Site icon Vistara News

ICC World Cup 2023 : ದಾಖಲೆಯ ಚೇಸಿಂಗ್​ ಮೂಲಕ ಬಾಂಗ್ಲಾ ವಿರುದ್ಧ ಗೆದ್ದ ಆಸೀಸ್​

Mitchel Marsh

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶನಿವಾರ ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ (ICC World Cup 2023) ಆಸ್ಟ್ರೇಲಿಯಾ ವಿಶ್ವ ಕಪ್ ಇತಿಹಾಸದಲ್ಲಿ ತನ್ನ ಅತ್ಯಧಿಕ ಮೊತ್ತವನ್ನು ಬೆನ್ನಟ್ಟಿ ಗೆದ್ದಿದೆ. ಈ ಮೂಲಕ ಸೆಮಿಫೈನಲ್ ಪ್ರಾರಂಭವಾಗುವ ಮೊದಲು ವಿಶ್ವ ಕಪ್​ ಪಂದ್ಯಾವಳಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದೆ. ಇದು ಆಸ್ಟ್ರೇಲಿಯಾ ತಂಡಕ್ಕೆ ಗುಂಪು ಹಂತದ ಕೊನೇ ಪಂದ್ಯವಾಗಿತ್ತು. ಒಟ್ಟು ಏಳು ಗೆಲುವಿನೊಂದಿಗೆ 14 ಅಂಕಗಳನ್ನು ಸಂಪಾದಿಸಿದೆ.

ಮೊದಲು ಬ್ಯಾಟ್​ ಮಾಡಿದ್ದ ಬಾಂಗ್ಲಾದೇಶ ತಂಡ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​​ಗೆ 306 ರನ್ ಬಾರಿಸಿತ್ತು. ಪ್ರತಿಯಾಗಿ ಬ್ಯಾಟ್​ ಮಾಡಿದ ಕಾಂಗರೂ ಪಡೆದ 44.4 ಓವರ್​​ಗಳಲ್ಲಿ 2 ವಿಕೆಟ್​ಗೆ 307 ರನ್​ ಬಾರಿಸಿ ಗೆಲುವು ಸಾಧಿಸಿತು. ಮಿಚೆಲ್ ಮಾರ್ಷ್ ಅವರ ಆಕರ್ಷಕ ಶತಕದ ನೆರವಿನಿಂದ ಅಜೇಯ 177 ರನ್ ಬಾರಿಸಿ ಗೆಲುವು ಸುಲಭಗೊಳಿಸಿದರು. ಸ್ಟೀವ್ ಸ್ಮಿತ್​ ಕೂಡ ಅಜೇಯ 63 ರನ್ ಬಾರಿಸಿದರೆ ಅದಕ್ಕಿಂತ ಮೊದಲು ಆರಂಭಿಕ ಬ್ಯಾಟರ್​ ಡೇವಿಡ್ ವಾರ್ನರ್​ 51 ರನ್ ಬಾರಿಸಿದರು. ಇದು ವಿಶ್ವ ಕಪ್​ನಲ್ಲಿ ಆಸ್ಟ್ರೇಲಿಯಾ ತಂಡ ಬೆನ್ನಟ್ಟಿ ಗೆದ್ದ ಗರಿಷ್ಠ ಮೊತ್ತವಾಗಿದೆ.

ಹಿಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 292 ರನ್​ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಸಾಧನೆ ಮಾಡಿತ್ತು. ಇದೀಗ ಮತ್ತೇ ಆ ಗಳಿಕೆಯನ್ನು ಹೆಚ್ಚಿಸಿಕೊಂಡಿದೆ. ವಿಶೇಷವೆಂದರೆ, 1996 ಮತ್ತು 1999 ರಲ್ಲಿ ಕ್ರಮವಾಗಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಅವರ ಮೂರನೇ ಮತ್ತು ನಾಲ್ಕನೇ ಅತಿ ಹೆಚ್ಚು ರನ್ ಚೇಸ್ ನಡೆದಿತ್ತು.

ಅದ್ಭುತ ಪುನಶ್ಚೇತನ

2023 ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದ ಪ್ರಯಾಣವು ಕೇವಲ ಎರಡು ಸೋಲುಗಳೊಂದಿಗೆ ಪ್ರಾರಂಭವಾಗಿತ್ತು ಆದರೆ ಅವರು ಸತತ 7 ಪಂದ್ಯಗಳನ್ನು ಗೆಲ್ಲುವ ಮೂಲಕ ಬಲವಾಗಿ ಪುನಶ್ಚೇತನ ಪ್ರದರ್ಶಿಸಿದರು. ಸೆಮಿಫೈನಲ್​ನಲ್ಲಿ ಸ್ಥಾನ ಪಡೆದ ಪ್ಯಾಟ್​ ಕಮಿನ್ಸ್ ತಂಡ ಗುಂಪು ಹಂತವನ್ನು ಪಾಯಿಂಟ್ಸ್ ಟೇಬಲ್​​ನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಕೊನೆಗೊಳಿಸಿತು.

ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ನವೆಂಬರ್ 16ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ದಕ್ಷಿಣ ಆಫ್ರಿಕಾ ಆಡಿರುವ 9 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಬಾಂಗ್ಲಾ ಉತ್ತಮ ಮೊತ್ತ

ಮೊದಲು ಬ್ಯಾಟ್​ ಮಾಡಿದ ಬಾಂಗ್ಲಾದೇಶ ತಂಡದ ಪರ ನಾಯಕ ನಜ್ಮುಲ್ ಹುಸೇನ್ ಶಾಂಟೊ (57 ಎಸೆತಗಳಲ್ಲಿ 45 ರನ್) ಮತ್ತು ತೌಹಿದ್ ಹೃದೋತ್​ (79 ಎಸೆತಗಳಲ್ಲಿ 74 ರನ್) ಮೂರನೇ ವಿಕೆಟ್​​ 64 ರನ್​ಗಳ ಸೇರಿಸಿ ತಂಡದ ಮೊತ್ತವನ್ನು 170 ರನ್ ಗಡಿ ದಾಟಲು ನೆರವಾದರು. ಮಹಮದುಲ್ಲಾ (28 ಎಸೆತಗಳಲ್ಲಿ 32 ರನ್), ಮುಷ್ಫಿಕರ್ ರಹೀಮ್ (24 ಎಸೆತಗಳಲ್ಲಿ 21 ರನ್) ಮತ್ತು ಮೆಹಿದಿ ಹಸನ್ ಮಿರಾಜ್ (20 ಎಸೆತಗಳಲ್ಲಿ 29 ರನ್) ಅವರ ಕೊಡುಗೆಗಳ ನೆರವಿನಿಂದ ಬಾಂಗ್ಲಾ ಪಡೆದ ನಿಗದಿತ 50 ಓವರ್​ಗಳ 8 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಆಡಮ್ ಜಂಪಾ (32ಕ್ಕೆ 2) ಹಾಗೂ ಸೀನ್ ಅಬಾಟ್ (61ಕ್ಕೆ 2) ತಲಾ 2 ವಿಕೆಟ್ ಪಡೆದರು.

Exit mobile version