Site icon Vistara News

Ind vs Aus : ಭಾರತ ವನಿತೆಯರ ತಂಡಕ್ಕೆ 2ನೇ ಪಂದ್ಯದಲ್ಲಿ ಸೋಲು, ಸರಣಿ 1-1 ಸಮಬಲ

Australia Cricket team

ಮುಂಬಯಿ: ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಟಿ20 ಸರಣಿಯಲ್ಲಿ ಎರಡನೇ ಪಂದ್ಯದಲ್ಲಿ ಭಾರತ ವನಿತೆಯರ ತಂಡ 6 ವಿಕೆಟ್​ ಸೋಲಿಗೆ ಒಳಗಾಗಿದೆ. ಅನುಭವಿ ಆಟಗಾರ್ತಿ ಎಲಿಸ್ ಪೆರ್ರಿ ತಮ್ಮ 300 ನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ವಿಶೇಷ ಇನ್ನಿಂಗ್ಸ್ ಆಡುವ ಮೂಲಕ ಭಾರತದ ಸೋಲಿಗೆ ಕಾರಣರಾದರು ಅವರ 34 ರನ್ ಗಳು ಸರಣಿಯನ್ನು ಜೀವಂತವಾಗಿರಿಸಿತು. ಪೆರ್ರಿ ಅವರಲ್ಲದೆ, ಅಲಿಸ್ಸಾ ಹೀಲಿ, ಬೆತ್ ಮೂನಿ ಮತ್ತು ಫೋಬೆ ಲಿಚ್ಫೀಲ್ಡ್ ಪ್ರವಾಸಿ ತಂಡದ ಗೆಲುವಿಗೆ ಕೊಡುಗೆ ಕೊಟ್ಟರು.

ಸರಣಿಯ ಮೊದಲ ಪಂದ್ಯದಲ್ಲಿ ಸೋತಿದ್ದ ಕಾಂಗರೂಗಳು, ಎರಡನೇ ಹಣಾಹಣಿಯಲ್ಲಿ ಗೆದ್ದು ಸರಣಿಯನ್ನು ಸಮಬಲಗೊಳಿಸಿದ್ದಾರೆ. ಜನವರಿ 9ರಂದು ನಡೆಯುವ ಮೂರನೇ ಹಾಗೂ ಅಂತಿಮ ಪಂದ್ಯವು ಸರಣಿಯನ್ನು ನಿರ್ಣಯಿಸಲಿದೆ.

ಜನವರಿ 7ರಂದು ಭಾನುವಾರ ಮುಂಬಯಿಯ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಬಳಗ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್​ ಮಾಡಿದ ಭಾರತವು ಆಸೀಸ್‌ ಬೌಲರ್‌ಗಳಿಗೆ ಬೆದರಿ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ 130 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಆಸೀಸ್‌ ಇನ್ನೂ ಆರು ಎಸೆತಗಳು ಬಾಕಿ ಇರುವಂತೆಯೇ ಕೇವಲ 4 ವಿಕೆಟ್‌ ಕಳೆದುಕೊಂಡು 133 ರನ್‌ ಗಳಿಸಿತು.

ಸಾಧಾರಣ ಗುರಿ ಬೆನ್ನಟ್ಟಿದ ಅಸ್ಟ್ರೇಲಿಯಾ ಪರ ತಂಡದ ನಾಯಕಿ ಅಲಿಸಾ ಹೀಲಿ 26 ರನ್‌ ಗಳಿಸಿದರೆ, ಬೆತ್​ ಮೂನಿ 20 ರನ್‌ ಗಳಿಸಿ ಔಟಾದರು. ತಹ್ಲಿಯಾ ಮೆಕ್‌ಗ್ರಾತ್‌ 19 ರನ್‌ ಪೇರಿಸಿದರೆ, ಎಲಿಸ್‌ ಪೆರ್ರಿ ಅಜೇಯ 34 ರನ್‌ ಗಳಿಸಿದರು. ಲಿಚ್‌ಫೀಲ್ಡ್‌ ಕೂಡಾ ಅಜೇಯ 18 ರನ್‌ ಕೊಡುಗೆ ಕೊಟ್ಟು ತಂಡದ ಗೆಲುವಿಗೆ ಕಾರಣರಾದರು.

ಭಾರತದ ಕುಸಿತ

ಭಾರತದ ಪರ ಆರಂಭಿಕ ಬ್ಯಾಟರ್​ ಸ್ಮೃತಿ ಮಂಧಾನ 23 ರನ್‌ ಗಳಿಸಿದರೆ, ಮೂರನೇ ಕ್ರಮಾಂಕದಲ್ಲಿ ಜೆಮಿಮಾ ರೋಡ್ರಿಗಸ್‌ 13 ರನ್‌ ಕಲೆ ಹಾಕಿದರು. ಬ್ಯಾಟಿಂಗ್ ವೈಫಲ್ಯ ಕಂಡ ನಾಯಕಿ ಕೌರ್‌ 6 ರನ್‌ ಗಳಿಸಿ ಔಟಾದರು. ವೇಗದ. ಆಟಕ್ಕೆ ಕೈಹಾಕಿದ ರಿಚಾ ಘೋಷ್‌ 23 ರನ್‌ ಗಳಿಸಿ 30 ರನ್‌ ಗಳಿಸಿದ ದೀಪ್ತಿ ಶರ್ಮಾ ರನೌಟ್‌ ಅವರು ಭಾರತ ತಂಡ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಇದನ್ನೂ ಓದಿ : Tamannaah Bhatia : ಪಾಕ್​ ಕ್ರಿಕೆಟಿಗ ರಜಾಕ್ ಜತೆ ಚಿನ್ನದ ಮಳಿಗೆಗೆ ಹೋದ ಕಹಿ ಘಟನೆ ನೆನೆದ ತಮನ್ನಾ

ಗೆಲುವು ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಬಹುಶಃ ಕೊನೆಯಲ್ಲಿ ನನ್ನ ಜವಾಬ್ದಾರಿ ನಿಭಾಯಿಸಿದ್ದೇನೆ. ನಮಗೆ ಉತ್ತಮ ಪುನರಾಗಮನ. ಕಳೆದ ಪಂದ್ಯದಲ್ಲಿ ಭಾರತ ಉತ್ತಮವಾಗಿ ಆಡಿತ್ತು. ಆದ್ದರಿಂದ ನಾವು ಹಿಂತಿರುಗಿ ಬಂದು ಮೊದಲ ಇನ್ನಿಂಗ್ಸ್​ನಲ್ಲಿ ಬೌಲಿಂಗ್ ಮಾಡುವುದು ಕಠಿಣವಾಗಿತ್ತು. ಚೇಸಿಂಗ್ ಕಷ್ಟ ಆಗಿತ್ತು” ಎಂದು ಎಲಿಸ್ ಪೆರ್ರಿ ಪಂದ್ಯದ ನಂತರ ಹೇಳಿದರು.

Exit mobile version