ಕೇಪ್ಟೌನ್ (ದಕ್ಷಿಣ ಆಫ್ರಿಕಾ): ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಫೈನಲ್ ಹಣಾಹಣಿಯಲ್ಲಿ 19 ರನ್ಗಳಿಂದ ಮಣಿಸಿದ ಆಸ್ಟ್ರೇಲಿಯಾ ಮಹಿಳೆಯರ ತಂಡ ಟಿ20 ವಿಶ್ವ ಕಪ್ನಲ್ಲಿ (T20 World Cup) ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಮೂಲಕ ಆಸೀಸ್ ಬಳಗದ ಪಾಲಿಗೆ ಸತತ ಮೂರನೇ ಹಾಗೂ ಒಟ್ಟು ಆರನೇ ಟಿ20 ವಿಶ್ವ ಕಪ್ ಟ್ರೋಫಿಯಾಗಿದೆ. ಈ ಹಿಂದೆ ದಕ್ಷಿಣ 2010, 2012, 2014, 2018, 2020ರಲ್ಲಿ ಕಪ್ ಗೆದ್ದಿತ್ತು. ಆದರೆ, ಇದೇ ಮೊದಲ ಬಾರಿಗೆ ಟಿ20 ವಿಶ್ವ ಕಪ್ನ ಫೈನಲ್ಗೆ ಪ್ರವೇಶ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡ ನಿರಾಸೆ ಎದುರಿಸಿತು.
ಇಲ್ಲಿನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕಿ ಮೆಗ್ ಲ್ಯಾನಿಂಗ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದಕ್ಕೆ ಪೂರಕವಾಗಿ ಬ್ಯಾಟ್ ಮಾಡಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಬಳಗ ತಮ್ಮ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 6 ವಿಕೆಟ್ ನಷ್ಟಕ್ಕೆ137 ರನ್ ಬಾರಿಸಲು ಮಾತ್ರ ಶಕ್ತಗೊಂಡು ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಬೆತ್ ಮೂನಿ (74) ಅವರ ಸ್ಫೋಟಕ ಅರ್ಧ ಶತಕದ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಆಶ್ಲೇ ಗಾರ್ಡ್ನರ್ (29) ಕೂಡ ಉತ್ತಮ ಮೊತ್ತ ನೀಡಿದರು. ಗ್ರೇಸ್ ಹ್ಯಾರಿಸ್ , ಮೆಗ್ಲ್ಯಾನಿಂಗ್ ಕ್ರಮವಾಗಿ 10 ರನ್ ಬಾರಿಸಿದರೆ ಅಲೀಸಾ ಹೀಲಿ 18 ರನ್ ಕೊಡುಗೆ ಕೊಟ್ಟರು. ಆಸ್ಟ್ರೇಲಿಯಾ ತಂಡ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದರೂ ಕೊನೇ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಶಬಿನಮ್ ಇಸ್ಮಾಯಿ್ ಹಾಗೂ ಮರಿಜಾನೆ ಕಾಪ್ ತಲಾ 2 ವಿಕೆಟ್ ಪಡೆದರು.
ಇದನ್ನೂ ಓದಿ : T20 World Cup : ರನ್ಔಟ್ ದುರದೃಷ್ಟ ಎಂದ ಹರ್ಮನ್ಪ್ರೀತ್ ಹೇಳಿಕೆ ಖಂಡಿಸಿದ ಆಸ್ಟ್ರೇಲಿಯಾ ತಂಡದ ನಾಯಕಿ
ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ದಕ್ಷಿಣ ಆಫ್ರಿಕಾ ಲಾರ ವೋಲ್ವರ್ಥ್ (61) ಅವರ ಅರ್ಧ ಶತಕದ ನೆರವಿನಿಂದ ಉತ್ತಮ ಪೈಪೋಟಿ ಕೊಟ್ಟಿತು. ಆದರೆ, ರನ್ರೇಟ್ ಕಾಪಾಡಿಕೊಳ್ಳದ ಕಾರಣ ಕೊನೇ ಹಂತದಲ್ಲಿ ಒತ್ತಡಕ್ಕೆ ಬಿದ್ದು ವಿಕೆಟ್ ಕಳೆದುಕೊಂಡು ಸೋಲಿಗೆ ಒಳಗಾಯಿತು. ಚೊಲೆ ಟ್ರಿಯಾನ್ (25) ಸ್ವಲ್ಪ ಪ್ರಮಾಣದ ಹೋರಾಟ ನಡೆಸಿದರು.