Site icon Vistara News

Ind vs Aus : ಟಾಸ್ ಗೆದ್ದ ಆಸ್ಟ್ರೇಲಿಯಾ, ಭಾರತಕ್ಕೆ ಮೊದಲು ಬ್ಯಾಟಿಂಗ್​

Suryakuamr Yadav

ಬೆಂಗಳೂರು: ಟಿ20 ಸರಣಿಯ ಐದನೇ ಹಾಗೂ ಕೊನೇ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಟಾಸ್​ ಗೆದ್ದಿದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಭಾರತ ತಂಡ ಮೊದಲು ಬ್ಯಾಟ್​ ಮಾಡಿ ದೊಡ್ಡ ಮೊತ್ತ ಪೇರಿಸಿ ಅದನ್ನು ಕಾಪಾಡಿಕೊಳ್ಳಬೇಕಾಗಿದೆ. ಸರಣಿಯಲ್ಲಿ ಮೊದಲೆರಡು ಹಾಗೂ ನಾಲ್ಕನೇ ಪಂದ್ಯವನ್ನು ಗೆದ್ದಿರುವ ಸೂರ್ಯಕುಮಾರ್ ನೇತೃತ್ವದ ಭಾರತ ತಂಡ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಹೀಗಾಗಿ ಇದು ಔಪಚಾರಿಕ ಪಂದ್ಯ ಎನಿಸಿಕೊಳ್ಳಲಿದೆ. ಆದಾಗ್ಯೂ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸುವುದು ಎರಡೂ ತಂಡಗಳ ಉದ್ದೇಶವಾಗಿರುತ್ತದೆ.

ಟಾಸ್ ಗೆದ್ದಿರುವ ಆಸ್ಟ್ರೇಲಾ ತಂಡದ ನಾಯಕ ಮಾತನಾಡಿ, ನಮ್ಮ ಬಳಿ ಒಂದು ಬೌಲಿಂಗ್ ಆಯ್ಕೆಯಿದೆ. ವಿಕೆಟ್ ಸ್ವಲ್ಪ ಜಟಿಲವಾಗಿದೆ ಹಾಗೂ ಹವಾಮಾನ ಪರಿಸ್ಥಿತಿ ಸೂಕ್ತವಾಗಿಲ್ಲ. ಕ್ಯಾಮರೂನ್​ ಗ್ರೀನ್ ಬದಲಿಗೆ ನೇಥಾನ್​ ಎಲ್ಲಿಸ್ ತಂಡ ಸೇರಿದ್ದಾರೆ. ತಂಡದ ಆಟಗಾರರಿಗೆ ಉತ್ತಮ ಪ್ರದರ್ಶನ ನೀಡಲು ಸೂಕ್ತ ಸಮಯ ಎಂದು ಹೇಳಿದ್ದಾರೆ.

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮಾತನಾಡಿ, ನಾವು ಮೊದಲು ಬೌಲಿಂಗ್ ಮಾಡಲು ಇಷ್ಟಪಡುತ್ತಿದ್ದೆವು. ಅದ್ಭುತ ಪ್ರೇಕ್ಷಕರ ಮುಂದೆ ಆಡಲು ಮತ್ತೊಂದು ಅವಕಾಶ, ಬ್ಯಾಟಿಂಗ್ ಘಟಕಕ್ಕೆ ಉತ್ತಮ ಪ್ರದರ್ಶನ ನೀಡಲು ಹೇಳಿದ್ದೇನೆ. ದೀಪಕ್ ಚಾಹರ್ ಬದಲಿಗೆ ಅರ್ಶ್​ದೀಪ್​ ಕಣಕ್ಕಿಳಿಯಲಿದ್ದಾರೆ. ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಅವರು (ದೀಪಕ್) ಮನೆಗೆ ಮರಳಿದ್ದಾರೆ ಎಂದು ಹೇಳಿದರು.

ಮೂರು ವಾರಗಳ ಹಿಂದೆ, ಇದೇ ಸಮಯದಲ್ಲಿ, ಭಾರತವು ಬೆಂಗಳೂರಿನಲ್ಲಿ ಆಡಿತ್ತು. ವಿಶ್ವಕಪ್​ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ 4 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿತ್ತು. ಅಂತಿಮ ಹಂತಲ್ಲಿ ಭಾರತವು ಟ್ರೋಫಿ ನಷ್ಟ ಮಾಡಿಕೊಂಡಿದ್ದರೂ ಸಾಕಷ್ಟು ನಿರ್ಭೀತ ಕ್ರಿಕೆಟ್ ಅಡಿತ್ತು. ಇದೀಗ ರಿಂಕು, ರುತುರಾಜ್, ಯಶಸ್ವಿ, ಜಿತೇಶ್ ಸೇರಿದಂತೆ ಹಲವರು ನಿರ್ಭೀತ ಕ್ರಿಕೆಟ್ ಆಡಲು ಬೆಂಗಳೂರಿಗೆ ಬಂದಿದ್ದಾರೆ. ಗುವಾಹಟಿ ಹೊರತುಪಡಿಸಿ ಭಾರತವು ಈ ಸರಣಿಯ ಪ್ರಮುಖ ಭಾಗಗಳಲ್ಲಿ ತಮ್ಮ ಪ್ರಾಬಲ್ಯ ಮೆರೆದಿತ್ತು. ಕಳೆದ ಪಂದ್ಯದಲ್ಲಿ 20 ರನ್​ಗಳ ಜಯ ಸಾಧಿಸಿದ ಆತಿಥೇಯರು ರಾಯ್ಪುರದಲ್ಲಿ ಸರಣಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ತಂಡಗಳು

ಭಾರತ ತಂಡ: ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ (ಸಿ), ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆ), ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅವೇಶ್ ಖಾನ್, ಮುಖೇಶ್ ಕುಮಾರ್, ಅರ್ಷ್ದೀಪ್ ಸಿಂಗ್.

ಇದನ್ನೂ ಓದಿ : IPL 2024 : ಐಪಿಎಲ್​ ಹರಾಜಿನ ದಿನಾಂಕ, ಸ್ಥಳದ ಬಗ್ಗೆ ಖಚಿತ ಮಾಹಿತಿ ನೀಡಿದ ಬಿಸಿಸಿಐ

ಆಸ್ಟ್ರೇಲಿಯಾ ತಂಡ: ಟ್ರಾವಿಸ್ ಹೆಡ್, ಜೋಶ್ ಫಿಲಿಪ್, ಬೆನ್ ಮೆಕ್ಡರ್ಮಾಟ್, ಆ್ಯರೋನ್ ಹಾರ್ಡಿ, ಟಿಮ್ ಡೇವಿಡ್, ಮ್ಯಾಥ್ಯೂ ಶಾರ್ಟ್, ಮ್ಯಾಥ್ಯೂ ವೇಡ್ (ಸಿ & ವಿಕೆ), ಬೆನ್ ಡ್ವಾರ್ಶುಯಿಸ್, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್ಡಾರ್ಫ್, ತನ್ವೀರ್ ಸಂಗಾ

Exit mobile version