Site icon Vistara News

ICC World Cup 2023 : ಚಾಂಪಿಯನ್​ ಆಸೀಸ್ ತಂಡಕ್ಕೆ ಇನ್ನೂ ಸಿಗಲಿಲ್ಲ ಅದ್ಧೂರಿ ಸ್ವಾಗತ!

Champion Australia

ಬೆಂಗಳೂರು: ಆಸ್ಟ್ರೇಲಿಯಾ ದಾಖಲೆಯ ಆರನೇ ವಿಶ್ವಕಪ್ ಟ್ರೋಫಿಯನ್ನು (ICC World Cup 2023) ಗೆದ್ದಿದೆ. ಆದರೆ ಆ ತಂಡವು ತವರಿನಲ್ಲಿ ಸಂಭ್ರಮದ ವಾತಾವರಣವನ್ನು ಇನ್ನೂ ಅನುಭವಿಸಿಲ್ಲ ಅದ್ಧೂರಿ ಸ್ವಾಗತವೂ ದೊರೆಯಲಿಲ್ಲ.. ನಾಯಕ ಪ್ಯಾಟ್ ಕಮಿನ್ಸ್ ಸೇರಿದಂತೆ ಕೆಲವು ಸದಸ್ಯರು ಈಗಾಗಲೇ ಆಸ್ಟ್ರೇಲಿಯಾಕ್ಕೆ ಮರಳಿದ್ದರೆ. ಆದರೆ ಹಲವಾರು ಆಟಗಾರರು ಇನ್ನೂ ಭಾರತದಲ್ಲಿದ್ದಾರೆ. ಅವರೆಲ್ಲವೂ ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಅವರಿಗೆ ಸಂಭ್ರಮಾಚರಣೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.

ವಿಶ್ವಕಪ್ ಟ್ರೋಫಿ ಮುಂದಿನ ವಾರ ಕ್ರಿಕೆಟ್ ಆಸ್ಟ್ರೇಲಿಯಾ ಯೋಜಿಸಿರುವ ಆಚರಣೆಗಾಗಿ ಸಿಡ್ನಿಗೆ ತೆರಳುತ್ತಿದೆ. ಆದಾಗ್ಯೂ, ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್​ವೆಲ್​ , ಸ್ಟೀವ್ ಸ್ಮಿತ್, ಜೋಶ್ ಇಂಗ್ಲಿಸ್ ಮತ್ತು ಆಡಮ್ ಜಂಪಾ ಅವರಂತಹ ಪ್ರಮುಖ ವಿಶ್ವಕಪ್ ಆಟಗಾರರು ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಕಾರ್ಯಕ್ರಮ ಆಯೋಜಕರು ಸಂದಿಗ್ಧತೆಯಲ್ಲಿ ಸಿಲುಕಿದ್ದಾರೆ.

‘ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ವರದಿಯ ಪ್ರಕಾರ, ಡಿಸೆಂಬರ್ 14 ರಂದು ಪರ್ತ್​​ನಲ್ಲಿ ಪಾಕಿಸ್ತಾನ ವಿರುದ್ಧದ ಆಸ್ಟ್ರೇಲಿಯಾದ ಮೊದಲ ಟೆಸ್ಟ್ ಸರಣಿಗೆ ಮುಂಚಿತವಾಗಿ ಸಾರ್ವಜನಿಕ ಸಂಭ್ರಮಾಚರಣೆಯನ್ನು ನಿಗದಿಪಡಿಸಲಾಗಿದೆ. ಆದಾಗ್ಯೂ, ಇಂಗ್ಲಿಸ್, ಮ್ಯಾಕ್ಸ್ವೆಲ್ ಮತ್ತು ಜಂಪಾ ಸೇರಿದಂತೆ ಕೆಲವು ಆಟಗಾರರು ಡಿಸೆಂಬರ್ 7 ರಿಂದ ಪ್ರಾರಂಭವಾಗುವ ಬಿಗ್ ಬ್ಯಾಷ್ ಲೀಗ್ 2023 (BBL) ಬದ್ಧತೆಗಳಿಂದಾಗಿ ಈ ಕಾರ್ಯಕ್ರಮದಿಂದಲೂ ವಂಚಿತರಾಗುವ ನಿರೀಕ್ಷೆಯಿದೆ.

ಆಸ್ಟ್ರೇಲಿಯಾ ಸಂಭ್ರಮಕ್ಕೆ ಅಡಚಣೆ

ಆಸ್ಟ್ರೇಲಿಯಾದ ಹಿಂದಿನ ವಿಶ್ವಕಪ್ ವಿಜೇತ ತಂಡಗಳು ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿ ಸಂಘರ್ಷಗಳನ್ನು ಎದುರಿಸಲಿಲ್ಲ. 1999 ರ ವಿಜೇತ ತಂಡವನ್ನು ಅವರು ಹಿಂದಿರುಗಿದ ಕೂಡಲೇ ಸಿಡ್ನಿಯಲ್ಲಿ ಟಿಕರ್-ಟೇಪ್ ಪೆರೇಡ್​ಗೆ ಕರೆದೊಯ್ಯಲಾಯಿತು. ಅಂತೆಯೇ, 2015 ರ ತವರು ವಿಜಯದ ನಂತರ, ಮೆಲ್ಬೋರ್ನ್​​ ಫೆಡರೇಶನ್ ಸ್ಕ್ವೇರ್​ನಲ್ಲಿ ಸಂಭ್ರಮಾಚರಣೆಗಳು ನಡೆದಿದ್ದವು.

2003 ರಲ್ಲಿ, ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಆರಂಭಗೊಂಡಿ ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡೀಸ್ ಗೆ ಆಸೀಸ್ ತಂಡ ತೆರಳಿತ್ತು. ಆದರೆ, ಅದಕ್ಕೂ ಮೊದಲು ದೊರಕಿದ ಸಂಕ್ಷಿಪ್ತ ವಿರಾಮದ ಹೊರತಾಗಿಯೂ ರಿಕಿ ಪಾಂಟಿಂಗ್ ಮತ್ತು ಅವರ ತಂಡವನ್ನು ಸ್ವಾಗತಿಸಲು 5,000 ಕ್ಕೂ ಹೆಚ್ಚು ಜನರು ಪರ್ತ್ ನ ಬೀದಿಗಳಲ್ಲಿ ನೆರೆದಿದ್ದರು.

ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅಲೆಕ್ಸ್ ಕ್ಯೇರಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಚದುರಿಹೋಗಿದೆ, ಆಟಗಾರರು ಟಿ 20 ಗಾಗಿ ವಿಭಿನ್ನ ದಿಕ್ಕುಗಳಲ್ಲಿ ಹೋಗಿದ್ದಾರೆ ಎಂದಿದ್ದಾರೆ. ವಿಶ್ವಕಪ್ ಗೆಲುವಿನ ನಂತರ ಮತ್ತೆ ಆಡುವ ವಿಚಿತ್ರ ವೇಳಾಪಟ್ಟಿಯನ್ನು ಅವರು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ : Prakash Raj: ಮೋದಿ ಅವರನ್ನು ಸುಪ್ರೀಂ ನಟ ಎಂದಿದ್ಯಾಕೆ ಪ್ರಕಾಶ್‌ ರಾಜ್‌?

ನಾವೆಲ್ಲರೂ ನಮ್ಮದೇ ಬೇರೆ ಬೇರೆ ಕಾರಣಕ್ಕೆ ಬೇರ್ಪಟ್ಟಿದ್ದೇವೆ. ಟಿ 20 ಸರಣಿಗಳು ಬರುತ್ತಿವೆ. ಕೆಲವು ಆಟಗಾರರು ಈ ಸಮಯದಲ್ಲಿ ವಿಮಾನಗಳಲ್ಲಿ ಮನೆಗೆ ಮರಳುತ್ತಿದ್ದಾರೆ. ನಾವೆಲ್ಲರೂ ಪರ್ತ್​ನಲ್ಲಿ ಅಥವಾ ಎಲ್ಲೇ ಇದ್ದರೂ ಮತ್ತೆ ಒಂದಾಗುವ ಅವಕಾಶ ಇದ್ದಾಗ ಮಾತ್ರ ಯೋಚಿಸುವುದು ಒಳಿತು “ಎಂದು ಅಲೆಕ್ಸ್ ಕ್ಯಾರಿ ಹೇಳಿದ್ದರು.

ಈಗ ನೋಡಿದರೆ, ವಿಶ್ವಕಪ್ ಗೆದ್ದ ಕೆಲವು ದಿನಗಳಲ್ಲಿ ಮತ್ತೆ ಆಡುತ್ತಿದ್ದೇವೆ. ನಮ್ಮ ಆಟಗಾರರು ನಿಜವಾಗಿಯೂ ಬಲವಾಗಿ ಪ್ರದರ್ಶನ ನೀಡಲಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಅವರು ತುಂಬಾ ನಿರ್ಭೀತ ಕ್ರಿಕೆಟ್ ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ, “ಎಂದು ಕ್ಯೇರಿ ಹೇಳಿದ್ದಾರೆ.

Exit mobile version