Site icon Vistara News

Ind vs Aus : 199 ರನ್​ಗೆ ಆಸ್ಟ್ರೇಲಿಯಾ ಆಲ್​ಔಟ್​, ಭಾರತ ತಂಡಕ್ಕೆ 200 ರನ್​ಗಳ ಗೆಲುವಿನ ಗುರಿ

Ravindra jadeja

ಚೆನ್ನೈ : ಭಾರತದ ಸ್ಪಿನ್ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ (Ind vs Aus) ವಿಶ್ವ ಕಪ್​ನ ತನ್ನ ಮೊದಲ ಪಂದ್ಯದಲ್ಲಿ 199 ರನ್ ಗಳಿಸಿದೆ. ಹೀಗಾಗಿ ಭಾರತಕ್ಕೆ 200 ರನ್​ಗಳ ಸುಲಭ ಗೆಲುವಿನ ಗುರಿ ಲಭಿಸಿದೆ. ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ಬಳಗ ಉತ್ತಮ ಆರಂಭ ಪಡೆದ ಹೊರತಾಗಿಯೂ ನಂತರ ಸತತವಾಗಿ ವಿಕೆಟ್​ ಕಳೆದಕೊಂಡು ಸಾಧಾರಣ ಮೊತ್ತಕ್ಕೆ ಇನಿಂಗ್ಸ್ ಮುಗಿಸಿತು. ಭಾರತದ ಸ್ಪಿನ್ನರ್​ಗಳಾದ ರವೀಂದ್ರ ಜಡೇಜಾ 3 ವಿಕೆಟ್, ಬುಮ್ರಾ ಹಾಗೂ ಕುಲ್ದೀಪ್​ ತಲಾ 2 ವಿಕೆಟ್​ ಕಬಳಿಸುವ ಮೂಲಕ ಆಸ್ಟ್ರೇಲಿಯಾದ ಬ್ಯಾಟಿಂಗ್ ಶಕ್ತಿಯನ್ನು ಕುಗ್ಗಿಸಿದರು.

ಚೆನ್ನೈನ ಚೆಪಾಕ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್​ ಕಮಿನ್ಸ್ ಮೊದಲು ಬ್ಯಾಟ್ ಮಾಡಲು ಮುಂದಾದರು. ಪಂದ್ಯ ಸಾಗುತ್ತಿದ್ದಂತೆ ಪಿಚ್​ ಹೆಚ್ಚು ತಿರುವು ಪಡೆಯುತ್ತದೆ ಎಂಬ ಅಂಶದ ಮೇಲೆ ಅವರು ಬ್ಯಾಟಿಂಗ್​ ಮಾಡಲು ನಿರ್ಧರಿಸಿದರು. ಆದರೆ, ಆರಂಭಿಕ ಬ್ಯಾಟರ್​ ಶೂನ್ಯಕ್ಕೆ ಔಟಾಗುವ ಮೂಲಕ ಆಸೀಸ್​ ಬಳಗ ಹಿನ್ನಡೆ ಎದುರಿಸಿತು. ವಿರಾಟ್​ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್​ಗೆ ಮಾರ್ಷ್​ ಬಲಿಯಾದರು.

ಮೊದಲ ವಿಕೆಟ್​ ಪತನಗೊಂಡ ಹೊರತಾಗಿಯೂ ಆಸ್ಟ್ರೇಲಿಯಾ ತಂಡ ರನ್​ ಗಳಿಕೆ ವೇಗವನ್ನು ಕಡಿಮೆ ಮಾಡಲಿಲ್ಲ. ಡೇವಿಡ್​ ವಾರ್ನರ್ ಹಾಗೂ ವೇಗದ ರನ್​ ಗಳಿಕಗೆ ಮುಂದಾದರು. ಹೀಗಾಗಿ ಮೊದಲ ಹತ್ತು ಓವರ್​ಗಳಲ್ಲಿ 43 ರನ್ ಬಾರಿಸಿತು. ಹೀಗಾಗಿ ಆಸ್ಟ್ರೇಲಿಯಾ ತಂಡ ದೊಡ್ಡ ಮೊತ್ತ ಪೇರಿಸುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಯಿತು. ಈ ವೇಳೆ ಸ್ಪಿನ್ ಕೈಚಳಕ ತೋರಿದ ಕುಲ್ದೀಪ್​ ಯಾದವ್​ ರಿಟರ್ನ್​ ಕ್ಯಾಚ್​ ಮೂಲಕ ಡೇವಿಡ್​ ವಾರ್ನರ್ ಅವರ ವಿಕೆಟ್ ಪಡೆದರು. ಅಪಾಯಕಾರಿ ಪರಿಣಮಿಸುತ್ತಿದ್ ವಾರ್ನರ್​ 41 ರನ್​ಗೆ ಔಟಾದರು.ಈ ವೇಳೆ ಆಸ್ಟ್ರೇಲಿಯಾ 74 ರನ್ ಬಾರಿಸಿತು.

ಬಳಿಕ ದಾಳಿಗೆ ಇಳಿದ ಜಡೇಜಾ 46 ರನ್​ ಬಾರಿಸಿ ಕ್ರೀಸ್​ನಲ್ಲಿ ತಳವೂರಲು ಬಯಸುತ್ತಿದ್ದ ಸ್ಮಿತ್​ ವಿಕೆಟ್ ಉರುಳಿಸಿದರು. ಅಲ್ಲದೆ, ಮರ್ನಸ್​ ಲಾಬುಶೇನ್​ (27) ವಿಕೆಟ್ ಕೂಡ ತಮ್ಮದಾಗಿಸಿಕೊಂಡರು. ಆ ಬಳಿಕ ಬ್ಯಾಟ್ ಮಾಡಲು ಬಂದ ಅಲೆಕ್ಸ್ ಕ್ಯೇರಿಯನ್ನು ಶೂನ್ಯಕ್ಕೆ ಪೆವಿಲಯನ್​ ಗೆ ವಾಪಸ್ ಕಳುಹಿಸಿದರು.

ಭಾರತದ ಸ್ಪಿನ್ನರ್​ಗಳು ಚೇತರಿಸಿಕೊಳ್ಳುತ್ತಿದ್ದಂತೆ ಆಸ್ಟ್ರೇಲಿಯಾದ ರನ್​ ಗಳಿಕೆ ವೇಗ ಕಡಿಮೆಯಾಯಿತು. 140 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು. ಆಲ್​ರೌಂಡರ್​ ಕ್ಯಾಮೆರಾನ್​ ಗ್ರೀನ್​ ಗೆ (8 ರನ್​) ಅಶ್ವಿನ್ ಪೆವಿಲಿಯನ್ ದಾರಿ ತೋರಿದರು. ನಾಯಕ ಪ್ಯಾಟ್​ ಕಮಿನ್ಸ್ 15 ರನ್ ಬಾರಿಸಿದರೆ, ಕೊನೆಯಲ್ಲಿ ಮಿಚೆಲ್ ಸ್ಟಾರ್ಕ್​ 28 ರನ್​ ಬಾರಿಸಿ ತಂಡದ ಮೊತ್ತವನ್ನು 200ರ ಸನಿಹ ತಂದಿಟ್ಟರು.

ಇದನ್ನೂ ಓದಿ : ICC World Cup 2023 : ಸಚಿನ್ ತೆಂಡೂಲ್ಕರ್​ ದಾಖಲೆ ಮುರಿದ ಡೇವಿಡ್​ ವಾರ್ನರ್​, ಏನಿದು ರೆಕಾರ್ಡ್​?

ಭಾರತ ತಂಡದ ಪರ ಬೌಲಿಂಗ್​ನಲ್ಲಿ ಜಡೇಜಾ 28 ರನ್ ವೆಚ್ಚದಲ್ಲಿ 3 ವಿಕೆಟ್​ ಉರುಳಿಸಿದರೆ, ಜಸ್ಪ್ರಿತ್​ ಬುಮ್ರಾ 35 ರನ್​ಗಳಿಗೆ 2 ವಿಕೆಟ್ ಪಡೆದರು. ಕುಲ್ದೀಪ್​ ಯಾದವ್​ 42 ರನ್​ಗೆ 2 ವಿಕೆಟ್ ತಮ್ಮದಾಗಿಸಿಕೊಂಡರು.

Exit mobile version