Site icon Vistara News

Ind vs Aus : ಟಾಸ್ ಗೆದ್ದ ಆಸ್ಟ್ರೇಲಿಯಾ, ಭಾರತಕ್ಕೆ ಬ್ಯಾಟಿಂಗ್ ಆಹ್ವಾನ

Suryakumar Yadav

ರಾಯ್ಪುರ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮ್ಯಾಥ್ಯೂ ವೇಡ್​ ಮೊದಲು ಬೌಲಿಂಗ್ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ ನಂತರ ಆ ರನ್​ ರಕ್ಷಿಸಿಕೊಳ್ಳುವ ಅನಿವಾರ್ಯತೆಗೆ ಬಿದ್ದಿದೆ. ಈ ಪಂದ್ಯಕ್ಕೂ ಇಬ್ಬನಿ ಪರಿಣಾಮ ಇರುತ್ತದೆ ಎಂದು ಹೇಳಲಾಗಿರುವ ಕಾರಣ ದೊಡ್ಡ ಮೊತ್ತವನ್ನು ಪೇರಿಸಿದರೂ ಅದನ್ನು ಸಂರಕ್ಷಿಸುವ ಸವಾಲು ಸೂರ್ಯಕುಮಾರ್ ಯಾದವ್ ಅವರಿಗೆ ಎದುರಾಗಿದೆ.

ನಾವು ಮತ್ತೆ ಬೌಲಿಂಗ್ ಮಾಡುತ್ತೇವೆ. ತಂಡದಲ್ಲಿ 5 ಬದಲಾವಣೆ ಮಾಡಲಾಗಿದ್ದು, ಸ್ಟೋಯ್ನಿಸ್, ಮ್ಯಾಕ್ಸ್​ವೆಲ್​, ಇಂ ಗ್ಲಿಸ್, ರಿಚರ್ಡ್ಸನ್ ಮತ್ತು ಎಲ್ಲಿಸ್ ಹೊರಕ್ಕೆ ಹೋಗಿದ್ದಾರೆ. ಅವರ ಬದಲಿಗೆ ಬೇರೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಹಿರಿಯ ಆಟಗಾರರನ್ನು ವಾಪಸ್ ತವರಿಗೆ ಕರೆಸಿಕೊಂಡಿರುವ ಕಾರಣ ಹೊಸ ಆಟಗಾರರಿಗೆ ಅವಕಾಶಸೃಷ್ಟಿಯಾಗಿದೆ ಎಂದು ಟಾಸ್ ಗೆದ್ದ ನಾಯಕ ಮ್ಯಾಥ್ಯೂ ವೇಡ್​ ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್ ಮಾತನಾಡಿ ನಾವು ಕೂಡ ಚೇಸ್ ಮಾಡುವ ಯೋಜನೆ ಹಾಕಿಕೊಂಡಿದ್ದೆವು. ಆದರೆ ನಮ್ಮ ಬ್ಯಾಟಿಂಗ್ ಘಟಕವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ತಂಡದಲ್ಲಿ 4 ಬದಲಾವಣೆ ಮಾಡಲಾಗಿದ್ದು, ಪ್ರಸಿದ್ಧ್ ಬದಲಿಗೆ ಮುಕೇಶ್, ಅರ್ಷ್ದೀಪ್ ಬದಲಿಗೆ ದೀಪಕ್ ಚಹರ್, ತಿಲಕ್ ಬದಲಿಗೆ ಶ್ರೇಯಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ind vs Aus : ಸೂರ್ಯಕುಮಾರ್ ಪಡೆ ಆಸ್ಟ್ರೇಲಿಯಾ ತಂಡವನ್ನು ಮಣಿಸಿದರೆ ವಿಶ್ವ ದಾಖಲೆ ಖಚಿತ

ಗ್ಲೆನ್ ಮ್ಯಾಕ್ಸ್ವೆಲ್ ಅವರು ಈ ಹಿಂದಿನ ಪಂದ್ಯದಲ್ಲಿ ತಮ್ಮ 4ನೇ ಟಿ 20 ಐ ಶತಕ ಬಾರಿಸಿ ಭಾರತದ ಸುದೀರ್ಘ ಮತ್ತು ಯಶಸ್ವಿ ಪ್ರವಾಸವನ್ನು ಕೊನೆಗೊಳಿಸಿದರು, ಅಂತಾರರಾಷ್ಟ್ರೀಯ ಟಿ 20 ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟರ್​​ ರೋಹಿತ್ ಶರ್ಮಾ ಅವರ ಸಾಧನೆಯನ್ನು ಸರಿಟ್ಟಿದ್ದಾರೆ. ಈ ಶತಕವು ಆಸ್ಟ್ರೇಲಿಯಾಕ್ಕೆ ಸರಣಿಯನ್ನು ಜೀವಂತವಾಗಿಸಿತ್ತು, ಎರಡೂ ಗುವಾಹಟಿಯ ಬೆಟ್ಟಗಳಿಂದ ನಡುವಿನಿಂದ ಮಧ್ಯ ಭಾರತದ ಬಯಲು ಪ್ರದೇಶಕ್ಕೆ ಬಂದದೆ. ವಿಶ್ವಕಪ್ ನಂತರ ಸ್ವಲ್ಪ ವಿರಾಮದ ನಂತರ ಭಾರತವು ಶ್ರೇಯಸ್ ಅಯ್ಯರ್ ಅವರನ್ನು ಮರಳಿ ತಂಡಕ್ಕೆ ಸ್ವಾಗತಿಸಲಿದೆ. ಆಸ್ಟ್ರೇಲಿಯಾ ಕೂಡ ಬದಲಾವಣೆಗಳನ್ನು ಮಾಡಿದೆ.

ಪಿಚ್​​ ಉತ್ತಮವಾಗಿ ಕಾಣುತ್ತದೆ. ಗಟ್ಟಿಯಾಗಿದೆ ಮತ್ತು ಉತ್ತಮ ಹುಲ್ಲಿನ ವ್ಯಾಪ್ತಿಯನ್ನು ಹೊಂದಿದೆ. ಇದು ಮೈದಾನದ ಸುತ್ತಲೂ 74 ಮೀಟರ್ ಬೌಂಡರಿ ಲೈನ್ ಹೊಂದಿದೆ.

ತಂಡಗಳು

ಆಸ್ಟ್ರೇಲಿಯಾ ತಂಡ: ಜೋಶ್ ಫಿಲಿಪ್, ಟ್ರಾವಿಸ್ ಹೆಡ್, ಬೆನ್ ಮೆಕ್ಡರ್ಮಾಟ್, ಆ್ಯರೋನ್ ಹಾರ್ಡಿ, ಟಿಮ್ ಡೇವಿಡ್, ಮ್ಯಾಥ್ಯೂ ಶಾರ್ಟ್, ಮ್ಯಾಥ್ಯೂ ವೇಡ್ (ಸಿ & ವಿಕೆ), ಬೆನ್ ಡ್ವಾರ್ಶುಯಿಸ್, ಕ್ರಿಸ್ ಗ್ರೀನ್, ಜೇಸನ್ ಬೆಹ್ರೆನ್ಡಾರ್ಫ್, ತನ್ವೀರ್ ಸಂಘಾ.

ಭಾರತ ತಂಡ: ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ (ಸಿ), ಜಿತೇಶ್ ಶರ್ಮಾ (ವಿಕೆ), ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ದೀಪಕ್ ಚಹರ್, ಅವೇಶ್ ಖಾನ್, ಮುಖೇಶ್ ಕುಮಾರ್.

ಭಾರತ ತಂಡದಲ್ಲಿ ನಾಲ್ಕನೇ ಬದಲಾವಣೆ ಮಾಡಲಾಗಿದ್ದು, ಇಶಾನ್ ಕಿಶನ್ ಬದಲಿಗೆ ಜಿತೇಶ್ ಶರ್ಮಾ ಸ್ಥಾನ ಪಡೆದಿದ್ದಾರೆ

Exit mobile version