Site icon Vistara News

ICC World Cup 2023 : ಆಸ್ಟ್ರೇಲಿಯಾ ತಂಡ ಸೆಮೀಸ್​ಗೆ, ಅಂಕಪಟ್ಟಿಯಲ್ಲಿ ಆಫ್ಘನ್​ ಸ್ಥಾನವೇನು?

Glenn Maxwell

ಮುಂಬಯಿ: ಗ್ಲೆನ್​ ಮ್ಯಾಕ್ಸ್​ವೆಲ್ ಅವರ ದ್ವಿಶತಕದ (ಅಜೇಯ 201 ರನ್​) ನೆರವು ಪಡೆದ ಆಸ್ಟ್ರೇಲಿಯಾ ತಂಡ ಅಫಘಾನಿಸ್ತಾನ ವಿರುದ್ಧದ ತನ್ನ ವಿಶ್ವ ಕಪ್​ ಪಂದ್ಯದಲ್ಲಿ (ICC World Cup 2023) 3 ವಿಕೆಟ್​ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಪ್ಯಾಟ್ ಕಮಿನ್ಸ್ ನೇತೃತ್ವದ ಆಸೀಸ್​ ಬಳಗ ವಿಶ್ವ ಕಪ್​ನ ಸೆಮಿಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ. ಆಸ್ಟ್ರೇಲಿಯಾ ತಂಡ ಪ್ರಸ್ತುತ ಆರು ಗೆಲುವುಗಳೊಂದಿಗೆ ಒಟ್ಟು 12 ಅಂಕಗಳನ್ನು ಪಡೆದು ಮೂರನೇ ಸ್ಥಾನ ಪಡೆದುಕೊಂಡಿದೆ. ಈ ತಂಡಕ್ಕೆ ಇನ್ನೂ ಒಂದು ಪಂದ್ಯ ಬಾಕಿ ಇದೆ. ಅದು ಬಾಂಗ್ಲಾದೇಶ ತಂಡದ ವಿರುದ್ಧ. ಅಲ್ಲೂ ಗೆದ್ದರೆ ಗರಿಷ್ಢ 14 ಅಂಕಗಳನ್ನ ಗಳಿಸಬಹುದು. ಹೀಗಾಗಿ ಗರಿಷ್ಠ ಎರಡನೇ ಸ್ಥಾನಕ್ಕೆ ಮಾತ್ರ ಏರಲು ಆಸ್ಟ್ರೇಲಿಯಾ ತಂಡಕ್ಕೆ ಸಾಧ್ಯವಿದೆ.

ಪ್ರಸ್ತು ದಕ್ಷಿಣ ಆಫ್ರಿಕಾ ತಂಡ 6 ಗೆಲುವಿನೊಂದಿಗೆ 12 ಅಂಕಗಳನ್ನು ಸಂಪಾದಿಸಿಕೊಂಡು ಎರಡನೇ ಸ್ಥಾನದಲ್ಲಿದೆ. ಅದು (+1.376) ಆಸ್ಟ್ರೇಲಿಯಾ ತಂಡಕ್ಕಿಂತ (+0.861) ಹೆಚ್ಚಿನ ರನ್​ರೇಟ್​ ಹೊಂದಿರುವ ಕಾರಣ ಎರಡನೇ ಸ್ಥಾನ ಪಡೆದಿದೆ. ಎರಡೂ ತಂಡಗಳಿಗೆ ತಲಾ ಒಂದು ಪಂದ್ಯ ಬಾಕಿ ಇದೆ. ದಕ್ಷಿಣ ಆಫ್ರಿಕಾಗೆ ಅಫಘಾನಿಸ್ತಾನ ತಂಡವೇ ಎದುರಾಳಿ. ಹೀಗಾಗಿ ಆ ತಂಡವೂ ಗೆಲ್ಲುವ ಚಾನ್ಸ್ ಇದೆ. ಆದಾಗ್ಯೂ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ, ಎರಡನೇ ಮತ್ತು ಮೂರನೇ ಸ್ಥಾನವನ್ನು ಮಾತ್ರ ಪಡೆಯಲು ಸಾಧ್ಯವಿದೆ. ಹೀಗಾಗಿ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗುವುದು ಖಚಿತ.

ಇದನ್ನೂ ಓದಿ: Glenn Maxwell : ಆಫ್ಘನ್ ವಿರುದ್ಧ ದ್ವಿಶತಕ ಬಾರಿಸಿ ಹಲವು ದಾಖಲೆಗಳನ್ನು ಛಿದ್ರಗೊಳಿಸಿದ ಮ್ಯಾಕ್ಸ್​ವೆಲ್

ಇನ್ನು ಮೊದಲ ಸ್ಥಾನಕ್ಕೆ ಭಾರತಕ್ಕೆ ನಿಶ್ಚಿವಾಗಿದೆ. ಆತಿಥೇಯ ಭಾರತ ಸೆಮೀಸ್​ಗೆ ಪ್ರವೇಶ ಪಡೆಯಲು ಹೊಂಚು ಹಾಕುತ್ತಿರುವ ನ್ಯೂಜಿಲ್ಯಾಂಡ್​, ಅಫಘಾನಿಸ್ತಾನ ಮತ್ತು ಪಾಕಿಸ್ತಾನ ತಂಡದಲ್ಲಿ ಒಂದನ್ನು ಸೆಮೀಸ್​ನಲ್ಲಿ ಎದುರಿಸಿದೆ.

ಅಂಕ ಪಟ್ಟಿ ಇಲ್ಲಿದೆ

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ಭಾರತ88016+2.456
ದಕ್ಷಿಣ ಆಫ್ರಿಕಾ86212+1.376
ಆಸ್ಟ್ರೇಲಿಯಾ​86212+0.861
ನ್ಯೂಜಿಲ್ಯಾಂಡ್8448+0.398
ಪಾಕಿಸ್ತಾನ8448+0.036
ಅಫಘಾನಿಸ್ತಾನ8448-0.338
ಬಾಂಗ್ಲಾದೇಶ​ 8264-1.142
ಶ್ರೀಲಂಕಾ8264-1.160
ನೆದರ್ಲ್ಯಾಂಡ್ಸ್7254-1.398
ಇಂಗ್ಲೆಂಡ್​​​ 7162-1.504

ಭಾರತ ತಂಡ ಒಟ್ಟು 16 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಮುಂದುವರಿಸಿದೆ. ಅಲ್ಲದೆ, ಭಾರತವೀಗ ಗರಿಷ್ಠ +2.456 ನೆಟ್​ರನ್ ರೇನ್​ ಪಡೆದುಕೊಂಡಿದೆ. ಅತ್ತ ದಕ್ಷಿಣ ಆಫ್ರಿಕಾ ತಂಡ 12 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಕಾಪಾಡಿಕೊಂಡಿದೆ. ಅದರೆ, ಬೃಹತ್​ ಅಂತರದ ಸೋಲಿನೊಂದಿಗೆ ನೆಟ್​ರನ್​ರೇಟ್ ಕಳೆದುಕೊಂಡಿದೆ. ಪಂದ್ಯಕ್ಕೆ ಮೊದಲು +2.290 ನೆಟ್​ರನ್​ರೇಟ್​ ಹೊಂದಿದ್ದ ಹರಿಣಗಳ ಪಡೆ +1.376 ರನ್​ರೇಟ್​ಗೆ ಇಳಿದಿದೆ. ಈ ಲೆಕ್ಕಾಚಾರದ ಪ್ರಕಾರ ನೋಡುವುದಾದರೆ ಭಾರತ ತಂಡ ಲೀಗ್ ಹಂತದ ಮುಕ್ತಾಯದ ವೇಳೆಗೆ ಅಗ್ರ ಕ್ರಮಾಂಕವನ್ನು ಕಾಪಾಡಿಕೊಳ್ಳುವುದು ಬಹುತೇಕ ನಿಶ್ಚಿತ.

Exit mobile version