ನವ ದೆಹಲಿ: : ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್ ನ 24ನೇ (ICC World Cup 2023) ಪಂದ್ಯದಲ್ಲಿ ಅರ್ಹತಾ ತಂಡವಾಗಿರುವ ನೆದರ್ಲೆಂಡ್ಸ್ ವಿರುದ್ಧ ಸೆಣಸಲಿದೆ. ಹೋಲಿಕೆಯಲ್ಲಿ ಎರಡೂ ತಂಡಗಳ ಸಾಮರ್ಥ್ಯ ಅಜಗಜಾಂತರ. ಆದರೆ ಹಾಲಿ ವಿಶ್ವಕಪ್ನಲ್ಲಿ ಈಗಾಗಲೇ ಕೆಲವು ಅಚ್ಚರಿಯ ಫಲಿತಾಂಶಗಳು ಕಂಡಿವೆ. ಹೀಗಾಗಿ ‘ಮೆನ್ ಇನ್ ಯೆಲ್ಲೋ’ ಡಚ್ ತಂಡವನ್ನು ಲಘುವಾಗಿ ತೆಗೆದುಕೊಳ್ಳದು. ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಸಮಗ್ರ ಸೋಲುಗಳೊಂದಿಗೆ ಆಸ್ಟ್ರೇಲಿಯಾ ತನ್ನ ಅಭಿಯಾನವನ್ನು ಪ್ರಾರಂಭಿಸಿತ್ತು. ಆದಾಗ್ಯೂ, ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಶ್ರೀಲಂಕಾ ಮತ್ತು ಪಾಕಿಸ್ತಾನದ ವಿರುದ್ಧ ಸತತ ಗೆಲುವುಗಳೊಂದಿಗೆ ಮರಳಿ ಲಯ ಕಂಡುಕೊಂಡಿತು.
ಪಾಕಿಸ್ತಾನ ವಿರುದ್ಧದ ಹಿಂದಿನ ಪಂದ್ಯದಲ್ಲಿ ಆರಂಭಿಕ ಜೋಡಿ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ 259 ರನ್ಗಳ ಜೊತೆಯಾಟವನ್ನು ನಿರ್ಮಿಸಿದ್ದರು. ಆಸ್ಟ್ರೇಲಿಯಾದ ಉಳಿದ ಬ್ಯಾಟರ್ಗಳು ಆ ರೋಚಕ ಆರಂಭವನ್ನು ಬಳಸಿಕೊಳ್ಳಲು ವಿಫಲ ಹೊಂದಿದ್ದರು. 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ತಂಡ 367 ರನ್ ಗಳಿಸಿತ್ತು. ಪಾಕಿಸ್ತಾನವು ತಮ್ಮ ಚೇಸಿಂಗ್ನಲ್ಲಿ ಉತ್ತಮ ಆರಂಭ ಪಡೆದು ಕೊನೆಗೆ ಸೋಲೊಪ್ಪಿಕೊಂಡಿತು.
ಆಸ್ಟ್ರೇಲಿಯಾ ತಂಡಕ್ಕೆ ಸಾಕಷ್ಟು ಕಾಳಜಿಯ ಸಂಗತಿಗಳಿವೆ. ವಾರ್ನರ್, ಮಾರ್ಷ್ ಮತ್ತು ಜೋಶ್ ಇಂಗ್ಲಿಸ್ ಅವರನ್ನು ಹೊರತುಪಡಿಸಿದರೆ ಆಸ್ಟ್ರೇಲಿಯಾದ ಬೇರೆ ಯಾವುದೇ ಬ್ಯಾಟರ್ಗಳು ನಿರ್ದಿಷ್ಟ ಇನಿಂಗ್ಸ್ಗಳಲ್ಲಿ 50 ರನ್ಗಳ ಗಡಿಯನ್ನು ದಾಟಿಲ್ಲ . ಬೌಲಿಂಗ್ ವಿಭಾಗದಲ್ಲಿ ಆಡಮ್ ಜಂಪಾ ನಾಲ್ಕು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಪಡೆದು ಮಿಂಚಿದ್ದಾರೆ. ಅನುಭವಿ ಸೀಮ್ ಬೌಲರ್ಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್ವುಡ್ ಮತ್ತು ಕಮಿನ್ಸ್ ಇನ್ನೂ ತಮ್ಮ ಕೌಶಲ ಪ್ರದರ್ಶಿಸಿಲ್ಲ.
ಉತ್ಸಾಹದಲ್ಲಿದೆ ನೆದರ್ಲ್ಯಾಂಡ್ಸ್ ತಂಡ
ಪಾಕಿಸ್ತಾನ ವಿರುದ್ಧದ ವಿಶ್ವ ಕಪ್ನ ತನ್ನ ಆರಂಭಿಕ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಭರವಸೆ ವ್ಯಕ್ತಪಡಿಸಿತು. ಆದರೂ ಸೋತಿತು. ಬಳಿಕ ಫಾರ್ಮ್ ನಲ್ಲಿರುವ ನ್ಯೂಜಿಲೆಂಡ್ ತಂಡದೆದುರು ಸೋಲನುಭವಿಸಿತು. ಮೂರನೇ ಪಂದ್ಯದಲ್ಲಿ, ಸ್ಕಾಟ್ ಎಡ್ವರ್ಡ್ಸ್ ಮತ್ತು ತಂಡವು ಮಳೆಯಿಂದ ಮೊಟಕುಗೊಂಡ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು. ಶ್ರೀಲಂಕಾ ವಿರುದ್ಧದ ಇತ್ತೀಚಿನ ಪಂದ್ಯದಲ್ಲಿ ಡಚ್ ತಂಡವು 262 ರನ್ ಗಳಿಸಿತ್ತು. ಆದರೆ ಲಂಕಾ ಲಯನ್ಸ್ 49ನೇ ಓವರ್ನಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು.
ಆಸ್ಟ್ರೇಲಿಯಾ ತನ್ನ ಪ್ಲೇಯಿಂಗ್ ಇಲೆವೆ್ನ್ನಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ನೆದರ್ಲ್ಯಾಂಡ್ಸ್ ವಿರುದ್ಧ ಕಣಕ್ಕೆ ಇಳಿಯಲಿದೆ. ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಕೊನೆಯ ಬಾರಿಗೆ ಓಪನಿಂಗ್ ಮಾಡುವ ನಿರೀಕ್ಷೆಯಿದೆ, ಟ್ರಾವಿಸ್ ಹೆಡ್ ನ್ಯೂಜಿಲೆಂಡ್ ವಿರುದ್ಧದ ಮುಂದಿನ ಪಂದ್ಯಕ್ಕೆ ಮರಳಲಿದ್ದಾರೆ.
ಈ ಸುದ್ದಿಗಳನ್ನೂ ಓದಿ
Virat kohli : ಹಿಮಾಚಲ ಪ್ರದೇಶದ ಐತಿಹಾಸಿಕ ಆಶ್ರಮಕ್ಕೆ ಭೇಟಿ ನೀಡಿದ ಕೊಹ್ಲಿ
ICC World Cup 2023 : ಪಾಕ್ ವಿರುದ್ಧ ಅಫಘಾನಿಸ್ತಾನದ ಗೆಲುವಿನಲ್ಲಿ ಭಾರತದ ಮಾಜಿ ಕ್ರಿಕೆಟಿಗನ ಕೈವಾಡ
ಅಫಘಾನಿಸ್ತಾನ ವಿರುದ್ಧ ಸೋತು ಸುಣ್ಣವಾದ ಪಾಕ್ ತಂಡಕ್ಕೆ ಅಂಕಪಟ್ಟಿಯಲ್ಲಿ ಎಷ್ಟನೇ ಸ್ಥಾನ?
ನೆದರ್ಲ್ಯಾಂಡ್ಸ್ ತಂಡ ಯುವ ಮತ್ತು ಅನುಭವಿ ಆಟಗಾರರನ್ನು ಹೊಂದಿದೆ. ಇದು ತಂಡದ ಸಮತೋಲನ ಕಾಪಾಡುತ್ತದೆ. ಆದರೆ ವಿಕ್ರಮ್ಜಿತ್ ಸಿಂಗ್, ಮ್ಯಾಕ್ಸ್ ಒ’ಡೌಡ್ ಮತ್ತು ತೇಜಾ ನಿಡಮನೂರು ಅವರಂತಹ ಆಟಗಾರರು ಬ್ಯಾಟಿಂಗ್ಸ್ ತಮ್ಮ ನಿರೀಕ್ಷೆಗಳನ್ನು ಪೂರೈಸಲು ವಿಫಲರಾಗಿದ್ದಾರೆ. ಸ್ಕಾಟ್ ಎಡ್ವರ್ಡ್ಸ್, ಸೈಬ್ರಾಂಡ್ ಎಂಗೆಲ್ಬ್ರೆಕ್ಟ್ ಮತ್ತು ಲೋಗನ್ ವ್ಯಾನ್ ಬೀಕ್ ಬ್ಯಾಟ್ನೊಂದಿಗೆ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಬಾಸ್ ಡಿ ಲೀಡೆ ಏಕದಿನ ವಿಶ್ವಕಪ್ 2023 ರಲ್ಲಿ ಯುರೋಪಿಯನ್ ರಾಷ್ಟ್ರಕ್ಕಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು ನಾಲ್ಕು ಪಂದ್ಯಗಳಲ್ಲಿ 27.29 ಸರಾಸರಿಯಲ್ಲಿ ಏಳು ವಿಕೆಟ್ಗಳನ್ನು ಪಡೆದಿದ್ದಾರೆ.
Mitch Marsh's ODI cap number is actually 190 – but he hasn't been playing in his brother Shaun's No.165 by choice! #CWC23 pic.twitter.com/ahW1N5ir56
— cricket.com.au (@cricketcomau) October 24, 2023
ನೆದರ್ಲ್ಯಾಂಡ್ಸ್ ತಮ್ಮ ಪ್ಲೇಯಿಂಗ್ ಇಲೆವೆನ್ನಲ್ಲಿ ಹೆಚ್ಚು ಬದಲಾವಣೆ ಮಾಡಲು ಮಾಡಲು ಇಷ್ಟಪಡುವುದಿಲ್ಲ. ಹಿಂದಿನ ಪಂದ್ಯದಲ್ಲಿ ಆಡಿದ ಅದೇ ಆಟಗಾರರನ್ನು ಟೀಮ್ ಮ್ಯಾನೇಜ್ಮೆಂಟ್ ಬೆಂಬಲಿಸಬಹುದು. ಆದರೆ ಅಗ್ರ ಕ್ರಮಾಂಕದಿಂದ ಕೆಲವು ರನ್ ಬರಲಿ ಎಂಬುದು ತಂಡದ ಬಯಕೆ. ಹೀಗಾಗಿ ಪಾಕಿಸ್ತಾನ ವಿರುದ್ಧ 52 ರನ್ ಗಳಿಸಿದ ನಂತರ ಮೂರು ಇನಿಂಗ್ಸ್ಗಳಲ್ಲಿ ಕೇವಲ 18 ರನ್ ಗಳಿಸಿರುವ ವಿಕ್ರಮ್ಜಿತ್ ಸಿಂಗ್ ಬದಲಿಗೆ 39 ವರ್ಷದ ವೆಸ್ಲಿ ಬರೆಸಿ ಬರುವ ಸಾಧ್ಯತೆಯಿದೆ.
ಪಿಚ್ ಪರಿಸ್ಥಿತಿ
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮರುನಿರ್ಮಾಣಗೊಂಡ ಪಿಚ್ಗಳು ಸಾಕಷ್ಟು ರನ್ಗಳನ್ನು ನೀಡಿವೆ. ಪಂದ್ಯಾವಳಿಯಲ್ಲಿ ಈವರೆಗೆ ಮೂರು ಪಂದ್ಯಗಳನ್ನು ಈ ಸ್ಥಳದಲ್ಲಿ ಆಡಲಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಎರಡು ಪಂದ್ಯಗಳನ್ನು ಗೆದ್ದರೆ, ಚೇಸಿಂಗ್ ತಂಡವು ಒಮ್ಮೆ ಗೆದ್ದಿತು. ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಈ ಸ್ಥಳದಲ್ಲಿ ಇತ್ತೀಚೆಗೆ ಆಡಿದ ಪಂದ್ಯದಲ್ಲಿ ಇಬ್ಬನಿ ಪರಿಣಾಮ ಇರಲಿಲ್ಲ. ಎರಡನೇ ಇನ್ನಿಂಗ್ಸ್ ನಲ್ಲಿ ಚೆಂಡು ಮೇಲ್ಮೈಯಲ್ಲಿ ಸ್ವಲ್ಪ ಹಿಡಿದಿಟ್ಟುಕೊಂಡಿತು,
ತಂಡಗಳು ಹೀಗಿರಲಿವೆ
ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ಆಡಮ್ ಝಂಪಾ, ಜೋಶ್ ಹೇಜಲ್ವುಡ್.
ನೆದರ್ಲ್ಯಾಂಡ್ಸ್ : ವಿಕ್ರಮ್ಜಿತ್ ಸಿಂಗ್/ ವೆಸ್ಲಿ ಬಾರೆಸಿ, ಮ್ಯಾಕ್ಸ್ ಒ’ಡೌಡ್, ಕಾಲಿನ್ ಆಕರ್ಮ್ಯಾನ್, ಬಾಸ್ ಡಿ ಲೀಡ್, ಸಿಬ್ರಾಂಡ್ ಎಂಗೆಲ್ಬ್ರೆಕ್ಟ್, ತೇಜಾ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ಲೋಗನ್ ವ್ಯಾನ್ ಬೀಕ್, ರೋಲೊಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.
ಇತ್ತಂಡಗಳ ಮುಖಾಮುಖಿ
- ಆಡಿದ ಪಂದ್ಯಗಳು 2
- ಆಸ್ಟ್ರೇಲಿಯಾ 2 ಗೆಲುವು
- ನೆದರ್ಲೆಂಡ್ಸ್ 0 ಗೆಲುವು
- ಮೊದಲ ಪಂದ್ಯ 20 ಫೆಬ್ರವರಿ 2003
- ಕೊನೆಯ ಬಾರಿ ಆಡಿದ್ದು 18 ಮಾರ್ಚ್ 2007
ನೇರ ಪ್ರಸಾರ ವಿವರಗಳು
- ದಿನಾಂಕ: ಬುಧವಾರ, ಅಕ್ಟೋಬರ್ 25
- ಸಮಯ: ಮಧ್ಯಾಹ್ನ 2:00 (ಭಾರತೀಯ ಕಾಲಮಾನ)
- ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್ಸೈಟ್
- ಲೈವ್ ಬ್ರಾಡ್ಕಾಸ್ಟ್ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್