ರಾಜ್ಕೋಟ್: ಇಲ್ಲಿನ ಎಸ್ಸಿ ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಭಾರತ ವಿರುದ್ಧದ 3 ನೇ ಏಕದಿನ ಪಂದ್ಯದಲ್ಲಿ (ind vs Aus) ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಎರಡೂ ತಂಡಗಳು ತಲಾ ಐದು ಬದಲಾವಣೆಗಳನ್ನು ಮಾಡಿವೆ.
ಶುಬ್ಮನ್ ಗಿಲ್, ಶಾರ್ದೂಲ್ ಠಾಕೂರ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ ಮತ್ತು ಅಕ್ಷರ್ ಪಟೇಲ್ ಆರೋಗ್ಯ, ಫಿಟ್ನೆಸ್ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಭಾರತ ಪರ ಆಡುತ್ತಿಲ್ಲ.
ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿಗೆ ಕ್ಲೀನ್ ಸ್ವೀಪ್ ಮಾಡುವ ಅವಕಾಶ ಭಾರತಕ್ಕೆ ಸಿಕ್ಕಿದೆ.
ಮಿಚೆಲ್ ಸ್ಟಾರ್ಕ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರ ಮರಳುವಿಕೆಯಿಂದ ಆಸ್ಟ್ರೇಲಿಯಾ ಕೂಡ ಬಲಿಷ್ಠಗೊಂಡಿದೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತದ ಪ್ಲೇಯಿಂಗ್ ಇಲೆವೆನ್ಗೆ ಮರಳಲಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ರಾಜ್ಕೋಟ್ ಏಕದಿನ ಪಂದ್ಯವು ಎರಡೂ ತಂಡಗಳಿಗೆ ತಮ್ಮ ವಿಶ್ವಕಪ್ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಅಂತಿಮ ಹೋರಾಟವಾಗಿದೆ. ಸರಣಿಯಲ್ಲಿ ನಾವು ಈಗಾಗಲೇ ಭಾರತ ಗೆದ್ದಿರುವ ಹೊರತಾಗಿಯೂ ವಿಶ್ವ ಕಪ್ಗೆ ಮೊದಲು ಎರಡೂ ತಂಡಗಳ ಆಟಗಾರರ ಪಾಲಿಗೆ ವಿಶೇಷ ಅನಿಸಲಿದೆ.