Site icon Vistara News

Australian Open Final: ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಟ್ರೋಫಿಗೆ ಮುತ್ತಿಕ್ಕಿದ ಜಾನ್ನಿಕ್‌ ಸಿನ್ನರ್‌​

Jannik Sinner

ಮೆಲ್ಬೋರ್ನ್: ಇಟಲಿಯ ಯುವ ಆಟಗಾರ ಜಾನ್ನಿಕ್‌ ಸಿನ್ನರ್‌(Jannik Sinner)​ ಆಸ್ಟ್ರೇಲಿಯಾ ಓಪನ್(​Australian Open Final) ಪ್ರಶಸ್ತಿ ಗೆದ್ದು ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್ ಗೆದ್ದ ಸಾಧನೆ ಮಾಡಿದ್ದಾರೆ. ಇಂದು ನಡೆದ ಫೈನಲ್​ ಪಂದ್ಯದಲ್ಲಿ ರಷ್ಯಾದ ಅನುಭವಿ ಆಟಗಾರ ಡ್ಯಾನಿಲ್​ ಮೆಡ್ವೆಡೆವ್​ಗೆ(Daniil Medvedev) ಸೋಲುಣಿಸಿ ಚೊಚ್ಚಲ ​ಆಸ್ಟ್ರೇಲಿಯಾ ಓಪನ್ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ.

ಭಾನುವಾರ ರಾಡ್ ಲೇವರ್ ಅರೆನಾದಲ್ಲಿ ನಡೆದ ಪುರುಷರ ಸಿಂಗಲ್ಸ್​ ಫೈನಲ್​ನ 5 ಸೆಟ್​ಗಳ ಜಿದ್ದಾಜಿದ್ದಿನ ಹೋರಾಟದಲ್ಲಿ ಮೆಡ್ವೆಡೆವ್ ಅವರನ್ನು 3-6, 3-6, 6-4, 6-4, 6-3 ಸೆಟ್‌ಗಳಿಂದ ಹಿಮ್ಮಟಿಸಿದ ಸಿನ್ನರ್ ಓಪನ್ ಎರಾದಲ್ಲಿ ಗ್ರ್ಯಾಂಡ್ ಸ್ಲಾಮ್ ಗೆದ್ದ ಎರಡನೇ ಇಟಾಲಿಯನ್ ಆಟಗಾರ ಎನಿಸಿಕೊಂಡರು. ಉಭಯ ಆಟಗಾರರ 5 ಸೆಟ್​ನ ಮ್ಯಾರಥಾನ್​ ಫೈಟ್​ 3 ​​ಗಂಟೆ 44 ನಿಮಿಷಗದಲ್ಲಿ ಅಂತ್ಯಕಂಡಿತು.

22 ವರ್ಷದ ಸಿನ್ನರ್​ ಪ್ರತಿಷ್ಠಿತ ಹಾರ್ಡ್ ಕೋರ್ಟ್ ಮೇಜರ್ ಪ್ರಶಸ್ತಿ ಗೆದ್ದ ಮೂರನೇ ಕಿರಿಯ ಆಟಗಾರ ಎನಿಸಿಕೊಂಡರು. ಜೊಕೊವಿಕ್ ಮತ್ತು ಜಿಮ್ ಕೊರಿಯರ್ 1988ರಲ್ಲಿ ಈ ಸಾಧನೆ ಮಾಡಿದ್ದರು. ಸಿನ್ನರ್ ಸೆಮಿಫೈನಲ್​ ಪಂದ್ಯದಲ್ಲಿ 24 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವೀರ ಸರ್ಬಿಯಾದ ನೊವಾಕ್​ ಜೋಕೊವಿಕ್​ಗೆ ಸೋಲುಣಿಸಿದ್ದರು. ಆಗಲೇ ಈ ಬಾರಿ ಸಿನ್ನರ್ ಚಾಂಪಿಯನ್​ ಆಗುವು ಖಚಿತ ಎಂದು ಟೆನಿಸ್​ ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಅಭಿಮಾನಿಗಳ ನಿರೀಕ್ಷೆಯಂತೆ ಸಿನ್ನರ್ ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ.

ಇದನ್ನೂ ಓದಿ Australian Open 2024 : ಚಾಂಪಿಯನ್​ ರೋಹನ್ ಬೋಪಣ್ಣ ಗಳಿಸಿದ ಬಹುಮಾನ ಮೊತ್ತವೆಷ್ಟು?

ಡೇನಿಯಲ್ ಮೆಡ್ವೆಡೆವ್ ಅವರಿಗೆ ಇದು ಮೂರನೇ ಆಸ್ಟ್ರೇಲಿಯಾ ಓಪನ್​ ಫೈನಲ್​ ಪಂದ್ಯವಾಗಿತ್ತು. ಚೊಚ್ಚಲ ಬಾರಿ ಪ್ರಶಸ್ತಿ ಮೇಲೆ ಅವರು ಕಣ್ಣಿಟ್ಟಿದ್ದರು. ಆದರೆ ಇಟಲಿಯ ಯುವ ಆಟಗಾರ ಇದಕ್ಕೆ ಅನುವು ಮಾಡಿಕೊಡಲಿಲ್ಲ. ಇದಕ್ಕೂ ಹಿಂದೆ ಅಂದರೆ 2021 ಮತ್ತು 2022ರಲ್ಲಿ ಕ್ರಮವಾಗಿ ನೊವಾಕ್ ಜೊಕೊವಿಕ್ ಮತ್ತು ರಾಫೆಲ್ ನಡಾಲ್ ವಿರುದ್ಧ ಮೆಡ್ವೆಡೆವ್ ಫೈನಲ್​ನಲ್ಲಿ ಸೋಲು ಕಂಡಿದ್ದರು.

ರೋಚಕ ಪಂದ್ಯ


ಮೊದಲ ಎರಡು ಸೆಟ್​ಗಳಲ್ಲಿ 6-3, 6-3 ಅಂತರದಿಂದ ಸೋಲು ಕಂಡಿದ್ದ ಸಿನ್ನರ್​ ಮೂರನೇ ಸೆಟ್​ನಲ್ಲಿಯೂ ಸೋತು ಪ್ರಶಸ್ತಿ ಕಳೆದುಕೊಳ್ಳುತ್ತಾರೆ ಎಂದು ಮೆಲ್ಬೊರ್ನ್​ನಲ್ಲಿ ನೆರದಿದ್ದ ಟೆನಿಸ್​ ಅಭಿಮಾನಿಗಳು ನಿರೀಕ್ಷೆ ಮಾಡಿದರು. ಆದರೆ, ಫಿನಿಕ್ಸ್​ನಂತೆ ತಿರುಗಿ ಬಿದ್ದ ಸಿನ್ನರ್ ಮೂರನೇ ಸೆಟನ್ನು 6-4 ಅಂತರದಿಂದ ಗೆದ್ದು ಪಂದ್ಯವನ್ನು ಜೀವಂತವಿರಿಸಿದರು. ಇಲ್ಲಿಂದ ಪಂದ್ಯ ರೋಚಕತೆ ಮತ್ತು ಕುತೂಹಲ ಕೆರಳಿಸಿತು. ಮುಂದಿನ 2 ಸೆಟ್​ಗಳಲ್ಲಿಯೂ ಅಸಾಧಾರಣ ಪ್ರದರ್ಶನ ತೋರುವ ಮೂಲಕ ಪ್ರಶಸ್ತಿಗೆ ಮುತ್ತಿಕ್ಕಿದರು.

Exit mobile version