Site icon Vistara News

WTC Final 2023 : ವಿಶ್ವದ ಯಾವ ಕ್ರಿಕೆಟ್​ ತಂಡವೂ ಮಾಡದ ವಿಶೇಷ ದಾಖಲೆ ಸೃಷ್ಟಿಸಿದ ಆಸ್ಟ್ರೇಲಿಯಾ!

Australia Cricket Team

#image_title

ಲಂಡನ್​: ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ತೇಲಿಯಾ ತಂಡ ತಮ್ಮ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ ಫೈನಲ್ ಗೆದ್ದ ನಂತರ ಐತಿಹಾಸಿಕ ದಾಖಲೆ ಸೃಷ್ಟಿಸಿದೆ. ಈ ಗೆಲುವಿನೊಂದಿಗೆ ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆದ್ದ ಮೊದಲ ಕ್ರಿಕೆಟ್ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಆಸ್ಟ್ರೇಲಿಯಾ ಪಾತ್ರವಾಯಿತು. ಆಸ್ಟ್ರೇಲಿಯಾ ಈಗಾಗಲೇ ಐದು 50 ಓವರ್​ಗಳ ವಿಶ್ವಕಪ್ ಟ್ರೋಫಿಗಳು, ಎರಡು ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಗಳು ಮತ್ತು ಒಂದು ಟಿ20 ಐ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಫೈನಲ್ ಪಂದ್ಯದಲ್ಲಿ ಭಾರತ ವಿರುದ್ದ 209 ರನ್​ಗಳ ಭರ್ಜರಿ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ ಟ್ರೋಫಿಯನ್ನು ತನ್ನದಾಗಿಸಕೊಂಡು ಟೆಸ್ಟ್​​ನಲ್ಲಿ ನಂಬರ್ 1 ತಂಡವಾಗಿ ಹೊರಹೊಮ್ಮಿತು.

ಆಸ್ಟ್ರೇಲಿಯಾ ತಂಡ ಗೆದ್ದಿರುವ ಐಸಿಸಿ ಟ್ರೋಫಿಗಳು

ಪಂದ್ಯದ 5ನೇ ದಿನದ ಮುಖ್ಯಾಂಶಗಳು

ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ 3 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು. ಮೊದಲ ಒಂದು ಗಂಟೆಯ ಆಟದಲ್ಲಿ ಭಾರತ ತಂಡ ಎಚ್ಚರಿಕೆಯಿಂದ ಆಡಿತು/ ಆದರೆ ಅಂತಿಮವಾಗಿ ಅಜಿಂಕ್ಯ ರಹಾನೆ ಮತ್ತು ವಿರಾಟ್ ಕೊಹ್ಲಿ ನಡುವಿನ ನಿರ್ಣಾಯಕ ಪಾಲುದಾರಿಕೆಯನ್ನು ಮುರಿಯಲು ಆಸ್ಟ್ರೇಲಿಯಾ ತಂಡ ಯಶಸ್ವಿಯಾಯಿತು. ಸ್ಕಾಟ್ ಬೋಲ್ಯಾಂಡ್ ಅವರನ್ನು ಬೇರ್ಪಡಿಸಿದರು. ದಿನದ ಏಳನೇ ಓವರ್​ನಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು 49 ರನ್​​ಗಳಿಗೆ ಔಟ್ ಮಾಡಲು ಬೋಲ್ಯಾಂಡ್, ನಂತರ ರವೀಂದ್ರ ಜಡೇಜಾ ಅವರನ್ನು ಶೂನ್ಯಕ್ಕೆ ಪೆವಿಲಿವಯನ್​ಗೆ ಕಳುಹಿಸಿದರು.

ಇದನ್ನೂ ಓದಿ : WTC Final 2023 : ಭಾರತ ತಂಡದ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಟ್ರೋಫಿ​ ಕನಸು ಎರಡನೇ ಬಾರಿ ಭಗ್ನ!

ಅಜಿಂಕ್ಯ ರಹಾನೆ ಮತ್ತು ಕೆ.ಎಸ್. ಭರತ್ ಸ್ವಲ್ಪ ಪ್ರತಿದಾಳಿ ಮುಂದುವರಿಸಿಸಿದ್ದರು. ಆದರೆ ಮಿಚೆಲ್ ಸ್ಟಾರ್ಕ್ ಅವರ ಪಿಚ್-ಅಪ್ ಎಸೆತಕ್ಕೆ ಡ್ರೈವ್ ಆಡಲು ಪ್ರಯತ್ನಿಸಿದ ರಹಾನೆ ವಿಕೆಟ್​ಕೀಪರ್​ಗೆ ಕ್ಯಾಚ್​ ನೀಡಿ ಔಟಾದರು ಶಾರ್ದೂಲ್ ಠಾಕೂರ್​ಗೆ ತಮ್ಮ ಮೊದಲ ಇನ್ನಿಂಗ್ಸ್​ನ ದಾಖಲೆಯ ಆಟವನ್ನು ಮುಂದುವರಿಲು ಸಾಧ್ಯವಾಗಲಿಲ್ಲ, ಏಕೆಂದರೆ ನೇಥನ್ ಲಿಯಾನ್ ಅವರನ್ನು ಔಟ್​ ಮಾಡಿದರು. ಮುಂದೆ ಭಾರತ ತಂಡ ನಿರಂತರವಾಗಿ ವಿಕೆಟ್​ ಕಳೆದುಕೊಂಡಿತು.

Exit mobile version