 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಅಫಘಾನಿಸ್ತಾನ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 134 ರನ್ ಬಾರಿಸಿ ಆಲ್​ಔಟ್​ ಆಗಿ 47 ರನ್​ಗಳ ಸೋಲಿಗೆ ಒಳಗಾಯಿತು.

ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಆಫ್ಘಾನ್ ಬಳಗಕ್ಕೆ ಉತ್ತಮ ಆರಂಭ ದೊರಕಲಿಲ್ಲ. ಆರಂಭಿಕರಾದ ರಹ್ಮನುಲ್ಲಾ ಗುರ್ಬಜ್​ (11 ರನ್​), ಹಜರತುಲ್ಲಾ ಝಝೈ (2) ಬುಮ್ರಾ ಬೌಲಿಂಗ್​ಗೆ ಔಟಾದರು. ಇಬ್ರಾಹಿ ಝದ್ರಾನ್​ 8 ರನ್​ ಬಾರಿಸಿ ಅಕ್ಷರ್ ಪಟೇಲ್​ಗೆ ವಿಕೆಟ್​ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅಜ್ಮತುಲ್ಲಾ ಒಮರ್ಜೈ (26 ರನ್​), ನಜೀಬುಲ್ಲಾ ಝದ್ರಾನ್​ (19) ರನ್​ ಬಾರಿಸಿ ಸ್ವಲ್ಪ ಪ್ರತಿರೋಧ ತೋರಿದರು. ಆದರೆ ಆಟವನ್ನು ಮುಂದುವರಿಸಲು ಭಾರತೀಯ ಬೌಲರ್​ಗಳು ಅವಕಾಶ ಕೊಡಲಿಲ್ಲ. ಜಡೇಜಾ ಹಾಗೂ ಬುಮ್ರಾ ಅವರಿಬ್ಬರನ್ನು ವಾಪಸ್​​ ಕಳಹಿಸಿದರು.ಮೊಹಮ್ಮದ್ ನಬಿ 14 ರನ್ ಬಾರಿಸಿ ಔಟಾಗುವ ವೇಳೆ ಅಫಘಾನಿಸ್ತಾನ ತಂಡದ ಸೋಲು ನಿಶ್ಚಯವಾಗಿತ್ತು.

ಇದನ್ನೂ ಓದಿ: Team India : ಗೌತಮ್​ ಗಂಭೀರ್ ಅಲ್ಲ, ವಿವಿಎಸ್​​ ಲಕ್ಷ್ಮಣ್​ ಟೀಮ್ ಇಂಡಿಯಾಗೆ ಹೆಡ್​ ಕೋಚ್​​!

ಸೂರ್ಯಕುಮಾರ್ ಅರ್ಧ ಶತಕ

ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ನಾಯಕ ರೋಹಿತ್ ಶರ್ಮಾ (8 ರನ್​) ಮತ್ತೆ ವೈಫಲ್ಯ ಎದುರಿಸಿದರು. ವಿರಾಟ್ ಕೊಹ್ಲಿ 24 ರನ್ ಬಾರಿಸಿ ಅಭಿಮಾನಿಗಳಿಗೆ ಸಮಾಧಾನ ತಂದರು . ರಿಷಭ್ ಪಂತ್ ಒಂದು ಜೀವದಾನ ಪಡೆದ ಹೊರತಾಗಿಯೂ 20 ರನ್​ಗೆ ಸೀಮಿತಗೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಸೂರ್ಯಕುಮಾರ್​ ಯಾದವ್ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದರು. ಮೈದಾನ ತುಂಬಾ ಅಬ್ಬರಿಸಿದ ಅವರು 53 ರನ್ ಬಾರಿಸಿದರು. ಅಫಘಾನಿಸ್ತಾನದ ಬೌಲರ್​ಗಳು ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಹೊರತಾಗಿಯೂ ಅವರು ಬೌಂಡರಿ, ಸಿಕ್ಸರ್​ಗಳನ್ನು ಬಾರಿಸಿ ಮಿಂಚಿದರು. ಇವರಿಗೆ ಹಾರ್ದಿಕ್ ಪಾಂಡ್ಯ ಉತ್ತಮ ಬೆಂಬಲ ಕೊಟ್ಟರು. 24 ಎಸೆತಕ್ಕೆ 32 ರನ್ ಬಾರಿಸಿದರು. ಪಾಂಡ್ಯ ಇನಿಂಗ್ಸ್​ನಲ್ಲಿ 3 ಫೋರ್​ ಹಾಗೂ 1 ಸಿಕ್ಸರ್ ಸೇರಿಕೊಂಡಿದೆ. ಈ ನಡುವೆ ಶಿವಂ ದುಬೆ 10 ರನ್ ಬಾರಿಸಿ ಔಟಾದರು. ಕೊನೆಯಲ್ಲಿ ರವೀಂದ್ರ ಜಡೇಜಾ 7 ರನ್ ಬಾರಿಸಿದರೆ ಅಕ್ಷರ್ ಪಟೇಲ್​ 12 ರನ್ ಕೊಡುಗೆ ಕೊಟ್ಟರು.

Continue Reading

ಕ್ರೀಡೆ

Narendra Modi : ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ; ಶ್ರೀನಗರದಲ್ಲಿ ನಿಂತು ಉಗ್ರರ ದಮನಕ್ಕೆ ಶಪಥ ತೊಟ್ಟ ಮೋದಿ

Narendra Modi : ಶ್ರೀನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಶಾಂತಿಯ ಶತ್ರುಗಳು ಮಾನವೀಯತೆಯನ್ನು ಇಷ್ಟಪಡುವುದಿಲ್ಲ. ಇಂದು, ಅವರು ಜಮ್ಮು ಮತ್ತು ಕಾಶ್ಮೀರದ ಪ್ರಗತಿಯ ವಿರೋಧಿಗಳು. ಅವರು ತಮ್ಮ ಕೊನೆಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇತ್ತೀಚಿನ ಭಯೋತ್ಪಾದಕ ದಾಳಿಗಳನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.

VISTARANEWS.COM


on

Narendra modi
Koo

ಬೆಂಗಳೂರು : ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಎಲ್ಲರಿಗೂ ತಕ್ಕ ಪಾಠ ಕಲಿಸುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಉಗ್ರರ ಧಮನಕ್ಕೆ ಶಪಥ ತೊಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ದಿನಗಳ ಭೇಟಿಯ ಭಾಗವಾಗಿ ಗುರುವಾರ ಯುವ ಸಬಲೀಕರಣ, ಪರಿವರ್ತನೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಈ ಕಠಿಣ ಹೇಳಿಕೆ ನೀಡಿದ್ದಾರೆ. ಮಾತನಾಡುತ್ತ ಉಗ್ರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಸರಣಿ ಭಯೋತ್ಪಾದಕ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ವಿನಾಶಕಾರಿ ಶಕ್ತಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಜಮ್ಮು- ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲಾಗುವುದು ಎಂದು ಜನರಿಗೆ ಭರವಸೆ ನೀಡಿದ ಪಿಎಂ ಮೋದಿ, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗಳು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಸಿದ್ಧತೆಗಳು ನಡೆಯುತ್ತಿವೆ ಎಂದು ಭರವಸೆ ಕೊಟ್ಟರು. ಶಾಂತಿ ಮತ್ತು ಮಾನವೀಯತೆಯ ಶತ್ರುಗಳು ಜಮ್ಮು ಮತ್ತು ಕಾಶ್ಮೀರದ ಪ್ರಗತಿಯನ್ನು ಇಷ್ಟಪಡುವುದಿಲ್ಲ ಎಂದು. ಕೇಂದ್ರಾಡಳಿತ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗಳನ್ನು ಕೇಂದ್ರವು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ಸಾರ್ವಜನಿಕರಿಗೆ ಭರವಸೆ ನೀಡಿದರು.

ಶ್ರೀನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಶಾಂತಿಯ ಶತ್ರುಗಳು ಮಾನವೀಯತೆಯನ್ನು ಇಷ್ಟಪಡುವುದಿಲ್ಲ. ಇಂದು, ಅವರು ಜಮ್ಮು ಮತ್ತು ಕಾಶ್ಮೀರದ ಪ್ರಗತಿಯ ವಿರೋಧಿಗಳು. ಅವರು ತಮ್ಮ ಕೊನೆಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇತ್ತೀಚಿನ ಭಯೋತ್ಪಾದಕ ದಾಳಿಗಳನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಗೃಹ ಸಚಿವರು (ಅಮಿತ್ ಶಾ) ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಶೀಲಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯವು ಸ್ಥಳೀಯ ಆಡಳಿತದ ಸಹಯೋಗದೊಂದಿಗೆ ಜಮ್ಮು ಮತ್ತು ಕಾಶ್ಮೀರದ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ಪರಿಶೀಲಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.

ನಾವು ಹಿಂಜರಿಯುವುದಿಲ್ಲ

ಭಯೋತ್ಪಾದಕ ದಾಳಿಯ ಬಗ್ಗೆ ಕಠಿಣ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ, ಜಮ್ಮು ಮತ್ತು ಕಾಶ್ಮೀರದ ಶತ್ರುಗಳಿಗೆ ಪಾಠ ಕಲಿಸಲು ನಾವು ಹಿಂಜರಿಯುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: NEET UG ROW : ಎನ್​ಟಿಎ ಕಾರ್ಯನಿರ್ವಹಣೆ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ಜನರು ಶಾಂತಿಯಿಂದ ಬದುಕುತ್ತಾರೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ವಿಶ್ವಾಸ ವ್ಯಕ್ತಪಡಿಸಿರು “ಜಮ್ಮು ಮತ್ತು ಕಾಶ್ಮೀರದ ಹೊಸ ಪೀಳಿಗೆಯು ಶಾಶ್ವತ ಶಾಂತಿಯೊಂದಿಗೆ ಬದುಕುತ್ತದೆ. ಜಮ್ಮು ಮತ್ತು ಕಾಶ್ಮೀರ ಆಯ್ಕೆ ಮಾಡಿಕೊಂಡಿರುವ ಅಭಿವೃದ್ಧಿಯ ಹಾದಿಯನ್ನು ನಾವು ಬಲಪಡಿಸುತ್ತೇವೆ” ಎಂದು ಹೇಳಿದರು. ಶುಕ್ರವಾರ ಶ್ರೀನಗರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.

ಜೂನ್ 9 ರಿಂದ, ಜಮ್ಮು ಮತ್ತು ಕಾಶ್ಮೀರದ ರಿಯಾಸಿ, ಕಥುವಾ ಮತ್ತು ದೋಡಾದ ನಾಲ್ಕು ಸ್ಥಳಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆದಿವೆ, ಅಲ್ಲಿ ಒಂಬತ್ತು ಯಾತ್ರಿಕರು ಸಾವನ್ನಪ್ಪಿದ್ದಾರೆ, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್) ಜವಾನ್ ಸಾವನ್ನಪ್ಪಿದ್ದಾರೆ, ನಾಗರಿಕರೊಬ್ಬರು ಗಾಯಗೊಂಡಿದ್ದು, ಕನಿಷ್ಠ ಏಳು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

Continue Reading

ಪ್ರಮುಖ ಸುದ್ದಿ

Team India : ಗೌತಮ್​ ಗಂಭೀರ್ ಅಲ್ಲ, ವಿವಿಎಸ್​​ ಲಕ್ಷ್ಮಣ್​ ಟೀಮ್ ಇಂಡಿಯಾಗೆ ಹೆಡ್​ ಕೋಚ್​​!

Team India: ಲಕ್ಷ್ಮಣ್ ಮತ್ತು ಕೆಲವು ಎನ್​ಸಿಎ ತರಬೇತುದಾರರು ಹೊಸ ಲುಕ್ ತಂಡದೊಂದಿಗೆ ಜಿಂಬಾಬ್ವೆಗೆ ಪ್ರಯಾಣಿಸುವ ಸಾಧ್ಯತೆಯಿದೆ. ರಾಹುಲ್ ದ್ರಾವಿಡ್ ಮತ್ತು ಮೊದಲ ತಂಡದ ತರಬೇತುದಾರರು ತಮ್ಮ ಅಧಿಕಾರಾವಧಿಯಲ್ಲಿ ಕಾಲಕಾಲಕ್ಕೆ ವಿರಾಮ ತೆಗೆದುಕೊಳ್ಳುವಾಗಲೆಲ್ಲಾ ಲಕ್ಷ್ಮಣ್ ಮತ್ತು ಎನ್​ಸಿಎ ತಂಡವು ಆ ಸ್ಥಾನ ತುಂಬುತ್ತಿತ್ತು ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.

VISTARANEWS.COM


on

Team India
Koo

ನವದೆಹಲಿ: ಭಾರತ ತಂಡದ (Team India) ಮುಂದಿನ ಹೆಡ್​ ಕೋಚ್ ಆಗಿ ಗೌತಮ್ ಗಂಭೀರ್ ನೇಮಕವಾಗಲಿದ್ದಾರೆ ಎಂಬ ಚರ್ಚೆಯ ನಡುವೆ ಮಾಜಿ ಬ್ಯಾಟರ್​​ ವಿವಿಎಸ್ ಲಕ್ಷ್ಮಣ್ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (NCT) ಅವರ ಸಹಾಯಕ ಸಿಬ್ಬಂದಿ ಮುಂಬರುವ ಟಿ 20 ಐ ಸರಣಿಗಾಗಿ ಟೀಮ್ ಇಂಡಿಯಾದೊಂದಿಗೆ ಜಿಂಬಾಬ್ವೆಗೆ ತೆರಳಲಿದ್ದಾರೆ ಎಂಬುದಾಗಿ ವರದಿಯಾಗಿದೆ.

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಯಾರೆಂದು ಬಿಸಿಸಿಐ ಇನ್ನೂ ಘೋಷಿಸಿಲ್ಲ. 2024ರ ಐಸಿಸಿ ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಬಿಸಿಸಿಐ ಇತ್ತೀಚೆಗೆ ಗೌತಮ್ ಗಂಭೀರ್ ಮತ್ತು ಡಬ್ಲ್ಯುವಿ ರಾಮನ್ ಅವರನ್ನು ಈ ಹುದ್ದೆಗೆ ಸಂದರ್ಶನ ಮಾಡಿದೆ. ದ್ರಾವಿಡ್ ಅವರ ಸ್ಥಾನವನ್ನು ತುಂಬಲು ಅವರು ಮುಂಚೂಣಿಯಲ್ಲಿದ್ದಾರೆ. ಆದಾಗ್ಯೂ, ಗಂಭೀರ್ ಜಿಂಬಾಬ್ವೆ ವಿರುದ್ಧದ ಸರಣಿಯೊಂದಿಗೆ ತಮ್ಮ ಅಧಿಕಾರಾವಧಿಯನ್ನು ಪ್ರಾರಂಭಿಸುವ ಸಾಧ್ಯತೆಯಿಲ್ಲ.

ಪಿಟಿಐ ವರದಿಯ ಪ್ರಕಾರ, ಭಾರತದ ಕೋಚ್ ಆಗಿ ಗೌತಮ್ ಗಂಭೀರ್ ಅವರ ಮೊದಲ ನೇಮಕವು ಶ್ರೀಲಂಕಾ ಪ್ರವಾಸವಾಗಲಿದೆ. ಗಂಭೀರ್ ಅವರ ನೇಮಕವು ಮುಗಿದ ಒಪ್ಪಂದವಾಗಿದೆ ಮತ್ತು ಬಿಸಿಸಿಐನಿಂದ ಪ್ರಕಟಣೆ ಕೇವಲ ಔಪಚಾರಿಕವಷ್ಟೆ. ಮಂಡಳಿಯು ಮುಂದಿನ ಕೆಲವು ದಿನಗಳಲ್ಲಿ ದ್ರಾವಿಡ್ ಅವರ ಬದಲಿ ಘೋಷಿಸುವ ಸಾಧ್ಯತೆಯಿದೆ. ನೇಮಕದ ನಂತರ, ಗಂಭೀರ್ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ತರಬೇತುದಾರರನ್ನು ಒಳಗೊಂಡ ತಮ್ಮ ಸಹಾಯಕ ಸಿಬ್ಬಂದಿಯನ್ನು ಆಯ್ಕೆ ಮಾಡುವ ಅವಕಾಶ ಪಡೆಯಲಿದ್ದಾರೆ.

ಲಕ್ಷ್ಮಣ್ ಮತ್ತು ಕೆಲವು ಎನ್​ಸಿಎ ತರಬೇತುದಾರರು ಹೊಸ ಲುಕ್ ತಂಡದೊಂದಿಗೆ ಜಿಂಬಾಬ್ವೆಗೆ ಪ್ರಯಾಣಿಸುವ ಸಾಧ್ಯತೆಯಿದೆ. ರಾಹುಲ್ ದ್ರಾವಿಡ್ ಮತ್ತು ಮೊದಲ ತಂಡದ ತರಬೇತುದಾರರು ತಮ್ಮ ಅಧಿಕಾರಾವಧಿಯಲ್ಲಿ ಕಾಲಕಾಲಕ್ಕೆ ವಿರಾಮ ತೆಗೆದುಕೊಳ್ಳುವಾಗಲೆಲ್ಲಾ ಲಕ್ಷ್ಮಣ್ ಮತ್ತು ಎನ್​ಸಿಎ ತಂಡವು ಆ ಸ್ಥಾನ ತುಂಬುತ್ತಿತ್ತು ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.

ಜಿಂಬಾಬ್ವೆ ಪ್ರವಾಸಕ್ಕೆ ಯುವ ತಂಡ


ಜುಲೈ 6 ರಿಂದ ನಡೆಯಲಿರುವ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆದಾರರು ಎರಡನೇ ಸ್ಟ್ರಿಂಗ್ ತಂಡ ಆಯ್ಕೆ ಮಾಡುವ ಸಾಧ್ಯತೆಯಿದೆ. ಪ್ರಸ್ತುತ ಟಿ 20 ವಿಶ್ವಕಪ್​​ನಲ್ಲಿ ಭಾಗವಹಿಸುತ್ತಿರುವ ತಂಡದಲ್ಲಿ 6 ರಿಂದ 7 ಸದಸ್ಯರು ಇರಲಿದ್ದು, ಉಳಿದ ಆಟಗಾರರು ಹೊಸ ಮುಖಗಳಾಗಿರುತ್ತಾರೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: T20 World Cup : ಕೈಗೆ ಕಪ್ಪು ಪಟ್ಟಿ ಧರಿಸಿ ಆಡಿದ ಭಾರತ ತಂಡದ ಆಟಗಾರರು!

ರಿಯಾನ್ ಪರಾಗ್, ಅಭಿಷೇಕ್ ಶರ್ಮಾ ಮತ್ತು ನಿತೀಶ್ ರೆಡ್ಡಿ ಅವರಂತಹ ಆಟಗಾರರು ಸರಣಿಗೆ ಆಯ್ಕೆಯಾಗುವ ಸಾಧ್ಯತೆಯಿದೆ. ಈ ಮೂವರು ಆಟಗಾರರು ಈ ವರ್ಷದ ಐಪಿಎಲ್​ನಲ್ಲಿ ತಮ್ಮ ಪ್ರದರ್ಶನದಿಂದ ಪ್ರಭಾವ ಬೀರಿದ್ದಾರೆ. ಮುಂದಿನ ತಿಂಗಳು ಟಿ20 ಐಗೆ ಪಾದಾರ್ಪಣೆ ಮಾಡುವ ಅವಕಾಶ ಪಡೆಯುವ ಸಾಧ್ಯತೆಯಿದೆ. ಜಿಂಬಾಬ್ವೆ ಪ್ರವಾಸಕ್ಕೆ ತಂಡವನ್ನು ಈ ವಾರದ ಅಂತ್ಯದ ವೇಳೆಗೆ ಘೋಷಿಸುವ ನಿರೀಕ್ಷೆಯಿದೆ.

Continue Reading
Advertisement
IRCTC Ticket Booking
Latest5 mins ago

IRCTC Ticket Booking: ರೈಲ್ವೆ ಟಿಕೆಟ್ ಈ ರೀತಿ ಬುಕ್ ಮಾಡಿದರೆ ಜೈಲೂಟ ಗ್ಯಾರಂಟಿ!

Viral Video
Latest8 mins ago

Viral Video : ಇನ್‌ಸ್ಟಾಗ್ರಾಂ ರೀಲ್ಸ್ ಕ್ರೇಜ್‌; ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿದ ಹುಡುಗಿ!

Israel-Hamas Conflict
ವಿದೇಶ13 mins ago

Israel-Hamas Conflict: ಇಸ್ರೇಲ್‌ ಏರ್‌ಸ್ಟ್ರೈಕ್- ಹಮಾಸ್‌ ಕಮಾಂಡರ್‌ ಹತ್ಯೆ

Actor Darshan case sanjana galrani Reaction about ramya statement
ಸ್ಯಾಂಡಲ್ ವುಡ್41 mins ago

Actor Darshan: ದರ್ಶನ್‌ಗೆ ಗಲ್ಲು ಶಿಕ್ಷೆ ಆಗಬೇಕು ಎಂದ ರಮ್ಯಾಗೆ ಕೌಂಟರ್‌ ಕೊಟ್ಟ ಸಂಜನಾ ಗಲ್ರಾನಿ!

Liquor Price Karnataka
ಪ್ರಮುಖ ಸುದ್ದಿ49 mins ago

Liquor Price Karnataka: ಮದ್ಯ ಪ್ರಿಯರಿಗೆ ಕಿಕ್‌ ಏರಿಸುವ ನ್ಯೂಸ್‌; ಜುಲೈ 1ರಿಂದ ಬೆಲೆ ಇಳಿಕೆ

Pakistan Violence
ವಿದೇಶ1 hour ago

Pakistan Violence: ಕುರಾನ್‌ಗೆ ಅಪಮಾನ; ಪೊಲೀಸ್‌ ಸ್ಟೇಶನ್‌ಗೆ ಬೆಂಕಿ..ಠಾಣೆಯೊಳಗೇ ಆರೋಪಿಯ ಬರ್ಬರ ಕೊಲೆ

Actor Darshan was careful at every step to escape from Renuka case
ಸ್ಯಾಂಡಲ್ ವುಡ್1 hour ago

Actor Darshan: ಕೇಸ್‌ನಿಂದ ತಪ್ಪಿಸಿಕೊಳ್ಳೋಕೆ ಪ್ರತಿ ಹಂತದಲ್ಲೂ ಎಚ್ಚರವಹಿಸಿದ್ದ ದರ್ಶನ್; ಬೇಟೆಯ ಹಿಂದೆ ಭರ್ಜರಿ ಮಾಸ್ಟರ್‌ ಪ್ಲ್ಯಾನ್‌!

pm narendra modi international yoga day 2024
ಪ್ರಮುಖ ಸುದ್ದಿ2 hours ago

International Yoga Day 2024: ಯೋಗ ದಿನಚರಿಯ ಭಾಗವಾಗಲಿ: ಶ್ರೀನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ

Darshan Arrested troll of pavithra darshan in SSE A
ಸ್ಯಾಂಡಲ್ ವುಡ್2 hours ago

Darshan Arrested: ಇದು ʻಸಪ್ತ ಶೆಡ್ಡಿನಾಚೆ SSE side ‘D’! ಟ್ರೋಲ್‌ ಆದ್ರು ದರ್ಶನ್‌-ಪವಿತ್ರಾ!

Pavithra Gowda is restless without proper food and sleep in Parappa Agrahara
ಕ್ರೈಂ2 hours ago

Pavithra Gowda: ಪರಪ್ಪನ ಅಗ್ರಹಾರದಲ್ಲಿ ಸರಿಯಾಗಿ ಊಟ, ನಿದ್ರೆ ಮಾಡದೆ ಚಡಪಡಿಸುತ್ತಿರುವ ಪವಿತ್ರ ಗೌಡ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ16 hours ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು4 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು4 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ5 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ5 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ5 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ6 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ7 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು7 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು7 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಟ್ರೆಂಡಿಂಗ್‌